Day: May 27, 2020

ಕಾವ್ಯಯಾನ

ತಂಗಾಳಿ! ಕೆ.ಬಿ.ವೀರಲಿಂಗನಗೌಡ್ರ ಅವಳೆಂದರೆ.. ತೊರೆದವನಿಗೆ ಅರಳಿಮರವಾದವಳು ಅವಳೆಂದರೆ.. ಕೂಡಬೇಕೆಂದವನಿಗೆ ಅನುಭವಮಂಟಪವಾದವಳು ಅವಳೆಂದರೆ.. ಹೋರಾಟಗಾರನಿಗೆ ಊರುಗೋಲಾಗಿ ನಿಂತವಳು ಅವಳೆಂದರೆ.. ಸಮತೆಯೆಂದವನಿಗೆ ತಕ್ಕಡಿ ಹಿಡಿದು ನಿಂತವಳು ಅವಳೆಂದರೆ.. ಎದೆಯದನಿಗೆ ಸ್ವಾತಿ ಹನಿಯಾದವಳು ಅವಳೆಂದರೆ.. ಬೆಳೆಸಲೆಂದೇ ಬೇರಾಗಿ ಕೆಳಗಿಳಿದವಳು ಅವಳೆಂದರೆ.. ಕಾಣದ ತಂಗಾಳಿ ಅರ್ಥವಾಗದ ಅಮೂರ್ತ. *******

ಕವಿತೆ ಕಾರ್ನರ್

ಕಣ್ನೀರಾಗುತ್ತೇನೆ! ಕಗ್ಗತ್ತಲ ಇರುಳೊಳಗೆ ಬೀದಿ ದೀಪಗಳ ನೆರಳುಗಳಾಟದೊಳಗೆ ಮುಸುಕೊದ್ದು ಮಲಗಿದ ನಿನ್ನ ಶಹರದೊಳಗೆ ಅಡ್ಡಾಡುತ್ತೇನೆ ನಿಶಾಚರನಂತೆ ಹಗಲು ಕಂಡ ಬೀದಿಯ ಹುಡುಕಿ ಇರುಳು ಅಲೆಯುತ್ತೇನೆ ಎತ್ತರದ ನಿನ್ನ ಮನೆಯ ಮಹಡಿಯಮೇಲೆ ಕವಿದ ಕಪ್ಪು ಮೋಡಗಳಾಚೆ ಇಣುಕುತ್ತಿರುವ ಚಂದ್ರನ ನಿದ್ದೆಗಣ್ಣಿನ ನಗುವಿಗೆ ಹೋಲಿಸಿ ನಿನ್ನ ಮಂದಹಾಸವ ನಾಚುತ್ತೇನೆ! ಮೂಡಿದ ಸೂರ್ಯನ ಎಳೆ ಕಿರಣಗಳು ನಿನ್ನಂಗಳದಲ್ಲಿ ಚಿತ್ತಾರ ಬಿಡಿಸುವ ದಿವ್ಯ ಮುಂಜಾವದಲ್ಲಿ ಮೈಮುರಿಯುತ್ತ ಹೊರಬಂದ ನಿನ್ನ ಮುದುಡಿದ ಸೀರೆಯ ನಿರಿಗೆಗಳಲ್ಲಿ ಅಡಗಿರಬಹದಾದ ಹಿಂದಿನ ರಾತ್ರಿಯ ಕನಸುಗಳಲ್ಲಿ ನನ್ನ  ಹುಡುಕುತ್ತೇನೆ! ಕಾಣದ […]

ಪುಸ್ತಕ ಸಂಗಾತಿ

ನಾನು ಅಘೋರಿಯಲ್ಲ “ನಾನು ಅಘೋರಿಯಲ್ಲ”” – Santoshkumar Mehandale 10 ವರ್ಷದ ಹಿಂದೆಯೇ ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ, ರಾಜ್ಯಮಟ್ಟದ ಜನಪ್ರಿಯ ಕಾದಂಬರಿ ಎಂದೆನಿಸಿಕೊಂಡ, (ಬಹುಶ ಹಲವು ಪ್ರಶಸ್ತಿಯೂ ) ಪುಸ್ತಕ….    ನನ್ನ ಬಹುದೊಡ್ಡ ಹೊಟ್ಟೆಯುರಿ ಅಂದ್ರೆ ಈ ಲೇಖಕರು,  ಇವರ ಬರಹಗಳು ನಂಗೆ ಪರಿಚಯವಾದದ್ದು ತೀರ ಇತ್ತೀಚಿಗೆ, ಇಷ್ಟು ವರ್ಷ ನಾನೀ ಲೇಖಕರ ಪುಸ್ತಕ ಬರಹ ಎಲ್ಲಾ ಮಿಸ್  ಮಡ್ಕೊಂಡೇ ಅಂತನ್ನಿಸೋದು ಇವರ ಕೆಲವು ಪುಸ್ತಕಗಳು ಸಿಗದಿದ್ದಾಗ, ಅವನು ಗಂಧರ್ವ….  ಯಾವ ಪ್ರೀತಿಯೂ…. ಓದಿದ ನಂತರ […]

