Month: August 2020

ಕಸಾಪಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ?

ಚರ್ಚೆ . ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷದ ಹಾದಿ ಸವೆಸಿ ಮೇಲೆ ನಾಲ್ಕು ವರ್ಷಗಳಾಗಿವೆ.‌ ಮತ್ತೊಂದು  ಚುನಾವಣೆ ಎದುರಿಸಿ, ಕಸಾಪ ಅಧ್ಯಕ್ಷ ಗದ್ದುಗೆ ಏರಲು ಹಲವಾರು ಕಸರತ್ತುಗಳು ನಡೆದಿವೆ. ಕಸಾಪ ಅಧ್ಯಕ್ಷರ  ಅವಧಿ ಐದು ವರ್ಷ ಎಂದೂ ಬೈ ಲಾದಲ್ಲಿ (ಠರಾವು)ತಿದ್ದುಪಡಿಯಾಗಿ, ಅದಕ್ಕೆ ಕಸಾಪ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮುದ್ರೆ ಸಹ ಬಿದ್ದಿದೆ. ಚಾಮರಾಜನಗರದಲ್ಲಿ  ೨೦೧೯ ರಲ್ಲಿ ನಡೆದ ರಾಜ್ಯ ಕಸಾಪ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷರ ಅವಧಿ ಐದು ವರ್ಷ ಎಂದು ಅನುಮೋದನೆ ಸಹ […]

ಬೆಳೆಯೋಣ ಬನ್ನಿ..

ಕವಿತೆ ಸುಜಾತ ಲಕ್ಷ್ಮೀಪುರ. ಮನುಜ ಮನುಜನೆದೆಯಲಿಪ್ರೀತಿ ನೀತಿಯ ಸಸಿ ನೆಟ್ಟುಸಹಕಾರ ಸಮಾನತೆ ನೀರೆರೆದುಮನುಷ್ಯತ್ವದ ಹೂ ಹಣ್ಣು ಕಾಯಿ ಬೆಳೆದುಬಯಲ ಮಕ್ಕಳೆಲ್ಲಾ ಸೇರಿ ಸವಿಯೋಣ ಬನ್ನಿ. ನಿತ್ಯ ನಡೆ ನುಡಿ ಆಚಾರದಲಿಸದ್ಭಾವನೆಯ ಸಿಂಪಡಿಸಿಸರ್ವೋದಯದ ಸಕಾರವನೆ ಉಸಿರಾಡುತ್ತಾಸಕಲ ಜೀವರಾಶಿಯ ಲೇಸು ಬಯಸೋಣ ಬನ್ನಿ ಕಟ್ಟೋಣ ನಾವುಎಲ್ಲರ ಹೃದಯಗಳಿಗೂಅಂತಃಕರಣದ ಸ್ನೇಹ ಸೇತುವೆನಾನು ನೀನಳಿದು ನಾವು ಆದಸಮಷ್ಟಿಯ ಸರ್ವಹಿತದಲಿ. ಸದಾ ಜೀಕೋಣ ಬನ್ನಿಒಬ್ಬರಿಗೊಬ್ಬರು ಕೈ ಕೈಯಿಡಿದು.ನಾವೆಲ್ಲಾ ಒಂದೇ ನಾವು ಜೀವ ಚೈತನ್ಯರು.ಸಾರಿ ಸಾರಿ ಘೋಷಿಸುತ್ತಾಸುತ್ತೋಣ ಬನ್ನಿಮಾನವಪ್ರೇಮದ ನಂದನವನ. *****************************

ನಮಗೊಂದು ಪ್ರಕೃತಿಯು..!

