Year: 2020

ಮೌನ ಬೆಳದಿಂಗಳಂತೆ ನಗುತ್ತದೆ…

ಕವಿತೆ ಮೌನ ಬೆಳದಿಂಗಳಂತೆ ನಗುತ್ತದೆ… ಬಿದಲೋಟಿ ರಂಗನಾಥ್ ಮೌನ ಬೆಳದಿಂಗಳಂತೆ ನಗುತ್ತದೆಮಾತಾಡುವುದಿಲ್ಲಎಷ್ಟೋ ದೂರ ನಡೆದು ಮತ್ತೆ ಬಂದುಕೂರುತ್ತದೆ ಮಡಿಲ ಮಗುವಂತೆ ಚಿಂತೆಗಳಿಗೆ ಬಟ್ಟೆ ತೊಡಿಸಿಶೃಂಗಾರ ಮುಡಿಸುತ್ತದೆಎಷ್ಟೊಂದು ಕೈಗಳು ಪರಚಲು ಬರುತ್ತವೆನಗುತ್ತವೆ ಅಳುತ್ತವೆಸೀಳಾದಿಯ ಮೇಲೆ ನಡೆದುಮುಗಿಲ ಚುಕ್ಕಿಗಳ ಮುಟ್ಟುತ್ತವೆ ಕಣ್ಣವೆಗಳ ಒಳಗಿನ ಧ್ಯಾನಬಾಗಿಲ ತೆರೆದುನಖಶಿಕಾಂತ ಕಾರುವ ಬೆಂಕಿಯ ಜ್ವಾಲೆ ನಂದಿಸಿಹೂ ಮುಡಿಸುತ್ತದೆ ನಡುವೆಅಳುವ ಧ್ವನಿಗೆ ಸೋತುಕಿವಿಗಳಿಗೆ ರೆಕ್ಕೆ ಬಂದುಬಹುದೂರ ನಡೆದು ಬೊಗಸೆ ತುಂಬಿನಿಜತ್ವದ ಸಾರಕೆ ಬುದ್ಧಿಯ ಮೆತ್ತಿನಡೆದು ಬರುವಾಗ ಮೋಡ ಗುಡುಗಿಮಳೆಯ ಬಿಲ್ಲುಗಳು ಬೀರಿದವುಭಾವ ಗುಚ್ಚದ ಎದೆಗೆ. ಮೌನದೊಳಗಿನ […]

ಅದೆ ಕೂಗು

ಕವಿತೆ ಅದೆ ಕೂಗು ಶಂಕರಾನಂದ ಹೆಬ್ಬಾಳ ಮತ್ತೆ ಮತ್ತೆ ಅದೆ ಕೂಗುಕೇಳಿದರೆ ಮೈಜುಂ ಎನ್ನುವ ಕ್ರೌರ್ಯಧಿಕ್ಕಾರವಿರಲಿ ನಿಮ್ಮ ಪುರುಷತ್ವಕ್ಕೆಅಬಲೆಯ ಮೇಲೆ ಪೌರುಷತೋರಿಸಿದ ನಾಚಿಕಗೇಡಿನ ಜನ್ಮ…..!! ಬಾಪುವಿನ ಕನಸು ನನಸಾಗಲಿಲ್ಲಒಡಲ ದಳ್ಳುರಿಯು ಹತ್ತಿ ಉರಿದಿದೆನಿಗಿ ನಿಗಿ ಕೆಂಡದಂತೆ…ಆರ್ತನಾದವ ಕೇಳುವರಿಲ್ಲದೆಕೇಳಿದರು ಮಂಗನಂತೆಕೈ ಬಾಯಿ ಕಣ್ಣು ಮುಚ್ಚಿಕುಳಿತಿದ್ದೆವೆ ಹೇಡಿಯಂತೆ……!! ನಿನ್ನ ದೇಹಕ್ಕೆ ಆಸೆ ಪಟ್ಟವರಿಗೆದಫನ್ ಮಾಡಬೇಕುಕಾಮುಕರ ಕೈಕತ್ತರಿಸಿನಾಯಿನರಿಗಳಿಗೆ ಹಾಕಬೇಕುಸತ್ತವಳು ನೀನಲ್ಲ….!! ಮತ್ತೆ ಮತ್ತೆ ಕೇಳುತಿದೆಅಮಾಯಕ ಹೆಣ್ಣುಮಕ್ಕಳಮೇಲಿನ ದೌರ್ಜನ್ಯದ ಕೂಗು..ನರಕದ ಹುಳುವಾಗಿ ಬಳಲಿದಮನುಜನ ಸಹವಾಸ ಸಾಕು….!! **************************

