Day: January 30, 2020

ಇತರೆ

“ಕಲ್ಲಂಗಡಿ ಹಣ್ಣಿನ ಪೂಜೆ” ತಾರಾ ಸತ್ಯನಾರಾಯಣ ನನ್ನ ಮದುವೆಯಾಗಿದ್ದ ಹೊಸದು ಮದುವೆಯಾಗಿ ಹದಿನೈದು ದಿನಕ್ಕೆ ಯುಗಾದಿ ಹಬ್ಬ ಬಂತು ಹಬ್ಬಕ್ಕೆ ನಮ್ಮಿಬ್ಬರನ್ನು ಕರೆದುಕೊಂಡು ಹೋಗಲು ನನ್ನ ಅಣ್ಣ ಬಂದ ಇವರಿಗೆ ಆಫೀಸಿನ ಕೆಲಸದ ನಿಮಿತ್ತ ಚೆನ್ನೈಗೆ ಹೋಗಬೇಕಾದ್ದರಿಂದ ಇವರು “ನಾನು ಬರಲು ಸಾಧ್ಯವಿಲ್ಲ ನೀನು ಹೋಗಿ ಬಾ “ಎಂದು ಹೇಳಿದರು. ನಾನು ಅಣ್ಣನ ಜೊತೆ ತವರಿಗೆ ಹೋದೆ.ಹಬ್ಬ ಮುಗಿಸಿಕೊಂಡು ಅಣ್ಣನ ಜೊತೆ ಗಂಡನ ಮನೆಗೆ ಹೊರಟೆ .ನಾನು ಹೋಗುವ ಹಿಂದಿನ ದಿನ ಅವನ ಫ್ರೆಂಡ್  ತೋಟದಿಂದ ಒಂದೆರಡು […]

ಕಾವ್ಯಯಾನ

ಅನುವಾದ ಸಂಗಾತಿ ಮೂಲ: ರಾಲ್ಫ ಯಾಕೊಬ್ಸೆನ್(ನಾರ್ವೆ ಕವಿ) ಕನ್ನಡಕ್ಕೆ: ಕಮಲಾಕರ ಕಡವೆ “ಸೂಕ್ಷ್ಮ ಸೂಜಿಗಳು” ತುಂಬಾನೇ ಸೂಕ್ಷ್ಮ ಈ ಬೆಳಕು.ಮತ್ತದು, ಇರುವುದು ಸಹ ಭಾಳ ಕಮ್ಮಿ. ಕತ್ತಲೋಬೃಹತ್ತರವಾದುದು.ಕೊನೆಯಾಗದ ರಾತ್ರಿಯಲ್ಲಿಸೂಕ್ಷ್ಮ ಸೂಜಿಯಂತೆ ಈ ಬೆಳಕು,ಮತ್ತದಕ್ಕೆ ಎಷ್ಟು ದೂರ ಕ್ರಮಿಸಬೇಕಿದೆಈ ಪಾಳು ಜಾಗದಲ್ಲಿ. ಎಂದೇ ಅದರೊಡನೆ ನಯವಾಗಿ ವರ್ತಿಸೋಣಆರೈಕೆ ಮಾಡೋಣ.ಮತ್ತೆ ಮುಂಜಾನೆ ತಿರುಗಿ ಅದು ಬರಲೆಂದುಹಾರೈಸೋಣ.********** “Just Delicate Needles” It’s so delicate, the light.And there’s so little of it. The darkis huge.Just delicate […]

