ದುರಿತ ಕಾಲದ ದನಿ
ರಣ ಹಸಿವಿನಿಂದ! ಮೊನ್ನೆ ಇವರೂ ಹಲವು ಯುದ್ದಗಳ ಗೆದ್ದಿದ್ದರುಗೆದ್ದ ರಾಜ್ಯದ ಹೆಣ್ನುಗಳ ಬೇಟೆಯಾಡಿದ್ದರುಇದೀಗ ಸಾಂತ್ವಾನ ಕೇಂದ್ರಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಊರೂರುಗಳಿಗೆ ಬೆಂಕಿ ಹಚ್ಚಿದ್ದರುಉರಿದ ಮನೆಗಳಲ್ಲಿ ಹೆಂಗಸರು ಮಕ್ಕಳೆನ್ನದೆ ತಲೆ ತರೆದಿದ್ದರುಇದೀಗ ಆನಾಥಾಶ್ರಮಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಕೋವಿ ಖಡ್ಘಗಳ ಹಿಡಿದಿದ್ದರುಇದೀಗ ಧರ್ಮಗ್ರಂಥಗಳ ಪಾರಾಯಣ ಮಾಡುತ್ತಿದ್ದಾರೆ! ಮೊನ್ನೆಮೊನ್ನೆಯವರೆಗೂ ನಡೆದ ಅಕಾರಣ ಯುದ್ದಗಳಿಗೀಗಸಕಾರಣಗಳ ಪಟ್ಟಿ ಮಾಡುತ್ತ ಕೂತಿದ್ದಾರೆ ತರಿದ ತಲೆಗಳಭೋಗಿಸಿದ ಯೋನಿಗಳಕಚ್ಚಿದ ಮೊಲೆಗಳಕಲಸಿಹಾಕಿದ ಭ್ರೂಣಗಳನಿಖರ ಅಂಕಿಅಂಶಗಳಿಗಾಗಿ ತಲೆ ಕೆರೆದುಕೊಳ್ಳುತ್ತಿದ್ದಾರೆ ಪ್ರತಿ ಮನುಷ್ಯನಿಗೂಇರಬಹುದಾದ ಮೃಗದ ಮುಖವಾಡವಕಳಚಲೆತ್ನಿಸಿದಷ್ಟೂ ಗೊಂದಲವಾಗುವುದು […]
ಕಾವ್ಯಯಾನ
ನೆನೆವರಾರು ನಿನ್ನ ಮಧು ವಸ್ತ್ರದ್ ಮುಂಬಯಿ ಓ ಅಂಬಿಗಾ..ಬೇಗ ಬೇಗನೆ ಮುನ್ನೆಡೆಸು ದೋಣಿಯ.. ತೀರದಾಚೆಯ ಹಳ್ಳಿ ಹೊಲದಲಿ ಕಾಯುತಿಹನು ನನ್ನಿನಿಯ.. ಅಂಬಿಗಣ್ಣಾ ಶಾಲೆಯ ಸಮಯ ಆಯ್ತು ನಡೆ ಬೇಗ.. ಎಲವೋ ಅಂಬಿಗ ದಡದಾಚೆಯ ಜನರ ಓಟುಬೇಕು ನಡೆ ಈಗ.. ತಮ್ಮ ತಮ್ಮದೇ ಲೋಕದಲಿ ವಿಹರಿಸುತಿಹರು ಎಲ್ಲರು.. ಹೊಳೆಯ ದಾಟಿದ ನಂತರ ಬಡ ಅಂಬಿಗನ ನೆನೆವರಾರು.. ಬಿಸಿಲು ಮಳೆ ಗುಡುಗುಸಿಡಿಲು ಕತ್ತಲಾದರೆ ಸುತ್ತಲು.. ಈಜುಬಾರದವರಿಗೆಲ್ಲ ಆಧಾರ ನೀನೆ ಗುರಿ ಮುಟ್ಟಲು.. ಶಾಂತಚಿತ್ತದಿ ಹೊಣೆಯ ಹೊತ್ತಿದೆ ನಿನ್ನಯ ಬಾಗಿದ ಹೆಗಲು.. […]
ಕಾವ್ಯಯಾನ
ಪ್ರೀತಿ ಸಾಗರದಲಿ ಅವ್ಯಕ್ತ ಕಂಡೆನಾ ಸಿರಿಯ ಅಯ್ಸಿರಿಯ ಮಾಲೆ , ಮುದುಡಿದ ಮನದ ಅಂಗಳ ಅರಳುತಲಿ… ಹಚ್ಚಹಸಿರ ಹಾಸಿಗೆಯ ಮೇಲೆ , ಹೊಸದಾಗಿ ಹಾಸಿದ ಬಿಳಿ ಮೋಡಗಳ ಸಾಲೆ. ಅಲ್ಲೊಂದು ಇಲ್ಲೊಂದು ನಿಂತಿರುವ ತಲೆಗಳು, ಕಣ್ಣಾಮುಚ್ಚಾಲೆ ಆಡುತ್ತಾ ನಲಿವ ಕಿರಣಗಳು. ||೧|| ಕೈ ಚಾಚಿ ,ಆಲಂಗಿಸಿ ಕರೆಯುತಲಿ, ಹೇಳಿತೇನೋ ಪಿಸು ಮಾತುಗಳಲಿ, ಎಲ್ಲೆಲ್ಲೂ ನಾನಿರುವೆ ಹಂಚುತ ಸವಿಗಳ, ಪ್ರೀತಿ, ನೆಮ್ಮದಿ, ಸುಖಸಂತೋಷಗಳ. ||೨|| ನನ್ನಲ್ಲಿ ನೀನಿರಲು, ನಿನ್ನಲ್ಲಿ ನಾನಿರಲು ಮಿಡಿಯುವ ಕಂಗಳು, ಮನದಾಳದ ಮಾತುಗಳು, ಪೃಕ್ರತಿಯ ಪ್ರಕೃತಿ […]