ಸಣ್ಣ ತಪ್ಪು

ಕಥೆ ಸಣ್ಣ ತಪ್ಪು ಲಕ್ಷ್ಮೀದೇವಿ ಪತ್ತಾರ ಬೆಳಗ್ಗಿನ ಆಹ್ಲಾದಕರ ವಾತಾವರಣ ತಣ್ಣನೆ ಗಾಳಿ ಬೀಸುತ್ತಿತ್ತು. ವಾಕಿಂಗ್ ಮಾಡಿ ಬಂದಿದ್ದರಿಂದ ಸಣ್ಣದಾಗಿ ಬೇವರು ಬರುತ್ತಿತ್ತು. ಸ್ವಲ್ಪ ಹೊತ್ತು ಹೊರಗೆ ಕುಳಿತು ಒಳಗೆ ಹೋದರಾಯಿತು ಎಂದು ವರಾಂಡದ ಮೆಟ್ಟಿಲು ಮೇಲೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿರುವಷ್ಟರಲ್ಲೇ ಬಂದ ಅಕ್ಕಮ್ಮ “ಇವತ್ತೇನು ಅಡುಗೆ ಮಾಡಬೇಕ್ರಿ” ಎಂದಳು. ಅಕ್ಕಮ್ಮ ನಮ್ಮ ಮನೆ ಅಡುಗೆಯಾಕೆ. ಮಗ ಬೆಳಿಗ್ಗೆ 7.30ಕ್ಕೆ ಶಾಲೆಗೆ ಹೋಗುವನು. ಅವನು ಹೋಗುವಷ್ಟರಲ್ಲಿ ಉಂಡು ಬಾಕ್ಸಿಗೆ ಹಾಕಿಕೊಂಡು ಹೋಗಲು ಅಡುಗೆ ಸಿದ್ಧವಾಗಿರಬೇಕು. ಅವಳು ಬಂದರೆ […]

ಅರೆನಗ್ನ ಕನಸು

ಕವಿತೆ ಅರೆನಗ್ನ ಕನಸು ಕಾವ್ಯ ಎಸ್. ನಿನ್ನ ಅರೆ ಬೆಳಕಿನ ಇಬ್ಬನಿಯ ಮನೆಯಲ್ಲಿ ನಾ ಒದ್ದೆಯಾಗಿ ಒಣಗುತ್ತಿರುವಾಗ ಕೋಲ್ಮಿಂಚಂತೆ ನೀ ಹೊಕ್ಕೆ ಚಳಿಯನ್ನು ತಬ್ಬಲಿಯಾಗಿ ಹೊದ್ದಿದ್ದ ನನಗೆ ಕಣ್ಣುಗಳಿಂದ ಬಿಟ್ಟ ಇರುವೆ ಮೈಯೆಲ್ಲಾ ಸುತ್ತುತ್ತಿದೆ ನಿನ್ನ ಎದುರಿನ ಅಂತರದಲ್ಲಿ ನಾ ಮುದುಡಿದರೆ ತುಟಿಯಂಚಿನ ಮೊಗ್ಗಿನ ತಾವರೆಯು ಮುಡಿಯಲ್ಲಿ ಬಿಸಿ ಉಸಿರಿನ ತಾಪಕ್ಕೆ ಹಬ್ಬಿ ಚುಂಬನದ ಅಂಬರಕ್ಕೆ ಅರಳಿದ ಕೊಡೆಯಾಯಿತು ನಿನ್ನ ಕೆಮ್ಮಣ್ಣು ತುಟಿಯಲ್ಲಿ ನನ್ನ ರೂಪು ಬಿತ್ತಿದಾಗ ನನ್ನೊಳಗೆ ನವಿಲುಗಳು ಗುಂಪುಗಟ್ಟಿ ನೃತ್ಯವಾಡಿದ್ದವು ಹಿಡಿದೆಳೆದ ಒರಟು ರಭಸದ […]

ಗಝಲ್

ಗಝಲ್ ಎ.ಹೇಮಗಂಗಾ ನಿನ್ನ ಮನ ಪರಿತಾಪದಿ ಬೇಯುವ ಮೊದಲು ಮರಳಿಬಿಡು ನನ್ನೆಡೆಗೆಅಂತರಾಳದಿ ಕಹಿಭಾವ ಬೇರೂರುವ ಮೊದಲು ಮರಳಿಬಿಡು ನನ್ನೆಡೆಗೆ ಬಾಳದೋಣಿ ಮುನ್ನಡೆಸಲು ಹುಟ್ಟು ಹಾಕಬೇಕಿತ್ತು ಜೊತೆ ಸೇರಿಕಾಲದ ಕಡಲಲಿ ಮುಳುಗುವ ಮೊದಲು ಮರಳಿಬಿಡು ನನ್ನೆಡೆಗೆ ಹೃದಯ ನಿನಗಾಗಿ ಮಿಡಿಯುವುದನ್ನು ಈ ಕ್ಷಣಕ್ಕೂ ನಿಲ್ಲಿಸಿಲ್ಲಅಂತರದ ಕಂದಕ ಆಳವಾಗುವ ಮೊದಲು ಮರಳಿಬಿಡು ನನ್ನೆಡೆಗೆ ಅರಳಿದೊಲವ ಹೂವ ಬಿಸುಟು ನಡೆದ ನಿನ್ನ ನಡೆ ಸರಿಯೇ ಹೇಳುಕಣ್ಣೆದುರೇ ಮಣ್ಣಲಿ ಮಣ್ಣಾಗುವ ಮೊದಲು ಮರಳಿಬಿಡು ನನ್ನೆಡೆಗೆ ಪ್ರೀತಿಸುಧೆಯ ಉಂಡ ಜೀವ ವಿಷವ ಉಣಿಸಬಹುದೇ ಹೇಮ?ಕೊನೆ […]

ಪಾತ್ರೆಗಳ ಲೋಕದಲ್ಲಿ..

ಲಲಿತ ಪ್ರಬಂಧ ಪಾತ್ರೆಗಳ ಲೋಕದಲ್ಲಿ.. ಜ್ಯೋತಿ ಡಿ.ಬೊಮ್ಮಾ. ಹಬ್ಬಗಳಲ್ಲೆ ದೊಡ್ಡ ಹಬ್ಬ ದಸರಾ .ನಮ್ಮ ಉತ್ತರ ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದ ಕೆಲವು ಕಡೆ ಈ ಹಬ್ಬವನ್ನು ಅಂಬಾ ಭವಾನಿಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಪ್ರತಿಯೊಬ್ಬರ ಮನೆಗಳು ದಸರಾ ಹಬ್ಬಕ್ಕೆ ಸುಣ್ಣ ಬಣ್ಣ ಬಳಿದುಕೊಂಡು ದೇವಿಯ ಪ್ರತಿಷ್ಟಾಪನೆಗೆ ಸಜ್ಜುಗೊಳ್ಳುತ್ತವೆ. ನಾವು ಚಿಕ್ಕವರಿದ್ದಾಗ ಮನೆಗೆ ಸುಣ್ಣ ಬಣ್ಣ ಮಾಡುವ ಸಂದರ್ಭ ತುಂಬಾ ಸಂತೋಷದಾಯಕವಾಗಿರುತಿತ್ತು.ಆ ಸಂದರ್ಭ ದಲ್ಲಿ ಮನೆಯೊಳಗಿನ ಎಲ್ಲಾ ವಸ್ತುಗಳು ಅಂಗಳಕ್ಕೆ ಬಂದು ಬೀಳುತಿದ್ದವು. ಮನೆಯ ಹಿರಿಯರು ಡಬ್ಬದೊಳಗಿನ ದವಸ ಧಾನ್ಯಗಳನ್ನು ಒಣಗಿಸಿ […]