ಪ್ರಸ್ತುತ

ಕ್ವಾರಂಟೈನ್ ರಜೆ ಯಲ್ಲಿ ಆತ್ಮಾವಲೋಕನ.. ವಿದ್ಯಾಶ್ರೀ. ಎಸ್.ಅಡೂರ್ ಹಿಂದೆಂದೂ ಕಂಡು, ಕೇಳಿ ಅರಿಯದ…..ಮುಂದೆಂದೂರ ಈ ರೀತಿಯೂ ಆಗಬಹುದೇ ಎಂದು ಖಾತ್ರಿಯೇ ಇಲ್ಲದಂತಹ ವಿದ್ಯಮಾನವೊಂದು ಜಗತ್ತಿನಾದ್ಯಂತ ತಾಂಡವವಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೌದು…ನಾನು ಕೊರೊನ ಬಗೆಗೆಯೇ ಹೇಳುತ್ತಿರುವುದು.         ಯಾರಿಗೆ ಪಥ್ಯವಾದರೂ…ಆಗದಿದ್ದರೂ…ಪ್ರಕೃತಿಯ ಮುಂದೆ ಹುಲುಮಾನವ ತೃಣಕ್ಕೆ ಸಮಾನವಾಗಿದ್ದಾನೆ.ಜಗತ್ತಿನ ದೊಡ್ಡಣ್ಣ ಎನ್ನಲಾಗುವ ಅಮೇರಿಕಾದಂತಹ ದೇಶವೇ ಸೋತು ಸುಣ್ಣವಾಗಿದೆ. ವೈಜ್ಞಾನಿಕವಾಗಿ,… ವೈಚಾರಿಕವಾಗಿ….ಯೋಚಿಸುವಾಗ ಅನೇಕ ತರ್ಕಬದ್ಧ ವಿಚಾರಗಳನ್ನು ಪುಟಗಟ್ಟಲೆ ಮಂಡಿಸಬಹುದು..ಚರ್ಚಿಸಬಹುದು. ನಾನು..ನೀನು ಎಂದು ಅನೇಕ ತಾಕಲಾಟ-ಮೇಲಾಟ ಗಳನ್ನು ಮಾಡಬಹುದು. ದೊಂಬಿ-ಗಲಾಟೆಗಳನ್ನು ಎಬ್ಬಿಸಬಹುದು.           […]

ಕಾವ್ಯಯಾನ

ಸರಸ ಬಾಲಕೃಷ್ಣ ದೇವನಮನೆ ಹುಣ್ಣಿಮೆಯ ಶೃಂಗಾರದಾಟಕೆಉದ್ರೇಕಗೊಂಡು ಮೊರೆಯುತ್ತಿದೆ ಕಡಲುದಂಡೆಯಲ್ಲಿ…ಎದೆಯಿಂದ ನಾಭಿಯಲಿ ಸುಳಿದುತೊಡೆಸಂಧಿಯಲಿ ಕುದಿಯುತ್ತಿದೆ ಉಸಿರು… ಮೌನವನು ಹೊದ್ದ ತಿಂಗಳುಮುಚ್ಚಿದ ರೆಪ್ಪೆ;  ಕಚ್ಚಿದ ತುಟಿ,ಕಿವಿಯ ಪದರದಲಿ ಮುಲುಕಾಟದಾಲಾಪ,ಕುಳಿರ್ಗಾಳಿ ಸೋಕಿದ ಬೆರಳುಮೈಮುರಿದ ತೋಳುಉಸಿರಿನೇರಿಳಿತಕಿಬ್ಬೊಟ್ಟೆಯಲಿ ಬಿಗಿತ;ನಡುವಿಂದ ಕಾಲ್ಸೆಳೆತ. ಚದುರಿದ ಮರಳುಹಾಸಿಗೆ, ಕೆದರಿದ ಮುಂಗುರುಳುಗೀರಿದ ಬೆನ್ನುಉಕ್ಕಿದ ಬೆವರು ಹರಿದುಒಡಲೊಳಗೆ ಜೀವಜಲ ಪುಟಿದುಗರ್ಭಗಡಲಲ್ಲಿ ಪುಳಕ..! ಮೊರೆತ ತಗ್ಗಿದ ಕಡಲು ಶಾಂತಪ್ರಶಾಂತ ಮುಗುಳು ಧನ್ಯ!! *******

ಕಥಾಯಾನ

ಒಂದು ವಿಶೇಷ ದಿನ ಮಲಯಾಳಂ ಮೂಲ: ಪೂನತಿಲ್ ಕುಞಬ್ದುಳ್ಳ ಕನ್ನಡಕ್ಕೆ ಚೇತನಾ ಕುಂಬ್ಳೆ ಹಲವು ವರ್ಷಗಳ ನಂತರ, ಅವನು ಚಂದ್ರಿಕಳ ಮನೆಗೆ ಬಂದ. ಕೇವಲ ಚಂದ್ರ ಎಂಬ ಹೆಸರು ಅವನಿಗಿದ್ದದ್ದರಿಂದ ಮಾತ್ರ ಚಂದ್ರಿಕ ಆತನನ್ನು ಧ್ಯಾನಿಸಿದ್ದಲ್ಲ.         ಅವನು ಸಿ.ಸಿ ಚಂದ್ರ. ಚಂದ್ರನ್ ಆಂಡ್ ಬ್ರದರ್ಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದ. ಅವರಿಗೆ ನೂರಾರು ಟ್ರಕ್ಕುಗಳೂ, ಹತ್ತಿ ಬಟ್ಟೆ ನೇಯುವ ಮೂರು ದೊಡ್ಡ ಮಿಲ್ಲುಗಳು ತಮಿಳುನಾಡಿನಲ್ಲಿವೆ. ವಿವಿಧ ವ್ಯಾಪಾರ ಸಂಘಟನೆಗಳ ನಾಯಕರನ್ನು ವಶೀಕರಿಸುವ ಮಾದಕ ವಸ್ತುಗಳಿವೆ. ಒಂದು […]

Back To Top