ಕವಿತೆ
ಸತ್ವ ಪರೀಕ್ಷೆ
ಲಕ್ಷ್ಮೀದೇವಿ ಪತ್ತಾರ
ಸತ್ತವರ ಬಾಯಿಗೆ ಮಣ್ಣು
ಬದುಕುಳಿದರೆ ಹೋಳಿಗೆ , ಹುಗ್ಗಿ ಇದ್ದೆ ಇದೆ ಮುಂದೆ ಉಣ್ಣಲು
ಸ್ವಲ್ಪ ತಾಳ್ಮೆ ಸಹನೆ ಇರಲಿ ಬಾಳಿಗೆ
ಹೊರಗೆ ಬರದೆ ಇದ್ದದರಲ್ಲೆ ಹೊಂದಿಕೊಂಡು ಹೋಗಿ ಸುಮ್ಮನೆ
ರಾಜಮಹಾರಾಜರೇ ಹದಿನಾಲ್ಕು ವರ್ಷಗಳ ಕಾಲ ವನವಾಸ ಗೈದರು
ಹದಿನಾಲ್ಕು ದಿನಗಳವರೆಗೆ ಮಾತ್ರ
ಮನೆಯೊಳಗೆ ಇದ್ದರೆ ಏನು ತ್ರಾಸು
ಇಂದು ಮನೆಯೆ ಆನಂದವಾಗಿರಲು ಬಲು ಸುರಕ್ಷಿತ
ನಮ್ಮವರೊಂದಿಗೆ ಕಳೆಯಲು ಇದೂಂದು ಅವಕಾಶ
ಇಂದಿನ ಕಷ್ಟದ ದಿನಗಳು ಕಳೆದರೆ ಸಾಕು
ಮುಂದೆ ಇದೆ ಭಾಗ್ಯದ ಬಾಗಿಲು
ಯಮ ಒಡ್ಡಿರುವನು ನಮ್ಮ ತಾಳ್ಮೆಗೊಂದು ಸವಾಲು
ಸತ್ವ ಪರೀಕ್ಷೆ ನಾವು ಗೆಲ್ಲುಲೇ ಬೇಕು ಬದುಕಿ ಬಾಳಲು
*****************************