ಅಮ್ಮಂದಿರ ದಿನದ ವಿಶೇಷ ಕವಿತೆ
ಅಕ್ಷತಾ ಜಗದೀಶ
ನೋವಿನಲ್ಲು ನಗುವ ಚೆಲ್ಲುವವಳು..
ತಾನು ಹಸಿದು ಕೈ ತುತ್ತು ನೀಡುವವಳು
ಎಷ್ಟೇ ಕಷ್ಟಗಳಿದ್ದರು,
ಎಷ್ಟೇ ದು:ಖವಿದ್ದರು
ತನ್ನ ಮಗುವಿಗಾಗಿ ಕೇವಲ
ಸುಖವನ್ನೇ ಬಯಸಿದವಳು…
ತನ್ನ ನೋವಿನ ದಿನಗಳನು
ತನ್ನಲ್ಲಿಯೇ ಕೊನೆಗಾಣಿಸಿ
ತನ್ನ ಕರುಳಿನ ಕುಡಿಗಾಗಿ
ಹೂವಿನ ಹಾಸಿಗೆ ನಿರ್ಮಿಸಿದವಳು..
ಮುಳ್ಳುಗಳೇ ಕಾಲಿಗೆ ಚುಚ್ಚಿದರು
ಕಣ್ಣಿರ ಹನಿ ಮಗುವಿಗೆ ತಾಗದಂತೆ
ಎಚ್ಚರಿಕೆ ವಹಿಸಿದವಳು..
ಮಗುವಿನ ಅಳುವಿನಲ್ಲಿ ತಾ ಅತ್ತಳು
ಕಂದನ ನಗುವಿನಲ್ಲಿ ತಾ ನಲಿಡಾಡಿದಳು
ಅಮ್ಮ ಎಂಬ ಒಂದು ನುಡಿಯ ಕೇಳಿ
ತನ್ನೇಲ್ಲ ನೋವನ್ನು ಮರೆತಳು..
ವಿಶಾಲವಾದ ಕಡಲಿನ ಹಾಗೆ ಅಮ್ಮ
ನಿನ್ನ ಮಮತೆ….
ಅಮ್ಮ ಎಂಬ ಪದಕ್ಕೆ ಅಮ್ಮನೇ ಸಾಟಿ
ನಮನ ನಿನ್ನ ಪಾದ ಕಮಲಗಳಿಗೆ ಕೋಟಿ.. ಕೋಟಿ..
-***