ಅನುವಾದ ಸಂಗಾತಿ
ಚೇಳು ಕಡಿದ ರಾತ್ರಿ ಇಂಗ್ಲೀಷ್ ಮೂಲ:ನಿಸ್ಸಿಮ್ ಏಜೇಕಿಲ್ ಕನ್ನಡಕ್ಕೆ: ಕಮಲಾಕರ ಕಡವೆ ನೆನಪಾಗುತ್ತದೆ ನನಗೆ ಒಂದು ಚೇಳುನನ್ನ ಅಮ್ಮನ ಕಡಿದ ರಾತ್ರಿ. ಹತ್ತು ತಾಸುಗಳಕಾಲ ಜಡಿದ ಸುರಿಮಳೆ ಆ ಚೇಳನ್ನುಅಕ್ಕಿ ಮೂಟೆಯಡಿ ಓಡಿಸಿತ್ತು.ವಿಷ ಕಾರಿ ಅದು – ಅಂಧಕಾರ ತುಂಬಿದಕೋಣೆಯಲ್ಲಿ ಫಕ್ಕನೆ ಕುಣಿದ ಕುಟಿಲ ಬಾಲ –ಮತ್ತೆ ಮಳೆಯಲ್ಲಿ ಮರೆಯಾಯಿತು. ನೊಣಗಳ ಹಿಂಡಿನಂತೆ ಬಂದರು ರೈತರುಮಣಮಣಿಸುತ್ತ ನೂರು ಸಲ ದೇವರ ನಾಮಕೇಡು ಕಳೆಯಲಿ ಎಂದು ಕೇಳಿಕೊಳ್ಳುತ್ತ. ಮೊಂಬತ್ತಿ, ಲಾಟೀನುಗಳ ಹಿಡಿದುಮಣ್ಣ ಗೋಡೆಗಳ ಮೇಲೆದೈತ್ಯ ಜೇಡನಂತ ನೆರಳುಗಳ ಮೂಡಿಸುತ್ತಅವರು […]
ನಿನ್ನ ಮೌನಕೆ ಮಾತ…
ನಿನ್ನ ಮೌನಕೆ ಮಾತ….…… ಜಯಕವಿ ಡಾ.ಜಯಪ್ಪ ಹೊನ್ನಾಳಿ ನಿನ್ನ ಮೌನಕೆ ಮಾತ ತೊಡಿಸಬಲ್ಲೆನು ನಾನು ನೀ ಹೇಳದಿರೆ ಮುಗುಳು ತುಟಿಯ ತೆರೆದು..! ಹೂಗನಸುಗಳ ಬರೆದು ನಿನ್ನ ಕಣ್ಣಲೆ ಒರೆದು ಚೈತ್ರ ಚಿಗಿದಿದೆ ತಾನು; ಚಿಗರೆ ನೆರೆದು..! ಕಡಿದ ಬುಡದಲೆ ನೆನಪು ಹೊಂಬಾಳೆಯಾಗುತಿವೆ ಕತ್ತರಿಸಿದೆಡೆಯೆ; ತತ್ತರಿಸುತೆದ್ದು..! ವಿಧಿಯು ಮರೆತಿದೆ ಜಿದ್ದು ನೋವು ಸೇರಿದೆ ಗುದ್ದು ಆನಂದ ಬಾಷ್ಪಕಿದೆ ಬೆರಗ ಮುದ್ದು..! ಹೊಸ ಹಾದಿ ಹಾರೈಸಿ ಹೊಸ ಬೆಳಕು ಕೋರೈಸಿ ಹೊಸ ಜೀವ ಭಾವದಲಿ ಯುಗಳ ವಾಣಿ..! ಬೀಸಿದೆಲರಲೆ ಯಾನ […]
ಜಾತಿ ಬೇಡ
ನಿರ್ಮಲಾ ಆರ್. ಜಾತಿ ಬೇಡ” ಮಡಿ ಮಡಿ ಅಂತ ಮೂರು ಮಾರು ಸರಿಯುವಿರಲ್ಲ ಮೈಲಿಗೆಯಲ್ಲೆ ಬಂತು ಈ ಜೀವ ಎನ್ನುವುದ ಮರೆತಿರಲ್ಲ ಜಾತಿ ಬೇಡ,ಜಾತಿ ಬೇಡ ಎಂದು ಬೊಬ್ಬೆ ಹೊಡೆಯುವಿರಲ್ಲ ಜಾತಿ ಬೇಡ ಎಂದ ಮಹಾತ್ಮರನ್ನೆ ಜಾತಿಗೆ ಸೇರಿಸಿ ಮೆರೆಸುತಿರುವಿರಲ್ಲ ಪವಿತ್ರವಾದ ಜ್ಞಾನ ದೇಗುಲಗಳಲ್ಲಿ ಜಾತಿ ರಾಜಕೀಯ ಮೀಲಾಯಿಸುವಿರಲ್ಲ ಜಾತಿ ಕಾರ್ಯಗಳಿಗೆ ಮುಗ್ದ ಮನಸುಗಳ ಬಳಸಿ ಜಾತಿಯ ವಿಷಬೀಜ ಬಿತ್ತುತಿರುವಿರಲ್ಲ. ಜಾತಿ ಬೇಡ ಜಾತಿ ಬೇಡ ಎಂದು ಜಾತಿ ಗಣನೆ ಮಾಡಿಸಿ ಧರ್ಮದ ಹೆಸರಲಿ ವೋಟ್ ಬ್ಯಾಂಕಿನ […]