Day: January 5, 2020

ಅನುವಾದ ಸಂಗಾತಿ

ಮಹಮೂದ್ ದಾರ್ವೀಶ್ ಪ್ಯಾಲೆಸ್ತಿನ್ ಕವಿ ಕನ್ನಡಕ್ಕೆ: ಕಮಲಾಕರ ಕಡವೆ ಈಗ, ನೀನು ಎಚ್ಚರಗೊಂಡಂತೆ…” ಈಗ, ನೀನು ಎಚ್ಚರಗೊಂಡಂತೆ, ಹಂಸದ ಅಂತಿಮ ನೃತ್ಯವ ನೆನಪಿಸಿಕೊ.ಕನಸಲ್ಲಿ ದೇವಕನ್ಯೆಯರೊಡನೆ ನೃತ್ಯ ಮಾಡಿದೆಯೇನು?ಗುಲಾಬಿಯ ನಿರಂತರ ಬೆಳಕಿಂದ ದಹಿಸಿದ ಚಿಟ್ಟೆ ನಿನ್ನನ್ನು ಬೆಳಗಿತೇನು?ನಿನ್ನೆದುರು ಸ್ಪಷ್ಟ ರೂಪದಲ್ಲಿ ಅವತರಿಸಿದ ಫೀನಿಕ್ಸ ಹೆಸರ ಹಿಡಿದು ನಿನ್ನ ಕರೆಯಿತೇನು?ನಿನ್ನ ಪ್ರಿಯತಮೆಯ ಬೆರಳುಗಳ ಮೂಲಕ ಬೆಳಗಾಗುವುದ ಕಂಡೆಯೇನು?ನಿನ್ನ ಕೈಯಿಂದ ಕನಸನ್ನು ಮುಟ್ಟಿದೆಯಾ ಅಥವಾನಿನ್ನದೇ ಅನುಪಸ್ಥಿತಿ ಥಟ್ಟನೆ ಅರಿವಿಗೆ ಬಂದುಅದರ ಪಾಡಿಗೆ ಕನಸುತಿರಲು ಬಿಟ್ಟೆಯಾ?ಕನಸುಗಾರರು ಕನಸುಗಳ ತೊರೆಯುವುದಿಲ್ಲಕನಸಿನೊಳಗಿನ ತಮ್ಮ ಜೀವನವನ್ನು ಅವರು […]

ಕಾವ್ಯಯಾನ

ಮಾತು-2 ಡಾ.ಗೋವಿಂದ ಹೆಗಡೆ ಮಾತು ಮಾತನಾಡುವಾಗ ಹೀಗೇನಾದರೂ ಕಿಟಕಿ ತೆರೆದುಬಿಟ್ಟಿದ್ದರೆ ಎಂಥ ಅನಾಹುತವಾಗುತ್ತಿತ್ತು ತೂರಿ ಹೋಗಿ ಕೆಳಗೆ ರಸ್ತೆಯಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವ ಚಿಣ್ಣರ ರಾಕೆಟ್ ಮೇಲೆ ಬಿದ್ದು ಆ ಕಡೆ ಈ ಕಡೆ ಹಾರಿ ಬಿದ್ದು ಹಾರಿ ಬಿದ್ದು ಹೇಗೆ ಇಳಿಯಬಹುದಿತ್ತು ಕುರ್ಚಿ ಹಾಕಿ ಮುಗುಮ್ಮಾಗಿ ಕೂತು ಈ ಮಾಗಿಯ ಇಳಿ ಹೊತ್ತು ತೆರೆದು ಕೂತು ಮಾತಿನ ಲೋಕ ಎಂಥ ವಿಚಿತ್ರ ಈ ಮಾತಿನದು ಮಾತು ಮಾತಾಗಲು ಕಂಠ ನಾಲಗೆ ತುಟಿ ಅಷ್ಟೇ ಸಾಲದು ಕಿವಿಯೂ ಬೇಕು […]

Back To Top