Day: January 8, 2020

ಅನುವಾದ ಸಂಗಾತಿ

ಗುಂಟರ್ ಗ್ರಾಸ್ -ಜರ್ಮನ್ ಲೇಖಕ ಕನ್ನಡಕ್ಕೆ: ಕಮಲಾಕರ ಕಡವೆ ಪ್ರೀತಿ” ಇಷ್ಟು ಮಾತ್ರ:ಹಣಹೀನ ವ್ಯವಹಾರ.ಯಾವಾಗಲೂ ತೀರಾ ಕಮ್ಮಿಯಾಗುವ ಹಾಸಿಗೆ.ತೆಳು ತೆಳು ಸಂಬಂಧ. ಕ್ಷಿತಿಜದಾಚೆ ಹುಡುಕುವುದುಬಿದ್ದ ತರಗೆಲೆಗಳನ್ನು ಬೂಟಿನಿಂದ ಗುಡಿಸುವುದುಮತ್ತು ಮನಸಿನಲ್ಲಿಯೇ ನಗ್ನ ಪಾದಗಳನ್ನು ಹೊಸಕಿ ಕೊಳ್ಳುವುದು.ಕನ್ನಡಿ, ಸ್ನಾನಕ್ಕೆ ಷವರು ಇರುವ ಕೋಣೆಯಲ್ಲಿ,ಚಂದಿರನ ಕಡೆ ಮುಖ ಮಾಡಿದ ಬಾನೆಟ್ಟಿನ ಬಾಡಿಗೆ ಕಾರಿನಲ್ಲಿ,ಹೃದಯ ಕೊಟ್ಟು, ಹರಿದು ಹಾಕುವುದು;ಅಮಾಯಕತೆ ನಿಂತುತನ್ನ ಉಪಾಯಗಳ ಸುಡುವಲ್ಲೆಲ್ಲಕಳ್ಳದನಿಯ ಶಬ್ದ ಬೇರೆಯೇ ಆಗಿಧ್ವನಿಸುತ್ತದೆ, ಮತ್ತು ಪ್ರತಿ ಸಲವೂ ಹೊಸತಾಗಿ. ಇಂದು, ಇನ್ನೂ ತೆರೆದಿಲ್ಲದ ಬಾಕ್ಸ ಆಫೀಸಿನ ಎದುರುಕೈಯಲ್ಲಿ […]

ಕಥಾಗುಚ್ಛ

ಒಂದೇ ಮನಸ್ಸಿನಿಂದ ಹರೀಶ್ ಬೇದ್ರೆ ಕೈಮುಗಿದು ಕೇಳ್ತಿನಿ, ದಯವಿಟ್ಟು ಇದೊಂದು ವಿಚಾರದಲ್ಲಿ ನನ್ನ ಇಷ್ಟದಂತೆ ನಡೆಯಲು ಬಿಡು. ಚಿಕ್ಕ ಹುಡುಗಿ ಇರುವಾಗಿನಿಂದ ಈಗಿನವರೆಗೂ ನೀನು ಹೇಳಿದ್ದನ್ನೇ ಕೇಳಿರುವೆ. ಇದು ನನ್ನ ಭವಿಷ್ಯದ ಪ್ರಶ್ನೆ.  ನೀನು ಏನೇನೋ ಹೇಳಿ ನನ್ನ ಇಷ್ಟದ ವಿರುದ್ಧ ನಡೆದುಕೊಳ್ಳುವಂತೆ ಮಾಡಬೇಡ… ಆಯ್ತು, ನಾನು ಇಲ್ಲಿಯವರೆಗೆ ಏನೇ ಹೇಳಿದ್ದರೂ ಅದು ನಿನ್ನ ಒಳ್ಳೆಯದಕ್ಕಾಗಿ ತಾನೇ…?ಹೌದು, ಅದಕ್ಕೆ ನಾನು ನಿನ್ನ ಮಾತು ಕೇಳಿದೆ. ಆದರೆ ಇದೊಂದು ವಿಚಾರಕ್ಕೆ ನನ್ನ ಇಷ್ಟದಂತೆ ಬಿಡು. ಅದು ಹೇಗೆ ಸಾಧ್ಯ , ಹೊರಗೆ […]

ಕಾವ್ಯಯಾನ

ಓ ಸಖಿ! ನಿರ್ಮಲಾ ಆರ್. ಹೊಲದಾಗಿನ ಹಸಿರು ಎಷ್ಟು ಚೆಂದ ಓ ಸಖಿ ಪುರ್ರೆಂದು ಹಾರುವ ಹಕ್ಕಿ ತಿನ್ನುತ್ತಿತ್ತು ಮೆಕ್ಕೆ ತೆನೆಯ ಕುಕ್ಕಿ ಕುಕ್ಕಿ ಒಂದು ಬದಿ ಕರಿ ಎಳ್ಳಿನ ರಾಶಿ ಬಣ್ಣದ ಹೂಗಳು ನಲಿಯುತ್ತಿದ್ದವು ಕಂಪ ಸೂಸಿ ಬದುವಿನ ಹೂ ಬಳ್ಳಿ ಸ್ವಾಗತ ಮಾಡುತಿತ್ತು ತನ್ನ ತಾ ಹಾಸಿ ಪ್ರಕೃತಿಯ ಬಣ್ಣಿಸಲು ಪದಗಳಿಲ್ಲ ಸಖಿ ತಂಗಾಳಿಯು ಹಾದು ಹೋಗುತ್ತಿತ್ತು ನಮ್ಮ ಸೋಕಿ ರಾಶೀಯಲ್ಲಿನ ಎಳ್ಳು ತಿನ್ನುತ್ತಿದ್ದೆವು ಮುಕ್ಕಿ ಮುಕ್ಕಿ ಸಂಜೆಗೆ ವಿದಾಯ ಹೇಳಲು ಮೂಡುತ್ತಿತ್ತು ಆಗಸದಲಿ […]

Back To Top