ಅನುವಾದ ಸಂಗಾತಿ

ಮೂಲ ಕವನ
ಡಾ.ಶಿವಕುಮಾರ್ ಮಾಲಿಪಾಟೀಲ,ಗಂಗಾವತಿ ಅವರ “ದೇವರು ಹೇಳುತ್ತಿದ್ದಾನೆ
ವಿಶ್ರಾಂತಿ ಪಡೆಯಿರಿ”

ಇಂಗ್ಲೀಷಿಗೆ ನಾಗರೇಖಾ ಗಾಂವಕರ್

ಸಂಗಾತಿಯ ಓದುಗರಿಗೆ ಮೂಲ ಮತ್ತು ಅನುವಾದಿತ ಕವಿತೆಗಳೆರಡನ್ನೂ ಇಲ್ಲಿ ನೀಡಿದೆ

ದೇವರು ಹೇಳುತ್ತಿದ್ದಾನೆ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ

ಗುಡಿ, ಗುಂಡಾರ, ಮಸೀದಿ, ಚರ್ಚೆಗಳಿಗೆ ಬಹಳಷ್ಟು ಅಲೆದಿದ್ದಿರಿ,
ಮನವಿಲ್ಲದೆ ನನ್ನನ್ನು ಬಹಳಷ್ಟು
ಹುಡುಕಿದ್ದಿರಿ
ಸಾಕು ನೀವೀಗ ವಿಶ್ರಾಂತಿ ಪಡೆಯಿರಿ

ಕಾಯಕ ಬಿಟ್ಟು
ಸಾಮೂಹಿಕ ಭಜನೆ, ಪ್ರಾರ್ಥನೆ ಏನೇನೋ ಜಾತ್ರೆ ,ಉತ್ಸವಗಳನ್ನು
ಮಾಡಿದಿರಿ
ಸಾಕು ನೀವೀಗ ವಿಶ್ರಾಂತಿ ಪಡೆಯಿರಿ.

ಅನ್ನ ,ಆಹಾರವಿದ್ದರೂ
ಎಲ್ಲಾ ಪ್ರಾಣಿಗಳನ್ನು ತಿಂದು ತೇಗಿದಿರಿ ,ಅನ್ನ ಚೆಲ್ಲಿದಿರಿ,
ಈಗ ಮನೆಯಲ್ಲಿಯೇ
ತಿನ್ನುತ ವಿಶ್ರಾಂತಿ ಪಡೆಯಿರಿ.

ಒಂದು ನಿಮಿಷವು ಸಮಯವಿಲ್ಲವೆಂದು ಒತ್ತಡದಲ್ಲಿ
ಅಲೆಯುತ್ತಿದ್ದಿರಿ,
ಅನ್ನ ನಿದ್ದೆ ಇಲ್ಲದೆ ಆಸ್ತಿ ಮಾಡಿದ್ದಿರಿ
ಸಾಕೀಗ ನೀವು ವಿಶ್ರಾಂತಿ ಪಡೆಯಿರಿ.

ಅತಿ ಆಸೆಗೆ ಬೆನ್ನು ಬಿದ್ದು
ಸಜೀವಗಳನ್ನು ಸುಟ್ಟು ಸುಟ್ಟು
ನಿರ್ಜೀವಗಳನ್ನು ಗಳಿಸಿ, ಗಳಿಸಿ
ಇದ್ದಿದ್ದರಲ್ಲಿ ತೃಪ್ತಿ ಪಡದೆ
ಅತೃಪ್ತರಾಗಿ ಅಂತರಂಗವ
ಅಶುದ್ಧ ಮಾಡಿ ಬದುಕಿದ
ನೀವೀಗ ವಿಶ್ರಾಂತಿ ಪಡೆಯಿರಿ.

ಸ್ವಾರ್ಥದ ರಾಜಕಾರಣ,
ಲಂಚದ ಉದ್ಯೋಗ,
ವ್ಯಾಪಾರದ ಶಿಕ್ಷಣ,
Marks ಒತ್ತಡದಲಿ
ಮಕ್ಕಳು, ಹೆತ್ತವರು, ಗುರುಗಳು.
ನಿರುದ್ಯೋಗ ಉತ್ಪಾದಿಸುವ
ವಿಶ್ವ ವಿದ್ಯಾಲಯಗಳು
ಸಾಕು ನೀವು ವಿಶ್ರಾಂತಿ ಪಡೆಯಿರಿ.

ಪರಿಸರದ ಮೇಲೆ ನಿರಂತರ ದಾಳಿ ಮಾಡಿ, ವನ್ಯಜೀವಿಗಳನ್ನು ಕೊಂದಿರಿ,
ಈಗ ನೀವು Zoo ನಲ್ಲಿ ಇದ್ದಿರಿ
ಪ್ರಾಣಿ, ಪಕ್ಷಿಗಳನ್ನು ಮನೆಯಿಂದಲೇ
ನೋಡುತ್ತ ವಿಶ್ರಾಂತಿ ಪಡೆಯಿರಿ.

ಒಂದು ಬಸ್, ಟ್ರೇನ್, ಪ್ಲೈಟ್
Miss ಆದರೆ tension ತೊಗೊಂಡಿರಿ.
ಜೀವನ ಮುಗಿದೆ ಹೋಯಿತು ಅಂದುಕೊಂಡಿರಿ
ಅವು ಎಲ್ಲವು ಅಲ್ಲೆ ನಿಂತಲ್ಲೇ ನಿಂತಿವೆ
ನೀವೀಗ ವಿಶ್ರಾಂತಿ ಪಡೆಯಿರಿ.

ಟ್ರಾಫಿಕ್ ನಲ್ಲಿ ಹೆತ್ತವರು ,
ಪ್ಲೇ ಹೋಂ ನಲ್ಲಿ ಕಂದಮ್ಮಗಳು,
ವೃದ್ದಾಶ್ರಮದಲ್ಲಿ
ಅನಾಥಾಶ್ರಮದಲ್ಲಿ ಅಜ್ಜ ಅಜ್ಜಿ ,
ನಿಮ್ಮ ಮುಖ ಒಬ್ಬರನೊಬ್ಬರು ನೋಡುತಾ ನೀವೀಗ ವಿಶ್ರಾಂತಿ ಪಡೆಯಿರಿ.

ಧರ್ಮದ ಹೆಸರಲ್ಲಿ ಅಧರ್ಮ, ಅತ್ಯಾಚಾರ ಎಸಗಿದಿರಿ,
ನಮ್ಮ ಧರ್ಮವೇ ಶ್ರೇಷ್ಠ ಎಂದು ಕೂಗಾಡಿದಿರಿ
ಜಗತ್ತನ್ನೇ ನಮ್ಮ ಧರ್ಮ ಆಳಬೇಕು ಎಂದಿರಿ ಭ್ರಮೆಯಲ್ಲಿ ಚೀರಾಡಿದ್ದು ಸಾಕು ನೀವೀಗ ವಿಶ್ರಾಂತಿ ಪಡೆಯಿರಿ.

ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಕೊಟ್ಟಿರಿ
ವರದಕ್ಷಿಣೆಗೆ ಹೆಣ್ಣನ್ನು ಸುಟ್ಟಿರಿ
ಭ್ರೂಣ ಹತ್ಯೆ ಮಾಡಿದಿರಿ
ಹೆಣ್ಣನ್ನು ದೇವರೆನ್ನುತ ಗುಡಿ ಹೊರಗೆ ಇಟ್ಟಿರಿ
ಸಾಕು ನೀವೀಗ ವಿಶ್ರಾಂತಿ ಪಡೆಯಿರಿ.

ಶ್ರೇಷ್ಠತೆಯ ಮದದಲ್ಲಿ ಜಾತಿ ಧರ್ಮದ ಗೋಡೆ ಕಟ್ಟುತ್ತ ಅಸಮಾನತೆಯಿಂದ ನಡೆದಿರಿ..
ಅಧಿಕಾರದ ಅಹಂಕಾರದಲ್ಲಿ
ಅನ್ನದಾತನ ಮರೆತಿರಿ
ಈಗ ಅನ್ನಕ್ಕಾಗಿ ಕೈ ಚಾಚುತ ವಿಶ್ರಾಂತಿ ಪಡೆಯಿರಿ.

ದೇಶ ಭಕ್ತಿ ಹೆಸರಲ್ಲಿ ಬಡವರ ಮಕ್ಕಳನ್ನು ಗಡಿಯಲ್ಲಿ ನಿಲ್ಲಿಸಿ
ಅತ್ತ ಶಾಂತಿ ಮಾತುಕತೆ ಎನ್ನುತ್ತಾ… ಇತ್ತ ಗಡಿಯಲ್ಲಿ ಯುವಕರನ್ನು ‌ಕೊಲ್ಲುತ್ತಾ , ಅವರ ಮಕ್ಕಳನ್ನು , ಹೆಂಡತಿಯನ್ನು ಅನಾಥ ಮಾಡುವ ಆ ಕಟುಕ ಗಡಿಗಳು ನಿಶ್ಯಬ್ದ ವಾಗಿವೆ ನೀವು ವಿಶ್ರಾಂತಿ ಪಡೆಯಿರಿ.

ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುತ
ಸ್ವರ್ಗ ಸೇರುತ್ತೇನೆ ಎನ್ನುವ ನರಹಂತಕರ ಬಣ್ಣ ಬಯಲಾಗಿದೆ
ನಿಮ್ಮ ಮದ್ದು ಗುಂಡುಗಳ ಜೊತೆಗೆ ವಿಶ್ರಾಂತಿ ಪಡೆಯಿರಿ.

ಭವಿಷ್ಯ ಹೇಳುವವರ ಭವಿಷ್ಯ ಈಗ ನನ್ನ ಕೈಯಲ್ಲಿದೆ ,
ದೇವರು, ಧರ್ಮದ ಹೆಸರಲ್ಲಿ
ದುಡ್ಡು ಮಾಡಿದವರ ಪಟ್ಟಿ
ನನ್ನಲ್ಲಿದೆ…
ನನ್ನ ಪಟ್ಟಿ ಈಗ ಬಿಡುಗಡೆ ಮಾಡುತ್ತೇನೆ
ನೀವೀಗ ವಿಶ್ರಾಂತಿ ಪಡೆಯಿರಿ.

ಎಲ್ಲಾ ಗೆದ್ದೆ ಎನ್ನುತ್ತ
ಅಟ್ಟಹಾಸದಿ ಮೆರೆದ ನೀವು
ಈಗ ನಿಮ್ಮ ‌ಪ್ರಾಣ ಉಳಿದರೆ ಸಾಕು ಎನ್ನುತ ಅಲ್ಲೆ ನನ್ನನ್ನು ನೆನೆಯುತ್ತ ವಿಶ್ರಾಂತಿ ಪಡೆಯಿರಿ.

*******

Now God is telling
its enough and relax

You have travelled a lot
to the temples , mosques and churches
searched for me without true devotion
Now its enough and relax.

Neglected your jobs
and engrossed in community bhajans, prayers
and in fairs and festivals
Now its enough and relax.

You butchered the animals
even though you have rice and food.
spilled the food carelessly.
Now stay at home, eat and relax

You were wandering under the pressure of not having
enough time to earn.
sacrificed your food and sleep and
earned possession.
Now its enough and relax.

pursuing your desire
you burnt the living and
earned the non living things
not being contented
what you had
but you lived a life of dissatisfaction and defiled your inward purity
Now its enough and relax

Selfish politics
bribery in jobs.
business like education
children, parents and teachers all
in the stress of high score .
unemployment generating
Universities
Now its enough and relax

You exploited the nature
And destroyed the wildlife.
Now you are in a
zoo.
watch the birds and animals through your houses and relax.

You got tensed
when you missed
your bus, train or plight.
and thought life
almost over.
all the things are there where they were
So relax now.

Parents in traffic
kids in a playhome
grandparents in an
old age home or orphanages
so now you both
looking only at each other and relax.

In the name of religion
you commited mistakes and
you cried out loud
our religion is the greatest’
and preached out ‘our religion must rule the world’
Now stop this screaming in dillusion and relax.

You divorced for petty reasons
burnt woman alive for dowry.
commited Feticide.
you claimed ‘women are goddess’ but kept her out of the shrine.
now its enough and relax.

You built a barrier of caste and creed in a mood of hierarchy and maintained inequality.
forgot the farmer
with swollen head of power.
Now stretch your arms for rice and relax

In the name of petriotism
the young ones of a poor family at the Borders.
Inducing peace talk in one side.
But an end to the life of youngsters at the borders on an another side and orphaned their family
Those brutal borders are now silent.
So you relax.

In the name of religion, the pretenders who thought they could go to the heaven through the extermination of innocents,
their true colour is demasked
Now its enough and with your guns and bullets , you relax.

Now the future of the foretellers is in my hand.
The con artists who accumulated money in the name of devine,
their list is with me.
Now I release this list and you relax.

You disntict yourself as you’re the conqueror of everything.
But now you’re begging for your life.
Now stay there where you are and mediate me and relax.

****************

Leave a Reply

Back To Top