ಕಾವ್ಯಯಾನ
ಗಾಳಿಯ ಉತ್ಸವ ಪ್ರೇಮಶೇಖರ ಗಕ್ಕನೆ ಹಾರಿ ಗಬಕ್ಕನೆ ಹಿಡಿದು ನುಂಗೇಬಿಟ್ಟಿತು ನಮ್ಮೂರ ಕೆರೆಯ ಮೀನೊಂದನು ಸಾವಿರ ಸಾವಿರ ಮೈಲು ದೂರದ ಸೈಬೀರಿಯಾ ದಿಂದ ಹಾರಿ ಬಂದು ಬೆಳ್ಳಂಬೆಳಿಗ್ಗೆ ಕೆರೆ ಏರಿ ಮೇಲಿನ ಅರಳೀಮರದ ಕೊಂಬೆಯೇರಿ ಕೂತ ಸ್ವಾಲೋ ಹಕ್ಕಿಯೊಂದು. ಇಂದು ನವೆಂಬರ್ ಒಂದು. ತುರ್ತಾಗಿ ಹೋಗ ಬೇಕಿದೆ ನಾನೀಗ ರಾಜ್ಯೋತ್ಸವದಾಚರಣೆಗೆ, ನನಗಾಗಿ ಕಾದು ನಿಂತಿದೆ ಕಾರ್ಯಕರ್ತನ ಬೈಕು, ಕೂಗಿ ಕರೆಯುತ್ತಲೂ ಇದೆ ಮೈಕು. ಭದ್ರವಾಗಿದೆ ನನ್ನ ಜೇಬಿನಲಿ ಭಾಷಣದ ಹಾಳೆ, ಸಿಕ್ಕಿನಿಂತಿದೆ ನನ್ನ ಗಂಟಲಲಿ ಸ್ವಾಲೋ ನುಂಗಿದ […]
ಕಾವ್ಯಯಾನ
ಕ್ಷಮಿಸದಿರಿ ಸಂಕಟಗಳನ್ನು ಕವಿತೆ ಮಾಡುವುದು ಕ್ರೂರ ಅನ್ನಿಸಿ ಎಷ್ಟೋ ಸಲ ಸುಮ್ಮನಾಗುತ್ತೇನೆ.. ಇದು ಕವಿತೆಯಲ್ಲ; ಒಡಲ ಉರಿ. ವಿಜಯಶ್ರಿ ಹಾಲಾಡಿ ಆಸ್ಟ್ರೇಲಿಯಾದ ಕಾಳ್ಗಿಚ್ಚಿಗೆಬೆಂದ ನರಳಿದ ನೊಂದಅಳಿಲುಗಳೇ ಮೊಲಗಳೇಜಿಂಕೆಗಳೇ ನವಿಲುಗಳೇಹುಲಿ ಚಿರತೆ ಹಾವುಗಳೇಕ್ರಿಮಿ ಕೀಟ ಜೀವಾದಿಗಳೇಮರ ಗಿಡ ಪಕ್ಷಿಗಳೇಕೆಲಸಕ್ಕೆ ಬಾರದ’ ಕವಿತೆ’ಹಿಡಿದು ನಿಮ್ಮೆದುರುಮಂಡಿಯೂರಿದ್ದೇನೆಕ್ಷಮಿಸದಿರಿ ನನ್ನನ್ನುಮತ್ತುಇಡೀ ಮನುಕುಲವನ್ನು ಹಸಿರು ಹೂವು ಚಿಗುರೆಂದುಈ ನೆಲವನ್ನು ವರ್ಣಿಸುತ್ತಲೇಕಡಿದು ಕೊಚ್ಚಿ ಮುಕ್ಕಿಸರ್ವನಾಶ ಮಾಡಿದ್ದೇವೆಇಷ್ಟಾದರೂಹನಿ ಕಣ್ಣೀರಿಗೂ ಬರಬಂದಿದೆನಮ್ಮ ನಮ್ಮ ಲೋಕಗಳುಮಹಲುಗಳನ್ನು ನಾವಿನ್ನೂಇಳಿದಿಲ್ಲ ಇಳಿಯುವುದೂ ಇಲ್ಲಕ್ಷಮಿಸಲೇಬೇಡಿ ಕೊನೆಗೊಂದು ಅರಿಕೆಪ್ರಾಣಿಪಕ್ಷಿಗಳೇಮತ್ತೊಂದು ಜನ್ಮವಿದ್ದರೆ ನನಗೆದಯಮಾಡಿ ನಿಮ್ಮ ಸಂಕುಲಕ್ಕೆಕರೆದುಕೊಳ್ಳಿ- ಇಲ್ಲವೆಂದಾದರೆನಿಮ್ಮ ಪಾದ […]
ಅನುವಾದ ಸಂಗಾತಿ
ಜಾನ್ ಆಶ್ಬರಿ ಅಮೇರಿಕಾ ಕವಿ ಕನ್ನಡಕ್ಕೆ: ಕಮಲಾಕರ ಕಡವೆ “ಒಳ ಬರುವ ಮಳೆ” ಅಟ್ಟದಲ್ಲಿ ಹಸನು ಉದ್ದಿಟ್ಟ ಬ್ಲಾಕ್ ಬೋರ್ಡು. ತಾರೆಗಳ ಬೆಳಕನ್ನು ಈಗ ಗಟ್ಟಿಯಾಗಿಸಿದೆ ಗಾಳಿ. ಯಾರಿಗಾದರೂ ಕಾಣಸಿಗುತ್ತೆ. ಯಾರಿಗಾದರೂ ಗೊತ್ತಾಗುತ್ತೆ. ಈ ಮಹಾನ್ ಗ್ರಹದ ಮೇಲೆಲ್ಲಾದರೂ ಸತ್ಯವ ಕಂಡುಕೊಂಡರೆ – ಒಂದು ತುಂಡು, ಬಿಸಿಲಲ್ಲಿ ಒಣಗಿಸಿದ್ದು – ತನ್ನದೇ ಅಪಖ್ಯಾತಿ ಮತ್ತು ದೈನ್ಯತೆಯಲ್ಲಿ ಅದು ಹುಲ್ಲು ಕಡ್ಡಿಯ ಆಧಾರದಲ್ಲಿ ಇರುತ್ತೆ. ಯಾರೂ ಉದ್ದಾರವಾಗಲಾರರು, ಆದರೂ ಪರಿಸ್ಥಿತಿ ಇನ್ನೂ ಎಷ್ಟು ಹದಗೆಡಲು ಸಾಧ್ಯ? ಮುಂದುವರಿಯಲಿ ಆಟ, […]
ಕುಮಾರವ್ಯಾಸ ಜಯಂತಿ
ಕನ್ನಡ ಸಾಹಿತ್ಯದ ದಿಗ್ಗಜ ಕುಮಾರವ್ಯಾಸ..! ಕೆ.ಶಿವು ಲಕ್ಕಣ್ಣವರ ದಿನಾಂಕ ೯ ಕುಮಾರವ್ಯಾಸನ ಜಯಂತಿ. ಆ ನಿಮಿತ್ತವಾಗಿ ಕುಮಾರವ್ಯಾಸ ಕುರಿತು ಈ ಲೇಖನ… ಕುಮಾರವ್ಯಾಸ (ಕ್ರಿ.ಶ. ೧೩೫೦-೧೪೦೦) ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. “ಗದುಗಿನ ನಾರಾಯಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ […]