Month: May 2020

ಕಾವ್ಯಯಾನ

ನಾವು ಕಾರ್ಮಿಕರು ರಾಜು ದರ್ಗಾದವರ ಕಲ್ಲುಬಂಡೆ ತಲೆ ಮೇಲೆ ಹೊತ್ತು ಆಗಸದಗಲ ನಗುವ ಬಯಸಿ ಕಷ್ಟನಸ್ಟ ಪಕ್ಕಕ್ಕಿಟ್ಟು ಜೋಳಿಗೆಯಲ್ಲಿ ಕೂಸುಬಿಟ್ಟು ದೂರದ ಬೆಟ್ಟಕ್ಕೆ ಲಗ್ಗೆ ಜಡಿದು ಹಗಲುಗನಸು ಅದರೊಂದಿಗೆ ಬೆಸೆದು ಇರುಳು ಕಳೆದು, ಹಗಲು ಬರುವ ದಿಕ್ಕಿನಡಿಗೆ ಬಿಸಿಲುಬಾಗಿಲ ಬಡಿದು, ಗಟ-ಗಟ ಗಂಟಲ ಸಪ್ಪಳದಿ ಹೊಟ್ಟೆಯ ಹಸಿವನ್ನು ತಳಕು ಹಾಕಿದವರು ನಾವು ಕಾರ್ಮಿಕರು,ನಾವು ಕಾರ್ಮಿಕರು ಕೊಳಕುಬಟ್ಟೆ ಮೈಮೇಲೆ ಉಟ್ಟು ಮನದ ತುಂಬ ಪಿರುತಿ ಹೊಯ್ದು ಉಪ್ಪುನೀರು ಹರಿಯಲುಬಿಟ್ಟು ಎಚ್ಚತ್ತ ಕಣ್ಣು ಮಲಗದಂತೆ,ಬೆಚ್ಚನೆ ಕಣ್ಣೀರಿಗೆ ಕರಿಗಲ್ಲ ತೊಯ್ದು ಕಾರು,ಬಂಗ್ಲೆ […]

ಕಾವ್ಯಯಾನ

ಖಾಲಿಯಾಗುಳಿಸಿದವನು ಶಿವಲೀಲಾ ಹುಣಸಗಿ ಈಗೆಲ್ಲಿ ಮಾಯವಾದೆ ನಿನ್ನೊಡನಾಟದ ಬಿಸಿಯೊಳಗೆ ಬೀಸಿದಬ್ಬರದ ಬಿರುಗಾಳಿಯಲಿ ಸಿಲುಕಿ ಹೊಯ್ದಾಡುತಿಹೆ ದೇಹದ ಕಣಕಣದಲೂ ಬೆರೆತ ನೀನು ಬಯಸಿದಾಗ ಕೈ ಜಾರುವ ಮೀನು ಹೆಪ್ಪುಗಟ್ಟಿದ ನರಗಳಲಿ ನೆತ್ತರು ಹರಿಸಿ ನೀನಪ್ಪಿದಾಗ ಬಯಕೆ ಕಾಡಿತ್ತು ನಿನ್ನೊಳಗೊಂದಾಗುವ  ಕ್ಷಣದೆ  ಬಟಾಬಯಲು ಗಾಳಿಯ ಹುಯಿಲು ಮರುಚಣ ಮುತ್ತಿದ ಮೌನದ ಹೊರತಾಗೇನು ಉಳಿದಿಲ್ಲವಿಲ್ಲಿ ಕನಸಿಗೆ ಮುನ್ನುಡಿಯಾದವನು ಬೆನ್ನುಡಿಯಾಗಲಿಲ್ಲ ನನಸಿಗೆ ಇಲ್ಲೀಗ ಅದೇ ಕೋಣೆ ಅದೇ ಕನಸುಗಳು ಅದೇ ಹಾಸಿಗೆದಿಂಬುಗಳು ಮತ್ತೆ ಮರಳುವೆಯೇನು ಹಸಿವಾದಾಗ? ಎದೆಗೊರಗಿ ಮಲಗಿದವ ಹೇಳಿ ಹೋಗಬಾರದಿತ್ತೇನು ಪಿಸುಮಾತಿನಲಾದರೂ! […]

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ಏಳನೇ ಅದ್ಯಾಯ ಕನ್ನಡ ಗಜಲ್ ಅಲ್ಲಿ ಉರ್ದು ಪದ ಬಳಕೆ ಕೆಲವೊಂದು ಗಜಲಗಳನ್ನು ಓದಿರುತ್ತೀರಿ… ಅವು ಹೇಗಿರುತ್ತವೆ ಎಂದರೆ ಮೊಹಬ್ಬತ್ತ, ಗೋರಿ, ಜಿಂದಾ,ಜಿಂದಗಿ, ಇಷ್ಕ, ಅವಾಜ್, ಪಿರ್, ಮುದ್ದಾಮ, ಖುದಾ, ಹಕಿಕತ್ ಮೊದಲಾದ ಉರ್ದು ಪದಗಳು ಆ ಕನ್ನಡದ ಗಜಲ್ ಅಲ್ಲಿ ಅಲ್ಲಲ್ಲಿ ನುಸುಳಿರುತ್ತವೆ. ಹೀಗೆ ಉರ್ದು ಮಿಶ್ರಿತ ಗಜಲ್ […]

ಕಥಾಯಾನ

ಮಧುವಂತಿ ಅಂಜನಾ ಹೆಗಡೆ “ನೀನ್ಯಾಕೆ ಮದ್ವೆ ಆದೆ?” ರಜನಿ ಅವಿನಾಶನನ್ನು ಭೇಟಿಯಾದಾಗ ಕೇಳಿದ ಮೊದಲನೇ ಪ್ರಶ್ನೆ ಇದು. ಬೆಂಗಳೂರಿನ ಲಾ ಕಾಲೇಜೊಂದರ ಉಪನ್ಯಾಸಕ ಅವಿನಾಶ ಅವನ ಅಸಂಬದ್ಧ ಮಾತುಕತೆಗಳಿಂದ, ನಡೆವಳಿಕೆಯಿಂದ ರಜನಿಗೆ ಉಪನ್ಯಾಸಕ ಅಂತ ಅನ್ನಿಸುತ್ತಲೇ ಇರಲಿಲ್ಲ. ವಾರದ ಐದೂ ದಿನ ಬೆಳಗಿನ ಕ್ಲಾಸು ಮುಗಿಸಿ, ಊಟ ಮಾಡಿ ಮಲಗಿ ಎದ್ದವ ರಜನಿಗೊಂದು ಫೋನ್ ಮಾಡುವುದು ಅವಿನಾಶನ ದಿನಚರಿಗಳಲ್ಲೊಂದು. ಇವತ್ತು ಕ್ಲಾಸಲ್ಲಿ ಹಾಗಾಯ್ತು ಹೀಗಾಯ್ತು , ಹುಡುಗಿಯೊಬ್ಬಳು ಪಾಠ ಮಾಡುವಾಗ ನನ್ನನ್ನೇ ನೋಡ್ತಾ ಇದ್ಲು ಅಂತೆಲ್ಲ ಅವಿನಾಶ […]

ಸಿನಿಮಾ

ಥಪ್ಪಡ್ ಮಡದೀಯ ಬಡಿದಾನ…   ಮಡದೀಯ ಬಡಿದಾನ…  ಈಚೆಗೆ ‘ಥಪ್ಪಡ್’ ಎಂಬ ಹಿಂದಿ ಸಿನೆಮಾ ನೋಡಿದೆ. ಕೇವಲ ‘ಒಂದು ಏಟು’ ಎಂದು ನಿರ್ಲಕ್ಷ್ಯ ತೋರಿ ಮರೆತುಬಿಡುವ ಪ್ರಸಂಗವನ್ನು ‘ಹೆಣ್ಣಿನ ಆತ್ಮಗೌರವ’ದ ಹೆಸರಿನಲ್ಲಿ ತೆರೆಯ ಮೇಲೆ ತೋರಿಸಿರುವ ರೀತಿ ಸ್ತ್ರೀಕುಲದ ಆತ್ಮಸಾಕ್ಷಿಯಂತಿದೆ. ಸಂಕುಚಿತ ಸಮಾಜಕ್ಕೆ ಮಾಡಿದ ಕಪಾಳಮೋಕ್ಷವಾಗಿದೆ. ನಿಜಕ್ಕೂ ಈ ಸಿನೆಮಾ ಸೂಕ್ಷ್ಮವಾಗಿ ಸಮುದಾಯಕ್ಕೆ ದಾಟಿಸುವ ಸಂದೇಶ ಇದೆಯಲ್ಲಾ ಅದು ಅದ್ಭುತ..!   ಜನಪದ ಗೀತೆಯೊಂದಿದೆ,    “ಮಡದೀಯ ಬಡಿದಾನ ಮನದೊಳಗೆ   ಮರುಗ್ಯಾನ, ಒಳಹೋಗಿ ಸೆರಗ ಹಿಡಿದು   ತಾ ಕೇಳಾನ ನಾ ಹೆಚ್ಚೋ […]

