Month: April 2020

ಪ್ರಬಂಧ

ಕರೊನ-ನೆಗಡಿ ಜ್ಯೋತಿ ಡಿ.ಬೊಮ್ಮಾ ಈಗ ಎಲ್ಲರೂ ಅಸ್ಪೃಶ್ಯರೆ ,ಒಬ್ಬರಿಂದ ಒಬ್ಬರು ದೂರ ಇರುವ ಅಸಹಾಯಕತೆ ತಂದೊಡ್ಡಿದ ಆ ಒಂದು ಚಿಕ್ಕ ವೈರಾಣುವಿಗೆ ಇಡೀ ಮನುಕುಲವೇ ಅಂಜಿ ನಡುಗುತ್ತಿದೆ. ಆಪ್ತವಾಗಬೇಕಿದ್ದ ಬಾಂಧವ್ಯಗಳು ಸಂಬಂಧಗಳು ಕರಗುತ್ತಿವೆ.ದೈಹಿಕ ಅಂತರ ಮನದಂತರವನ್ನು ದೂರಗೊಳಿಸುತ್ತಿದೆ ಒಬ್ಬರನ್ನೊಬ್ಬರು ಅನುಮಾನದಿಂದ ನೋಡಿಕೊಳ್ಳುತ್ತ ,ತಮ್ಮವರೊಡನೆಯೂ ಆಗಂತುಕರಂತೆ ಬದುಕುವಂತೆ ಮಾಡಿದ ಈ ಸಂದರ್ಭ ಯಾತಾನಾಮಯವಾಗಿದೆ. ಮನೆಯಲ್ಲಿ ಎಲ್ಲರೊಡನೆ ಬೆರೆತು ಊಟ ತಿಂಡಿ ಮಾಡುತಿದ್ದರೂ ಒಳಗೆಲ್ಲ ಎಕಾಂಗಿ ಭಾವ ,ಎನೋ ತಳಮಳ ಹೇಳಿಕೊಳ್ಳಲಾಗದ ಅಸಹಾಯಕತೆ ,ಹಿಂದೆಂದೂ ಕಾಡಿರದ ಅನಿಶ್ಚಿತತೆ ಮನ ಕೊರೆಯುವಂತೆ […]

ಕಾವ್ಯಯಾನ

ಕ್ವಾರಂಟೈನ್ ದಿನಗಳಿವು ಶಾಲಿನಿ ಆರ್. ಅಮ್ಮನ ಆ ಮೂರು ದಿನ ಕಾಗೆ ಮುಟ್ಟಿದೆ ಮುಟ್ಟ ಬೇಡ ಎಂದು ದೂರ ಕುಳಿತ ಮುಟ್ಟಿನ ಆ ದಿನ, ಇಂದು ನಾನೆ ಯಾರನ್ನು ಮುಟ್ಟಿಸಿಕೊಳದೆ ದೂರದಿ ನಿಂತು  ದಿನ ದೂಡುತಿರು ಕ್ವಾರಂಟೈನ್ ದಿನ, ತರಕಾರಿ ಕೊಳ್ಳುವಾಗ ಮಾರುವವನಿಗಿಂತ ಮಾರು ದೂರ ನಿಂತು ಕೊಳ್ಳುವ ಕ್ವಾರಂಟೈನ್ ದಿನ, ದಿನಸಿ ಸಾಮಾನಿನ ಖರೀದಿಗೂ ಬಂದಿದೆ ಕೊಡುವ ಕೊಳ್ಳುವವನ ಮಧ್ಯೆ ಲಕ್ಣ್ಮಣರೇಖೆಯ ಕ್ವಾರಂಟೈನ್ ದಿನ ಪ್ರತಿಯೊಬ್ಬರ ಮಧ್ಯೆದಲ್ಲೂ ಸಿಲುಕಿ ನಲುಗುತಿದೆ ಮುಗಿಯಲಾರದೆ ನರಳುತಿದೆ ಕ್ವಾರಂಟೈನ್ ದಿನ, […]

