ಉತ್ತಮ ಕಾದಂಬರಿಕಾರರು
ಚಂದ್ರು ಪಿ.ಹಾಸನ
ಕುಂಬಾರ ಮಾಡಿದ ಕುಡಿಕೆಯಲ್ಲಿ ನಿಷ್ಕಲ್ಮಶ ಮನಸ್ಸಿನ ಎಣ್ಣೆ ತುಂಬಿ ಒಗ್ಗಟ್ಟಿನ ಬತ್ತಿಯನ್ನು ಹಚ್ಚಿದಾಗ ಆ ಕುಂಬಿಕೆಯು ದೀಪವೆಂಬ ಹೆಸರನ್ನು ಪಡೆಯುತ್ತದೆ.ಅದು ಹೊರಹೊಮ್ಮುವ ಪ್ರಶಾಂತ ಕಿರಣಗಳು ಅಡಗಿಸಿ ಕೊಳ್ಳುತ್ತಿರುವ ನಕಾರಾತ್ಮಕತೆಯನ್ನು ಹೊಡೆದೋಡಿಸಿ ಧನಾತ್ಮಕತೆಯನ್ನು ತುಂಬುತ್ತದೆ. ಎಲ್ಲೆಡೆ ಪ್ರಶಾಂತತೆಯನ್ನು ಹೊಮ್ಮುತ್ತದೆ.ಇದರಿಂದ ಜೀವಿಗಳ ಚೈತನ್ಯ ಪ್ರಾಪ್ತಿಯಾಗುವುದಿಲ್ಲದೆ ಬೆಳವಣಿಗೆ ಹೊಸ ಜೀವಿಗಳ ಉದಯ ಹೀಗೆ ಪ್ರತಿಯೊಂದರಲ್ಲೂ ತನ್ನ ಸ್ಥಾನವನ್ನು ಬೆಳೆಸಿ ತನ್ನ ಸುತ್ತಲೂ ಉತ್ತಮ ಪರಿಸರವನ್ನು ಸೃಷ್ಟಿಸುತ್ತದೆ. ಇಂತಹ ದೀಪದಂತೆ ಅಲ್ಲಲ್ಲಿ ಕಾದಂಬರಿಕಾರರು ಜನಿಸಿದ್ದು, ಆಧುನಿಕ ಕನ್ನಡ ಸಾಹಿತ್ಯದ ಸೊಗಡನ್ನು ಶ್ರೀಮಂತಗೊಳಿಸಿದಲ್ಲದೆ ಅವರ ಬರವಣಿಗೆಯಿಂದ ಸಮಾಜಕ್ಕೆ ಕನ್ನಡಿ ಹಿಡಿದು ಅದರ ಪ್ರತಿಬಿಂಬವನ್ನು ಎಲ್ಲಡೆ ತೋರಿಸುವಂತ್ತಾ, ಉತ್ತಮ ಸಮಾಜದ ಬಗ್ಗೆ ಬೆಳಕು ಚೆಲ್ಲುವಂತಹ ಕಾರ್ಯಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಒಂದು ಉತ್ತಮ ಸಮಾಜ ರೂಪುಗೊಳ್ಳಬೇಕಾದರೆ ಈ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನ ವಾಗಬೇಕು. ಅವನಲ್ಲಿ ಮಾನಸಿಕ ಸ್ಪೂರ್ತಿಯನ್ನು ಚಿಮ್ಮುವಂತೆ ಮಾಡಿದಾಗ ನಾಗರಿಕ ಮಾನವನ ವಾತಾವರಣ ಸೃಷ್ಟಿಯಾಗುತ್ತದೆ. ಸಮಾಜದಲ್ಲಿ ನಡೆಯುವ ಆಗುಹೋಗುಗಳ ಮುಂದೆ ಕನ್ನಡಿ ಹಿಡಿದಾಗ ಎಲ್ಲಾ ನೈಜ ಚಿತ್ರಣವನ್ನು ಸಮಾಜಕ್ಕೆ ಪ್ರತಿಬಿಂಬಿಸುತ್ತದೆ. ಇಂತಹ ನಿಟ್ಟಿನಲ್ಲಿ ನಮ್ಮ ಕಾದಂಬರಿಕಾರರು ತಮ್ಮ ಬರವಣಿಗೆಯ ಮೂಲಕ ಸಮಾಜದ ಚಿತ್ರಣವನ್ನು ಕಾದಂಬರಿಯಲ್ಲಿ ಚಿತ್ರಸಿದ್ದಾರೆ. ಅಲ್ಲದೆ ಪರೋಕ್ಷವಾಗಿ ಉತ್ತಮ ಸಮಾಜದ ನಿರ್ಮಿತಿಗೆ ಇವರು ಕಾರಣಕರ್ತರಾಗಿದ್ದಾರೆ. ಅವುಗಳು ಹಳ್ಳಿಯ ಜನರ ಮೂಡ ಆಚಾರ-ವಿಚಾರಗಳನ್ನು ಹೇಳುವುದರ ಜೊತೆಗೆ ಅದರಿಂದಾಗುವ ಕೆಡುಕುಗಳ ಮೇಲೆ ವೈಚಾರಿಕ ಮನೋಭಾವ ಬರುವಂತೆ ತನ್ನ ಕಾದಂಬರಿಗಳಲ್ಲಿ ಚಿತ್ರಸಿದ್ದಾರೆ. “ರವಿ ಕಾಣದ್ದನ್ನು ಕವಿ ಕಂಡ” ಎನ್ನುವಂತೆ ಕಾದಂಬರಿಕಾರನ ವೈಶಿಷ್ಟ್ಯವೇ ಅಂಥಹದ್ದು ಏಕೆಂದರೆ ಪದರಚನೆಯ ಸಾರಸ್ವತ ಲೋಕವು ವೈಭವೋಪೇತವಾಗಿದೆಯೆಂದರೆ ಅದರಲ್ಲಿ ಕಾದಂಬರಿಗಳ ಪಾತ್ರ ಬಹಳ ಹಿರಿದಾದದ್ದು. ಸಾಹಿತ್ಯದ ಪ್ರಕಾರಗಳು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಆಯಾಮಗಳನ್ನು ಪಡೆದು ಕೊಂಡು ವರ್ತಮಾನದಲ್ಲಿ ಅಪ್ರಾಮಾಣಿಕತೆ ವಿರೋಧಿಸಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತವೆ. ಕಾದಂಬರಿಯು ಉದ್ದವಾದ ನೀಲ ಕಥೆಯ ವಿಸ್ತೃತ ರೂಪ ವಲ್ಲ. ಸಂದೇಶವನ್ನು ನೀಡುವಂತಹ ಮತ್ತು ಮಾನವನ ಅಧ್ಯಯನಕ್ಕೆ ಒಂದು ಕೈಗನ್ನಡಿ. ಕೆಲವು ಪತ್ತೆದಾರಿ ಕಾದಂಬರಿಗಳಲ್ಲಿ ಸಮಾಜಕ್ಕೆ ಸಂದೇಶ ವನ್ನು ನೀಡುವಂತಹ ವಸ್ತುಗಳಿರುತ್ತವೆ.ಇಂದಿನ ಸಮಾಜದ ಸ್ಥಿತಿಯ ಬಗ್ಗೆ ಕೆಲವು ಮಾತುಗಳನ್ನು ತುಂಬಿ ಪ್ರತಿಯೊಬ್ಬ ನಾಗರಿಕರಿಗೂ ಬರವಣಿಗೆ ಮೂಲಕ ಉತ್ತಮ ಮೌಲ್ಯವನ್ನು ತುಂಬಿಸುವಲ್ಲಿ ಕಾದಂಬರಿಕಾರ ನೆರವಾಗುತ್ತಾನೆ