ಕಾದಂಬರಿಕಾರರು

ಉತ್ತಮ ಕಾದಂಬರಿಕಾರರು ಚಂದ್ರು ಪಿ.ಹಾಸನ  ಕುಂಬಾರ ಮಾಡಿದ ಕುಡಿಕೆಯಲ್ಲಿ ನಿಷ್ಕಲ್ಮಶ ಮನಸ್ಸಿನ ಎಣ್ಣೆ ತುಂಬಿ ಒಗ್ಗಟ್ಟಿನ ಬತ್ತಿಯನ್ನು ಹಚ್ಚಿದಾಗ ಆ ಕುಂಬಿಕೆಯು ದೀಪವೆಂಬ ಹೆಸರನ್ನು ಪಡೆಯುತ್ತದೆ.ಅದು ಹೊರಹೊಮ್ಮುವ ಪ್ರಶಾಂತ ಕಿರಣಗಳು ಅಡಗಿಸಿ ಕೊಳ್ಳುತ್ತಿರುವ ನಕಾರಾತ್ಮಕತೆಯನ್ನು ಹೊಡೆದೋಡಿಸಿ ಧನಾತ್ಮಕತೆಯನ್ನು ತುಂಬುತ್ತದೆ. ಎಲ್ಲೆಡೆ ಪ್ರಶಾಂತತೆಯನ್ನು ಹೊಮ್ಮುತ್ತದೆ.ಇದರಿಂದ ಜೀವಿಗಳ ಚೈತನ್ಯ ಪ್ರಾಪ್ತಿಯಾಗುವುದಿಲ್ಲದೆ ಬೆಳವಣಿಗೆ ಹೊಸ ಜೀವಿಗಳ ಉದಯ ಹೀಗೆ ಪ್ರತಿಯೊಂದರಲ್ಲೂ ತನ್ನ ಸ್ಥಾನವನ್ನು ಬೆಳೆಸಿ ತನ್ನ ಸುತ್ತಲೂ ಉತ್ತಮ ಪರಿಸರವನ್ನು ಸೃಷ್ಟಿಸುತ್ತದೆ. ಇಂತಹ ದೀಪದಂತೆ ಅಲ್ಲಲ್ಲಿ ಕಾದಂಬರಿಕಾರರು ಜನಿಸಿದ್ದು, ಆಧುನಿಕ ಕನ್ನಡ […]

ಕಾವ್ಯಯಾನ

ಜಿಂಕೆಗೆ ಜೀವ ಬರಲು ಧಾಮಿನಿ ಪ್ರಿಯಾ ಜಿಂಕೆಯಂತೆ ಚಿಮ್ಮುತ್ತಿದ್ದೆನು ನಾನು ಕಾರಣ ನೀನು ನನ್ನ ಸಹಕಾರದಿಂದಲೇ ಮುಗಿದಿತ್ತೆಲ್ಲ ಜೀವನ ಪೂರ್ತಿ ನಡೆಯುವಂತದ್ದಲ್ಲ ಮೈಮೇಲೆ ಹರಿದಾಡಿದಂತೆ ಹಾವು ಮುದಗೊಳಿಸುವಂತ ಕಾವು ಹಾವಿನೊಂದಿಗೆ ಸರಸವೇ ನಾಗಮಂಡಲ ನೋಡಿಲ್ಲವೇ ಬೆಣ್ಣೆಯಂತಹ ಮೈ ಕರಗಿತ್ತಲ್ಲಾ ಸೈ ಕೈ ಕಾಲುಗಳಿಗೆ ಎಂತದೋ ಹುರುಪು ಇಲ್ಲಿ ಬಲಾತ್ಕಾರವಿಲ್ಲ ಸಮರ್ಪಣೆಯೇ ಒನಪು ಜಿಂಕೆಯಂತೆಯೇ ಗಾಬರಿಯಾಗಿದ್ದೆನಾ ಕಾರಣ ನೀನೇನಾ ? ಎಂತಾ ಅದ್ರಷ್ಟವಂತೆಯೇ ನೀ ಇವನನ್ನು ಇವನೇ ಎಂದುಕೋ ಬೇಡ ಬಿಡಿ ಇಲ್ಲಿ ಅವನೇತಕೋ ಏನೂ ಕಡಿಮೆಯಿಲ್ಲ ಸಂಭ್ರಮಕೋ […]

