ಜಿಂಕೆಗೆ ಜೀವ ಬರಲು
ಧಾಮಿನಿ
ಪ್ರಿಯಾ
ಜಿಂಕೆಯಂತೆ ಚಿಮ್ಮುತ್ತಿದ್ದೆನು ನಾನು
ಕಾರಣ ನೀನು
ನನ್ನ ಸಹಕಾರದಿಂದಲೇ ಮುಗಿದಿತ್ತೆಲ್ಲ
ಜೀವನ ಪೂರ್ತಿ ನಡೆಯುವಂತದ್ದಲ್ಲ
ಮೈಮೇಲೆ ಹರಿದಾಡಿದಂತೆ ಹಾವು
ಮುದಗೊಳಿಸುವಂತ ಕಾವು
ಹಾವಿನೊಂದಿಗೆ ಸರಸವೇ
ನಾಗಮಂಡಲ ನೋಡಿಲ್ಲವೇ
ಬೆಣ್ಣೆಯಂತಹ ಮೈ
ಕರಗಿತ್ತಲ್ಲಾ ಸೈ
ಕೈ ಕಾಲುಗಳಿಗೆ ಎಂತದೋ ಹುರುಪು
ಇಲ್ಲಿ ಬಲಾತ್ಕಾರವಿಲ್ಲ ಸಮರ್ಪಣೆಯೇ ಒನಪು
ಜಿಂಕೆಯಂತೆಯೇ ಗಾಬರಿಯಾಗಿದ್ದೆನಾ
ಕಾರಣ ನೀನೇನಾ ?
ಎಂತಾ ಅದ್ರಷ್ಟವಂತೆಯೇ ನೀ
ಇವನನ್ನು ಇವನೇ ಎಂದುಕೋ
ಬೇಡ ಬಿಡಿ ಇಲ್ಲಿ ಅವನೇತಕೋ
ಏನೂ ಕಡಿಮೆಯಿಲ್ಲ ಸಂಭ್ರಮಕೋ
ಈಗ ಅವನ ನೆನೆವುದೂ ಬೇಡ
ಇವಳ ಹೋಲಿಕೆಯೂ ಬೇಡ
ಇಬ್ಬರೂ ಒಬ್ಬರ ಮುಂದೊಬ್ಬರು ಪ್ರತ್ಯಕ್ಷವಾಗಿದ್ದೇವಲ್ಲ
ಈಗ ಜೀವಂತ ಜಿಂಕೆ ನಾನು
ಜಿಂಕೆಗೆ ಜೀವ ಕೊಟ್ಟ ಉಸಿರು ನೀನು.
********