“ಧ್ಯಾನಸ್ಥ ಕವಿತೆಗಳು”
ಪುಸ್ತಕ ಸಂಗಾತಿ “ಧ್ಯಾನಸ್ಥ ಕವಿತೆಗಳು” “ಥಟ್ ಎಂದು ಬರೆದು ರಸೀದಿಯಲ್ಲ ಕವಿತೆ” ಶೀರ್ಷಿಕೆಯ ಕಾರಣಕ್ಕಾಗಿಯೇ ಸೆಳೆವ ಕವನ ಸಂಕಲನವಿದು. ರಸೀದಿ ಎನ್ನುವುದು ಯಾವುದೇ ವಸ್ತು ವಿಲೇವಾರಿಯಾಗಿದ್ದಕ್ಕೆ ನೀಡುವ ಸಾಕ್ಷö್ಯ. ಮತ್ತದು ವ್ಯವಹಾರದ ನಂಬಿಕೆ ಮತ್ತು ಅಪನಂಬಿಕೆಯನ್ನು ಬಿಂಬಿಸುತ್ತದೆ. ನಂಬಿಕಸ್ಥ ನಡವಳಿಕೆ ಎನ್ನುವ ಹೊತ್ತಿನಲ್ಲಿಯೇ ಅಪನಂಬಿಕೆಯ ಜಾಡು ಕೂಡ ಇದೆ ಎನ್ನುವುದನ್ನು ಸೂಚ್ಯವಾಗಿ ಸೂಚಿಸುತ್ತಿರುತ್ತದೆ. ಆದರೆ ಕವಿತೆಗಳು ಹಾಗಲ್ಲ ಎನ್ನುವ ನಂಬಿಕೆ ಸುಮಿತ್ ಮೇತ್ರಿಯದು. ಮತ್ತು ಇಲ್ಲಿನ ಕವಿತೆಗಳದ್ದು ಕೂಡ ಹೀಗಾಗಿಯೇ ಇವು ಎದೆಗಿಳಿಯುತ್ತವೆ. ಕಂಡದ್ದನ್ನು ಪ್ರಾಮಾಣಿಕವಾಗಿ ಇಷ್ಟೇ […]
ಬಿಳಿ ಸಾಹೇಬನ ಭಾರತ
ಪುಸ್ತಕ ಸಂಗಾತಿ ಬಿಳಿ ಸಾಹೇಬನ ಭಾರತ ಪುಸ್ತಕ: ಬಿಳಿ ಸಾಹೇಬನ ಭಾರತಲೇಖಕರು: ಜಗದೀಶ್ ಕೊಪ್ಪಪ್ರಕಾಶನ: ಮನೋಹರ ಗ್ರಂಥಮಾಲೆ ಬೆಲೆ: 90 ರೂಲಭ್ಯತೆ : ಸಂಗಾತ ಪುಸ್ತಕ, ಧಾರವಾಡ ಜಿಮ್ ಕಾರ್ಬೆಟ್ ಅವರ ಪುಸ್ತಕಗಳು ಎಷ್ಟು ಓದಿದರು ಮುಗಿಯದ ಕುತೂಹಲ ಭರಿತ ಪುಸ್ತಕಗಳು .ಈ ಪುಸ್ತಕ ಕಾರ್ಬೆಟ್ ಅವರ ಜೀವನದ ಮತ್ತಷ್ಟು ವಿಶೇಷ ಸಂಗತಿಗಳನ್ನು ಓದುಗರಿಗೆ ಪರಿಚಯಿಸುತ್ತವೆ . ಇದು ಶಿಕಾರಿ ,ಕಾಡಿನ ಅನುಭವದ ಹೊತ್ತಿಗೆ ಅಲ್ಲ ಪುಸ್ತಕ ಅವರ ವೈಯಕ್ತಿಕ ಬದುಕಿನ ಅನುರೂಪ ಮಾಹಿತಿ ನೀಡುತ್ತದೆ . […]
ನಿರುತ್ತರ
