Day: May 6, 2020

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ಆರನೇ ಅದ್ಯಾಯ ಈ ಸಂಭಾಷಣೆ ಹತ್ತಾರು ಗಜಲ್ ಸಂಕಲನ ಹೊರ ತಂದಿರುವ ಒಬ್ಬರು ಖ್ಯಾತ ಗಜಲಕಾರರು ಮತ್ತು ಇನ್ನೊಬ್ಬರು ಅಷ್ಟಿಷ್ಟು ಹೆಸರು ಮಾಡುತ್ತಿರುವ ಗಜಲ್ ನಿಪುಣರ ನಡುವೆ ಒಮ್ಮೆ ನಡೆದ ಸಂಭಾಷಣೆ… “ಏನು ಸರ್ ಇದು ಗಜಲ್ ಅಂತೀರಾ, ಆದರೆ ಕಾಫಿಯಾ ರಧೀಪ್ ಏನು ಇಲ್ಲ… ಅದು ಹೇಗೆ ಇದು […]

ಕಾವ್ಯಯಾನ

ರಾಧೆ ಹೇಳಿದ್ದು ಡಾ.ಗೋವಿಂದ ಹೆಗಡೆ 1. ಅವ ನುಡಿಸಿದ್ದು ಕೊಳಲನ್ನು ಅಲ್ಲ ಕಣೇ. ಕವಿಬೆರಳುಗಳಲ್ಲಿ – ನನ್ನನ್ನು ! 2. ರಾಧೆ ಎಂದರೆ ಶ್ಯಾಮ ಶ್ಯಾಮನೆಂದರೆ ರಾಧೆ ಹಾಲು ಮತ್ತದರ ಬಿಳುಪು ಬೇರೆ ಬೇರೆ ಹೇಗೆ ? 3. ನಾನು ಹೆಣ್ಣೇ ಅವ ಗಂಡೇ? ನಾವು ಸಂಧಿಸಿದ್ದು ಬೇರೆಯದೇ ಬಿಂದುವಿನಲ್ಲಿ ಹೆಣ್ಣು ಗಂಡುಗಳಾಗಿ ನಮ್ಮ ನೋಡುವ ಹಾಡುವ ಲೋಕದ ಕುರುಡಿಗೆ ನನ್ನ ಕನಿಕರ ! **

ಕಾವ್ಯಯಾನ

ನನಗೀಗ ಅಟ್ಟಗಳೆಂದರೆ ಪ್ರೀತಿ ಶೀಲಾ ಭಂಡಾರ್ಕರ್ ಇವತ್ತು ಬೆಳಿಗ್ಗೆಯೇ ಘೋಷಿಸಿ ಬಿಟ್ಟೆ.. ಮನೆಯಲ್ಲಿ ಸ್ವಚ್ಛತಾ ಅಭಿಯಾನ. ತಿಂಡಿಗೆಂದು ಮಾಡಿದ್ದ ಚಿತ್ರಾನ್ನವೇ ಮದ್ಯಾಹ್ನದ ಊಟ.. ಬೇಡವಾದರೆ ಅಲ್ಲೇ ನಾಲ್ಕು ಬಾಳೆಹಣ್ಣು, ಒಂದು ಎಳನೀರಲ್ಲಿ ಹೊಟ್ಟೆ ತುಂಬಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ಹೂಂಕರಿಸಿದರು.. ಓದುತ್ತಿದ್ದ ಪೇಪರ್ ನಿಂದ ತಲೆ ಎತ್ತದೆ. ಅವರು ಹೋದ ಮೇಲೆ… ನಿಂತು ಒಮ್ಮೆ ಯೋಚಿಸಿದೆ.. ಎಲ್ಲಿಂದ ಶುರು ಮಾಡಲಿ..! ನಮ್ಮ ಅನುಕೂಲಕ್ಕೆ ಎಂದು ಮನೆಯ ಮೇಲೆ ಮನೆ ಕಟ್ಟಿಸಿದಾಗ ಬೇಕು ಬೇಕು ಎಂದು ಕಟ್ಟಿಸಿದ್ದ ಮುಚ್ಚಿದ್ದ ಬಾಗಿಲಿನ […]

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಕೊನೆಯ ಕಂತು ಸಮಸ್ಯೆ ಉಳಿದಿದೆ ಬಾಗಿಲು ತೆರೆದಿದೆ… ಕೊರೊನಾ ಆತಂಕವನ್ನು ಕಟ್ಟಿಟ್ಟು ಅದೆಷ್ಟೋ ಮನೆಗಳ, ಅಂಗಡಿಗಳ ಬಾಗಿಲು ಮತ್ತೆ ಮೊದಲಿನಂತೆಯೇ ತೆರೆದಿವೆ! ಒಂದೆಡೆ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದಾಯರಹಿತ ಜೀವನ ನಡೆಸಲಾಗುವುದಿಲ್ಲ, ಹಸಿವಿನಿಂದಲೇ ಹಲವರು ಸಾಯಬಹುದು ಎನ್ನುವ, ಎಲ್ಲವೂ ಪುನರಾರಂಭಗೊಳ್ಳಬೇಕು ಎನ್ನುವ ಒತ್ತಡ, ಒತ್ತಾಯದಿಂದ ತೆರೆದಿರುವ ಬಾಗಿಲುಗಳು ಬದುಕಿನ ಆತಂಕಗಳನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತಿದೆ. ಮತ್ತದೇ ಭೋಗ ಜೀವನವನ್ನು ಬಾಚಿ ತಬ್ಬಿಕೊಳ್ಳುವ […]

