ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಬಾಗಿಲನ್ನು ತೆರೆದಿಡಿ

ವಿಶ್ವನಾಥ ಎನ್ ನೇರಳಕಟ್ಟೆ

New apartment interior during renovation process in daylight

ಬಾಗಿಲನ್ನು ತೆರೆದಿಡಿ
ತುಸು ಗಾಳಿಯಾಡಲಿ
ಬರಿಯ ಕಿಟಕಿ
ಸಾಲುವುದಿಲ್ಲ ಈ ಕಾಲಕ್ಕೆ
ಎದೆಯುರಿಯ ಆರುವಿಕೆಗೆ
ಹಿರಿದು ಗಾಳಿಯ ಸಹಕಾರವಿರಲಿ

ಬಿಸಿಲ ಝಳಕ್ಕೆ ಬಳಲಿದ ಪಕ್ಷಿಗಳು
ಬರಲಿ ಒಳಕ್ಕೆ
ವಿರಮಿಸಲಿ ತುಸು ಹೊತ್ತು
ಪ್ರಣಯನಾದದ ಕೇಕೆ
ಅನುರಣಿಸಲಿ ಭಿತ್ತಿಗಳಲಿ

ಮನೆಯೊಳಗೆ ಮುತ್ತಿರುವ ಕತ್ತಲು
ಕಣಕಣವಾಗಿ ಕಡಿದುಹೋಗಲಿ
ಹೊರಗಿನ ಬೆಳಕಿನಲ್ಲಿ
ಕಣ್ಣ ದೃಷ್ಟಿ ಸೂಕ್ಷ್ಮವಾಗಲಿ

ಬಾಗಿಲನ್ನು ತೆರೆದಿಡಿ

ಎದೆಯ ಕವಾಟಗಳಲ್ಲಿ
ಸಾಮರಸ್ಯದ ಗಾಳಿಯಾಡಲಿ


About The Author

Leave a Reply

You cannot copy content of this page

Scroll to Top