ಕವಿತೆ
ಅಮ್ಮ
ಸಂತೋಷ್ ಹೆಚ್ ಈ
ಈ ಜೀವಕ್ಕೆ ಗರ್ಭದಿ ನೆಲೆ ಕೊಟ್ಟು
ಹೃದಯದಲಿ ಪ್ರೀತಿಯ ಬಚ್ಚಿಟ್ಟು
ಭವಿಷ್ಯದ ಕನಸಿನ ಗಿಡನೆಟ್ಟು
ನವಮಾಸ ಕಳೆದಳು ಅಮ್ಮ
ನನ್ನ ಒಡಲಿಗೆ ಮಡಿಲಾದೆ ನೀನು
ಹಾಲನ್ನು ಎರೆದ ತಾಯಿಯು ನೀನು
ಈ ದೇಹಕ್ಕೆ ಉಸಿರನ್ನು ನೀಡಿದವಳು ನೀನು
ಆ ಋಣವ ತೀರಿಸಲಾಗದ ಮಗನಾದೆ ನಾನು
ಮನೆಯೆಂಬ ಗುಡಿಗೆ ದೇವರು ನೀನು
ಹಸಿವನ್ನು ನೀಗಿಸೋ ಕರುಣಾಮಯಿ ನೀನು
ಬಿಸಿಲಲ್ಲೂ ಕೂಡ ನೆರಳಾದೆ ನೀನು
ಆ ಮರಕ್ಕೆ ನೀರೆರೆಯುವ ಮಗನಾದೆ ನಾನು
ಅಜ್ಞಾನವೆಂಬ ಇರುಳನ್ನು ಸರಿದು
ಅರಿವೆಂಬ ಬೆಳಕನ್ನು ನೀಡಿದೆ ನೀನು
ಈ ಬಾಳಿಗೊಂದು ದೀಪವು ನೀನು
ಆ ದೀಪ ಕಾಯೋ ಮಗನಾದೆ ನಾನು
ಎಲ್ಲ ಜೀವಿಗಳಿಗೂ ಅಮ್ಮನೇ ಮೂಲ
ಹುಡುಕಿದರು ಸಿಗದು ಅದರ ಮೂಲ
ಅಮ್ಮನ ಒಡಲು ಪ್ರೀತಿಯ ಕಡಲು
ಅಳಿವಿಲ್ಲದ-ಹುಳುಕಿಲ್ಲದ ಪ್ರೀತಿಯು ನಿನ್ನದು
********