Day: May 2, 2020

ಕಾವ್ಯಯಾನ

ನಿನ್ನ ಧ್ಯಾನ ಮಲ್ನಾಡ್ ಮಣಿ ಅರಳು ಮಲ್ಲಿಗೆಯ ಮಾಲೆ ಮಾಡಿ ನಿನ್ನ ಕೊರಳ ಧ್ಯಾನಿಸುತ್ತಲಿರುವೆ. ಎಂದು ಬರುವೆಯೆಂದು ದಾರಿ ಕಾಯುವ ಶಬರಿ ನಾನು. ದೇಹ ಮಲ್ಲಿಗೆ ಗೀಡವು ಭಾವ ಅದರ ಹೂವು, ನಿನ್ನ ನೆನಪಿನ ನೀರನೆರೆದು ಹೂ ಕಿತ್ತು ಕಟ್ಟಿ ಮಾಲೆ ಮಾಡಿದೆ. ನಿನ್ನ ದಾರಿ ಕಾದು ಮತ್ತೆ ಮಲ್ಲೆ ಹೂವ ಕಂಡೆ, ಅರಳು ಮಲ್ಲಿಗೆ ನಗುವ ಬೀರಿತು. ಹೊತ್ತು ಹಾದು ಹೋದರು ನಿನ್ನ ಸುಳಿವು ಕಾಣದು ಬರುವ ಸಂಜೆಗೆಂಪು ನಗುವ ಮಾಸಿತು. ನೆರಳಿನಲ್ಲಿ ನನ್ನ ನೆರಳು […]

ಸ್ವಾತ್ಮಗತ

ಅಭಿವೃದ್ಧಿಯಾಗಬೇಕಾದ ‘ಹೆಳವರು’..! ಅಭಿವೃದ್ಧಿಯಾಗಬೇಕಾದ ‘ಹೆಳವರು’..! ಇವರ ಒಟ್ಟು ಸಂಖ್ಯೆ ಸುಮಾರು 80 ಸಾವಿರಬಹುದು. ಇದಿಷ್ಟೇ ಈ ಜಾನಂಗದ ಜನರಿಗೆ 180 ಕ್ಕೂ ಹೆಚ್ಚು ಬೆಡಗುಗಳು ಅಥವಾ ಕುಲಗಳು ಇರಬಹುದು. ಅಂದರೆ, ಪ್ರತಿ 444 ಜನರಿಗೆ ಒಂದು ‘ಕುಲ’ವಾಯಿತು..! ಅಲ್ಪಸ್ವಲ್ಪ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೂ ಇವರ ಮೂಲ ವೃತ್ತಿ ಭಿಕ್ಷಾಟನೆಯಾಗಿದೆ. ಈ ಜನಾಂಗ ಇವರ ಮೂಲ ಕಸುಬಾದ ಭಿಕ್ಷಾಟನೆ ಬಿಟ್ಟಿಲ್ಲ.ಅದೂ ಈ ಜನರು ಎಲ್ಲರ ಮನೆಗೆ ಅಂದರೆ ಕಂಡ, ಕಂಡವರ ಮನೆಗೆ ಭಿಕ್ಷಾಟನೆಗೆ ಹೋಗುವುದಿಲ್ಲ. ತಮ್ಮ ಒಕ್ಕಲು ಮನೆಯವರ […]

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಈ ಬೆಳಗು ಎಂದಿನಂತಿಲ್ಲ ಈ ಬದುಕು ಎಂದಿನಂತಿಲ್ಲ ಅಲೆಗಳೆಷ್ಟು ಕ್ಷುಬ್ಧವಾಗಿವೆ ಈ ಕಡಲು ಎಂದಿನಂತಿಲ್ಲ ಮಧುಶಾಲೆಗೇ ಗರ ಬಡಿದು ಈ ಗುಟುಕು ಎಂದಿನಂತಿಲ್ಲ ಎಂಥ ಮರುಳಿತ್ತು ಸಂಜೆಯಲ್ಲಿ ಈ ಇರುಳು ಎಂದಿನಂತಿಲ್ಲ ಮುಖ ತಿರುಗಿಸಿ ನಡೆದಳಲ್ಲ ಯಾಕವಳು ಎಂದಿನಂತಿಲ್ಲ ಎದೆಯೂಟೆ ಬತ್ತಿಹೋಯಿತೇ ಈ ಮಡಿಲು ಎಂದಿನಂತಿಲ್ಲ ಬಾಂದಳಕೆ ಬೆಂಕಿ ಬಿದ್ದಿದೆ ಈ ಮುಗಿಲು ಎಂದಿನಂತಿಲ್ಲ ಸಾಂತ್ವನವ ಅರಸಿದೆ ‘ಜಂಗಮ’ ಈ ಹೆಗಲು ಎಂದಿನಂತಿಲ್ಲ ********

ಪುಸ್ತಕ ಸಂಗಾತಿ

ಹಿಂದಿನ ಬೆಂಚಿನ ಹುಡುಗಿಯರು ಕೃತಿ: ಹಿಂದಿನ ಬೆಂಚಿನ ಹುಡುಗಿಯರು ಲೇಖಕಿ :- ಶೈಲಜಾ ಹಾಸನ  # ಸಾಬು :-             ತನಗೆಷ್ಟೇ ಕಷ್ಟಗಳಿದ್ದರೂ ಮಗ  ತನ್ನಂತೆ ಆಗಬಾರದೆಂದು ಹೊಟ್ಟೆ ಬಟ್ಟೆ ಕಟ್ಟಿ, ಬೀದಿ ಬೀದಿ ಅಲೆದು ಕಷ್ಟಪಟ್ಟು ಮಗನನ್ನು ದೊಡ್ಡ ವ್ಯಕ್ತಿ ಯಾಗಿಸುವ ತಂದೆ. ಇಳಿ ವಯಸ್ಸಿನಲ್ಲಿ ತನ್ನ ತಂದೆ ತಾಯಿಗೆ  ಮತ್ತೊಂದು ಮಗುವಾಗುವುದನ್ನು ಅರಿತು ಅವರನ್ನು ದೂರ ಮಾಡುವ ಮಗ. ಹುಟ್ಟಲಿರುವ ಮಗುವಿನ ಬದುಕನ್ನು ಕಟ್ಟಲು ಮತ್ತೆ ತನ್ನ ವೃದ್ಧಾಪ್ಯದಲ್ಲಿ ಪಾತ್ರೆ ಪಗಡೆ ಮಾರಾಟಕ್ಕೆ ಹೊರಡುವ […]

Back To Top