ಕವಿತೆ –ರಮಣ ಶೆಟ್ಟಿ ರೆಂಜಾಳ. ನಮಗೊಂದು ದೇಹವಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ಪರಿ ಪರಿಯ ನೋವ !ನಮಗೊಂದು ಮನವಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ನಾನಾ ಪರಿ ಚಿಂತೆಯ !ನಮಗೊಂದು ಜಿಹ್ವೆಯಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ವಿಧ ವಿಧ ರುಚಿಯ !ನಮಗೊಂದು ನಾಸಿಕವಕೊಟ್ಟನು ಆ ದೇವ,ಆಘ್ರಾಣಿಸಬಿಟ್ಟನು ಇಹಪರದ ವಾಸನೆಯ !ನಮಗೆರಡು ಕಂಗಳಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ಚಂಚಲ ನೋಟವ !ನಮಗೆರಡು ಕಿವಿಗಳಕೊಟ್ಟನು ಆ ದೇವ,ಕೇಳಲೆಂದನವ ತರಹಾವರಿ ಶಬ್ಧವ !ನಮಗೆರಡು ಕೈ ಕಾಲುಗಳಕೊಟ್ಟನು ಆ ದೇವ,ಗಂಟುಗಳಲಿಟ್ಟು ವೃದ್ಧಾಪ್ಯಕೆನೋವ ನಿರಖು ಠೇವಣಿಯ !ನಮಗೊಂದು ಜೀವನವಕೊಟ್ಟನು ಆ ದೇವ,ಅನುಭವಿಸಲೆಂದು […]

ಮನೋ ಇಂಧನ

ಕವಿತೆ ವಿದ್ಯಾ ಶ್ರೀ ಎಸ್ ಅಡೂರ್ ಸೀಟಿ ಹೊಡೆಯುತ್ತದೆ ಕುಕ್ಕರ್…ತಾಳದೇತನ್ನ ಅಡಿಯಲ್ಲಿ ಉರಿಯುತ್ತಿಯುವ ಬೆಂಕಿ.ನಾನೂಹೊರಹಾಕುತ್ತೇನೆ ನೋವು ನಲಿವುಗಳಪೆನ್ನು ಕಾಗದ ಹಿಡಿದು ,ಮನವನ್ನು ಕೆದಕಿ ಕೆದಕಿ . ಹಣೆಮೇಲಿನ ನೆರಿಗೆ, ಕಣ್ಣಂಚಿನ ಹನಿತುಟಿಯ ಮೇಲ್ಮುಖ ….ಕೆಳಮುಖ ಬಾಗುವಿಕೆಯಾವುದೂ ಅರ್ಥವಿಲ್ಲದ್ದಲ್ಲ….ಆಕಸ್ಮಿಕವಲ್ಲಪ್ರತಿಯೊಂದಕ್ಕೂ ಇದೆ ಬೇರೆ ಬೇರೆಯೇ ಪೀಠಿಕೆ. ಮನದ ಮ್ಲಾನತೆಯೋ, ಆಹ್ಲಾದಕತೆಯೋಮುಖದ ಮೇಲೆ ಕಾಣಬೇಕಾದರೆ…ಬೇಕುಏನಾದರೂ ಒಂದು ಇಂಧನ….ಅದಕ್ಕೇ..ಕುಕ್ಕರ್ ನ ಉದಾಹರಣೆ ಒಂದೇ..ಸಾಕು. ಮನವೆಂಬುದು ಒಂದು ಕುಲುಮೆಯೇ ಸರಿ..ಬೇಯುತ್ತಿರುತ್ತದೆ ಅಲ್ಲಿ ಬೇರೆ ಬೇರೆ ವಿಷಯಯಾವುದು ಮೊದಲು, ಯಾವುದು ಮತ್ತು, ಹೇಳುವಹಾಗಿಲ್ಲ,ಹೊರಹಾಕುತ್ತದೆ ನೋಡಿಕೊಂಡು ಸಮಯ…. […]

