ನನ್ನ ಪ್ರೀತಿಯ ಭಾರತ

ಪುಸ್ತಕ ಸಂಗಾತಿ

ನನ್ನ ಪ್ರೀತಿಯ ಭಾರತ

ಪುಸ್ತಕ:  ನನ್ನ ಪ್ರೀತಿಯ ಭಾರತ

ಲೇಖಕರು : ಜಿಮ್ ಕಾರ್ಬೆಟ್

 ಕನ್ನಡಕ್ಕೆ : ಪ್ರೊ.ಆರ್.ಎಸ್.ವೆಂಕೋಬ್ ರಾವ್

ಪ್ರಕಾಶನ : ಚಾರು ಪ್ರಕಾಶನ ,ಬೆಂಗಳೂರು

ಬೆಲೆ: 125

ಲಭ್ಯತೆ: ಸಂಗಾತ ಪುಸ್ತಕ ,ಧಾರವಾಡ

ಜಿಮ್ ಕಾರ್ಬೆಟ್ ಹೆಸರು ಕನ್ನಡಿಗರಿಗೆ ಚಿರಪರಿಚಿತ ,ಪೂರ್ಣ ಚಂದ್ರ ತೇಜಸ್ವಿ ಅವರಿಂದ ಕಾಡಿನಕಥೆಗಳ ಸರಣಿಗಳ ಮೂಲಕ  ಮನೆಮಾತಾಗಿರುವ

ಜೀಮ್ ಕಾರ್ಬೆಟ್ ಮತ್ತು ಅವರ ಬರಹ

ನಾಲ್ಕು ಗೋಡೆಗಳ ನಡುವೆ ,ಕಾಂಕ್ರೀಟ್ ಸೀಮೆಯ ಯಲ್ಲೂ ಪುಸ್ತಕಗಳನ್ನು ಹೀಡಿದರೆ ಕಾಡಿನ ರೋಚಕತೆಯನ್ನು ಓದಗರಿಗೆ ಅನಾಯಾಸವಾಗಿ ಓದಗಿಸುತ್ತವೆ… !

    ” ಪುಸ್ತಕ ನನ್ನ ಪ್ರೀತಿಯ ಭಾರತ ” ಶೀರ್ಷಿಕೆಯೇ  ಹೇಳುವಂತೆ ಬಿಳಿ ಸಾಹೇಬರು ಭಾರತದಲ್ಲಿ ಭಾರತೀಯನಾಗಿ ಕಂಡ ಅನುಭವಗಳ ಪಾಕ ಈ ಬರಹ. ಇಲ್ಲಿಯ ಮಾತು ಅಂದರೆ, ಕೃತಿಯೊಳಗೆ ಮುಗ್ದತೆ, ಮನವೀಯತೆ , ಸಹೃದಯವಂತಿಕೆಯ ಗಾಢತೆಯೇ

ಆನಾವರಣಗೊಂಡಿದೆ.

     ಜಿಮ್ ಕಾರ್ಬೆಟ್ ಒಬ್ಬ ಶಿಕಾರಿಕಾರನಾಗಿ ಮಾತ್ರ ಇಲ್ಲಿ

ಕಾಣುವದಿಲ್ಲ. ಅವರಲ್ಲಿನ ಒಬ್ಬ  ಗೆಳೆಯ , ಕಾವಲುಗಾರ , ಹಳ್ಳಿಗ ,ಭಾರತೀಯ ಸಾಹೇಬನಾಗಿ ಹುದುಗಿದ ಅವರಲ್ಲಿನ

ಹೃದಯವಂತಿಕೆ ,ಮಮತೆ ಹೀಗೆ ಹಲವಾರು ಪಾತ್ರಗಳಲ್ಲಿ ಕಾರ್ಬೇಟ್ ಓದುಗರಿಗೆ ಎದುರಾಗುತ್ತಾರೆ .

   ಸಾಮಾನ್ಯರಲ್ಲಿನ ಅಸಾಮಾನ್ಯ ಶಕ್ತಿಯನ್ನು ಗುರಿತಿಸುವಲ್ಲಿ ಕಾರ್ಬೆಟ್ ಅವರು ಸಿಧ್ದ ಹಸ್ತರು.

ಅವರ ಕಾಡಿನ ಬರಹಗಳಲ್ಲಿ ಸ್ಥಳೀಯ ವ್ಯಕ್ತಿಗಳನಡುವಿನ ಒಡನಾಟ ,ಸ್ನೇಹ ವನ್ನು  ಇಲ್ಲಿ ಕಾಣಬಹುದು ಇದು ಓದುಗರಲ್ಲಿ ಬೆರಗು ಮೂಡಿಸುತ್ತದೆ .

ಇಲ್ಲಿ ಪ್ರಾಣಿ ಪರಿಸರದ ಕತೆ ಅಲ್ಲದೆ ನಿಷ್ಠಾವಂತ, ಪ್ರಾಮಾಣಿಕ ,ದಕ್ಷ  ಜನಸಾಮಾನ್ಯರೂಂದಿಗೆ ಬೆರೆತ ನ್ಯಾಯಾಧೀಶ……..  ಬಹುಮಾನಕ್ಕಾಗಿ ಮಕ್ಕಳನ್ನು ಹೊತ್ತು ತಂದು ಬಹುಮಾನ ನಿರಾಕರಿಸಿದ ಮೇಲ್ಜಾತಿ ಬಡ ಕೂಲಿಯವ….!!!

ಹೀಗೆ ಹಲವಾರು ಪಾತ್ರಗಳು ಓದುಗರ ಮನದಲ್ಲಿ ಉಳಿಯುತ್ತವೆ . ಬಡತನ ,ಹಸಿವು , ಇದ್ದರು ಗುಣದಲ್ಲಿ ಅಗರ್ಭ ಶ್ರೀಮಂತರಾದ ಹೃದಯಗಳು ಇರುವದರಿಂದಲೇ

ಶೀರ್ಷಿಕೆ ನನ್ನ ಪ್ರೀತಿಯ ಭಾರತವಾಗಿದೆ ಎಂದು ಊಹಿಸಬಹಿದು .

        ಒಂದೆಡೆ ಹಸಿವಿನಿಂದ ಸಾಯುವ ