ಪ್ರಸ್ತುತ
ದುಬಾರಿಯಾಗಲಿರುವ ದಿನಗಳು ಅರುಣ್ ಕೊಪ್ಪ *ಕೊರೊನಾ ದಿನಗಳು ಇನ್ನೂ ದುಬಾರಿಯಾಗಲಿವೆ* ಹೌದು ಇಲ್ಲಿ ದುಬಾರಿ ಎಂದ ಮಾತ್ರಕ್ಕೆ ಹಣ ಅನ್ನೋ ಶಬ್ಧ ಕಾಲ್ಪನಿಕತೆ ಒಂದೆಡೆ ಆದರೆ ಸಂಕ್ಷಿಪ್ತದೆಡೆಗೆ ಒಯ್ದು ಆಚೆ ಕಿವಿಯಿಂದ ಕೇಳಿ ಈಚೆ ಕಿವಿಯಲ್ಲಿ ಬಿಡುವ ಆಲಸಿ ಪ್ರಮೇಯಕ್ಕೆ ಎಳೆದು ಬಿಡುತ್ತದೆ ಅಲ್ಲವೇ? ಅದು ಹಾಗಲ್ಲ ಇಲ್ಲಿನ ಸಮತೋಲನ ಪರೋಕ್ಷವಾಗಿ ಬದಲಾವಣೆಯಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರುವದಷ್ಟೇ ಅಲ್ಲದೆ ,ಮುಂದಿನ ಕ್ರಮ,ಮುಂದೇನು ಅನ್ನೋ ಪ್ರಶ್ನೆ ಮೂಡುವದು ಸಹಜವಾಗಿಯೇ ವಯಕ್ತಿಕ ಬದುಕಿನತ್ತ ಲಗ್ಗೆ ಇಡುತ್ತವೆ. ನಾವಿಷ್ಟು ದಿನ […]
ಆರೋಗ್ಯ
ಧೂಮಪಾನ ದುಷ್ಟಪರಿಣಾಮಗಳು. ಸಂಗಮೇಶ ಎನ್ ಜವಾದಿ ಧೂಮಪಾನ ಎಂದರೆ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಹೊಗೆಯನ್ನು ಒಳತೆಗೆದುಕೊಳ್ಳುವುದನ್ನು ಧೂಮಪಾನ ಸೇವನೆ ಯೆಂದು ಕರೆಯಲಾಗುತ್ತದೆ. ಇದರಿಂದ ಹೊರಡುವ ಹೊಗೆಯನ್ನು ಉಚ್ಛ್ವಾಸದ ಮೂಲಕ ಒಳತೆಗೆದುಕೊಂಡಾಗ ಇದರ ಸಕ್ರಿಯ ವಸ್ತುಸಾರಗಳು ಆಲ್ವಿಯೋಲೈ ಮೂಲಕ ಶ್ವಾಸಕೋಶದಲ್ಲಿ ಹೀರಲ್ಪಡುತ್ತವೆ.ಈ ಸಕ್ರಿಯ ವಸ್ತುಸಾರಗಳು ನರಗಳ ತುದಿಗಳಲ್ಲಿ ರಾಸಾಯನಿಕ ಕ್ರಿಯೆಗಳನ್ನುಂಟುಮಾಡಿ ಹೃದಯ ಬಡಿತದ ವೇಗ, ನೆನಪಿನ ಶಕ್ತಿ, ಸಕ್ರಿಯತೆ ಹಾಗೂ ಪ್ರತಿಕ್ರಿಯಿಸುವ ಸಮಯದಲ್ಲಿ ಏರಿಕೆಯನ್ನುಂಟುಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಚಟ ಹೆಚ್ಚಾಗಿ ಗ್ರಾಸವಾಗುತ್ತಿದೆ. […]
ಕಥಾಯಾನ
