ಕವಿತೆ
ಸುಜಾತ ಲಕ್ಷ್ಮೀಪುರ.
ಮನುಜ ಮನುಜನೆದೆಯಲಿ
ಪ್ರೀತಿ ನೀತಿಯ ಸಸಿ ನೆಟ್ಟು
ಸಹಕಾರ ಸಮಾನತೆ ನೀರೆರೆದು
ಮನುಷ್ಯತ್ವದ ಹೂ ಹಣ್ಣು ಕಾಯಿ ಬೆಳೆದು
ಬಯಲ ಮಕ್ಕಳೆಲ್ಲಾ ಸೇರಿ ಸವಿಯೋಣ ಬನ್ನಿ.
ನಿತ್ಯ ನಡೆ ನುಡಿ ಆಚಾರದಲಿ
ಸದ್ಭಾವನೆಯ ಸಿಂಪಡಿಸಿ
ಸರ್ವೋದಯದ ಸಕಾರವನೆ ಉಸಿರಾಡುತ್ತಾ
ಸಕಲ ಜೀವರಾಶಿಯ ಲೇಸು ಬಯಸೋಣ ಬನ್ನಿ
ಕಟ್ಟೋಣ ನಾವು
ಎಲ್ಲರ ಹೃದಯಗಳಿಗೂ
ಅಂತಃಕರಣದ ಸ್ನೇಹ ಸೇತುವೆ
ನಾನು ನೀನಳಿದು ನಾವು ಆದ
ಸಮಷ್ಟಿಯ ಸರ್ವಹಿತದಲಿ.
ಸದಾ ಜೀಕೋಣ ಬನ್ನಿ
ಒಬ್ಬರಿಗೊಬ್ಬರು ಕೈ ಕೈಯಿಡಿದು.
ನಾವೆಲ್ಲಾ ಒಂದೇ ನಾವು ಜೀವ ಚೈತನ್ಯರು.
ಸಾರಿ ಸಾರಿ ಘೋಷಿಸುತ್ತಾ
ಸುತ್ತೋಣ ಬನ್ನಿ
ಮಾನವಪ್ರೇಮದ ನಂದನವನ.
*****************************
ಧನ್ಯವಾದಗಳು ಸರ್
ಸದಾಶಯದ ಕವಿತೆ