Day: May 8, 2020

ಕಾವ್ಯಯಾನ

ಗಝಲ್ ಪ್ರತಿಮಾ ಕೋಮಾರ ಕಹಿಯೂರಲ್ಲೊಂದು ಸಿಹಿ ಗಿಡವ ನೆಡುವ ಸಹಕರಿಸು ಬಂದು ನೆಟ್ಟ ಗಿಡಕೆ ಜೀವ ಜಲ ಕೊಟ್ಟು ಪೊರೆಯುವ ಸಹಕರಿ‌‌ಸು ಬಂದು ಬಾಗಿ ಬಸವಳಿದು ಉರುಳಿದ ಜೀವಕೆ ಸಾಂತ್ವನವೇ ಮದ್ದು ಮಾನವತೆಯ ನೆಲೆಯಲ್ಲಿ ಮಮತೆಯನು ಹನಿಸುವ ಸಹಕರಿಸು ಬಂದು ಕೋಟೆಗಳ  ಕಟ್ಟಿ ಹಕ್ಕಿಯೆಂದಾದರೂ ತನ್ನ ಬಂಧಿಸಿಕೊಂಡೀತೇ? ಮನಗಳ ನಡುವೆ ಹಬ್ಬಿರುವ ಬೇಲಿಯನು ಕಡಿಯುವ ಸಹಕರಿಸು ಬಂದು ಸ್ವಾಥ೯ದ ಮಾರುಕಟ್ಟೆಯಲ್ಲಿ ಬಿಕರಿಯಾಗುವವು ಬರೀ ಸ್ವಾಥ೯ಗಳೇ ನಿಸ್ವಾಥ೯ತೆಯ ದೀಪ ಹಚ್ಚಿ ಬದುಕ ಬೆಳಗುವ ಸಹಕರಿಸು ಬಂದು ಗಂಧಕ್ಕೆ ಮುಚ್ಚಿ,ಬಿಚ್ಚಿ,ಬೊಬ್ಬೆ ಹೊಡೆವ […]

ಕಾವ್ಯಯಾನ

ಪ್ರಿಯ ಸಖ H. ಶೌಕತ್ ಆಲಿ  ಬೆಳದಿಂಗಳಲ್ಲಿ ತಂಪು ತಂಗಾಳಿಯಲ್ಲಿ ನಮ್ಮ ಮಿಲನ ಆಲಿಂಗನ ಅರಳಿದ ನೈದಿಲೆಯ ಚಂದಿರನ ಚುಂಬನ ಪ್ರಶಾಂತವಾದ ಹೃದಯ ಮನಸೆಲ್ಲಾ ಅವನಲ್ಲೇ ಲೀನಾ ಆಧ್ಯಾತ್ಮವೂ ಅಮರ ಪ್ರೇಮವೂ ಬುದ್ಧ ನನ್ನ ಪ್ರಿಯ ಸಖ ಬೆಳಕಾಗಬೇಕು ಈ ಭೂಮಿಯು ಈ ಸುಂದರ ಪ್ರಕೃತಿ ನೆನಪಿರಲಿ ಶ್ವೇತ ಮೋಡಗಳು ಆಗಸದಲ್ಲಿ ಹೃನ್ಮನಗಳು ಏಕಾಂತವಾಗಿ ಭಾವನೆಗಳು ಹೂವಂತೆ ಅರಳಿ ಸುಖದ ಸೆಲೆಯಾಗಿ ಅವ ನಿಂತ ಬುದ್ಧ ನನ್ನ ಪ್ರಿಯ ಸಖ ನೋಟದಲ್ಲಿ ಸಾವಿರ ಅರ್ಥ ಜನ್ಮಜನ್ಮಾಂತರ ಪುನೀತ […]

ಕಾವ್ಯಯಾನ

ಪೂರ್ಣವಾಗದ ಸಾಲುಗಳು ಶೀಲಾ ಭಂಡಾರ್ಕರ್ ಮನಸ್ಸು ಒಮ್ಮೊಮ್ಮೆತೊಟ್ಟಿಕ್ಕುತ್ತಾ ಶಬ್ದಗಳಾಗಿ, ಹಾಳೆಯ ಮೇಲೆ ಒಂದೊಂದಾಗಿ ಬಿದ್ದು ಹರಡಿಕೊಳ್ಳುತ್ತಾ…. ಶುರುವಿಟ್ಟುಕೊಳ್ಳುತ್ತದೆ ಆಡಲು ಶಬ್ದಗಳ ಆಟ. ಹೊಂದಿಕೊಳ್ಳಲು ಹೆಣಗುವ ಭಾವನೆಗಳ ಮಾಟ. ಕವಿತೆಯಾಗಲು ಹೊರಟ ನಿಶ್ಶಬ್ದ ಶಬ್ದಗಳ ಅರ್ಧಂಬರ್ಧ ಸಾಲುಗಳು. ನೋಡಲು ಯಾವುದೋ ನಿರ್ಭಾವುಕ ಚಹರೆಯಂತಹ ಉಲ್ಲೇಖಗಳು. ಹಿಂದೊಮ್ಮೆ ಮುಂದೊಮ್ಮೆ ನಿಲ್ಲಲು ಸೆಣಸಾಟ. ಅರ್ಥವಿಲ್ಲದವುಗಳ ಮೂಲೆಗೆ ತಳ್ಳಾಟ ಮನುಷ್ಯರಲ್ಲಿ ಮಾತ್ರವಲ್ಲ ಶಬ್ದಗಳಿಗೂ ಸಂಬಂಧಗಳಲ್ಲಿ ಹೊಂದಾಣಿಕೆ ಬೇಕು ಎಂದರೆ ಒಪ್ಪುವಿರಾ? *********