ಮೌಢ್ಯ

ಕವಿತೆ ವೀಣಾ ರಮೇಶ್ ಮಾನದಂಡವಿಲ್ಲದ ಮೂಢ ಸಂತೆಯೊಳಗೆಬದುಕು ವ್ಯಾಪಾರ ವಾಗುತ್ತಿದೆ .ನಂಬಿಕೆಯ ನಡುವೆ ಮೂಢತ್ವ ಬಿತ್ತಿಮೊಳಕೆಯೊಡೆದುಬೇರು ಚಾಚಿಮೌಢ್ಯ ಹೆಮ್ಮರವಾಗಿದೆ ಬೆತ್ತಲಾಗಬೇಡ ಬತ್ತಿದಕನಸುಗಳಿಗೆಪೊಳ್ಳು ಕಟ್ಟು ಪಾಡುಗಳಹೆಗಲೇರಿ ಶವವಾಗಬೇಡ. ನಿನ್ನ ಕನಸುಗಳ ಚಲುವಿಗೆಸುಜ್ಞಾನ ತೊಡಿಸಿಜ್ಞಾನ ದಾರದಿಂದ ಬಿಗಿದುಅಭಿಜ್ಞಾನದೆಡೆಗೆ ಹರಿಸಿ ಅಹಂಕಾರದ ಕತ್ತಲೆಯಮರೆಸಿ ಆತ್ಮದ ಹಣತೆಯಲಿಅಂತರಾತ್ಮದ ನವಿರು ಸ್ಪರ್ಶ ಬೆಳಕು ನೀಡಲಿ **********************************

ಕಣ್ಣುಗಳು ನನ್ನದಲ್ಲ

ಕವಿತೆ ಜಹಾನ್ ಆರಾ ಎಚ್. ಕೋಳೂರು ನಾನು ನಿನ್ನನ್ನು ನೋಡಿದ್ದೇನೆಆದ್ರೆ ಕಣ್ಣುಗಳು ನನ್ನದಲ್ಲ ದಶರಥನ ಮಹೋನ್ನತ ಯೋಚನೆಯಲ್ಲಿಮಂಥರೆಯ ಮೋಸದಲಿಊರ್ಮಿಳೆಯ ಉದಾಸೀನತೆ ಯಲ್ಲಿಲಕ್ಷ್ಮಣನ ನೆರಳಿನಲ್ಲಿಹನುಮಾನನ ಸೇವೆಯಲಿರಾವಣನ ಶೌರ್ಯದಲ್ಲಿಹೌದು ಅದೇ ಸೀತೆಯ ಕಂಬನಿಯಲ್ಲಿ ನಿನ್ನನ್ನು ಮತ್ತೆ ನೋಡುತಿದ್ದೇನೆಮತ್ತೆ ಮತ್ತೆ ಕಣ್ಣುಗಳು ನನ್ನದಲ್ಲ ಧರ್ಮದ ಚದರಿನಲ್ಲಿಜನ್ಮ ಭೂಮಿಯ ಹಂಗಿನಲಿರಾಜಕೀಯದ ದಾಳದಲಿಕೋರ್ಟುಗಳ ವಿವಾದಗಳಲಿದಾನಿಗಳ ದಾನದಲಿಮೌಢ್ಯದ ಹಾದಿಯಲ್ಲಿಮಾಧ್ಯಮದ ಗದ್ದಲದಲ್ಲಿ ನಿನ್ನ ಸೃಷ್ಟಿದ ವಾಲ್ಮೀಕಿಕಡತಗಳ ಹಿಡಿದುಇನ್ನೂ ಹೊರಗೆ ನಿಂತಿದ್ದಾನೆಅವನ್ನು ವಿಚಾರಿಸುನೀ ಮತ್ತೆ ಬರುವ ಅಗತ್ಯ ಇತ್ತೆ ಎಂದು? ಸಾವು ನೋವುಗಳ ಮೇಲೆ ಹಿಡಿತತಪ್ಪಿರುವಾಗ ದೇವರಾಗುವಬದಲು ವೈದ್ಯನಾಗುಮಂದಿರ […]