*ಪೂರ್ಣಚಂದ್ರ ತೇಜಸ್ವಿಯವರ* ‘ಮಹಾಪಲಾಯನ’ ಕಾದಂಬರಿಯು ಕೈದಿಯೊಬ್ಬ ಮಾನಸಿಕವಾಗಿ ಬದಲಾಗಿ ಉತ್ತಮ ಸಮಾಜದಲ್ಲಿ ಬರೆದುಕೊಳ್ಳುವ ಬಗ್ಗೆ, ಮತ್ತು ‘ಕಿರಿಗೂರಿನ ಗಯ್ಯಾಳಿಗಳು’ ಕಾದಂಬರಿಯಮೂಲಕ ರಾಜಕೀಯ ಪಿತೂರಿ ಅನಕ್ಷರಸ್ಥರ ಮೇಲೆ ನಡೆಯುವ ದೌರ್ಜನ್ಯ ಜಾತಿವ್ಯವಸ್ಥೆ ಗಳೆಂಬ ಸಮಾಜದ ಅನಿಷ್ಠ ಪದ್ಧತಿಗಳ ಮೇಲೆ ನಡೆಯುವ ಸ್ಥಿತಿಗಳ ಮೇಲೆ ಬೆಳಕು ಚೆಲ್ಲುವ ಮೂಲಕಉತ್ತಮ ಸಮಾಜಕ್ಕೆ ಬದಲಾವಣೆಯ ಚೌಕಟ್ಟನ್ನು ತಮ್ಮ ಕಾದಂಬರಿಗಳಿಂದ ಓದುಗರಿಗೆ ಸಮಾಜಕ್ಕೆ ಅರಿವಿನ ಮಾರ್ಗವನ್ನು ತಿಳಿಸಿದ್ದಾರೆ. *ಕುವೆಂಪು* ಅವರ ‘ಕಾನೂರು ಹೆಗ್ಗಡತಿ’ ಕಾದಂಬರಿಯ ಸ್ವತಂತ್ರಪೂರ್ವದಲ್ಲಿ ಮಲೆನಾಡು ವೈಚಾರಿಕತೆ ಮತ್ತು ಅರಿವಿನ ಜನಜೀವನ ಮತ್ತು ಆಲೋಚನೆಗಳ ಬಗ್ಗೆ ಇನ್ನು ‘ಮಲೆಗಳಲ್ಲಿ ಮದುಮಗಳು’ ಎಂಬ ಮಿನಿ ಕಾದಂಬರಿ ಅಂತರ್ಜಾತಿ ವಿವಾಹ ಮತ್ತು ಮಲೆನಾಡಿನ ಧಾರ್ಮಿಕ ಪರಂಪರೆಯ ಮೇಲೆ ಸಾಮಾಜಿಕವಾಗಿ ಬೆಳಕು ಚೆಲ್ಲುತ್ತದೆ. ಕಾದಂಬರಿಕಾರರಲ್ಲಿ ಸಮಾಜದಲ್ಲಿ ಅತಿ ಹೆಚ್ಚು ಬದಲಾವಣೆಗಳನ್ನು ತಂದು ಅಪಾರ ಯಶಸ್ಸು ತಂದವರಲ್ಲಿ *ಅ ನ ಕೃ* ಅವರು ಕೂಡ ಒಬ್ಬರು ‘ಕಾದಂಬರಿಗಳ ಸಾರ್ವಭೌಮ’ ಎಂದು ಖ್ಯಾತಿ ಪಡೆದಿದ್ದವರು. ಅವರ ತೊಂಬತ್ತಕ್ಕೂ ಹೆಚ್ಚು ಸಾಮಾಜಿಕ ಕಾದಂಬರಿಗಳಾಗಿದ್ದು, ಇವುಗಳಲ್ಲಿ ಸಮಕಾಲೀನ ಜೀವನದ ಬೇರೆ ಬೇರೆ ಮುಖಗಳನ್ನು ತೋರಿಸಿದ್ದಾರೆ. ಕಲಾವಿದರ ಸಮಸ್ಯೆಗಳು, ಆಧುನಿಕ ವಿದ್ಯಾಭ್ಯಾಸದ ಪರಿಣಾಮ, ಭಾರತೀಯ ಸಂಸ್ಕೃತಿಯ ಮೌಲ್ಯಗಳ ಮಹತ್ವ, ಅವಿಭಕ್ತ ಕುಟುಂಬ ಜೀವನ, ಒಡೆಯುತ್ತಿರುವ ಬದುಕು, ವೇಶ್ಯಾ ಸಮಸ್ಯೆ , ಲಂಚಗುಳಿತನ, ಸ್ತ್ರೀ-ಸ್ವಾತಂತ್ರ್ಯ , ಜೈಲುಗಳ ಸುಧಾರಣೆ, ದಾಂಪತ್ಯ ವಿಚ್ಛೇದನ , ಜಾತೀಯತೆಯ ಭೂತ, ರಾಜಕೀಯ ದೊಂಬರಾಟ, ಪವಿತ್ರ ಪ್ರೇಮ, ಕೊಳಚೆಯ ಕಾಮ, ಪಾನಿರೋಧದ ಸಮಸ್ಯೆ, ಶ್ರೀಮಂತಿಕೆಯ ಡೌಲು, ಬಡತನದ ದಾರುಣತೆ, ಪೂರ್ವ-ಪಶ್ಚಿಮಗಳ ಸಂಗಮ, ಧಾರ್ಮಿಕತೆಯ ಸೋಗು, ಆಡಳಿತದ ಆರ್ಭಟಗಳು, ಸ್ವಾತಂತ್ರ್ಯದ ಕಿಚ್ಚು , ಬದುಕಿನ ಮೇಲೆ ವಿಜ್ಞಾನದ ಪ್ರಭಾವ , ಹೀಗೆ ನಾನಾ ಸಂಗತಿಗಳ ಕುರಿತು ತಮ್ಮ ಕಥನ ಕೌಶಲ, ನಿರರ್ಗಳವಾದಶೈಲಿ ಮತ್ತು ಸಂಭಾಷಣೆಯ ಚಾತುರ್ಯ ಇವುಗಳಿಂದ ಜನಮನಸೆಳೆದ ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಅವರ ಮೇಲೆ ಅಶ್ಲೀಲತೆಯ ಆರೋಪ ಬಂದಾಗ ದೂರಮಾಡಲು ‘ಸಾಹಿತ್ಯ ಮತ್ತು ಕಾಮಪ್ರಚೋದನೆ’ ಕಾದಂಬರಿಯಲ್ಲಿ ಸೂಳೆಯ ಸುಖದುಃಖಗಳನ್ನು ಮತ್ತು ನಾರಿಯ ಸಂಸ್ಕೃತಿ ಎತ್ತಿಹಿಡಿಯಲು ಇರುವ ನಾರಿ ಪಾತ್ರಗಳನ್ನು ಹಲವಾರು ಕಾದಂಬರಿಗಳಲ್ಲಿ ಅರ್ಥೈಸಿದ್ದಾರೆ. ತ್ರಿವೇಣಿಯವರ ‘ಶರಪಂಜರ’ ಕಾದಂಬರಿಯಲ್ಲಿ ಇನ್ನೊಬ್ಬಳ ಮಾನಸಿಕ ಗೊಂದಲ ಹಾಗೂ ನೋವುಗಳನ್ನು ಮತ್ತು ಗುಣ ಹೊಂದಿದರು ಸಮಾಜದ ದೃಷ್ಟಿಕೋನವು ಹೇಗಿರುವುದು ತಿಳಿಸಿದ್ದಾರೆ ಗಿರೀಶ್ ಕಾರ್ನಾಡರ ‘ನಾಗಮಂಡಲ’ ಸಾಮಾಜಿಕ ಜೀವನ ಜನರ ಸ್ಥಿತಿಗತಿ ಮತ್ತು