Category: ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಿರುತ್ತರ : ಒಂದು ಅವಲೋಕನ

ಹೀಗೆ ನಿರುತ್ತರದಲ್ಲಿ ಬದುಕಿನ ಪ್ರಶ್ನೆಗಳಿಗೆ ಹಲವು ಉತ್ತರಗಳಿವೆ. ಕೆಲ ಕವಿತೆಗಳು ತಾತ್ವಿಕವಾಗಿವೆ. ಗ್ರಾಮೀಣ ಮಹಿಳೆಯ ಬದುಕಿನ ಏರಿಳಿತಗಳ ತೂಗಿಸಿಕೊಂಡು ಹೋಗುವ ಒಳನೋಟ ಸಂಗೀತ ಅವರ ಕವಿತೆಗಳಲ್ಲಿ ಕಾಣಸಿಗುತ್ತದೆ

ಮಾತು ಮೀಟಿ ಹೋಗುವ ಹೊತ್ತು

ಕೊಡಗಿನ ಕಾನನದ ಮಡಿಲೊಳಗಿದ್ದುಕೊಂಡು ಯಾವ ವಾದ-ಪಂಥಗಳಿಗೂ ಪಕ್ಕಾಗದೆ, ಆಪ್ತವೆನಿಸುವಂತಹ ತಮ್ಮದೇ ಶೈಲಿ, ಭಾಷೆ, ತಂತ್ರ ಮತ್ತು ರೂಪಕಗಳನ್ನು ಕಂಡುಕೊಳ್ಳುತ್ತಾ ಕಾವ್ಯ ಕೃಷಿ ಮಾಡುತ್ತಿದ್ದಾರೆ ಸ್ಮಿತಾ. ಹೀಗೆಯೇ ಕಾವ್ಯದ ಸುಗ್ಗಿಯಾಗಿ ಅವರು ಸಾಹಿತ್ಯ ಶಿಖರದ ಉತ್ತುಂಗಕ್ಕೇರಲಿ ಎಂಬುದು ಓದುಗರ ಆಶಯ.

ವೀರ ಸಿಂಧೂರ‌ಲಕ್ಷ್ಮಣ

ಯಾವು ಯಾವುದೋ ಹಾಡುಗಾರರ ದನಿಗಳಲ್ಲಿ ಅವರು ಬರೆದಿಟ್ಟ ಚೋಪಡಿ ಪುಸ್ತಕಗಳಲ್ಲಿ ಉಳಿದು ಹೋಗುತ್ತಿದ್ದ ಇಂಥ ಮೌಲಿಕ ವಿಷಯವನ್ನು ಹೆಕ್ಕಿ ತಗೆದು ನಮ್ಮ ಮುಂದಿನ ಯುವ ಪೀಳಿಗೆಗೆ ಒಬ್ಬ ಕ್ರಾಂತಿಕಾರಿ ದೇಶಭಕ್ತನ ಜೀವನವನ್ನು ಅನಾವರಣಗೊಳಿಸಿದ ಸಂಶೋಧಕ ಡಾ.ಚಂದ್ರು ತ಼ಳವಾರ ಅವರು ಅಭಿನಂದನೀಯರಾಗಿದ್ದಾರೆ.

ಯಮನ ಸೋಲು

ಪುಸ್ತಕ ಸಂಗಾತಿ ಯಮನ ಸೋಲು    ಕುವೆಂಪು ಅವರ ಪ್ರಸಿದ್ದ ನಾಟಕಗಳಲ್ಲಿ ಒಂದು ಪುರಾಣದ ಕಥೆಯನ್ನು ಪಡೆದು ಅದನ್ನು ರಮ್ಯವಾಗಿ ನಿರೂಪಿಸುವ ಅವರ ಶೈಲಿಗೆ ಇನ್ನೊಂದು ನಿದರ್ಶನ.ಮಹಾಕವಿಯೊಬ್ಬ ತನ್ನ ಕೃತಿಗಾಗಿ ಮಹಾಕಾವ್ಯಗಳನ್ನು ಅವಲಂಬಿಸಿ ಅಲ್ಲಿಯ ಕಥೆಯನ್ನು ಸ್ವೀಕರಿಸಿದರೂ ಅದನ್ನು ತನ್ನದೆನ್ನುವಂತೆ ಮರ಼ಳಿ ನಿರೂಪಿಸುವ ಮಹಾಕವಿ ಪ್ರತಿಭೆಗೆ ಈ ನಾಟಕವೂ ಒಂದು ಉದಾಹರಣೆ.ಜಗದಲ್ಲಿ ಪಾತಿವ್ರತ್ಯದಂತಹ ಧರ್ಮ ಇನ್ನೊಂದಿಲ್ಲ . ಯಮ ಕೂಡ ಆ ಧರ್ಮಕ್ಕೆ ಸೋಲುತ್ತಾನೆ ಎಂಬ ಸತ್ಯವನ್ನು ಸಾರಲು ಈ ಕಥೆ ನಿರೂಪಿತವಾಗಿದೆ. ಸಾವನ್ನೇ ಸೋಲಿಸಿ ಗಂಡನನ್ನುಳಿಸಿಕೊಂಡ […]