ಕಾಡುವ ನೆನಪು

ನೆನಪು ವೀಣಾ ನಿರಂಜನ್ ಭೂತದ ಹುತ್ತದಲ್ಲಿ ಅಡಗಿ ಕುಳಿತಿರುವ ನೆನಪುಗಳನ್ನು ಮೆಲುಕು ಹಾಕುತ್ತಾ ಮೊದಲ ಕವಿತೆಯ ರೋಮಾಂಚನವನ್ನು ಅನುಭವಿಸುತ್ತಿದ್ದೇನೆ. ನಾನು ಯಾವ ಗಳಿಗೆಯಲ್ಲಿ, ಯಾಕೆ ಕವಿತೆಯನ್ನು ಹಚ್ಚಿಕೊಂಡೆ ಎನ್ನುವುದೇ ಮೊದಲ ಕವಿತೆಯ ಹುಟ್ಟಿಗೂ ಕಾರಣವಾಯಿತೇನೊ. ನನ್ನಪ್ಪ ನನಗೊಂದು ಅಚ್ಚರಿಯಾಗಿದ್ದ. ಮೇಷ್ಟ್ರಾಗಿದ್ದ ಅಪ್ಪ ಯಾವುದೇ ವಿಷಯದ ಕುರಿತು ತುಂಬ ಸೊಗಸಾಗಿ, ವಿಸ್ತಾರವಾಗಿ, ಪ್ರಭುತ್ವದಿಂದ ಪಾಠ ಮಾಡುತ್ತಿದ್ದ. ಭಾಷಣ ಮಾಡುತ್ತಿದ್ದ. ಮನೆ ತುಂಬ ಪುಸ್ತಕಗಳು. ಅಪ್ಪನ ಭೇಟಿಗೆಂದು ಮನೆಗೆ ಬರುತ್ತಿದ್ದವರು ಕೂಡ ಅಂಥವರೇ. ಸದಾ ಸಾಹಿತ್ಯ, ಕಲೆಯ ಕುರಿತು ಚರ್ಚೆ, […]

ಪಯಣ

ಕವಿತೆ ಪಾರ್ವತಿ ಸಪ್ನ ಹೊಗಳಿದರೆ ಹಿಗ್ಗದೆತೆಗಳಿದರೆ ಕುಗ್ಗದೆಅಪ್ಪಳಿಸುವ ಮಾತಿನಅಲೆಗಳಿಗೆ ಜಗ್ಗದೆನಿನ್ನ ಹಾದಿಯಲ್ಲೇನಿಲ್ಲದೆ..ನೀ ಸಾಗಿಬಿಡು..!! ಕಾಲಿಗೊಂದು ಮುಳ್ಳುಕೈಯಿಗೊಂದು ಕಲ್ಲುನಾಲಿಗೆಯಲ್ಲಿ ಸುಳ್ಳುಅಚ್ಚರಿಯೇನಿಲ್ಲ..ಲೋಕವೇ ಡೊಂಕುಮಾತೆಲ್ಲಾ ಕೊಂಕುಇರಲಿಬಿಡು.. ನಿನ್ನಷ್ಟಕ್ಕೇನೀ….ಸಾಗಿಬಿಡು…!! ತಪ್ಪು ಹುಡುಕುವಬೆಪ್ಪನಿಗೆ..ತುಪ್ಪ ಸವರಿದರೂಮೊಸರಲ್ಲೂ ಕಲ್ಲಂತೆ,,ಕಾಣದ ಗಾಳಿಯದುಬೊಗಸೆಯಲ್ಲಿ ಹಿಡಿದಂತೆ,,ಸುಮ್ಮನೆ ನಡೆದುಬಿಡುನಿನ್ನ ಹಾದಿಯಲ್ಲಿ ಸಾಗಿಬಿಡು…!! ಎಲ್ಲವೂ ಜಂಜಾಟಪ್ರತಿಕ್ಷಣ ಒಂದು ಪಾಠಸಮಯ ಗುರುವುಕಲಿಸುವುದು ನೋಡುಅವನ ಆಟಕ್ಕೆ ನೀ ಕುಣಿದುಬಿಡುತಿರುಗಿ ಮತ್ತೆ ನೋಡದಿರುವ್ಯಥೆಯನ್ನೆಲ್ಲಾ ತೂರಿಬಿಡುನಿನ್ನ ಗುರಿಯ ಸೇರಿಬಿಡು…!! ********************

