ಕವಿತೆ
ರೈತನ ಮಗ ನಾ
ಚಂದ್ರು.ಪಿ.ಹಾಸನ
ನಾನೊಬ್ಬ ನಿಮ್ಮೆಲ್ಲರ ಅಚ್ಚ ಕನ್ನಡಿಗ
ಹಳ್ಳಿಯ ಸೀದಾ ಸಾದಾದ ಹುಡುಗ
ಸಿಂಪಲ್ಲಾಗೈತೆ ರೀ ನನ್ನ ಲೈಫ್ ಸ್ಟೈಲು
ನೋವಾದ್ರೂ ಕೊಡ್ತೀನೊಂದು ಸ್ಮೈಲು
ಯಾವಾಗ್ಲು ನಾನಾಗಿರ್ತೀನಿ ಮೌನಿ
ಒಮ್ಮೊಮ್ಮೆ ಹಿಡಿತಿರ್ತೀನಿ ಲೇಖನಿ
ಬರೆಯೋಕ್ ಕುಂತ್ರೆ ಹುಚ್ಚನಂಗಾಗ್ತೀನಿ
ಸುಮ್ ಸುಮ್ನೆ ತೋಚಿದ್ದು ಗೀಚ್ತೀರ್ತೀನಿ
ಏನೇನೋ ಹುಚ್ಚ್ ಹುಚ್ಚಾಸೆ ಇಟ್ಕೊಂಡು
ಸುಮ್ನಿರ್ತೀನಿ ತಲೆ ತುಂಬಾ ಕೆಡ್ಸ್ಕೊಂಡು
ಅಣುಕಿಸಿದವರ ಮನಸ್ನಲ್ಲೇ ಬೈಕೊಂಡು
ಉತ್ತರಿಸೋಕ್ಕೆ ಸಮ್ಯಾನ್ನ ಕಾಯ್ಕೊಂಡು
ಹಳ್ಳಿಯ ಸೊಗಡಲ್ಲಿ ದಿಲ್ಲೀಯಾ ಕಾಣ್ತೀನಿ
ಕೊಳ್ಳೀಯಾ ಹಿಡಿದಾದ್ರೂ ಗುರಿ ಮುಟ್ತೀನಿ
ಸೋತೆಜ್ಜೇಗಳೊಂದೇ ಮೆಟ್ಲಾಗುಸ್ಕೊಂಡು
ಸಾಗ್ತೀನಿ ಎದ್ಯಾಗೊಂದ ಛಲವಿಟ್ಕೊಂಡು
ದೇಸಕ್ಕೆ ಅನ್ನ ಕೊಡೋ ರೈತಾನ ಮಗಾನಾ
ಮೋಸಕ್ತಲೆಕೊಡೋದಿಲ್ರೀ ಜಾಯ್ಮಾನಾ
ನಂಜಿಲ್ದಾ ವಂಶ್ದಲ್ಲಿ ಹುಟ್ಟಿದ ಕೂಸು ನಾ
ಪ್ರೀತಿ ಸಂಬಂಧಕ್ಕ ಪ್ರಾಣಾನಾ ಕೊಡ್ತೀನಾ
ಹಸನಾದ ಕಾಲಬರೋದ್ಯಾರೂ ತಿಳಿದಿಲ್ರೀ
ಹುಟ್ಸೀದ ಸಿವನು ಸಟ್ಗೆ ಹುಲ್ಮೈಸೋದಿಲ್ರೀ
ಕಾಲದ್ಮುಂದೇ ನಾವೆಲ್ಲ ಯಾವ್ಯಾವ್ಲೆಕ್ಕಾರೀ
ಒಳ್ಳೇದ್ಮನಸ್ನಾಗಿಟ್ಕೊಂಡ್ ಜೀವ್ನಾನ್ಸಾಗ್ಸ್ರೀ
**********************************
ರೈತರ ಬಗ್ಗೆ ಬರೆದ ಕವನ ಚೆನ್ನಾಗಿದೆ…ಶುಭಾವಾಗಲಿ.
ಧನ್ಯವಾದಗಳು ಸರ್