ಮೂರನೇ ಆಯಾಮ

ಅಂಕಣ ಬರಹ ಹಾಡುವ ತೊರೆಗೆ ಹಾದಿ ತೋರುವ ಕವಿತೆಗಳು ಸಂಕಲನ-ತೊರೆ ಹರಿವ ಹಾದಿಕವಿ- ವಿನಯಚಂದ್ರಬೆಲೆ-೧೨೦ಪ್ರಕಾಶನ- ವಿಶಿಷ್ಟ ಪ್ರಕಾಶನ, ಹಾಸನ   ಕವಿತೆಗಳ ಜಾಡು ಎಂತಹದ್ದು? ಅದು ಯಾವ ಹಾದಿ ಹಿಡಿದು ಹೊರಟಿರುತ್ತದೆ? ಕವಿತೆ ಅಂತರ್ಮುಖಿಯಾಗಿರಬೇಕೆ ಅಥವಾ ಬಹಿರ್ಮುಖಿಯಾಗಿರಬೇಕೆ ಎನ್ನುವ ಪ್ರಶ್ನೆ ಸದಾಕಾಲ ವಿಮರ್ಶೆಯನ್ನು ಕಾಡುತ್ತಿರುತ್ತದೆ. ಒಂದು ಕವಿತೆ ಅತ್ಯುತ್ತಮ ಅಥವಾ ಇನ್ನೊಂದು ಕವಿತೆ ಸಾಧಾರಣ ಇಲ್ಲವೆ ಈ ಕವಿತೆ ಕಳಪೆ ಎಂದು ಹೇಳುವ ಮಾನದಂಡವಾದರೂ ಯಾವುದು? ಕವಿತೆಯನ್ನು ಓದಿ ಆಸ್ವಾದಿಸಬೇಕೋ ಅಥವಾ ವಿಮಶೆಯ ನಿಕಶಕ್ಕೆ ಒಡ್ಡಿ ಒಳ್ಳೆಯ […]

ಕಂಸ…!

ಕವಿತೆ ಕಂಸ…! ಡಾ. ಅರಕಲಗೂಡು ನೀಲಕಂಠ ಮೂರ್ತಿ ಪ್ರಸ್ತಾವನೆ: ಒಬ್ಬ ದುರಾತ್ಮನ ಕ್ರೂರ ಮನಸ್ಸಿಗೆ ಅತ್ಯಂತ ಹೇಯವಾಗಿ ಬಲಿಯಾದ ಆ ಎಳೆಯ ಕಂದಮ್ಮನ ಆತ್ಮಕ್ಕೆ ಶಾಂತಿ ಕೋರಿ…ಈ ಕವನ ನನ್ನ ನಮನ! ಹಸುಳೆಯೊಂದು ಅಸುನೀಗಿದೆಒಂದು ಪೊದೆಯೊಳಗೆಅನಾಥಬೆತ್ತಲೆ –ಬೀಭತ್ಸ ಕೊಲೆಗೆ…!ಒಂದೇ ಒಂದು ದಿನವೋಒಂದು ವಾರವೋವಯಸು ಎಷ್ಟಾದರೇನು ಪಾತಕಕ್ಕೆ! ಅಚಾನಕ್ಕಾಗಿ ತಾನೆ ಅಂಬೆಗಾಲಿನಲಿನಡೆದಿರಬಹುದೇ ಪೊದೆಯೆಡೆಗೆಆ ಹಸುಳೆ?ಅಥವಾ…?ಪೊದೆಯೇನು ಬಯಲೇನುಏನಾದರೇನು ಅಸುರರೋಷಕ್ಕೆ! ಬಹುಶಃವಿಷದ ಹಾವೂ ಕೂಡ ಮರುಗಿಮುಟ್ಟದೆಭುಸುಗುಡದೆಹರಿದು ಹೋಗಿರಬಹುದು ಸುಮ್ಮನೆನಿಶಬ್ದ! ಆದರೀತ ಹಾಗಿರಲಿಲ್ಲ…ಕುದಿವ ಎಣ್ಣೆಯ ಕೊಪ್ಪರಿಗೆಯಿಂದಲೇ ನೇರಎದ್ದು ಬಂದಿದ್ದವನು!ಆ ಆಯುಧವೋ –ಒಂದೇ ಒಂದು […]

ರೈತನ ಮಗ ನಾ

ಕವಿತೆ ರೈತನ ಮಗ ನಾ ಚಂದ್ರು.ಪಿ.ಹಾಸನ ನಾನೊಬ್ಬ ನಿಮ್ಮೆಲ್ಲರ ಅಚ್ಚ ಕನ್ನಡಿಗಹಳ್ಳಿಯ ಸೀದಾ ಸಾದಾದ ಹುಡುಗಸಿಂಪಲ್ಲಾಗೈತೆ ರೀ ನನ್ನ ಲೈಫ್ ಸ್ಟೈಲುನೋವಾದ್ರೂ ಕೊಡ್ತೀನೊಂದು ಸ್ಮೈಲು ಯಾವಾಗ್ಲು ನಾನಾಗಿರ್ತೀನಿ ಮೌನಿಒಮ್ಮೊಮ್ಮೆ ಹಿಡಿತಿರ್ತೀನಿ ಲೇಖನಿಬರೆಯೋಕ್ ಕುಂತ್ರೆ ಹುಚ್ಚನಂಗಾಗ್ತೀನಿಸುಮ್ ಸುಮ್ನೆ ತೋಚಿದ್ದು ಗೀಚ್ತೀರ್ತೀನಿ ಏನೇನೋ ಹುಚ್ಚ್ ಹುಚ್ಚಾಸೆ ಇಟ್ಕೊಂಡುಸುಮ್ನಿರ್ತೀನಿ ತಲೆ ತುಂಬಾ ಕೆಡ್ಸ್ಕೊಂಡುಅಣುಕಿಸಿದವರ ಮನಸ್ನಲ್ಲೇ ಬೈಕೊಂಡುಉತ್ತರಿಸೋಕ್ಕೆ ಸಮ್ಯಾನ್ನ ಕಾಯ್ಕೊಂಡು ಹಳ್ಳಿಯ ಸೊಗಡಲ್ಲಿ ದಿಲ್ಲೀಯಾ ಕಾಣ್ತೀನಿಕೊಳ್ಳೀಯಾ ಹಿಡಿದಾದ್ರೂ ಗುರಿ ಮುಟ್ತೀನಿಸೋತೆಜ್ಜೇಗಳೊಂದೇ ಮೆಟ್ಲಾಗುಸ್ಕೊಂಡುಸಾಗ್ತೀನಿ ಎದ್ಯಾಗೊಂದ ಛಲವಿಟ್ಕೊಂಡು ದೇಸಕ್ಕೆ ಅನ್ನ ಕೊಡೋ ರೈತಾನ ಮಗಾನಾಮೋಸಕ್ತಲೆಕೊಡೋದಿಲ್ರೀ ಜಾಯ್ಮಾನಾನಂಜಿಲ್ದಾ […]

ಇದು ದುಃಖದ ಸಂಜೆ

ಅನುವಾದಿತ ಕವಿತೆ ಇದು ದುಃಖದ ಸಂಜೆ ರಘುಪತಿ ಸಹಾಯ್ ಫಿರಾಖ್ ಗೋರಖ್ ಪುರಿ ಕನ್ನಡಕ್ಕೆ : ಆರ್.ವಿಜಯರಾಘವನ್ ಇದು ದುಃಖದ ಸಂಜೆ; ಚತುರೆಯ ಆ ನೋಟವ ಕುರಿತು ಮಾತನಾಡಿಮಾದಕತೆ ಹರಡುತ್ತಿದೆ; ಈಗ ರಹಸ್ಯವ ಕುರಿತು ಏನಾದರೂ ಮಾತನಾಡಿ. ಚತುರೆಯ ಈ ಮೌನ; ಇದು ಹೃದಯದ ರಕ್ತನಾಳಗಳ ಕೀಳುತ್ತಲಿದೆಈ ಮೌನದಲ್ಲಿ, ವಾದ್ಯ ಮುರಿಯುವ ಕುರಿತು ಏನಾದರೂ ಮಾತನಾಡಿ ಹರಡುವ ಕೂದಲಿನ ಘಮಲು! ದುಃಖಕ್ಕೆ ಮುಸುಕ ಹಾಕುವ ಕಥೆ!ಮುಂಜಾನೆ ಬರುವನಕ ಅಂತಹ ವಿಷಯಗಳ ಕುರಿತು ಮಾತನಾಡಿ ಹೃದಯದ ಪ್ರತಿ ರಕ್ತನಾಳವ […]

Back To Top