ಪ್ರಸ್ತುತ

ಹೋಮ್ ಕೇರ್ ಹಗರಣ. ಮಾಲತಿಶ್ರೀನಿವಾಸನ್. ಇತ್ತೀಚೆಗೆ ನಗರಗಳಲ್ಲಿ ವೃದ್ಧರ,ರೋಗಿಗಳ,ಮತ್ತು ಮಕ್ಕಳ ಆರೈಕೆಗೆ ಮನೆಯಲ್ಲಿದ್ದು ಮನೆಯವರೊಡನೆ ಸಹಕರಿಸಿಸಹಾಯಮಾಡಲು ಜನರನ್ನುಒದಗಿಸುವ ಸಂಘಗಳುಹೆಚ್ಚಳವಾಗಿವೆ ,ಹಿಂದೆ, ಒಂದೋ ಎರಡೋ nightingale,Red cross,ನಂತಹ ಸಂಸ್ಥೆಗಳು ಈ ಜವಾಬ್ದಾರಿ ಹೊರುತ್ತಿದ್ದವು,ಈಗ ಪ್ರತಿ ಸರ್ಕಾರಿ/ಹಾಗೂಖಾಸಗಿ ಅಸ್ಪತ್ರೆಯಲ್ಲೂಇಂತಹ ಸಂಸ್ಥೆಗಳ ಸಂಚಾಲಕರು ಈ ಕೆಲಸ ಒಪ್ಪಿಕೊಂಡು, ನುರಿತ ಜನರನ್ನು ಒದಗಿಸುತ್ತಿರುವುದು ಶ್ಲಾಘನೀಯವಾದ ಸಮಾಜಸೇವ.     ಅವರ ಶುಲ್ಕ ,ಮುಂಗಡ ಹಣ ದುಬಾರಿ ಅನಿಸಿದರೂತುರ್ತುಪರಿಸ್ಥಿತಿಯಲ್ಲಿ ಅವಶ್ಯಕತೆ ಇದ್ದಾಗ ಸಿಗುವ ನೆರವುಅಪ್ಯಾಯಮಾನ ಹಾಗೂ ಉಪಯುಕ್ತ.      ಇಂತಹ ಸಂಸ್ಥೆಗಳು ಕಳುಹಿಸಿದ ಅಪರಿಚಿತ ಸಹಾಯಕರನ್ನುತಿಂಗಳುಗಳು ಒಮೊಮ್ಮೆವರುಷಗಳುಜೊತೆಯಲ್ಲಿಟ್ಟುಕೊಂಡು,ವೃದ್ಧರ ,ರೋಗಿಗಳ […]

ಕಾವ್ಯಯಾನ

ನಿಯಮ ಡಾ.ಅಜಿತ್ ಹರೀಶಿ . ಅಪಘಾತಗಳೆಲ್ಲ ಆಕಸ್ಮಿಕಗಳಲ್ಲ ಕಾರಣವಿರಬಹುದಲ್ಲ ಅಲಕ್ಷ್ಯ ಆತುರ ಅತ್ಯುತ್ಸಾಹ ಕಲ್ಪಿಸುವ ಎದುರಿನ ಅಚಾತುರ್ಯ ಬೇಕೆಂದಾಗ ಬಂಜೆತನ ಬೇಡವಾದಾಗ ಫಲಿಸುವ ಗರ್ಭ ಸುರತಕ್ಕೆ ಸುರಕ್ಷಿತ ಸಂಗಾತಿ ಮಾತ್ರ! ಯುಗ ಬದಲಾಗಿದೆ ಸ್ವರ್ಗ ನರಕಗಳೆಲ್ಲವೂ ಸೃಷ್ಟಿಯಾಗಿದೆ ಇಲ್ಲೇ ತೆರೆಯಲಾಗಿದೆ ಬದುಕಿನ ಕಂದಾಯ ಕಟ್ಟುವ ಕೌಂಟರ್ ನಮ್ಮಲ್ಲೇ ದೇವನ ಕಣ್ಣುಗಳು ಮಾರು-ಮಾರಿಗೆ ಎಲ್ಲೆಲ್ಲೂ ಟವರ್ ಲೊಕೇಷನ್ ಅಪರಾಧಿಯಾಗದ ಸೂತ್ರ ಜೀವಿಸುವ ಸಾಫ್ ಸೀದಾ *********

Back To Top