ಕಾವ್ಯಯಾನ

ತಾರೆಗಣ್ಣು ಸ್ವಭಾವ ಕೋಳಗುಂದ ಪಾದಗಳು ಬಿರುಕು ಬಿಟ್ಟಿವೆ ನೆರಕೆ ಬಳಿದು ವರ್ಷವಾಗುತ್ತಾ ಬಂತು ದೀಪದ ಕಮಟು ಆರಿಲ್ಲ ಓರೆ ಕದ ಮುಚ್ಚಿಲ್ಲ ಪದೇ ಪದೇ ಗುಯ್ಗುಡುವ ಸೊಳ್ಳೆ ರೇಗಿಸುತ್ತಲೇ ತಾಳ್ಮೆಗೆ ಸವಾಲು ಇನ್ನೂ ಕುದಿ ಬಂದಿಲ್ಲ ಚಿಪ್ಪು ಹಸೀಟ್ಟು ಒಯ್ದು ತಿರುವಿ ಕಟ್ಟಲು ಅದರ ಗೊಣ್ಣೆ ಆಗಾಗ ಇಣುಕುತ್ತ ಸ್ವಾರೆಗೂ ಗಂಗ್ಳಕ್ಕೂ ಕಣ್ಣು ಕೊಂಡಿ ಹಾಕುತ್ತಿದೆ ಉರಿಯದ ಹೊಲೆ, ಹಾಲಿಲ್ಲದ ಮೊಲೆ ಹರುಕು ಅಂಗಿ ಹಸಿವಿನ ಜೊತೆ ಕಾದು ಕಾದು ಸೋತಿತ್ತು ತೇಪೆಗೆ ಸೂಜಿಗಣ್ಣಾಗಿ ಸೂರಂಚಲಿ ತೂಗಿತ್ತು […]

ಪ್ರಸ್ತುತ

ಮತ್ತೆ ಸಿಕ್ಕಿದ್ದಳು ವಸಂತ ಪ್ರಮೀಳಾ .ಎಸ್.ಪಿ. ನಿತ್ಯವೂ ಶಾಲೆಗೆ ಹೋಗುವ ದಾರಿಯುದ್ದಕ್ಕೂ ನನ್ನ ಗಂಡನನ್ನು ಬೈದುಕೊಂಡೇ ಹೋಗುತ್ತೇನೆ.ಇವರಿಂದ ನನಗೆ ಸಮಯ ಮೀರಿತು,ಮನೆಗೆ ಬಂದ ಅತಿಥಿಗಳು ಹೊರಡಲು ಸಿದ್ಧರಾದರೂ ಅವರಿಗೆ ತಿಂಡಿ ಕಾಫಿ ಕೊಡಲು ಅದೇಶಿಸುತ್ತಾರೆ.ಇಲ್ಲವೋ ಹೊರಟ ಹೊತ್ತಿಗೆ ಚಹಾ ಕೇಳುತ್ತಾರೆ ಎಂದೆಲ್ಲಾ ಅಂದುಕೊಂಡು ಆತುರದಲ್ಲಿ ಹೋಗುವ ದಾರಿಯಲ್ಲಿ ಸಿಗುವ ಮನೆ ‘ವಸಂತಳದ್ದು’. ಸಂಜೆ ಬರುವ ವೇಳೆಗೆ ಬಾಗಿಲಲ್ಲಿ ನಿಂತು ಮುಗುಳ್ನಗೆ ಬೀರಿ ಮಾತು ಪ್ರಾರಂಭಿಸುತ್ತಾಳೆ.ಒಂದೊಂದು ದಿನಕ್ಕೆ ಒಂದೊಂದು ಘಟನೆ ಹೇಳಿಬಿಡುತ್ತಾಳೆ.ಹಾಗೆಂದು ಎಂದೂ ಸಂಪೂರ್ಣವಾಗಿ ಹೇಳಿದಳು ಎಂದಿಲ್ಲ.ಇಡೀ ಬೀದಿಯಲ್ಲಿ […]

ಅನುವಾದ ಸಂಗಾತಿ

ಮೂಲ ಕವನ ಡಾ.ಶಿವಕುಮಾರ್ ಮಾಲಿಪಾಟೀಲ,ಗಂಗಾವತಿ ಅವರ “ದೇವರು ಹೇಳುತ್ತಿದ್ದಾನೆ ವಿಶ್ರಾಂತಿ ಪಡೆಯಿರಿ” ಇಂಗ್ಲೀಷಿಗೆ ನಾಗರೇಖಾ ಗಾಂವಕರ್ ಸಂಗಾತಿಯ ಓದುಗರಿಗೆ ಮೂಲ ಮತ್ತು ಅನುವಾದಿತ ಕವಿತೆಗಳೆರಡನ್ನೂ ಇಲ್ಲಿ ನೀಡಿದೆ ದೇವರು ಹೇಳುತ್ತಿದ್ದಾನೆ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ ಗುಡಿ, ಗುಂಡಾರ, ಮಸೀದಿ, ಚರ್ಚೆಗಳಿಗೆ ಬಹಳಷ್ಟು ಅಲೆದಿದ್ದಿರಿ, ಮನವಿಲ್ಲದೆ ನನ್ನನ್ನು ಬಹಳಷ್ಟು ಹುಡುಕಿದ್ದಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ ಕಾಯಕ ಬಿಟ್ಟು ಸಾಮೂಹಿಕ ಭಜನೆ, ಪ್ರಾರ್ಥನೆ ಏನೇನೋ ಜಾತ್ರೆ ,ಉತ್ಸವಗಳನ್ನು ಮಾಡಿದಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ. ಅನ್ನ ,ಆಹಾರವಿದ್ದರೂ […]

Back To Top