ಇಲ್ಲದೆಯೂ ಎಲ್ಲವನ್ನೂ ಬಯಸುತ್ತೇನೆ

ಕವಿತೆ ಸ್ಮಿತಾ ಭಟ್ ಅಬ್ಬರಿಸಿ ಬರುವ ನಿನ್ನ ಮಾತಿನಹೊಡೆತಕ್ಕೆ ಸಿಲುಕಿದ ಒಂಟಿ ದೋಣಿಮತ್ತೊಂದು ಪ್ರಶಾಂತ ನಿಲುವಿಗಾಗಿಯಾಕೋ ಕಾಯಬೇಕೆನಿಸುತ್ತಿಲ್ಲಕೊಚ್ಚಿ ಕಾಣದಾಗಲೆಂದು ಬಯಸುತ್ತೇನೆ ಬುಡಮೇಲಾದ ನಂಬಿಕೆಯಮತ್ತೆ ಊರಿ ಅದಕ್ಕೇ ಚಿಗುರೊಡೆವಸಮಯಕ್ಕಾಗಿಯಾಕೋ ಕಾಯಬೇಕೆನಿಸುತ್ತಿಲ್ಲಕುರುಹೂ ಇಲ್ಲದಂತೆ ನಶಿಸಿ ಹೋಗಲು ಬಯಸುತ್ತೇನೆ. ಹೊಸದೇನೋ ಘಟಿಸುತ್ತದೆ ಎಂಬ ಬಯಕೆಯಲಿಹಳೆಯ ಪೋಷಾಕುಗಳನೇ ಮತ್ತೆ ಮತ್ತೆ ಹೊದ್ದುಅಸತ್ಯದ ನಗುವಿನಲಿ ಯಾಕೋ ಕಾಯಬೇಕೆನಿಸುತ್ತಿಲ್ಲಸಕಲವನೂ ತೊರೆದು ನಿರಾಳವಾಗಲು ಬಯಸುತ್ತೇನೆ. ಯಾವ ಕಿಂಡಿಯೂ ಉಳಿದಿಲ್ಲಕಿರಣದ ಸ್ಪರ್ಶವ ಅನುಭವಿಸಲುಹೊರದಾರಿಗೆ ಯಾರೋ ಬಾಗಿಲು ತರೆಯುವುದಕ್ಕಾಗಿ ಯಾಕೋ ಕಾಯಬೇಕೆನಿಸುತ್ತಿಲ್ಲಗೂಡಿನ ಮಾಡು ಸರಿಸಿ ದಿಗಂತದಲಿಹಂಗು ತೊರೆದು ಹಾರಲು ಬಯಸುತ್ತೇನೆ […]

ಅಂಕ(ಣ)ದ ಪರದೆ ಸರಿಯುವ ಮುನ್ನ.

ಸಂಗಾತಿ ಸಾಹಿತ್ಯ ಪತ್ರಿಕೆಯನ್ನು ಅದರ ನಿಲುವನ್ನೂ ಹಲವು ಗೆಳೆಯರು ಗಮನಿಸಿರಬಹುದು. ಸದಾ ಹೊಸ ಆಲೋಚನೆಗಳಿಗೆ ಮತ್ತು ಆಧುನಿಕ ಕಾಲದ ಸಂವೇದನೆಗೆ ವೇದಿಕೆಯಾಗಿರ ಬಯಸುವ ಸಂಗಾತಿ ಸ್ಥಾಪಿತ ಹಿತಾಸಕ್ತಿಗಳನ್ನು ಮತ್ತು ಬರಿಯ ತೋರಿಕೆಯನ್ನು  ಎಂದಿಗೂ ಎತ್ತಿಹಿಡಿದಿಲ್ಲ. ಅವರು ಇವರು ಎಂದಲ್ಲ. ಫೇಸ್ಬುಕ್ ಈ ನಡುವೆ ಬಹುತೇಕರ ನಿರಂತರ ನಿಲುದಾಣ, ತಂಗುದಾಣ, ಹಾಗೂ ಅಭ್ಯಾಸದ ಮೈದಾನವೂ ಆಗಿದೆ. ಹಲವರನ್ನು  ಫಾಲೋ ಮಾಡುತ್ತ ಅವರ ರಚನೆಗಳನ್ನು ಗಮನಿಸಿದರೆ ದಿನದಿಂದ ದಿನಕ್ಕೆ ಪ್ರಭೃದ್ಧರಾಗುತ್ತಿರುವ ಹಲವರಿದ್ದಾರೆ. ಇನ್ನು ಒಂದೋ ಎರಡೋ ಸಂಕಲನ ತಂದೂ ಫೇಸ್ಬುಕ್ಕಲ್ಲಿ […]

Back To Top