Day: June 5, 2021

ದಾರಾವಾಹಿ ಆವರ್ತನ ಅದ್ಯಾಯ-19 ಬ್ಯಾಂಕರ್ ನಾರಾಯಣರು ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ. ಅವರ ಹೆಂಡತಿ ಗಿರಿಜಕ್ಕ. ಇವರ ಮೂವರು ಮಕ್ಕಳೂ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಮತ್ತು ಸಂಸಾರದ ನಿಮಿತ್ತ ಹೊರದೇಶದಲ್ಲೂ, ಪರವೂರಿನಲ್ಲೂ ನೆಲೆಸಿದ್ದರು. ಆದ್ದರಿಂದ ಈಗ ಎರಡೂವರೆ ಸಾವಿರ ಚದರಡಿಯ ಮಾಳಿಗೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುವುದು. ಮನೆಗೆಲಸದ ವೆಂಕಮ್ಮ ದಿನಾ ನಿಶ್ಶಬ್ದವಾಗಿ ಬಂದು ತನಗೆ ನಿಗದಿಪಡಿಸಲಾದ ಕೆಲಸಕಾರ್ಯಗಳನ್ನು ಚೊಕ್ಕವಾಗಿ ಮಾಡಿಕೊಟ್ಟು ಹೊರಟು ಹೋಗುತ್ತಾಳೆ. ಹಬ್ಬ ಹರಿದಿನಗಳಲ್ಲೂ ಇನ್ನಿತರ ಶುಭದಿನಗಳಲ್ಲೂ ನಾರಾಯಣ ದಂಪತಿಯ ಮಕ್ಕಳು ತಮ್ಮ […]

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—28 ಆತ್ಮಾನುಸಂಧಾನ ಬಹುಮುಖೀ ವ್ಯಕ್ತಿತ್ವದ ರಾಕಜ್ಜ ನಮ್ಮ ತಾಯಿಯ ಚಿಕಪ್ಪ ರಾಕು. ಬಾಲ್ಯದಲ್ಲಿಯೇ ತಂದೆ, ಅವಳ ವಿವಾಹದ ಬಳಿಕ ತಾಯಿಯನ್ನು ಕಳೆದುಕೊಂಡ ಅವ್ವನಿಗೆ ತೌರುಮನೆಯ ಕಡೆಯಿಂದ ಕೊನೆಯವರೆಗೂ ಹತ್ತಿರದಲ್ಲಿ ಕುಟುಂಬದ ಸದಸ್ಯನೇ ಎಂಬಂತೆ ಆಧಾರವಾಗಿದ್ದವನು ಚಿಕ್ಕಪ್ಪ ರಾಕು. ನಮಗೆಲ್ಲ ಅಕ್ಕರೆಯ ರಾಕಜ್ಜ. ವಿಶೇಷವೆಂದರೆ ಬಾಲ್ಯದಿಂದಲೂ ನನ್ನನ್ನು ವಿಶೇಷವಾಗಿ ಎದೆಗೆ ಹಚ್ಚಿಕೊಂಡು ಅಕ್ಕರೆ ತೋರಿದವನು ರಾಕಜ್ಜನೇ. ಜಾತ್ರೆಗೋ, ಯಕ್ಷಗಾನ ಬಯಲಾಟ ನೋಡುವುದಕ್ಕೋ ನನ್ನನ್ನು ಹೆಗಲೇರಿಸಿಕೊಂಡು ಹೊರಡುವ ರಾಕಜ್ಜ ನಾನು ಬೇಡಿದುದನ್ನು ಕೊಡಿಸುತ್ತ […]

ನಾಟಕ ನೋಡಿದ ಅದೆಷ್ಟು ಸಿರಿವಂತ ಹೃದಯದವರು ದೊಡ್ಡ ದೊಡ್ಡ ಹೆಸರು ಮಾಡಿದ ಕಲಾವಿದರೊಂದಿಗೆ ನನ್ನನ್ನು ಹೋಲಿಸಿ ಶಹಭಾಷ್ ಎಂದಾಗ ಕಲಾವಿದೆಯಾಗಿ ತೊರೆ ತೆರೆದು ಅರಳುವಿಕೆಗೆ ಸಮರ್ಪಣೆ ಮಾಡಿದ್ದು ಸಾರ್ಥಕ ಅನ್ನಿಸಿದೆ

Back To Top