ಕವಿತೆ
ಪಾರ್ವತಿ ಸಪ್ನ

ಹೊಗಳಿದರೆ ಹಿಗ್ಗದೆ
ತೆಗಳಿದರೆ ಕುಗ್ಗದೆ
ಅಪ್ಪಳಿಸುವ ಮಾತಿನ
ಅಲೆಗಳಿಗೆ ಜಗ್ಗದೆ
ನಿನ್ನ ಹಾದಿಯಲ್ಲೇ
ನಿಲ್ಲದೆ..ನೀ ಸಾಗಿಬಿಡು..!!
ಕಾಲಿಗೊಂದು ಮುಳ್ಳು
ಕೈಯಿಗೊಂದು ಕಲ್ಲು
ನಾಲಿಗೆಯಲ್ಲಿ ಸುಳ್ಳು
ಅಚ್ಚರಿಯೇನಿಲ್ಲ..
ಲೋಕವೇ ಡೊಂಕು
ಮಾತೆಲ್ಲಾ ಕೊಂಕು
ಇರಲಿಬಿಡು.. ನಿನ್ನಷ್ಟಕ್ಕೇ
ನೀ….ಸಾಗಿಬಿಡು…!!
ತಪ್ಪು ಹುಡುಕುವ
ಬೆಪ್ಪನಿಗೆ..ತುಪ್ಪ ಸವರಿದರೂ
ಮೊಸರಲ್ಲೂ ಕಲ್ಲಂತೆ,,
ಕಾಣದ ಗಾಳಿಯದು
ಬೊಗಸೆಯಲ್ಲಿ ಹಿಡಿದಂತೆ,,
ಸುಮ್ಮನೆ ನಡೆದುಬಿಡು
ನಿನ್ನ ಹಾದಿಯಲ್ಲಿ ಸಾಗಿಬಿಡು…!!
ಎಲ್ಲವೂ ಜಂಜಾಟ
ಪ್ರತಿಕ್ಷಣ ಒಂದು ಪಾಠ
ಸಮಯ ಗುರುವು
ಕಲಿಸುವುದು ನೋಡು
ಅವನ ಆಟಕ್ಕೆ ನೀ ಕುಣಿದುಬಿಡು
ತಿರುಗಿ ಮತ್ತೆ ನೋಡದಿರು
ವ್ಯಥೆಯನ್ನೆಲ್ಲಾ ತೂರಿಬಿಡು
ನಿನ್ನ ಗುರಿಯ ಸೇರಿಬಿಡು…!!
********************
ಚೆನ್ನಾಗಿದೆ.
ಧನ್ಯವಾದಗಳು ತಮಗೆ
ಸುಂದರ
ತುಂಬು ಹೃದಯದಿಂದ ಧನ್ಯವಾದಗಳು ತಮಗೆ
ತುಂಬಾ ಚೆನ್ನಾಗಿದೆ
ತುಂಬು ಹೃದಯದಿಂದ ಧನ್ಯವಾದಗಳು ತಮಗೆ