ಪುಸ್ತಕ ಸಂಗಾತಿ
ಸಾಧನೆಯ ಹಾದಿಯಲ್ಲಿ
ಸಂಗೀತಾ ರವಿರಾಜ್
“ ಸಾಧನೆಯ ಹಾದಿಯಲ್ಲಿ” ಎನ್ನುವ ಕೃತಿ ರಚಿಸಿರುವ ಭಾರತೀಯ ಆಡಳಿತ ಮಂಡಳಿ ಅಧಿಕಾರಿ ಕೆ. ರತ್ನಪ್ರಭ ಇವರು ಪ್ರಸ್ತುತ ಕರ್ನಾಟಕ ಸರಕಾರದ ಮುಖ್ಯ ಕಾರ್ಯ ದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಯಲ್ಲಿರುವಂತೆ ಈವರೆಗಿನ ಇವರ ಸಾಧನೆಯೇ ಅನನ್ಯವಾದ ಅನುಭವ ವಾಗಿದೆ.ಸಾಧನೆಯ ಹಾದಿಯಲ್ಲಿ ಎಂಬ ಶೀರ್ಷಿಕೆಯನ್ನು ಕೃತಿಗೆ ನೀಡಿರುವುದರಿಂದ ಇನ್ನು ಮುಂದೆಯು ಇವರ ವೃತ್ತಿ ಸಾಧನೆಯು ಮುಂದುವರೆಯುತ್ತಿರುತ್ತದೆ ಎಂಬುದು ನಮ ಗೆಲ್ಲಾ ಮನದಟ್ಟಾಗುವ ಅಂಶ.ಇಪ್ಪತ್ತೆರಡು ವರುಷದ ಅತಿ ಚಿಕ್ಕ ಪ್ರಾಯದಲ್ಲಿ ಅಧಿಕಾರಿಯಾಗಿ ಆಯ್ಕೆಯಾಗಿ ಬಂದಿ ರುವುದೇ ಒಂದು ಮಹತ್ತರವಾದ ಸಾಧನೆ.ಎಂಭತ್ತರ ದಶ ಕದಲ್ಲಿ ಇನ್ನು ಗ್ರಾಮೀಣ ಭಾಗದ ಮಹಿಳೆಯರು ಅಕ್ಷರ ಲೋಕಕ್ಕೆ ಅಂಬೆಗಾಲಿಡುತ್ತ ಸಾಗುತ್ತಿದ್ದ ದಿನಗಳಲ್ಲಿ ಇವರು ಉನ್ನತ ಶಿಕ್ಷಣ ಪಡೆದು ಮಹಿಳಾ ಅಧಿಕಾರಿಯಾಗಿ ಆಯ್ಕೆ ಯಾಗಿ ಬೀದರ್ ನಂತಹ ಹಲವಾರು ಸಮಸ್ಯೆ ಇರುವ ಜಿಲ್ಲೆಗೆ ಅಧಿಕಾರಿಯಾಗಿ ವೃತ್ತಿ ಆರಂಭಿಸಿರುವುದು ಗುರುತ್ತ ರವಾದ ಹೆಜ್ಜೆ.
ರತ್ನಪ್ರಭರು ತಮ್ಮ ಹೆತ್ತವರ ಪ್ರೋತ್ಸಾಹವನ್ನು ಕೃತಿಯಲ್ಲಿ ಬಹುವಾಗಿ ಸ್ಮರಿಸುತ್ತಾರೆ.ಜಿಲ್ಲಾಧಿಕಾರಿಯಾಗಿದ್ದ ತಂದೆ ಯಿಂದ ನನಗೆ ಆಡಳಿತದ ತಿಳುವಳಿಕೆ ಹೇಗೆ ಬಂತು ಎಂ ಬುದನ್ನು ವಿವರಿಸಿ ಹೇಳುತ್ತಾರೆ.ಅವರ ತಂದೆ ವರ್ಗಾವಣೆ ಆಗಿ ಹೋಗುತ್ತಿದ್ದ ಸಂಧರ್ಭದಲ್ಲಿ ಪ್ರತಿ ಜಿಲ್ಲೆಗಳ ಜನಸಾ ಮಾನ್ಯರು ತಂಡೋಪತಂಡವಾಗಿ ಬೀಳ್ಗೊಡಲು ಬರುತ್ತಿ ರುವ ದೃಶ್ಯ ಅವರಿಗಿನ್ನು ಕಣ್ಣಿಗೆ ಕಟ್ಟಿದಂತಿದೆ ಎನ್ನುತ್ತಾರೆ. ಅಂತಹ ಪಾರದರ್ಶಕ ಸೇವೆ ಕೊಟ್ಟಿದ್ದರಿಂದಲೇ ತಂದೆಗೆ ತುಂಬಾ ಜನ ಅಭಿಮಾನಿಗಳಿದ್ದಾರೆ ಎಂಬುದಾಗಿ ಸ್ಮರಿಸು ತ್ತಾರೆ.ಜನಸಾಮಾನ್ಯರ ಸೇವೆಗೆ ಟೊಂಕ ಕಟ್ಟಿ ನಿಲ್ಲಬೇಕೆಂ ಬ ಛಲ ಬರಲು ರತ್ನಪ್ರಭರಿಗೆ ತನ್ನ ತಂದೆಯೇ ಸ್ಪೂರ್ತಿ.