ಬದರ್ ಪುಸ್ತಕದ ವಿಶ್ಲೇಷಣೆ

ಈ ಲೋಕದ ನಿಸ್ವಾರ್ಥತೆಗೆ ಪಠ್ಯವಾಗಿರುವವಳೇ ಹೆಣ್ಣು. ಭೂಮಿಗೆ ಬಿದ್ದ ಫಲ ಕೊಡಲೇಬೇಕು. ಅಂತೆಯೇ ಈ ಲೋಕದ ಉತ್ಪಾದಕತೆಯ ಶಕ್ತಿ ಇರುವುದು ಹೆಣ್ಣಿನಲ್ಲಿ ಮಾತ್ರ. ಆದ್ದರಿಂದ ಮಡದಿಯನ್ನು, ತಾಯಿಯನ್ನು, ಹೆಣ್ಣನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಾಗಿದೆ.

ಬಿಳಿಯ ಬಾವುಟ ಹಿಡಿದ ಕವಿತೆಗಳು

ಪುಸ್ತಕ ಸಂಗಾತಿ            ಶಾಂತಿ- ಪ್ರೀತಿಯ ಬಿಳಿಯ ಬಾವುಟ ಹಿಡಿದ ಕವಿತೆಗಳು ಕವಿತೆ ಅಂತರಂಗದ ಕನ್ನಡಿ ಆಗುವಷ್ಟರ ಮಟ್ಟಿಗೆ ಸಾಹಿತ್ಯದ ಇನ್ನ್ಯಾವ ಪ್ರಕಾರವೂ ಆಗುವುದಿಲ್ಲ ಎಂಬ ಮಾತು ಕವಿಯತ್ರಿ ಕವಿತಾ ಕುಸುಗಲ್ಲರ ’ಬೆಳಕಿನ ಬಿತ್ತನೆ’ ಕವನ ಸಂಕಲನ ಓದಿದಾಗ ತಟ್ಟಂತ ನೆನಪಾಯಿತು. ಡಾ.ಕವಿತಾ ಕುಸುಗಲ್ಲ ಅವರ ಮೂರನೆಯ, ಒಂದು ರೀತಿಯ ವಿಭಿನ್ನವಾದ ಸಂಕಲನವಿದು. ಈ ಸಂಕಲನದಲ್ಲಿ ಅವರು ನಾನು, ನೀನು, ಆನು, ತಾನು ಎಂದು ನಾಲ್ಕು ಭಾಗಗಳಾಗಿ ಮಾಡಿಕೊಂಡು ಒಂದೊಂದು ಭಾಗದಲ್ಲಿ ಮಹಿಳೆಯಾಗಿ ಮಗ, ಮಗಳು, ಗಂಡನನ್ನು […]

ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು

ಪುಸ್ತಕ ಸಂಗಾತಿ ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು ಈಗಾಗಲೇ ಆರು ಕೃತಿಗಳನ್ನು ಬರೆದಿರುವ ಅಕ್ಷತಾ ಕೃಷ್ಣಮೂರ್ತಿ ನಾಡಿಗೆ ಚಿರಪರಿಚಿತರು. ನಾನು ದೀಪ ಹಚ್ಚಬೇಕೆಂದಿದ್ದೆ ಇವರ ಏಳನೇ ಪುಸ್ತಕ. ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ ಪಡೆದ ಕೃತಿ ಇದು. ಅಂಕಣ, ವ್ಯಕ್ತಿಚಿತ್ರ, ವಿಮರ್ಶೆ, ಸಂಪಾದನೆ, ಕವಿತೆ ಹೀಗೆ ಅಕ್ಷತಾ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.  ೪೨ ಕವಿತೆಗಳ ಈ ಸಂಕಲನದಲ್ಲಿ ಮಕ್ಕಳ ಕವನಗಳು ಇವೆ. ನನ್ನ `ವಿಷಕನ್ಯೆ’ಯ `ಅವನು’ ಇಲ್ಲಿಯೂ ಪ್ರಧಾನವಾಗಿರುವುದು ನನಗೆ ಖುಷಿಯೆನಿಸಿತು. ಹರೆಯದ […]

ಬದರ್

ಪುಸ್ತಕ ಸಂಗಾತಿ ಬದರ್ (ಅಬಾಬಿಗಳ ಸಂಕಲನ) ಮೂಲ ಲೇಖಕರ ಪರಿಚಯ ಇವರ ಪೂರ್ಣ ಹೆಸರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ ಇಸವಿಯಲ್ಲಿ ಮುಸ್ಲಿಂ ಬರಹಗಾರರ ಸಂಘವನ್ನು ಸ್ಥಾಪಿಸಿ ವ್ಯವಸ್ಥಾಪಕರಾಗಿ ಮುಸ್ಲಿಂ ಸಾಹಿತಿಗಳನ್ನು ಒಂದೇ ವೇದಿಕೆಗೆ ಕರೆದುತರುವ ಮಹತ್ವವಾದ ಕಾರ್ಯಕ್ಕೆ ನಾಂದಿ ಹಾಡಿದರು. ಪ್ರಗತಿಪರ ಮುಸ್ಲಿಂ ಬರಹಗಾರರಾಗಿ ಇವರು ಜನಮಾನಸವನ್ನು ಸೂರೆಗೊಂಡಿದ್ದಾರೆ. ಕೆಳ ಮತ್ತು ಮಧ್ಯಮ ವರ್ಗದ […]

ಒಳಿತಿನ ಉಣಿಸಿನ ಕಥೆಗಳು…

ಪುಸ್ತಕ ಸಂಗಾತಿ ಒಳಿತಿನ ಉಣಿಸಿನ ಕಥೆಗಳು… “ಚಮತ್ಕಾರಿ ಚಾಕಲೇಟ” “ಚಮತ್ಕಾರಿ ಚಾಕಲೇಟ” ಮಕ್ಕಳ ಕಥಾಸಂಲನ.ಲೇಖಕರು: ಸೋಮು ಕುದರಿಹಾಳ.ಬೆಲೆ:100ರೂ.ಪ್ರಕಟಣೆ:2020.ಪ್ರಕಾಶಕರು: ತುಂಗಾ ಪ್ರಕಾಶನ ಚಂದಾಪುರ. ಗಂಗಾವತಿ.9035981798 ಸೋಮು ಕುದರಿಹಾಳ ಮಕ್ಕಳ ಪ್ರೀತಿಯ ಶಿಕ್ಷಕರಾಗಿ ನಮಗೆಲ್ಲಾ ಪರಿಚಿತರು. ಅವರನ್ನು ನಾನಿನ್ನೂ ಮುಖತಹ ಭೆಟ್ಟ ಆಗಿಲ್ಲವಾದರೂ ಅವರ ಬರಹ, ಅವರು ಶಾಲೆಯಲ್ಲಿ ನಡೆಸುತ್ತಿರುವ ಪ್ರಯೋಗಗಳು. ಒಂದು ಪುಟ್ಟ ಸರಕಾರಿ ಶಾಲೆಯನ್ನು ಮಕ್ಕಳ ಎಲ್ಲ ಒಳಿತಿನ ಕಡೆಗೆ ಅಣಿಗೊಳಿಸುತ್ತಿರುವ ರೀತಿ ಎಲ್ಲ ಗಮನಿಸುತ್ತ ಅವರ ಸ್ನೇಹದ ವರ್ತುಲದಲ್ಲಿ ನಾನೂ ಸೇರಿ ಹೋಗಿದ್ದೇನೆ. ಅವರು ಈಗ […]

ರಾಗವಿಲ್ಲದಿದ್ದರೂ ಸರಿ

ಪುಸ್ತಕ ಸಂಗಾತಿ ರಾಗವಿಲ್ಲದಿದ್ದರೂ ಸರಿ ಕೃತಿ…..ರಾಗವಿಲ್ಲದಿದ್ದರೂ ಸರಿ   ಗಜಲ್ ಸಂಕಲನ ಲೇಖಕರು.‌.‌‌‌‌ಉಮರ್ ದೇವರಮನಿ ಪ್ರಕಾಶಕರು…….ಸಮದ್ ಪ್ರಕಾಶನ  ಮಾನವಿ ಜಿ.ರಾಯಚೂರು * ಉಮರ್ ದೇವರಮನಿ ಇವರು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಮಾನವಿ ನಗರದ ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಇಂಗ್ಲಿಷ್ ಭಾಷಾ  ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸ ಕರಾಗಿದ್ದರೂ ಪ್ರವೃತ್ತಿಯಲ್ಲಿಸಾಹಿತಿಗಳಾಗಿದ್ದಾರೆ.ಮೂರು ವರ್ಷಗಳ ಹಿಂದೆ ಕಾವ್ಯ ಕಡಲು ವಾಟ್ಸಪ್ ಗುಂಪಿನಲ್ಲಿ ಪರಿಚಯ ವಾದವರು ,ಆಗಾಗ ಗುಂಪಿನಲ್ಲಿ ಉತ್ತಮವಾದ ಗಜಲ್ಗಳನ್ನು  ಓದಲು ಹಾಕುತ್ತಿದ್ದರು.ಈಗ ಅವರು ತಮ್ಮ ಪ್ರಕಟಿತ ಮೊದಲ ಗಜಲ್ ಸಂಕಲನ […]

Back To Top