ಮೌಢ್ಯ

ಕವಿತೆ

ವೀಣಾ ರಮೇಶ್

ಮಾನದಂಡವಿಲ್ಲದ ಮೂಢ ಸಂತೆಯೊಳಗೆ
ಬದುಕು ವ್ಯಾಪಾರ ವಾಗುತ್ತಿದೆ


.
ನಂಬಿಕೆಯ ನಡುವೆ ಮೂಢತ್ವ ಬಿತ್ತಿ
ಮೊಳಕೆಯೊಡೆದು
ಬೇರು ಚಾಚಿ
ಮೌಢ್ಯ ಹೆಮ್ಮರವಾಗಿದೆ

ಬೆತ್ತಲಾಗಬೇಡ ಬತ್ತಿದ
ಕನಸುಗಳಿಗೆ
ಪೊಳ್ಳು ಕಟ್ಟು ಪಾಡುಗಳ
ಹೆಗಲೇರಿ ಶವವಾಗಬೇಡ.

ನಿನ್ನ ಕನಸುಗಳ ಚಲುವಿಗೆ
ಸುಜ್ಞಾನ ತೊಡಿಸಿ
ಜ್ಞಾನ ದಾರದಿಂದ ಬಿಗಿದು
ಅಭಿಜ್ಞಾನದೆಡೆಗೆ ಹರಿಸಿ

ಅಹಂಕಾರದ ಕತ್ತಲೆಯ
ಮರೆಸಿ ಆತ್ಮದ ಹಣತೆಯಲಿ
ಅಂತರಾತ್ಮದ ನವಿರು ಸ್ಪರ್ಶ ಬೆಳಕು ನೀಡಲಿ

**********************************

Leave a Reply

Back To Top