ಕಥಾಯಾನ

ಹದಿನೆಂಟು ವರುಷದ ಬಳಿಕ ಸಿಕ್ಕವಳು… ಮಲ್ಲಿಕಾರ್ಜುನ ಕಡಕೋಳ ಹದಿನೆಂಟು ವರುಷದ ಬಳಿಕ ಸಿಕ್ಕವಳು…  ಆದರೆ ಮೊನ್ನೆ ಸಂಜೆ ಸಿಕ್ಕಾಗ  ತುಂಬಾನೇ ಚೆಂದ ಕಾಣಿಸುತ್ತಿದ್ದಳು.  ಹದಿನೆಂಟು ವರುಷಗಳ ಹಿಂದೆ ಅವಳಿಗೆ  ಹದಿನೆಂಟರ ಹದಿಹರೆಯ. ತೆಳ್ಳಗೆ., ಸಜ್ಜೆ ಬಣ್ಣದ ಸಾದಗಪ್ಪಿನ ಸುಂದರಿ.  ಹದಿನೆಂಟು ವರುಷಗಳ ಹಿಂದೆ ದಾವಲ್ ಮಲೀಕನ ಯಂಕಂಚಿ ಜಾತ್ರೆಯಲಿ  ಸಿಕ್ಕವಳು., ಮೊನ್ನೆ ಸಂಜೆ ತಂಗಾಳಿ ತೇಲಿ ಬರುವ ಹೊತ್ತಲಿ ಸಡನ್ನಾಗಿ ಸಿಕ್ಕಳು. ಇಪ್ಪತ್ತು ವರುಷಗಳ ಹಿಂದೆ ಮೊದಲ ಭೆಟ್ಟಿಯಲಿ ಹುಟ್ಟಿಕೊಂಡ ಹಿರಿ ಹಿರಿ  ಹಿಗ್ಗುವ ಸಂತಸವೇ ಮೊನ್ನೆ ಮತ್ತೆ  ನಮ್ಮಲ್ಲಿ ಚೇತನಗೊಂಡಿತು. ಏಕಕಾಲಕ್ಕೆ ನಮ್ಮಿಬ್ಬರಿಗೂ ಕ್ಷಿಪ್ರ ಕ್ರಾಂತಿಯ ಪರಮ ಅಚ್ಟರಿ!! ಸಿನೆಮಾ  ಕತೆಗಳಲ್ಲಂತೆ  ಕ್ಷಣಕಾಲ ಸ್ಟಿಲ್ಲಾದೆವು. ಲಗಾಮು ತುಳಿದು ನನ್ನ ಕಪ್ಪು ಕುದುರೆ  ತರುಬಿದೆ. ಕುದುರೆಯೆಂದರೆ  ಕುದುರೆಯಲ್ಲ. ಕಪ್ಪು ಕಲರಿನ  ಹೀರೋ  ಹೊಂಡಾ….  ಜಾಂಬಳ ವರ್ಣದ ಕಾಟನ್ ಸೀರೆ, […]

ಕಾವ್ಯಯಾನ

ಆ ಕವಿತೆ ಇದಲ್ಲ. ಪೂರ್ಣಿಮ ಸುರೇಶ್ ಆ ಕವಿತೆ ಇದಲ್ಲ ‌‌‌ ನೀನು ಹಕ್ಕಿಯ ಬಗ್ಗೆ, ನದಿಯ ಬಗ್ಗೆ , ಚಿಟ್ಟೆ ಮರ,ಎಲೆಯ ಬಗ್ಗೆ ಕವಿತೆ ಹೊಸೆಯುವಿಯಲ್ಲ.. ಪ್ರಣಯ ಕಾಡಲಾರದೇ? ನೇರ ಪ್ರಶ್ನೆ.,. ಬಿಡಿ ನನಗೂ ಪ್ರಶ್ನೆ ಆಗುವುದು ಇಷ್ಟ. ನಡು ವಯಸ್ಸಿಗೆ ಅದೆಂತಹ ಪ್ರಣಯ ಎಂದೆ ನಿನಗೆ ಗೊತ್ತಾ ನಿನ್ನ ನಡು ಚೆಂದ ಒಮ್ಮೆ ಪುಟ್ಟ ಉನ್ಮಾದ ಬೇಕಿದ್ದರೆ ನಾ ಕ್ಲಿಕ್ಕಿಸಲೇ ಆ ಚಿತ್ರ ನೋಡು, ನಾಚಿದೆಯಾ.. ಬಿಡು, ಕಾಡುವ ಭಾವ ನೀನು ಹೆಕ್ಕಲಾರೆ ಛೇಡಿಸಿದ: […]

Back To Top