ಕಾವ್ಯಯಾನ
ಕಾಲ ಅರುಣ್ ಕೊಪ್ಪ ಮಳೆ ,ಚಳಿ ,ಬಿಸಿಲೂ ಮೀರಿ ಏನು ಈ ಬಾಳ ರಹದಾರಿ ಹೋಯಿತು ಕೈ ಮೀರಿ ಗ್ರಹ ಬಂಧನ, ಮೈ ಕೈ ಪರಚಿ ಚೀರಿ ಎಲ್ಲಿಗೆ ನಿನ್ನ ಸವಾರಿ ಕೊರೊನಾ ಕವಿದೆ ನೀ ಅಂಧಕಾರಿ! ಅವಳು ನಾನಿಲ್ಲದ ಅವಳಲ್ಲ ಇಂದು ಇವಳು ಪಡುತಿಲ್ಲ ಗೋಳು ಇಲ್ಲ ಕಣ್ಣೀರ ಕೂಳು ಬಿದ್ದಯ್ತಿ ಎಣ್ಣೆ ಅಂಗಡಿ ಪಾಳು ******
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ನೀನೆತ್ತಿ ಮುಡಿದ ಹೂವಿನ ಎಸಳಾಗಿಸು ನನ್ನ ನಿನ್ನ ಬಿಡುಗಣ್ಣ ಕರೆಯಲ್ಲಿ ಹರಳಾಗಿಸು ನನ್ನ ಎದ್ದೆದ್ದು ಬೀಳುತ್ತ ಮೊರೆಯುತ್ತಿದೆ ಕಡಲು ಸತತ ನಿನ್ನ ಎದೆಯಲ್ಲೊಂದು ಮೃದು ಅಲೆಯಾಗಿಸು ನನ್ನ ನಿನ್ನ ಗುಲಾಬಿ ಪಾದಗಳು ರಸ್ತೆಯನಿಡೀ ತುಳಿದಿವೆ ದಣಿದ ಕಾಲುಗಳನ್ನು ಒತ್ತುವ ಬೆರಳಾಗಿಸು ನನ್ನ ಕತ್ತಲ ರಾತ್ರಿಯಲ್ಲಿ ಚುಕ್ಕಿಗಳ ಎಣಿಸುತ್ತಿರುವೆ ನಿನ್ನ ಕಣ್ಣು ಚುಚ್ಚದಂತೆ ಹಗೂರ ಮಿನುಗಿಸು ನನ್ನ ದುಗುಡ ಮೋಡಗಳು ಆವರಿಸಿ ಮನಸಾಗಿದೆ ಕ್ಷುಬ್ಧ ಚದುರಿಸಿ ಮುದ ತರುವ ತಂಗಾಳಿಯಾಗಿಸು ನನ್ನ ಎಷ್ಟೊಂದು ಮಾತುಗಳ […]
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-13 ಅವರ ಒಡಲು ತಣ್ಣಗಾಗಲಿ.. ಭೂಮಿಯನ್ನು ತಾಯಿ ಎನ್ನುತ್ತೇವೆ. ನಮ್ಮೊಡಲನ್ನು ಅನುದಿನವೂ ತುಂಬಿಸಿಕೊಳ್ಳುವುದು ಭೂಮಿಯಲ್ಲಿ ಬೆಳೆದ ಬೆಳೆಯಿಂದಲೇ.. ವಿವೇಚನಾರಹಿತವಾಗಿ ನಾವು ಸುರಿಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದ, ರಾಸಾಯನಿಕಗಳಿಂದ , ಕಟ್ಟಡಗಳ ತ್ಯಾಜ್ಯದಿಂದ ನಾನಿನ್ನು ಬೆಳೆಯನ್ನು ಬೆಳೆಸುವ ಸಾಮರ್ಥ್ಯ ಕಳೆದುಕೊಂಡಿದ್ದೇನೆ ಎಂದು ಭೂಮಿ ಘೋಷಿಸಿದರೆ ನಾವುಳಿಯಲಾದೀತೆ? ಪ್ರಕೃತಿ ಮನುಜರ ಆಸೆ ಪೂರೈಸುತ್ತದೆ ದಿಟ. ದುರಾಸೆ ಮಾಡುತ್ತಿರುವ ಕಾರಣದಿಂದಲ್ಲವೇ ಇಂತಹ ಲಾಕ್ಡೌನ್ ಎದುರಿಸಬೇಕಾಗಿ ಬಂದಿದ್ದು. ಇದು ಪ್ರಕೃತಿ ನೀಡುತ್ತಿರುವ ಬಲವಾದ […]
ಕಥಾಯಾನ
ಕಥೆ ಪೊಟ್ಟಿ ಶೀಲಾ ಭಂಡಾರ್ಕರ್. ಪೊಟ್ಟಿ. ಪೊಟ್ಟಿ, ಬಂಟ್ವಾಳದ ಬಂಗ್ಲೆ ಗುಡ್ಡೆಯಲ್ಲೊಂದು ಗುಡಿಸಲು ಕಟ್ಟಿ ವಾಸವಾಗಿದ್ದಳು. ಬಂಗ್ಲೆ ಗುಡ್ಡೆಗೆ ಹೋಗುವ ರಸ್ತೆಗೆ ತಾಗಿಯೇ ನಮ್ಮಜ್ಜಿ ಮನೆ ಇದ್ದುದರಿಂದ ಅವಳು ಯಾವುದಕ್ಕಾದರೂ ಓಡಿ ಬರುವುದಿತ್ತು. ಅವಳಿಗೆ ಒಂದಿಷ್ಟು ಜನ ಮಕ್ಕಳು. ಎಷ್ಟು ಎಂದು ಅವಳಿಗೇ ಲೆಕ್ಕ ಇತ್ತೊ ಇಲ್ಲವೊ. ಕೃಶ ಶರೀರದ ಮಧ್ಯಮ ಎತ್ತರದ ಪೊಟ್ಟಿಗೆ ಒಬ್ಬ ಗಂಡ ಅಂತ ಇದ್ದನಂತೆ ಎಂದು ಬಾಪಮಾ ಹೇಳಿದ್ದ ನೆನಪು. ಅದೇನೋ ಆಗಿ ಅವನು ಸತ್ತ ಮೇಲೆ ಒಂದೆರಡು ಮಕ್ಕಳ ಜೊತೆ […]