ಮತ್ತೊಮ್ಮೆ ಬೆಳಕು

ಕವಿತೆ

ಮತ್ತೊಮ್ಮೆ ಬೆಳಕು

ಹುಳಿಯಾರ್ ಷಬ್ಬೀರ್

ಹುಳಿಯಾರ್ ಷಬ್ಬೀರ್

ಅಂದಿನ ಅರೆಬೆತ್ತಲೆ ಫಕೀರನ ಬಿಡದ ನೆರಳು ಇಂದು ಮತ್ತೊಮ್ಮೆ ಆಗಿದೆ ಗೋವರ್ಧನ ಗಿರಿಗೆ ಹಿಡಿದ ಶ್ರೀ ಕೃಷ್ಣನ ಬೆರಳು

ಅಂದು ಹರಡಿದ್ದ ಫರಂಗಿಯವರ ಮುಳುಗದ ಸಾಮ್ರಾಜ್ಯದ ಗುಲಾಮಗಿರಿ
ಗುಡಿಸಿ ಹಾಕಿ ಸ್ವಚ್ಛ ಮಾಡಿ,
ಜಯಭೇರಿ ಹೊಡೆದಿತ್ತು
ನಮ್ಮ ಗಾಂಧಿಗಿರಿ.

ಇಂದು ಎತ್ತ ಸಾಗುತ್ತಿದೆ ಸ್ವಾತಂತ್ರ್ಯ ಪಡೆದ ಈ ಪುಟ್ಟ
ವಿಶ್ವಧಾಮ…..?
ಮೀರ್ ಸಾಧಿಕ್ ರ ದರ್ಬಾರಿನಲ್ಲಿ ನೀತಿ ನಿಯಮಗಳಲ್ಲ ಅಯೋಮಯವೋ ರಾಮ ರಾಮ….

ತೋರಿಕೆಗೆ ಆಚಾರ, ಮಾತೆಲ್ಲ ಬಂಗಾರ ನಡೆ ನೋಡಿದಡೆ ರೂಢಿಗತ ಭ್ರಷ್ಟಾಚಾರ
ಪ್ರಜೆ ಮೋಸ ಹೋದ ಮೇಕೆ
ಕತ್ತಲೆಯೊಳಗೆ ಕೋತಿಗಳದೇ ಕೇಕೆ
ಗಿಳಿ, ಕೋಗಿಲೆ, ನವಿಲುಗಳೆಲ್ಲ
ನಮಕ್ ಹರಾಮರ ವಜ್ರ ಪಂಜರದಲ್ಲಿ ಬಂಧಿಗಳಾಗಿವೆ ಏಕೆ…?

ಗಾಂಧಿ ಅಂದು ‘ ಗಿರಿ ‘ ಯಾದಂತೆ ಅಣ್ಣಾ ಇಂದು ‘ಧರೆ ‘
ಯಾಗಿ ಅವತರಿಸಿ ಛಲವ
ನೂಲಲು ಕುಳಿತಾಗ ನೀನು
ನೂಲಾಗು ಬಾ, ನೀನು ನೂಲಾಗು ಬಾ ಭಾರತೀಯ
ಮತ್ತೊಂದು ಸ್ವಾತಂತ್ರ್ಯದ ಬಟ್ಟೆಗೆ…!!

***************************

2 thoughts on “ಮತ್ತೊಮ್ಮೆ ಬೆಳಕು

Leave a Reply

Back To Top