ಅವ್ವ ವರ್ಣಿಸದಳ
ಅಭಿಜ್ಞಾ ಪಿ ಎಮ್ ಗೌಡ
ಅವ್ವ ವರ್ಣಿಸದಳ
ಹಗಲಿರುಳು ನೋವಂಡು
ದುಡಿದು ದಣಿದ ಅಕ್ಷಯನಿಧಿ.!
ಯುಗದ ಅವತಾರ
ನವ್ಯತೆಯ ಮಮಕಾರ
ಮೌನದ ಪ್ರತಿರೂಪ ಈ ಅವ್ವ
ತನ್ನೊಡಲ ನೋವುಗಳ ಬಚ್ಚಿಟ್ಟು
ಮೆರೆಯುವಳು ನಲಿಯುವಳು….
ಹೊಲದಲಿ ಸೀರೆಯೆತ್ತಿ
ನಡು ಸಿಕ್ಕಿಸಳೆಂದರೆ
ಆ ಬಾನು ಹಕ್ಕಿ ಪತಂಗಳ ಹಿಂಡೆ
ನಾಚಿ ನೀರಾಗಿ ಸುರಿದಿಹವು…
ಪಚ್ಚೆಯರಸಿನೊಳಗಿನ ಕೆಸರಾಟ
ಮೈಮಾಟ ಕಂಡ ಪೈರೆಲ್ಲಾ
ಲಕಲಕ .! ಥಕಥಕ.! ಅಬ್ಬಬ್ಬಾ.!
ಸಾನುರಾಗದ ವೈಭೋಗ
ಅವಳೊಳಗೆ ಮೈದಳೆದು ಹೊಮ್ಮಿರಲು…
ಅಂತಃಕರಣದ ಒಲವರಸಿ.!
ಅಗಣಿತ ವಿಷಯವರಿತ ಜ್ಞಾನನಿಧಿ
ಪತಿಗೆ ಹೆಗಲಾಗಿ ಸಾರಥಿಯ
ಸಾರೋಟಲಿ ಸಾಗುವ ಬಾಳಿನ ಒಡತಿ.!
ಮರುಭೂಮಿ ಅಂಗಳದಿ
ಚಿಮ್ಮುತಿಹ ಹನಿಯಲಿ ಚಿಗುರುವ
ಓಯಸಿಸ್ ಅಂತೆ ಭರವಸೆಯ ಚೈತನ್ಯ
ಬೆಳಕನ್ನೀಡೊ ಧ್ರುವತಾರೆ
ಮಕ್ಕಳಿಗೆ ಜೀವದುಸಿರಧಾರೆ…
ಮುದ್ದು ಕಂದಗಳ ಆಟಿಕೆಯಂತೆ
ಬಾನಂಗಳದ ಶಶಿಯನು ಕರೆದಾಳೆಗೆ!
ಅವಳನ್ನೊರ್ಣಿಸಲು ಪದಗಳಿಗು
ಭರವುಂಟಾಗಿದೆ ನನ್ನೊಳಗೇಕೆ.!
ಅವ್ವ ಅನ್ನುವೊಂದು ಅನೂಹ್ಯ ತಾರೆ..
ಅದ್ವಿತೀಯ ಮಾತಾ ನಿತ್ಯ
ತತ್ವಾರಗಳ ಹೊಡೆತ ತಿಂದಳಾಕೆ
ಮಮತೆಯ ಬಯಲೊಳಗೆ
ರಮ್ಯತೆಯ ಕಣಜವಾಗಿ
ಭಾವನೆಗಳ ಸೆಳೆತದೊಳಗೆ
ದಿವ್ಯ ಜ್ಯೋತಿ ಬೆಳಗಿದಳೀಕೆ…
ದಳ್ಳುರಿಯ ಕೂಪದಲಿ ನಲಗಿದರು
ನಗುವಳು ಬಂಡೆದ್ದ ಮನದಲಿ
ಮಮತೆಯನು ಸೂಸಿ.!
ಹಸಿವಿನೊಡಲ ಹೊತ್ತರು
ಹಸಿದ ಜೀವಕೆ ತುತ್ತು ನೀಡಿದಾಕೆ
ಅವಳೊಳಗೆ ಚೆಲುವ ಬಲವು
ಉಕ್ಕಿ ಹರಿಯುತಿಹುದು..
ಇವಳೊಂದು ಆತ್ಮೀಯತೆಯ ಹಣತೆ
ಸ್ಫೂರ್ತಿಯ ಚಿಲುಮೆ
ಪ್ರಕೃತಿಯ ಪ್ರತಿರೂಪವೀ ಅವ್ವ…
***********************************