ಕಕ್ಷೆ ಡಾ.ಅಜಿತ್ ಹರೀಶಿ [11:59 am, 31/05/2020] AJITH HARISHI: ‘ಹಲೋ, ಡಾಕ್ಟ್ರೇ, ನಮ್ಮನೆ ಕೆಂಪಿಗೆ ಹೆರಿಗೆ ನೋವು ಬಂದದ್ರಾ, ಈಗ್ಲೆ ಬತ್ರ?’ ಫೋನ್ ಎತ್ತಿದೊಡನೆ ಹೇಳಿ, ನನ್ನುತ್ತರಕ್ಕೆ ಕಾಯ್ದಿತ್ತು ಆ ಸ್ವರ. ‘ನಾ ಹೆರಿಗೆ ಡಾಕ್ಟರ್ ಅಲ್ಲ, ಮಾರಾಯ್ರ,’ ಅಂದೆ. ‘ಹೋಯ್, ನೀವು ನಮ್ ದನೀನ ಡಾಕ್ಟರ ಅಲ್ದ? ನಾ ಅವ್ರಿಗೆ ಫೋನು ಮಾಡಿದ್ದಾಗಿತ್ತು’. ಫೋನ್ ಕಟ್ ಆಗಿತ್ತು. ** ಆಗಷ್ಟೇ ಆಸ್ಪತ್ರೆ ಆರಂಭಿಸಿದ್ದ ದಿನಗಳು… ಹುಟ್ಟಿದೂರಿನಲ್ಲೇ ವೈದ್ಯವೃತ್ತಿ ಆರಂಭಿಸಿದ್ದರಿಂದ ಉಳಿದ ತೊಡಕುಗಳೇನೂ ಇರಲಿಲ್ಲ. ಹೊಸ ಉತ್ಸಾಹ, […]
ಕಾವ್ಯಯಾನ
ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಲೋಕದ ಏಕಾಂತದಲಿ ನಿನ್ನ ಹುಡುಕಾಡಿದ್ದೇನೆ ನಾನು ಬಯಸಿ ನೋವನುಂಡರು ಕಾಣಲು ತಿರುಗಿದ್ದೇನೆ ನಾನು ನೋವಿನ ಹಾಸಿಗೆಯಲಿ ಮಲಗಿ ದಿನ ಕಳೆದಿದ್ದೇನೆ ಮೌನವ ಅಪ್ಪಿಕೊಂಡು ಕಾಲು ಹಾದಿ ನಡೆದಿದ್ದೇನೆ ನಾನು ಬದುಕು ಹತಾಶೆಯಲಿ ಮಿಂದಿರುವುದು ನೋಡು ಇರುವ ತನಕ ಜೀವಗಳೆರಡು ಹೊಂದಿ ನಡೆಯಲೆಂದಿದ್ದೇನೆ ನಾನು ಬಯಸಿದ ಗಳಿಗೆಯಿಂದ ಬರಿ ಚಿಂತೆ ಮೌನಗಳೆ ಆವರಿಸಿವೆ ಹೊರಗಿನ ಚಂದಕಿಂತ ಒಳಗಿರುವ ಅಂದವ ಬಯಸಿದ್ದೇನೆ ನಾನು ನಗುವ ಚೆಲ್ಲಿ ಬಾ ಖಾಲಿಯಾದ ನನ್ನೆದೆಯ ತುಂಬಿಸು ಈ ಮರುಳ ಚೆಂದಾಗಿ […]
ಅನುವಾದ ಸಂಗಾತಿ
ಬದುಕುವುದು ಹೇಗೆ? ಕನ್ನಡ:ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮಲಯಾಳಂ: ಚೇತನಾ ಕುಂಬ್ಳೆ ಎಲ್ಲವನು ಬಿಚ್ಚಿ ಬತ್ತಲೆಯಾಗಿಸುವ ಈ ದುಶ್ಯಾಸನರ ಮಧ್ಯೆ ಬದುಕುವುದು ಹೇಗೆ ? ಕಾಮನೆಗಳ ಬದಿಗೊತ್ತಿ ಲಿಂಗೈಕ್ಯಳಾದ ಅಕ್ಕನ ಹೆಸರು ಹೇಳಿ ನಾಪತ್ತೆಯಾಗುವ ತಂಗಿಯರ ಬಗ್ಗೆ ಬರೆಯುವುದು ಹೇಗೆ ? ಮಾತು ಬದಲಾಯಿಸುವ ನಾರದರ ಸಂತಾನ ಮೃಗವಾಗಿ ಸುಳಿಯುವ ಮಾರೀಚನ ಬಳಗ ಪ್ರತ್ಯಕ್ಷವಾದಾಗ ನಿಜರೂಪ ಅರಿಯುವುದು ಹೇಗೆ ? ಶಾಪಗ್ರಸ್ತ ಅಹಲ್ಯೆ ಶೋಕತಪ್ತ ಊರ್ಮಿಳೆ ದಿನವೂ ಅಳುವಾಗ ದೂರ ಸರಿಯುವುದು ಹೇಗೆ ? ಕಲ್ಲುದೇವರಿಗೆ ಮಂಗಳಾರತಿ ಮಾಡಿ […]