ಪುಸ್ತಕ ಸಂಗಾತಿ ನಿರುತ್ತರ ನಿರುತ್ತರ-ಕವನ ಸಂಕಲನಪ್ರಕಾಶಕರು-ದೀಪ್ತಿ ಬುಕ್ ಹೌಸ್ ಮೈಸೂರುಪುಟಗಳು-೧೧೨ಬೆಲೆ-೧೦೦ರೂ ಅದೇ ಹಳೆಯ ಒಲೆಗೆ ಹೊಸ ಉರಿಯ ಹಾಕಿ ಪ್ರತಿದಿನ ನಾವೀನ್ಯದ ಬೆಳಕು ತೆರೆದಿದೆ ಬೆಳಕಿನ ಬದುಕು. … ಕವಿತೆ ಹುಟ್ಟುವುದೇ ಒತ್ತಡದಿಂದ ಎನ್ನುವುದು ನನ್ನ ನಂಬಿಕೆ. ಎಲ್ಲಾ ಸಾಂಗವಾಗಿ ಸಾಗುತ್ತಿದ್ದಾಗ ಸಾಲೊಂದೂ ಹೊಳೆಯದೆ ಕವಿತೆಯೆಂಬ ಈ ಚಂಚಲೆಯನ್ಮು ಹುಡುಕಿ ಗಾಬರಿಯಾಗುವುದು ನನಗೆ ಆಗಾಗ ಘಟಿಸುವ ಸಂಗತಿ. ಈ ಒತ್ತಡದಿಂದ ಹುಟ್ಟಿದ್ದನ್ನು ಪ್ರಮಾಣಬದ್ದವಾಗಿ ಬೆಳೆಸಿ ಅಕ್ಷರಗಳಲ್ಲಿ ಬೆಳೆಯಗೊಟ್ಟರೆ ಕವಿಯಾಗಿ ಗೆದ್ದಂತೆ. ಒಲಿದಂತೆ ಹಾಡುವೆ ಎನ್ನುವ ನನ್ನ ಮೊಂಡುವಾದಕ್ಕೆ […]
ನನ್ನ ಪ್ರೀತಿಯ ಭಾರತ
ಪುಸ್ತಕ ಸಂಗಾತಿ ನನ್ನ ಪ್ರೀತಿಯ ಭಾರತ ಪುಸ್ತಕ: ನನ್ನ ಪ್ರೀತಿಯ ಭಾರತ ಲೇಖಕರು : ಜಿಮ್ ಕಾರ್ಬೆಟ್ ಕನ್ನಡಕ್ಕೆ : ಪ್ರೊ.ಆರ್.ಎಸ್.ವೆಂಕೋಬ್ ರಾವ್ ಪ್ರಕಾಶನ : ಚಾರು ಪ್ರಕಾಶನ ,ಬೆಂಗಳೂರು ಬೆಲೆ: 125 ಲಭ್ಯತೆ: ಸಂಗಾತ ಪುಸ್ತಕ ,ಧಾರವಾಡ ಜಿಮ್ ಕಾರ್ಬೆಟ್ ಹೆಸರು ಕನ್ನಡಿಗರಿಗೆ ಚಿರಪರಿಚಿತ ,ಪೂರ್ಣ ಚಂದ್ರ ತೇಜಸ್ವಿ ಅವರಿಂದ ಕಾಡಿನಕಥೆಗಳ ಸರಣಿಗಳ ಮೂಲಕ ಮನೆಮಾತಾಗಿರುವ ಜೀಮ್ ಕಾರ್ಬೆಟ್ ಮತ್ತು ಅವರ ಬರಹ ನಾಲ್ಕು ಗೋಡೆಗಳ ನಡುವೆ ,ಕಾಂಕ್ರೀಟ್ ಸೀಮೆಯ ಯಲ್ಲೂ ಪುಸ್ತಕಗಳನ್ನು ಹೀಡಿದರೆ ಕಾಡಿನ […]
ಬೇಲಿಯೊಳಗಿನ ಬೆಳೆ –