ರತ್ನಪ್ರಭರಿಗೆ ಐ ಎ ಎಸ್ ಅಧಿಕಾರಿಯಾಗಿ ಉದ್ಯೋಗ ದೊರಕಿದ ಮೇಲೆ,ಅತೀ ಚಿಕ್ಕ ಪ್ರಾಯದ ತೆಳ್ಳನೆಯ ಹುಡು ಗಿ ಅಧಿಕಾರಿ ಆಗಿರಲ್ಲಿಕ್ಕಿಲ್ಲ ಎಂಬುದಾಗಿ ಅನಿಸಿಕೊಂಡು ಫಜೀತಿ ಎದುರಿಸಿದ ಅನೇಕ ಸಂಧರ್ಭಗಳನ್ನು ಇಲ್ಲಿ ಸ್ವಾರ ಸ್ಯವಾಗಿ ಹೇಳಿದ್ದಾರೆ.ಒಂದು ಸಲ ಕಾರ್ಯಕ್ರಮವೊಂದರ ಲ್ಲಿ ವಿ.ಐ.ಪಿ ಗಳ ಕುರ್ಚಿಯಲ್ಲಿ ಕುಳಿತ್ತಿದ್ದ ಇವರನ್ನು ಸಂಘ ಟಕ ಮಹಿಳೆಯರು ಬಲವಂತವಾಗಿ ಹಿಂದಕ್ಕೆ ಕುಳ್ಳಿರಿಸಿದ ಪ್ರಸಂಗ ನಡೆದಿದೆ.ಇನ್ನೊಮ್ಮೆ ರಾಷ್ಟ್ರಪತಿಯವರ ಅಂಗ ರಕ್ಷಕರು ರಾಷ್ಟ್ರಪತಿಗಳ ಜೊತೆಜೊತೆಗೆ ಹೆಜ್ಜೆ ಹಾಕುವ ನನ್ನನ್ನು ಈ ಹುಡುಗಿ ಯಾರಿರಬಹುದು ಎಂದು ಹಿಂದೆ ಹೋಗಲು ಹೇಳಿದರು.ಇಂತಹ ಘಟನೆ ಹಲವಾರು ಬಾರಿ ನಡೆದಿದೆ ಎನ್ನುತ್ತಾರೆ ರತ್ನಪ್ರಭ .ಎಸಿ ಅಥವಾ ಡಿಸಿ ಗಳಿಗೆ ಆ ಕಾಲದಲ್ಲಿ ಸಾಮಾನ್ಯವಾದ ಬ್ಯಾಡ್ಜ್ ಕೂಡ ಇಲ್ಲದಿರು ವುದು ಇದಕ್ಕೆ ಕಾರಣ ಎನ್ನುತ್ತಾರೆ.
ಎಸಿ ಯಾಗಿ ಬೀದರ್ ಗೆ ಹೋಗಿ ಕರ್ತವ್ಯಕ್ಕೆ ಹಾಜರಾಗುವ ಸಂಧರ್ಭದಲ್ಲಿ ಮೊದಲು ಹೋಗುವಾಗ ಅಮ್ಮನನ್ನು ಕರೆ ದುಕೊಂಡು ಹೋಗಿದ್ದರು.ಆ ಸಂಧರ್ಭದಲ್ಲಿ ಅಮ್ಮನನ್ನೇ ಅಧಿಕಾರಿ ಎಂದು ಪರಿಗಣಿಸಿದರು.ನಾನು ಆಗ ಅಮ್ಮನ ನ್ನೇ ಅಧಿಕಾರಿ ಅಂತ ಒಪ್ಪಿಕೊಂಡತೆ ಮಾಡಿ ಅವರನ್ನೇ ಫಜೀತಿಗೆ ಬೀಳಿಸಿದೆ ಎಂದು ತಮ್ಮ ಅನುಭವವನ್ನು ಹಂಚಿ ಕೊಂಡಿದ್ದಾರೆ.ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾ ಗಿದ್ದ ದೇವದಾಸಿಯರಿಗಾಗಿ ಪುನರ್ವಸತಿ ಎಂಬ ದೊಡ್ಡ ಯೋಜನೆಯನ್ನು ಹಮ್ಮಿಕೊಂಡಿದ್ದು.ಅದು ಬಲು ಉಪ ಯುಕ್ತವಾದ ಸಮಾಜಮುಖಿ ಕಾರ್ಯಕ್ರಮವಾಗಿತ್ತು. ಬೀದರ್ ನಲ್ಲಿ ಹಲವಾರು ಆದರ್ಶ ಕೆಲಸಗಳನ್ನು ಮಾಡಿ ಹೆಸರುವಾಸಿಯಾಗಿದ್ದರು.
ಹೆಸರಿಗಾಗಿ ಯಾವತ್ತು ದುಡಿದವರಲ್ಲ ಎಂಬುದು ಇವರ ಕಾರ್ಯಕ್ಷಮತೆಯಿಂದ ತಿಳಿದು ಬರುತ್ತದೆ.ಬೀದರ್ ನಲ್ಲಿ ದ್ದಾಗ ಸಮಸ್ಯೆಗಳನ್ನು ಹೊತ್ತು ತರುವ ಜನರು ಇವರ ಕಛೇರಿಯಲ್ಲಿಯೆ ತುಂಬಿ ತುಳುಕಿರುತ್ತಿದ್ದರು. ಬೀದರ್ ನಲ್ಲಿದ್ದಾಗ ತಾವೆ ಖುದ್ದು ಅತೀ ಆಸಕ್ತಿ ವಹಿಸಿ ದಸರಕ್ಕೆ ಕಳುಹಿಸುವ ಸ್ತಬ್ಧಚಿತ್ರಕ್ಕೆ ಐಡಿಯಾ ನೀಡಿ ಚೆನ್ನಾಗಿ ಮೂಡಿ ಬರಲು ಕಾರಣ ಕರ್ತರಾಗಿದ್ದರು.ಇದಕ್ಕೆ ದ್ವಿತೀಯ ಬಹು ಮಾನವು ಬಂದಿತ್ತು.ಇವರು ವೃತ್ತಿಯಲ್ಲಿದ್ದಾಗ ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಆಟದಲ್ಲಿ ಬಹುಮಾನವನ್ನು ಗಳಿಸಿದರು.ಓದಿ ಅಧಿಕಾರಿಯಾಗಿದ್ದು ಮಾತ್ರವಲ್ಲ ಪಠ್ಯೇ ತರ ಚಟುವಟಿಕೆಯಲ್ಲು ಮುಂದಿದ್ದರು ಎಂಬುದನ್ನು ನಾವಿ ದರಿಂದ ಗಮನಿಸಬಹುದು.
ಆಗಿನ ರಾಜ್ಯದ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗ್ಗಡೆ ಯಿಂದಲೇ ಈ ಎ.ಸಿ ಬಹಳ ಡೈನಾಮಿಕ್ ಇದ್ದಾರೆ ಎಂದು ಹೇಳಿಸಿಕೊಂಡಿದ್ದರು.ಪ್ರಧಾನಮಂತ್ರಿ ದಿ.ಇಂದಿರಾಗಾಂಧಿ ದರ್ಶನವಾದುದು ಅಮೂಲ್ಯ ನೆನಪು ಎಂದು ಹೇಳಿರುವ ರತ್ನಪ್ರಭರು ಅವರ ಹತ್ಯೆ ಆದಾಗ ಮಾನಸಿಕವಾಗಿ ಕುಸಿ ದು ಹೋಗಿದ್ದರು.ಆ ಸಮಯದಲ್ಲಿ ಆದ ಗಲಭೆಗಳಲ್ಲಿ ಶಾಂತಿ ಕಾಪಾಡುವಲ್ಲಿ ಇವರ ಪಾತ್ರ ಶ್ಲಾಘನೀಯ.ತಮ್ಮ ವೈಯುಕ್ತಿಕ ದೌರ್ಬಲ್ಯವನ್ನು ತುಂಬಾ ಪ್ರಾಮಾಣಿಕವಾಗಿ ಅಭಿವ್ಯಕ್ತಿಗೊಳಿಸಿರುವುದು ಇವರ ನೈಜ್ಯ ಪ್ರಾಮಾಣಿಕತೆ ಯನ್ನು ಎತ್ತಿ ತೋರಿಸುತ್ತದೆ.ಅದು ತನಗೆ ಭಾಷಣ ಮಾಡ ಲು ತುಂಬಾ ಹೆದರಿಕೆ ಎಂಬುದನ್ನು ಮುಕ್ತವಾಗಿ ಹೇಳಿದ್ದಾ ರೆ. ಸಂಘಟಕರೊಬ್ಬರು ಮಳಿಗೆಯೊಂದರ ಉದ್ಘಾಟನೆಗೆ ಕರೆದಾಗ ಬರುತ್ತೇನೆ ಆದರೆ ಭಾಷಣ ಮಾಡುವುದಿಲ್ಲ ಎಂಬುದಾಗಿ ಹೇಳಿ ಸಂಘಟಕರನ್ನೆ ಗಲಿಬಿಲಿಗೊಳಿಸಿದರು. ಅಂದರೆ ಇವರಿಗೆ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡ ಲು ಬರುತ್ತಿರಲಿಲ್ಲ.ಅದಕ್ಕಾಗಿ ಭಾಷಣ ಎಂದರೆ ಭಯ ಎನ್ನುತ್ತಿದ್ದರು.ಇಂಗ್ಲೀಷ್ ನಲ್ಲಿ ಭಾಷಣ ತಕ್ಕ ಮಟ್ಟಿಗೆ ಮಾ ಡುತ್ತಿದ್ದೆ ಎಂಬುದಾಗಿ ಎಂಭತ್ತರ ದಶಕದ ತಮ್ಮ ಮೊದ ಮೊದಲ ವೃತ್ತಿ ಜೀವನದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಇನ್ನೊಂದು ಸಂಧರ್ಭದಲ್ಲಿ ಕೋರ್ಟ್ನಲ್ಲಿ ತನ್ನ ಸಹದ್ಯೋಗಿ ಯ ಪರ ಅನುಕೂಲವಾಗುವಂತೆ ಸತ್ಯ ನುಡಿದಿದ್ದರು.ನಿಜ ಹೇಳಬೇಕೆಂದರೆ ಆ ಸಹದ್ಯೋಗಿ ರತ್ನಪ್ರಭರಿಗೆ ಮೇಲಾಧಿ ಕಾರಿಯಾಗಿದ್ದಾಗ ಎಲ್ಲರ ಮುಂದೆ ಹಂಗಿಸಿ ಅವಮಾನಿಸಿ ವ್ಯಂಗ್ಯಮಾಡಿದ ವ್ಯಕ್ತಿ.ಅದನ್ನೆ ಮನಸ್ಸಿನಲ್ಲಿಟ್ಟುಕೊಂಡು ಆ ವ್ಯಕ್ತಿಯ ಬಗ್ಗೆ ಕೋರ್ಟ್ ನಲ್ಲಿ ದ್ವೇಷ ಮಾಡುವಂತಹ ಸಂದರ್ಭ ಬಂದರು ರತ್ನಪ್ರಭರು ಹಾಗೆ ಮಾಡಲಿಲ್ಲ. ಇದು ಅವರ ವ್ಯಕ್ತಿತ್ವ.
ಬೀದರ್ ನಲ್ಲಿದ್ದ ದಿನಗಳು ರತ್ನಪ್ರಭರಿಗೆ ಈಗಲು ಅವಿಸ್ಮ ರಣೀಯ.ಅಲ್ಲಿ ಅವರು ಜನರಲ್ಲೊಂದಾಗಿ ಮಾಡಿದ ಜನ ಪರ ಕೆಲಸಗಳಿಂದ ಪ್ರಸ್ತುತ ದಿನವು ಜನರು ನೆನಪಿಸಿಕೊ ಳ್ಳುತ್ತಾರೆ.ಹಲವು ವರುಷಗಳಾದ ಮೇಲು ಸಿಗುವ ಬೀದರ್ ನ ಜನರು ಹೇಳುವ ಹಲವಾರು ಘಟನೆಗಳು ಕೃತಿಯಲ್ಲಿ ಉಲ್ಲೇಖವಾಗಿರುವುದನ್ನು ಓದಿ ನಾವಿದನ್ನು ಗಮನಿಸಬ ಹುದು.ಒಬ್ಬ ವ್ಯಕ್ತಿಯಂತು ತನ್ನ ಮೊಮ್ಮಗಳಿಗೆ ರತ್ನಪ್ರಭ ಎಂಬ ಹೆಸರಿಟ್ಟಿದ್ದೇನೆ ಎಂದು ಹೇಳಿ ಅಚ್ಚರಿಗೊಳಿಸಿದ್ದಾರೆ ಇದಕ್ಕಿಂತ ದೊಡ್ಡ ಪ್ರೀತಿ ಇನ್ಯಾವುದು ಬೇಕು ಹೇಳಿ ?
