Day: January 3, 2020

ಅನುವಾದ ಸಂಗಾತಿ

 ವಾಷಿಂಗ್ಟನ್ ಕುಕುರ್ಟೋ ಅರ್ಜೆಂಟೀನಾದ ಕವಿ ಕನ್ನಡಕ್ಕೆ: ಕಮಲಾಕರ ಕಡವೆ ಚೆ ಗುವೆರಾನ ಮುಖ ಇದ್ದ ಮನುಷ್ಯ ಅವನು ಚೆ ಯ ಟ್ಯಾಟೂವ ತನ್ನ ತೋಳುಗಳ ಮೇಲೆ ಹೊಂದಿದ್ದಆ ಕಾಲದಲ್ಲಿ ಯಾರೂ ಟ್ಯಾಟೂ ಹಾಕಿ ಕೊಳ್ಳುತ್ತಿರಲಿಲ್ಲಆ ಕಾಲದಲ್ಲಿ ಯಾರಿಗೂ ಚೆ ಗೊತ್ತೂ ಇರಲಿಲ್ಲಹಾಗಿದ್ದಾಗ ಅವನು ಟ್ಯಾಟೂ ಹಾಕಿಸಿ ಕೊಂಡಿದ್ದ “ಯಾಕಪ್ಪಾ ಹಾಗೆ ಟ್ಯಾಟೂ ಹಾಕಿಸ್ ಕೊಂಡಿದ್ದಿ”ನನ್ನ ಅಜ್ಜಿ ಕೇಳಿದಳು, “ಒಳ್ಳೇ ಜೈಲಿಂದ್ ಹೊರ ಬಂದೋರುಹಾಕಿಸ್ಕೊತಾರಲ್ಲ ಹಾಂಗೆ”.“ಅಮ್ಮ, ಇನ್ನೇನು ನಮ್ ಲೈಫು ಅಂದ್ರೆ,ದೊಡ್ಡದೊಂದು ಜೈಲು ಅಲ್ದಿದ್ರೆ?”ಚೆ ಇನ್ನೂ ಚೆ ಆಗೋಕೆ […]

ಅಕ್ಷರದ ಅವ್ವ

ಸಾವಿತ್ರಿಬಾಯಿ ಪುಲೆ ಕೆ.ಶಿವು ಲಕ್ಕಣ್ಣವರ ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯ ‘ಅಕ್ಷರದ ಅವ್ವ’ ಸಾವಿತ್ರಿಬಾಯಿ ಪುಲೆ..! ಇಂದು ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯ ‘ಅಕ್ಷರದ ಅವ್ವ’ ಸಾವಿತ್ರಿಬಾಯಿ ಪುಲೆ ಹುಟ್ಟಿದ ದಿನ. ಆ ಕಾರಣವಾವಾಗಿ ಈ ಲೇಖನ ಸ್ಮರಣೆ… ಸಾವಿತ್ರಿಬಾಯಿ ಫುಲೆ(೧೮೩೧-೧೮೯೭)ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ. ಭಾರತದ ಮೊಟ್ಟ ಮೊದಲ ಶಿಕ್ಷಕಿ. ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು ಧರಿಸುತ್ತಿದ್ದರು ಅವರು… ಸಾವಿತ್ರಿಬಾಯಿ […]

ಕಾವ್ಯಯಾನ

ಕವಿತೆಯ ಘನತೆ ಬಿ.ಎಸ್.ಶ್ರೀನಿವಾಸ್ ಕವಿತೆಗೊಂದು ಘನತೆಯಿದೆ ಭಾವಗಳ ತೂಕವಿದೆ ಬಂಧಗಳ ಭಾರವಿದೆ ಹೃದಯದ ಪಿಸುದನಿಯಿದೆ ಕವಿತೆಗೊಂದು ಘನತೆಯಿದೆ ಕಾಣದ ಕಂಬನಿಯಿದೆ ಕೇಳಿರದಾ ರಾಗವಿದೆ ರವಿಕಾಣದ ರಸತುಂಬಿದೆ ಕವಿತೆಗೊಂದು ಘನತೆಯಿದೆ ಮೈಮರೆಸುವ ಶ್ರುತಿಲಯವಿದೆ ನೊಂದ ಮನವ ಸಂತೈಸುವ ಸಾತ್ವಿಕ ಶಕ್ತಿಯಿದೆ ಕವಿತೆಗೊಂದು ಘನತೆಯಿದೆ ಹರಿವ ನದಿಯ ಬಳುಕಿದೆ ಗರಿಗೆದರಿ ನರ್ತಿಸುವ ನವಿಲಿನ ಲಾಸ್ಯವಿದೆ ಕವಿತೆಗೊಂದು ಘನತೆಯಿದೆ ಭಕ್ತಿಯಿದೆ ವಿರಕ್ತಿಯಿದೆ ತಿಮಿರವನ್ನು ತೊಲಗಿಸುವ ಸೃಜನ ಸ್ವಯಂಪ್ರಭೆಯಿದೆ

Back To Top