ಕಳಕಳಿಯನ್ನು ಜೀವನವೆಲ್ಲ ಸಮಾಜಕ್ಕೆ ಬೆಳಕು ಚೆಲ್ಲುವಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಅನಂತ ಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯಲ್ಲಿ ಸಾಮಾಜಿಕ ಜಾತಿ ಸಂಪ್ರದಾಯಗಳ ಬಗ್ಗೆ ಬೆಳಕು ಚೆಲ್ಲುವಂತಹ ಕೆಲಸ ನಡೆದಿದೆ. ಕಾರಂತರ ಸಾಮಾಜಿಕ ಕಾದಂಬರಿಗಳಾದ ‘ಯಕ್ಷಗಾನ ಬಯಲಾಟದಲ್ಲಿ’ ಸಾಮಾಜಿಕ ಬೆಳಕು ಚೆಲ್ಲುವಲ್ಲಿ ಮುಖ್ಯ ಪಾತ್ರವಾಗುತ್ತದೆ ‘ಬೆಟ್ಟದಜೀವ’ ಇದರಲ್ಲಿ ಮಲೆನಾಡಿನ ವೃದ್ಧ ದಂಪತಿಗಳ ಜೀವನ ಪರಿಸರದ ಮೇಲೆ ಇರುವ ಕಾಳಜಿ ಬಿಂಬಿಸುತ್ತದೆ. ‘ಚೋಮನದುಡಿ’ ಕಾದಂಬರಿಯಲ್ಲಿ ಬರುವ ಪಾತ್ರಗಳು ಜಾತಿ-ಮತ ಮೇಲು-ಕೀಳು ತೊಲಗಲಿ ಎನ್ನುತ್ತಾ ಸಮಾಜದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.
ಹೀಗೆ ಕಾದಂಬರಿಯಲ್ಲಿ ಸೃಷ್ಟಿಸುವ ಪ್ರತಿಯೊಂದು ಪಾತ್ರಗಳು ಆಗಿರಬಹುದು ಸಂದೇಶಗಳ ಆಗಿರಬಹುದು ಪ್ರತಿಯೊಂದು ಅರ್ಥಪೂರ್ಣ. ಇಲ್ಲಿ ಚಿತ್ರಿಸುವ ಘಟನೆ ಸನ್ನಿವೇಶ ಸಂಬಂಧಗಳ ಮೂಲಕ ವಾಸ್ತವ ಸಂಗತಿಗಳನ್ನು ಮರೆಮಾಚದೆ ಸತ್ಯ ನಿಷ್ಠೆಗೆ ಬೆಲೆ ಕೊಟ್ಟಂತಹ ಕಾದಂಬರಿಕಾರರು ಬರಹದ ಮೂಲಕ ಆದರ್ಶ ಕನಸುಗಳನ್ನು ಎತ್ತಿಹಿಡಿದಿದ್ದಾರೆ. ಅದನ್ನು ಸ್ವೀಕರಿಸುವ ಜನರು ಆಧುನಿಕ ಪ್ರಜ್ಞೆಯೂ ಬದುಕಿನಲ್ಲಿ ಸವಾಲಾಗಿ ಮನಸ್ಸಿನ ಆಳಕ್ಕೆ ಧೈರ್ಯ ತುಂಬಬಹುದು. ಮಾನವನ ಸಮಾಜ ಕುಟುಂಬ ವ್ಯಕ್ತಿ ಪರಿಸರ ಶಾಲೆ ಮೈದಾನ ಸಾಹಿತ್ಯ ಕೃಷಿ ಸಂಸ್ಕೃತಿ ಬದುಕು