ಬೀದರ್ ನ ನಂತರ ಚಿಕ್ಕಮಂಗಳೂರಿನಲ್ಲಿಯು ಹಲವಾ ರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡರು ಇಲ್ಲಿ ಅವರಿಗೆ ಕನ್ನಡ ಬಳಸುವುದು ಅನಿವಾರ್ಯವಾಗಿತ್ತು ಬೀದರ್ ನಲ್ಲಿ ಹೆಚ್ಚಾಗಿ ಹಿಂದಿಯಲ್ಲಿ ಮಾತನಾಡಿ ಸುಧಾರಿ ಸುತ್ತಿದ್ದರು.ಆಗಿನ ಕಾಲದಲ್ಲಿ ಮಹಿಳಾ ಎ ಸಿಯನ್ನು ಬಾಸ್ ಆಗಿ ಒಪ್ಪಿಕೊಳ್ಳುವುದು ಇವರ ಕೆಳಗಿನ ಅಧಿಕಾರಿಗಳಿಗೆ ಮತ್ತು ಜನಸಾಮಾನ್ಯರಿಗೆ ತುಂಬಾ ಕಷ್ಟಕರವಾಗಿತ್ತು.ಈ ಸವಾಲನ್ನು ತುಂಬಾ ಸಂಯಮದಿಂದ,ಬುದ್ಧಿವಂತಿಕೆಯಿಂ ದಲೇ ಎದುರಿಸಿದ ಹಲವಾರು ಸಂಧರ್ಭಗಳ ಪರಿಚಯ ಈ ಕೃತಿಯಲ್ಲಿದೆ.ಇಂತಹ ಘಟನೆಗಳೇ ಇವರು ಇನ್ನು ಗಟ್ಟಿ ಯಾಗಿ ಬೆಳೆಯಲು ಸಹಕಾರಿಯಾಗಿದೆ ಎಂಬುದು ನನ್ನ ಅನಿಸಿಕೆ.ತಮ್ಮ ಕೈಕೆಳಗಿನ ಯಾವುದೇ ಚಿಕ್ಕ ಕೆಲಸಗಾರರು ಅಡುಗೆಯವರು,ಚಾಲಕರು ಎಲ್ಲರನ್ನು ಅವರ ವೃತ್ತಿಗೆ ಗೌರವ ಕೊಟ್ಟು ವಿಶ್ವಾಸದಿಂದಲೇ ನಡೆಸಿಕೊಳ್ಳತ್ತಿದ್ದರು.
ತಮಗೆ ಕೆಲಸದಲ್ಲಿ ಇದ್ದ ಬದ್ಧತೆಯಿಂದಲೇ ಇದೀಗ ಕರ್ನಾ ಟಕ ಸರಕಾರದ ಅತ್ಯುನ್ನತ ಹುದ್ದೆಯಲ್ಲಿದ್ದಾರೆ.ಮಹಿಳೆಯೊ ಬ್ಬರು ಅಧಿಕಾರಕ್ಕೆ ಬಂದರೆ ಭ್ರಷ್ಟತೆ ಇಲ್ಲ ಎಂಬುದನ್ನು ಸಾ ಬೀತುಪಡಿಸಿದ ಅಪರೂಪದ ಅಧಿಕಾರಿ ಕೆ.ರತ್ನಪ್ರಭರ ಕೃತಿ ಓದಿದ ಮೇಲೆ ಯಾಕೋ “ಕೊನೆಗೆ ಉಳಿಯುವುದು ಕಾ ವ್ಯವೇ” ಎಂಬ ಮಾತೊಂದು ಅತಿಯಾಗಿ ನೆನಪಾಗುತ್ತಿದೆ
************************************************
ಧನ್ಯವಾದಗಳು ಸಂಗಾತಿ