Day: May 21, 2020

ಕಾವ್ಯಯಾನ

ತಲೆ ಮಾರಾಟಕ್ಕಿದೆ.. ಶೀಲಾಭಂಡಾರ್ಕರ್ ತಲೆ ಮಾರಾಟಕ್ಕಿದೆ ಕೊಳ್ಳವವರಿದ್ದಾರೆಯೇ? ಸಾಕಾಗಿದೆ ಈ ತಲೆನೋವು, ಜಂಜಾಟಗಳು. ಆಗಾಗ ತಲೆ ಬಿಸಿ ಯಾರಿಗಾದರೂ ಕೊಟ್ಟು ಹಾಯಾಗಿರೋಣ ಅನಿಸುತ್ತಿದೆ. ಒಂದು ನಿಮಿಷವೂ ತೆಪ್ಪಗಿರಲ್ಲ. ಸುಮ್ನೆ .. ಏನಾದರೂ ವಟಗುಟ್ಟದಿರೆ ಸಮಾಧಾನವಿಲ್ಲ. ಬೇಡದ ಕಸವೇ ತುಂಬಿಕೊಂಡಿದೆಯಲ್ಲ. ದುಡ್ಡು ಕೊಡಬೇಕಾಗಿಲ್ಲ ಹಾಗೇ ಸ್ವಲ್ಪ ದಿನದ ಮಟ್ಟಿಗಾದರೂ ತಿರುಗಾಡಿಸಿ ತಂದರೂ ಅಡ್ಡಿ ಇಲ್ಲ. ಆಹಾ…!!! ಎಷ್ಟು ಗಮ್ಮತ್ತು.. ಖಾಲಿ ತಲೆ ನೆನೆಸಿಕೊಂಡಾಗಲೇ ಏನೋ ಪುಳಕ.. ಹಗುರವಾಗಿ ತೇಲಾಡುವ ತವಕ. *******

ಅನುವಾದ ಸಂಗಾತಿ

ಕನ್ನಡಕವಿತೆ:ಸರಜೂ ಕಾಟ್ಕರ್ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ನ್ಯಾಶನಲ್ ಹೈವೇಗುಂಟ ಹೋಗುತ್ತಿರುವಾಗ ನ್ಯಾಶನಲ್ ಹೈವೇಗುಂಟ ಹೋಗುತ್ತಿರುವಾಗ ಅಲ್ಲಿದ್ದ ಗಿಡಮರಗಳನ್ನು ನಿರ್ದಯವಾಗಿ ಕತ್ತರಿಸಿ ಹಾಕಿದ ರಾಕ್ಷಸರನ್ನು ನೆನೆನೆನೆದು ಸಿಟ್ಟಾಗುತ್ತೇನೆ. ಅಲ್ಲಿಯ ಬೋಳು ಮೈದಾನಗಳಲ್ಲಿ ತಮ್ಮ ಗೂಡುಗಳನ್ನು ಹುಡುಕುತ್ತಿರುವ ಸಾವಿರಾರು ಪಕ್ಷಿಗಳ ಆಕ್ರಂದನ ಕೇಳಿ ಕಂಗಾಲಾಗುತ್ತೇನೆ. ಎಲ್ಲಿ ಹೋಯಿತು ಈ ಗಿಡಗಳ ದಟ್ಟ ಹಸಿರು? ಗಿಡಗಳಿಗಿಂತಲೂ ಉದ್ದವಾಗಿ ಬೀಳುತ್ತಿದ್ದ ನೆರಳು? ವಿಧವಿಧ ಪಕ್ಷಿಗಳ ಕಲರವ? ಗಿಡಗಳ ಸಾಕ್ಷಿಯಲ್ಲಿ ನಡೆಯುತ್ತಿದ್ದ ಪ್ರೇಮದಾಟ? ಏನಾಗಿರಬಹುದು ಈ ಗಿಡಮರಗಳಿಗೆ- ಸತ್ತು ಭಸ್ಮವಾದವೇ ಈ ಮರಗಳು ಅಥವಾ […]

ಅನುವಾದ ಸಂಗಾತಿ

ಕ್ಷುದ್ರ್ ಕೀ ಮಹಿಮಾ ಶಾಮ್ ನಂದನ್ ಕಿಶೋರ್ ಅನುವಾದಕರ ಟಿಪ್ಪಣಿ ಪದ್ಮಶ್ರಿ ಶ್ರೀ ಶಾಮ್ ನಂದನ್ ಕಿಶೋರ್ ಹಿಂದಿಯ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರ ಒಂದು ಕವಿತೆ “ಕ್ಷುದ್ರ್ ಕೀ ಮಹಿಮಾ” ಓದಲು ಸಿಕ್ಕಿತು. ಮೊದಲ ಓದಿಗೇನೂ ಹೆಚ್ಚು ಅರ್ಥವಾಗಲಿಲ್ಲ. ಆದರೂ ಕವಿ ಏನೋ ವಿಭಿನ್ನವಾದುದನ್ನು ಹೇಳಲು ಹೊರಟಿದ್ದಾರೆಂಬುದರ ಅರಿವಿತ್ತು. ಮತ್ತೆ ಮತ್ತೆ ಓದಿದಾಗ ಅರ್ಥ ಸ್ಪಷ್ಟವಾಗತೊಡಗಿತು. ಶಬ್ದಗಳೊಳ ಹೊಕ್ಕು ಕವಿಯ ಭಾವವನ್ನು ಅರಿಯಲು ಸಹಾಯ ಮಾಡಿದವಳು ಗೆಳತಿ ರೂಪಾ. ಅವಳು ಹಿಂದಿ ಭಾಷೆಯ ಅನುವಾದಿತ ಕೃತಿಗಳ […]

Back To Top