ಸಮಾಜಸೇವೆ ಪ್ರಕೃತಿಯೊಂದಿಗೆ ಹೇಗೆ ಬದುಕಬೇಕು ಎಂಬುದನ್ನು ಕಾದಂಬರಿಕಾರರು ಮನದಲ್ಲಿ ನೆಲೆಸುವಂತೆ ಬರೆದು ಸಮಾಜದಲ್ಲಿ ನಡೆಯುವ ಅನ್ಯಾಯ, ಅತ್ಯಾಚಾರ, ಮೋಸ ವಂಚನೆ, ದಬ್ಬಾಳಿಕೆ, ಜಾತೀಯತೆ, ಮೂಡನಂಬಿಕೆಗಳು ಹೀಗೆ ಹಲವಾರು ಅಹಿತಕರ ಘಟನೆಗಳನ್ನು ಎದುರಿಸುವ ಬಗೆಯನ್ನು ದಾರದಷ್ಟೇ ಎಳೆಎಳೆಯಾಗಿ ಬರೆದಿರುತ್ತಾರೆ. ಪ್ರೇಮದ ಹಾದಿ, ಮೋಸದ ಹಾದಿ, ಸೋತೋನು ಮುಂದೆ ಗೆದ್ದು ಬಂದ ಹಾದಿ, ಹೆತ್ತು ಹೊತ್ತು ತುತ್ತು ನೀಡಿದವರು ಮತ್ತು ಮುತ್ತುನೀಡಿದವರು ಇವರಿಬ್ಬರಿಗೂ ನ್ಯಾಯ ಒದಗಿಸಿ ಅನುಸರಣೆಯಿಂದ ಕುಟುಂಬದ ಯಶಸ್ಸಿನ ಹಾದಿ ಎಂಬುದನ್ನು ತೋರುವಂತೆ ಇರುತ್ತವೆ. ಇದು ಕೇವಲ ಸಾಹಿತ್ಯ ವಾಗಿರದೆ ಒಂದು ಸಾಮಾಜಿಕ ನೆಲೆಗಟ್ಟಿನಲ್ಲಿ ವಾಸಿಸುವ ಜನರ ಜೀವನ ಭಾಷಾ ಸೊಗಡು ಆಚಾರ-ವಿಚಾರಗಳು ಸಂಸ್ಕೃತಿಗಳ ಇತಿಹಾಸ ಭಾವಗಳು ಹೀಗೆ ಪ್ರತಿಯೊಂದರಲ್ಲೂ ಮನೋಜ್ಞವಾಗಿ ಚಿತ್ರಿಸುವುದರ ಜೊತೆಗೆ, ಆ ಮೌಲ್ಯಗಳನ್ನು ರೂಢಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಆದ್ದರಿಂದ ಮೊದಲೇ ತಿಳಿಸಿದಂತೆ ಕಾದಂಬರಿಕಾರರು ಉತ್ತಮ ಸಮಾಜದ ಯುವ ಪೀಳಿಗೆಗೆ ಕನ್ನಡಿ ಎಂದು ಹೇಳಿದರೆ ತಪ್ಪಾಗಲಾರದು.
ಹಲವಾರು ವಿಷಯಗಳನ್ನು ಹೊತ್ತು ತನ್ನಿ ಸಾಹಿತ್ಯದ ಪ್ರಾಕಾರಗಳು ತಮ್ಮಿಂದ ಮತ್ತಷ್ಟು ಜಿಲ್ಲೆಯಲ್ಲಿ ಬೆಳಗಲಿ
ತಮ್ಮಂತಹ ಹಿರಿಯ ಸಾಹಿತಿಗಳ ಹಾರೈಕೆ, ಮಾರ್ಗದರ್ಶನ ಹೀಗೇ ಇದ್ರೆ ಖಂಡಿತ ನನ್ನ ಕಾರ್ಯ ಮುಂದುವರಿಸುತ್ತೇನೆ