ಇತರೆ

ಎಲ್ಲಿ ಕಳೆದು ಹೋಯಿತು ಆ ಜಾತ್ರೆಯ ಸೊಬಗು ಬಿದಲೋಟಿ ರಂಗನಾಥ್ ಎಲ್ಲಿ ಕಳೆದು ಹೋಯಿತು ಆ ಜಾತ್ರೆಯ ಸೊಬಗು ಅದು ಎಂಬತ್ತರ ದಶಕ ಬಂದ ಫಸಲನ್ನು ಕೂಡಿಟ್ಟು ಮನೆಗೊಯ್ದು ಅವರೆ ಸೊಗಡನು ಬಿಡಿಸುವ ಕಾಲ, ಇನ್ನೂ ಕ್ಯಾಮೇನಹಳ್ಳಿ ಜಾತ್ರೆ ತಿಂಗಳಿರುವಾಗಲೇ , ಕೂಲಿ ನಾಲಿ ಮಾಡಿ ಬಂದ ಸಣ್ಣ ಕಾಸಿನಲ್ಲೇ ಮಕ್ಕಳಿಗೆ ಬಟ್ಟೆ ತರುವ ಅಪ್ಪನ ಇರಾದೆ. ವಾರದ ಮುಂಚೆಯೇ ಸಂತೆ ಬಟ್ಟೆ ತಂದು ಪೆಟಾರಿಯಲ್ಲಿ ಬಚ್ಚಿಡುವ ಪ್ರೀತಿ.ಅದರಲ್ಲು ಮೂವರು ಮಕ್ಕಳಿಗೂ ಒಂದೆ ತರಹದ ಬಣ್ಣ ಬಣ್ಣದ […]

ಕಾವ್ಯಯಾನ

ಗಝಲ್ ರುಕ್ಮಿಣಿ ನಾಗಣ್ಣವರ ನೀ ಬರುವ ದಾರಿಯಲಿ ಕಂಗಳಿರಿಸಿ ಕಾಯುತಿರೆ ಕಾತುರದಿ ಸಂಧಿಸಲು ಬೇಗ ಬಾ ಕಾಣದ ನಿನ್ನನು ಹೊಳೆದಂಡೆಯೂ ಕೂಗುತಿರೆ ದಡಬಡಿಸಿ ಸಂತೈಸಲು ಬೇಗ ಬಾ ತುಟಿ ಮೇಲೆ ತರದ ಥರಥರ ಹೊಸಥರದ ಯೋಚನೆ ನೂರು ಪಟ್ಟಿ ಮಾಡಿರುವೆ ಎದುರು ಬದುರು ಕೂತು ಚರ್ಚಿಸಿ ನಾಳೆಗೊಂದ ಹೊಸಗನಸ ನೇಯಲು ಬೇಗ ಬಾ ಹೊತ್ತುಗಳೆಯಲರಿಯದ ಇಂದ್ರಿಯಗಳು ವಿರಹದಾಗ್ನಿಯಲಿ ಬೆಂದು ಚಡಪಡಿಸುತಿರೆ ಅಂಗೈಲ್ಹಿಡಿದ ಹರಳುಗಳು ಸಜೆ ಅನುಭವಿಸುತಿವೆ ಬಿಡುಗಡೆಗೊಳಿಸಲು ಬೇಗ ಬಾ ಹೃದಯಗೂಡಿನ ಬೆಚ್ಚನೆ ಭಾವಗಳು ನಿನಗಾಗಿ ಹಪಹಪಿಸಿ […]

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಎದೆಕದದ ಅಗುಳಿ ತೆಗೆದಂತೆ ಅದೊಂದು ಹಾಡು ಮತ್ತಕಡಲಲಿ ಮುಳುಗಿದಂತೆ ಅದೊಂದು ಹಾಡು ಚಿಟ್ಟೆಗಳ ಹಿಂಬಾಲಿಸುತ್ತ ಪರವಶ ಹುಡುಗ ಪುಲಕಗಳೆ ಬೊಗಸೆಗಿಳಿದಂತೆ ಅದೊಂದು ಹಾಡು ಸಂತೆಯ ಝಗಮಗಗಳಿಗೆ ಕಣ್ಣು ತೆತ್ತು ಪೋರಿ ಬಯಕೆಗಳಿಗೆ ಹರಯ ಬಂದಂತೆ ಅದೊಂದು ಹಾಡು ಕೋಲೂರಿ ತಡವರಿಸಿ ನಡೆದು ಇಳಿಸಂಜೆಗೆ ನೆನಪಮಡುವಲಿ ಮಿಂದಂತೆ ಅದೊಂದು ಹಾಡು ಸವೆದ ಜಾಡುಗಳ ಸವೆಸಿ ತಿರುಗಣಿ ಬದುಕು ‘ವಿಶು’ ನಡುವೆ ಕಾಡುವ ಕೊಳಲುಲಿಯಂತೆ ಅದೊಂದು ಹಾಡು ************

Back To Top