ನಾನು ಓದಿದ ಪುಸ್ತಕ

ನಕ್ಷತ್ರ ಸೂಕ್ತ  ಡಾಕ್ಟರ್ ಅನಸೂಯಾದೇವಿ  ನಕ್ಷತ್ರ ಸೂಕ್ತ  ಲೇಖಕಿ ಡಾಕ್ಟರ್ ಅನಸೂಯಾದೇವಿ  ಪ್ರಕಾಶಕರು ಶ್ರೀ ಅನ್ನಪೂರ್ಣ ಪ್ರಕಾಶನ ಅಗ್ರಹಾರ ದಾಸರಹಳ್ಳಿ ಬೆಂಗಳೂರು ೫೦೦೦೭೯  ಮೊದಲ ಮುದ್ರಣ ೨೦೧೪ ಬೆಲೆ ರೂ.೧೫೦/ ಮೂರು ಪ್ರಬುದ್ಧ ಮುಖ್ಯಪಾತ್ರಗಳ ಸುತ್ತ ತಿರುಗುವ ಕಥೆ .ಅಡಿ ಟಿಪ್ಪಣಿ ಹೇಳುತ್ತದೆ “ನನಗೊಂದು ಮಗು ಬೇಕು” ನಾಯಕಿ ಮಾರ್ದವಿ ಸಂಗೀತಗಾರಳು ವಿದ್ಯಾವಂತೆ ಹಾಗೂ ಸೌಮ್ಯ ಸ್ವಭಾವದ ರೂಪಸಿ .ಅವಳ ಪ್ರತಿ ಮಧುಕರ ಕಾಲೇಜು ಉಪನ್ಯಾಸಕನಾಗಿದ್ದವನು  ಹಾಗೂ ದೇವಾಲಯದ ಅರ್ಚಕ ಸಂಸ್ಕೃತ ವಿದ್ವಾಂಸ ಹಾಗೂ ಪಿ.ಎಚ್.ಡಿ. ಬರೆಯುತ್ತಿರುವ […]

ಕಾವ್ಯಯಾನ

ಮುಗಿಯದ ಹಾಡು ಎನ್.ಶೈಲಜಾ ಹಾಸನ ಇಡುವ ಹೆಜ್ಜೆ ಜೊತೆ ಜೊತೆಹೆಜ್ಜೆ ಕೂಡಿದ ಪಲುಕುಪರಿ ಪರಿಯ ಕುಲುಕುನಾನೆಂತು ಬಣ್ಣಿಸಲಿನೀ ಒಲಿದೆ,ನನ್ನ ಒಲಿಸಿದೆಬೆಸೆದಿದೆ ಬಂಧನಮನವೀಗ ಹೂ ನಂದನ  ಒಲವ ಬಂಧನದಿ ಸುಖವಿದೆಸಿರಿಯಿದೆ,ಮಧುವಿದೆ,ಸವಿಯಿದೆನಡೆದ ಹಾದಿಯಲ್ಲಿಬಣ್ಣಗಳ ಚೆಲುವಿದೆ ಮೌನದ ಹಾಡಲಿನೂರು ಕವಿತೆಕಣ್ಣ ಬೆಳಕಲಿ ಪ್ರೇಮದಣತೆನೋಟದಂಚಿನಲಿಕೋರೈಸುವ ಮಿಂಚುನೋಟದಾಳದಲಿ ನಲ್ಮೆಯ ಜಲಪಾತತುಂಟ ನಗೆಯಲಿಸಾವಿರ ಪುಳಕ ಕನಸುಗಳ ಸಾಕಾರಎದೆಯ ಗೂಡಲಿನಿನ್ನೊಲುಮೆಯಹುಚ್ಚು ನದಿಯಲಿಕೊಚ್ಚಿ ಹೋದವಳುತೇಲಿ ತೇಲಿ ತೇಲುತಲಿಇರುವ ಹುಚ್ಚು ಖೋಡಿಮನಸ್ಸು ನನ್ನದು ಮುಟ್ಟಲಾಗದು,ತಟ್ಟಲಾಗದುಮೆಟ್ಟಲಾಗದುಮುಪ್ಪಾನು ಮುಪ್ಪಿಗೆಒಲುಮೆಯ ಮನಸಿಗೆಗೆಲುವಿನ ಸೊಗಸು ದಾಂಪತ್ಯ ಗೀತೆಗೆಅನುರಾಗದ ಪಲ್ಲವಿಶೃಂಗಾರದ   ಅನುಪಲ್ಲವಿಮುಗಿಯದ ಹಾಡು ಇದು *******

Back To Top