ಪುಸ್ತಕ ಸಂಗಾತಿ ಬೇಲಿಯೊಳಗಿನ ಬೆಳೆ ಒಂದು ಅವಲೋಕನ ಬೇಲಿಯೊಳಗಿನ ಬೆಳೆ – ಪ್ರಬಂಧ ಸಂಕಲನ – ಡಾ. ಕೆ.ಚಿನ್ನಪ್ಪ ಗೌಡ – ಮದಿಪು ಪ್ರಕಾಶನ, ಮಂಗಳೂರು: ೨೦೨೦ ಪುಟ ೧೦೪, ಬೆಲೆ ೯೦ ರೂ. ಇದೊಂದು ‘ವಿಶಿಷ್ಟ’ ಸಪ್ತ ಪ್ರಬಂಧಗಳ ಸರಮಾಲೆ. ಯಾಕೆ ‘ವಿಶಿಷ್ಟ’ ಎಂದರೆ ಇಲ್ಲಿಯ ಏಳೂ ಲೇಖನಗಳು ‘ಪ್ರಬಂಧ’ ಎಂಬ ಒಂದೇ ಪ್ರಭೇದ ಸೂತ್ರಕ್ಕೆ ಒಳಪಡುವುದಿಲ್ಲ! ಇದನ್ನು ‘ಹರಟೆ’ ಎಂದು ಲೇಖಕರು ಕರೆದರೂ ಅದು ಹಳ್ಳಿ ಪಂಚಾಯ್ತಿಕಟ್ಟೆಯ ಸಮಯ ಕೊಲ್ಲುವ ಜಡಭರತರ ಹಾಳು ಹರಟೆಯಾಗದೆ […]
ಆಕಾಶಕ್ಕೆ ಹಲವು ಬಣ್ಣಗಳು
ಪುಸ್ತಕ ಸಂಗಾತಿ ಆಕಾಶಕ್ಕೆ ಹಲವು ಬಣ್ಣಗಳು ಗಜಲ್ ಪ್ರೇಮಿಗಳ ಭಾವಬಾಂದಳದಿ ಮಾಸದ ಬಣ್ಣಗಳ ಮೂಡಿಸಿದ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ಶಹಾಪುರದ ಹಿರಿಯ ಲೇಖಕರಾದ ಶ್ರೀ. ಸಿದ್ಧರಾಮ ಹೊನ್ಕಲ್ ಅವರು ಮೈಸೂರಿಗರಿಗೆ ಪರಿಚಿತರೇನೂ ಅಲ್ಲ. ಮೈಸೂರಿನಲ್ಲೇ ಹುಟ್ಟಿ, ಬೆಳೆದು ಕಳೆದ ಹದಿನೇಳು ವರ್ಷಗಳಿಂದ ಸಂಘಟನೆ ಹಾಗೂ ಕವನ ರಚನೆಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಹೊನ್ಕಲ್ ಅವರ ಪರಿಚಯವಾದುದು ಗಜಲ್ ಗಳಿಗೆಂದೇ ಮೀಸಲಾದ ಗುಂಪೊಂದರಲ್ಲಿ. ಕಳೆದ ಒಂದೂವರೆ ವರ್ಷಗಳಿಂದ ಗಜಲ್ ಗುರುಗಳಾದ ಡಾ. ಗೋವಿಂದ ಹೆಗ್ಡೆಯವರ […]
“ಮಧ್ಯಘಟ್ಟವೆಂಬ ಒಂದು ಮೈಲಿಗಲ್ಲು”
ಪುಸ್ತಕ ಸಂಗಾತಿ “ಮಧ್ಯಘಟ್ಟವೆಂಬ ಒಂದು ಮೈಲಿಗಲ್ಲು” ಊರೂರು ಅಲೆಯುತ್ತಲೆ ಬದುಕು ಕಟ್ಟಿಕೊಳ್ಳುವುದನ್ನು ಕಲಿತ ಮನುಷ್ಯನಿಗೆ ವಲಸೆ ಎನ್ನುವುದು ಅವನ ಬದುಕಿನ ಅವಿಭಾಜ್ಯ ಅಂಗ. ತನ್ನ ಅಸ್ತಿತ್ವದ ಸಲುವಾಗಿ, ಹೊಟ್ಟೆ ಪಾಡಿನ ಸಲುವಾಗಿ ಆತ ಸೂಕ್ತ ಸ್ಥಳವೊಂದರ ಆಯ್ಕೆಗೆ ತೊಡಗುತ್ತಾನೆ. ಇದು ಮನುಷ್ಯ ಸಹಜ ಪ್ರಕ್ರಿಯೆ ಅವನ ಈ ಕ್ರಮದಿಂದಾಗಿಯೇ ರಾಜ್ಯ ಸಾಮ್ರಾಜ್ಯಗಳು ಹುಟ್ಟಿಕೊಳ್ಳುತ್ತವೆ ಅಳಿಸಿಹೋಗುತ್ತವೆ. ಕೆಲವೊಂದು ಚರಿತ್ರೆಯಲ್ಲಿ ದಾಖಲಾಗುತ್ತವೆ ಮತ್ತೆ ಮುಖ್ಯವಲ್ಲದ್ದು ಎಲ್ಲಿಯೋ ಕಣ್ಮರೆಯಾಗಿ ಬಿಡುತ್ತವೆ. ಅಂತಹ ಒಂದು ಕಾಲಘಟ್ಟದ ಎಳೆಯನ್ನು ಹಿಡಿದು ಒಂದು ಶತಮಾನದ ಕತೆಯನ್ನು […]
“ಬೊಪ್ಪ ನನ್ನನ್ನು ಕ್ಷಮಿಸು”
ಉದಯ ಕುಮಾರ ಹಬ್ಬು ಅವರು ಈ ಆತ್ಮ ಕಥನದ ಮೂಲಕ ಒಂದು ಸಮೃದ್ಧ ಬಾಲ್ಯದ ಅಂತರಂಗವನ್ನು ಆ ಮೂಲಕ ಸಮಾಜದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಿತ್ರಣದ ಉಣಿಸನ್ನೂ ನೀಡಿರುವುದು ಓದುಗರಿಗೆ ಪ್ರಿಯವಾಗುವ ಸಂಗತಿ.
ಆನೆ ಸಾಕಲು ಹೊರಟವಳು
“ ಕಲ್ಲು ಹೃದಯ ಮಾಡಿ ಜೀಪಿಗೆ ಕಟ್ಟಿದ್ದ ಹಗ್ಗ ಬಿಚ್ಚಿದೆ. ಕರು ನನ್ನ ಮುಖ ನೋಡಿತು , ‘ ಹೋಗಿ ಬರುತ್ತೇನೆ ‘ ಎನ್ನುವಂತೆ . ಅಷ್ಟೆ. ಮರುಕ್ಷಣ ಜೀಪಿನಿಂದ ಹಾರಿತು. ಕಣ್ಣಿಗೆ ಕಾಣದಂತೆ ದಟ್ಟ ಕಾಡಿನೊಳಗೆ ಮರೆಯಾಯಿತು. ‘ ಮೇದು ಹೊಟ್ಟೆ ತುಂಬಿಸು . ಕ್ಷಮಿಸು ‘ ಮನದಲ್ಲಿ ಹೇಳಿಕೊಂಡೆ.
ಸಾಧನೆಯ ಹಾದಿಯಲ್ಲಿ
ಎಂಭತ್ತರ ದಶ ಕದಲ್ಲಿ ಇನ್ನು ಗ್ರಾಮೀಣ ಭಾಗದ ಮಹಿಳೆಯರು ಅಕ್ಷರ ಲೋಕಕ್ಕೆ ಅಂಬೆಗಾಲಿಡುತ್ತ ಸಾಗುತ್ತಿದ್ದ ದಿನಗಳಲ್ಲಿ ಇವರು ಉನ್ನತ ಶಿಕ್ಷಣ ಪಡೆದು ಮಹಿಳಾ ಅಧಿಕಾರಿಯಾಗಿ ಆಯ್ಕೆ ಯಾಗಿ ಬೀದರ್ ನಂತಹ ಹಲವಾರು ಸಮಸ್ಯೆ ಇರುವ ಜಿಲ್ಲೆಗೆ ಅಧಿಕಾರಿಯಾಗಿ ವೃತ್ತಿ ಆರಂಭಿಸಿರುವುದು ಗುರುತ್ತ ರವಾದ ಹೆಜ್ಜೆ