Day: January 6, 2020

ಕಾವ್ಯಯಾನ

ಸಂಕ್ರಾಂತಿ ಅನಿಲ್ ಕರೋಲಿ ಸಂಕ್ರಾಂತಿ ಸಡಗರ ಪ್ರೀತಿಯ ಉಡುಗೊರೆ ಹಳ್ಳಿ ಹಳ್ಳಿಯು ಹಬ್ಬವೂ ..ಹಬ್ಬವೊ.. ರೈತರ ಪ್ರತಿ ಮನೆಯಲ್ಲೂ ಸಂಭ್ರಮ ಸಾಗರ ದನ-ಕರುಗಳು ಹೊಸ ಬಗೆಯ ಶೃಂಗಾರ ರೈತರು ಸಂಕ್ರಾತಿಯಲ್ಲಿ ಬೆಳೆದ ಬೆಳಯ ನಿರೀಕ್ಷೆಯಲ್ಲಿ ಎಲ್ಲರೂ ಏಳ್ಳು-ಬೆಲ್ಲ ಹಂಚಿ ಖುಷಿಯ ಹಂಚುವರು ಹಳ್ಳಿಗಳಲ್ಲಿ ಇದೊಂದು ವಿಶೇಷ ಹಬ್ಬವು ಜಗಳ ಮನಸ್ಥಾಪ ಮಾಡಿಕೊಂಡವರನ್ನು ಒಬ್ಬರನ್ನೊಬ್ಬರು ರಾಜಿಮಾಡಿಸುವುದು ನಮ್ಮಿ ಹಳ್ಳಿ ಹಬ್ಬ ಪ್ರೀತಿಯು ಇಲ್ಲಿ ಲಭ್ಯ ಖುಷಿಯಲೇ ನಾವು ತೇಲುವೆವು ಇಂದು ========

ವಿಶ್ಲೇಷಣೆ

ಶಬ್ದ-ಅರ್ಥಗಳ ಅನುಸಂಧಾನದಲ್ಲಿ “ಶಬ್ದವೇಧಿ” ಡಾ.ಗೋವಿಂದ ಹೆಗಡೆ ಶಬ್ದ-ಅರ್ಥಗಳ ಅನುಸಂಧಾನದಲ್ಲಿ “ಶಬ್ದವೇಧಿ” ವಸ್ತುವೈವಿಧ್ಯ,ಲಯ-ಛಂದೋ ವೈವಿಧ್ಯಗಳನ್ನು ವಿಪುಲವಾಗಿ ತಮ್ಮ ಕಾವ್ಯ ಕ್ರಿಯೆಯಲ್ಲಿ ತಂದ ನಮ್ಮ ಕವಿಗಳಲ್ಲಿ ಡಾ. ಎಚ್ಎಸ್ ವೆಂಕಟೇಶಮೂರ್ತಿ ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಪರಂಪರೆಯೊಡನೆ ಅನುಸಂಧಾನದ ರೀತಿ ಅವರದು ಎನ್ನುವ ಕೆ ವಿ ತಿರುಮಲೇಶ್ “ಅವರು ಕನ್ನಡದ ಕಾವ್ಯ ಧಾತುವಿಗೆ ಅಂಟಿಕೊಂಡಿರುವ ಕವಿ” ಎಂದು ಗುರುತಿಸುತ್ತಾರೆ. ‘ಈ ಅನುಸಂಧಾನದ ಒಂದು ಎಳೆ ಎಂದರೆ ಛಂದಸ್ಸಿನ ಬಗ್ಗೆ ಅವರಿಗಿರುವ ಮೋಹ.. ಅವರು ಛಂದೋಬದ್ಧವಾಗಿ ಬರೆಯದಿದ್ದರೂ ಛಂದಸ್ಸನ್ನು ಧಿಕ್ಕರಿಸಿಯೂ ಬರೆದಿಲ್ಲ’ ಎಂಬುದು […]

ಕಾವ್ಯಯಾನ

ಸಾಕು ಬಿಡು ಸಖಿ ಬಸವರಾಜ ಜಿ ಸಂಕನಗೌಡರ ಸೂರ್ಯ ಚಂದ್ರರಿಬ್ಬರನೂ ಮಧುಶಾಲೆಯಲೇ ಕಾಣುತ್ತಿರುವೆ ಸಾಕು ಬಿಡು ಸಖಿ . ನನ್ನೆದೆಯ ನೋವ ನೀ ಸುರಿಸೋ ಕಣ್ಣೀರು ತಣ್ಣಗಾಗಿಸಲಾರದು ಸಾಕು ಬಿಡು ಸಖಿ ಊರ ಮುಂದಿನ ಅಗಸಿ ಕಲ್ಲು ನೀ ಹೋದದ್ದಕ್ಕೆ ಸಾಕ್ಷಿ ಕೊಟ್ಟಿದೆ. ಮತ್ತೇಕೆ ಕನಸಲಿ ಕಾಡುವೆ ಸಾಕು ಬಿಡು ಸಖಿ. ನೀ ಬರುವ ಹಾದಿಗೆ ಬೇಲಿ ಬೆಳೆದಿದೆ. ನಾನೀಗ ಮಧುಶಾಲೆಯ ಖಾಯಂ ಗಿರಾಕಿ ಕಾಡಬೇಡ ಸಾಕು ಬಿಡು ಸಖಿ ಡೋಲಿಯಲಿ ಮಲಗಿದ ಹೆಣದ ಮೇಲೆ ನೀ […]

ಪ್ರಸ್ತುತ

ಬುದ್ದಿಗೆ  ಹಿಡಿದ  ಗ್ರಹಣದ   ಬಿಡುಗಡೆ  ಎಂತು? ಗಣೇಶಭಟ್ ಶಿರಸಿ ಬುದ್ದಿಗೆ  ಹಿಡಿದ  ಗ್ರಹಣದ   ಬಿಡುಗಡೆ  ಎಂತು?    ಕಳೆದ ವಾರ ಅಂದರೆ 26-12-2019  ರಂದು  ನಡೆದ  ಅಪೂರ್ವ ನೈಸರ್ಗಿಕ ವಿದ್ಯಮಾನ ಸೂರ್ಯಗ್ರಹಣ ಹಲವರ  ಕಣ್ತುಂಬಿಸಿದರೆ,  ಹಲವರು ಭಯದಿಂದ  ಕುಗ್ಗಿ ಹೋದರು. ಸೂರ್ಯನಿಗೆ  ಗ್ರಹಣದಿಂದ  ಬಿಡುಗಡೆ   ದೊರಕಿದರೂ ಜನರ ಬುದ್ಧಿಗೆ  ಹಿಡಿದ  ಗ್ರಹಣ  ಬಿಡುವ ಸೂಚನೆಗಳು ಕಾಣುತ್ತಿಲ್ಲ.   ಆಕಾಶ ಕಾಯಗಳ  ಕುರಿತು,  ಅವುಗಳ ಚಲನೆಯ  ಬಗ್ಗೆ  ಏನೂ ತಿಳಿದಿರದ ಕಾಲಘಟ್ಟದಲ್ಲಿ  ಅಂದರೆ ಸಾವಿರಾರು ವರ್ಷಗಳ ಹಿಂದೆ, ಪ್ರಕೃತಿಯ  ಜೊತೆ […]

Back To Top