ಅದೆ ಕೂಗು

ಕವಿತೆ

ಅದೆ ಕೂಗು

ಶಂಕರಾನಂದ ಹೆಬ್ಬಾಳ

Weeping Woman', Pablo Picasso, 1937 | Tate

ಮತ್ತೆ ಮತ್ತೆ ಅದೆ ಕೂಗು
ಕೇಳಿದರೆ ಮೈಜುಂ ಎನ್ನುವ ಕ್ರೌರ್ಯ
ಧಿಕ್ಕಾರವಿರಲಿ ನಿಮ್ಮ ಪುರುಷತ್ವಕ್ಕೆ
ಅಬಲೆಯ ಮೇಲೆ ಪೌರುಷ
ತೋರಿಸಿದ ನಾಚಿಕಗೇಡಿನ ಜನ್ಮ…..!!

ಬಾಪುವಿನ ಕನಸು ನನಸಾಗಲಿಲ್ಲ
ಒಡಲ ದಳ್ಳುರಿಯು ಹತ್ತಿ ಉರಿದಿದೆ
ನಿಗಿ ನಿಗಿ ಕೆಂಡದಂತೆ…
ಆರ್ತನಾದವ ಕೇಳುವರಿಲ್ಲದೆ
ಕೇಳಿದರು ಮಂಗನಂತೆ
ಕೈ ಬಾಯಿ ಕಣ್ಣು ಮುಚ್ಚಿ
ಕುಳಿತಿದ್ದೆವೆ ಹೇಡಿಯಂತೆ……!!

ನಿನ್ನ ದೇಹಕ್ಕೆ ಆಸೆ ಪಟ್ಟವರಿಗೆ
ದಫನ್ ಮಾಡಬೇಕು
ಕಾಮುಕರ ಕೈಕತ್ತರಿಸಿ
ನಾಯಿನರಿಗಳಿಗೆ ಹಾಕಬೇಕು
ಸತ್ತವಳು ನೀನಲ್ಲ….!!

ಮತ್ತೆ ಮತ್ತೆ ಕೇಳುತಿದೆ
ಅಮಾಯಕ ಹೆಣ್ಣುಮಕ್ಕಳ
ಮೇಲಿನ ದೌರ್ಜನ್ಯದ ಕೂಗು..
ನರಕದ ಹುಳುವಾಗಿ ಬಳಲಿದ
ಮನುಜನ ಸಹವಾಸ ಸಾಕು….!!

**************************

One thought on “ಅದೆ ಕೂಗು

Leave a Reply

Back To Top