ಕವಿತೆ
ಒಂಟಿ ಮರ
ಬಾಪು ಖಾಡೆ
ಸುತ್ತಲೂ ಕುರುಚಲು ವಿಶಾಲ ಬಯಲು
ಹಬ್ಬಿ ನಿಂತಿದೆ ಒಂಟಿ ಮರ
ಬಂದು ಹೋದವೆಷ್ಟೋ ಅಡ್ಡಿ ಆತಂಕ
ಬಿರುಮಳೆ ಚಂಡಮಾರುತ
ತಣ್ಣೆಳಲ ತಂಪಿನಲಿ ವಿಶ್ರಮಿಸಿ
ಜೇನು ಸವಿದು ರುಚಿ ಹಣ್ಣು ತಿಂದು
ಸುಡು ಹಗಲಲಿ ಬುಡ ಕಡಿಯಲು
ಹೊಂಚು ಹಾಕಿದವರೆಷ್ಟೊ
ಗೋಧೂಳಿ ಸಮಯದಲಿ ಹಿರಿಯ ಜೀವಗಳು
ಇಲ್ಲಿ ನೆನಪಿನ ಬುತ್ತಿ ಬಿಚ್ಚಿದವರೆಷ್ಟೊ
ಕದ್ದು ಪ್ರೀತಿಸುವ ಜೋಡಿಗಳು
ನಾಳೆಗಳ ಹೊಂಗನಸು ಕಂಡವರೆಷ್ಟೊ
ಅಪ್ಪಳಿಸಿದ ಜಡಿಮಳೆಗೆ
ಎದೆಯೊಡ್ಡಿದೆ ಹೆಮ್ಮರ
ಎಲೆ-ಎಲೆಯಲಿ ಅನುರಣಿಸಿದೆ
ಖಗ-ಮೃಗಗಳ ಚೀತ್ಕಾರ
ಆಳಕ್ಕೆ ಇಳಿಯುತ್ತ ಕಡಿದಷ್ಟು ಚಿಗುರುತ್ತ
ಧ್ಯಾನಸ್ಥ ಸ್ಥಿತಿಯಲ್ಲಿ ನಿಂತಿರುವೆ
ಪ್ರಾಣಕ್ಕೆ ವರವಾಗಿ ವಾಸಕ್ಕೆ ನೆರಳಾಗಿ
ಜೀವಸಂಕುಲಕೆ ಉಸಿರಾಗಿ ನೀನಿರುವೆ
************************
ಕವಿತೆ ಬಹಳ ಚೆನ್ನಾಗಿದೆ
ಸೊಗಸಾದ ಕವಿತೆ ಸರ್
ಸೊಗಸಾಗಿದೆ ಸರ್ ಕವನ….
ಸೊಗಸಾದ ಗೀತೆ ಸರ್
ಚೆನ್ನಾಗಿದೆ.ಚಿತ್ರ ಗಳೂ ಕೂಡಾ.
ಕವಿತೆ ಚನ್ನಾಗಿದೆ. ಅಭಿನಂದನೆಗಳು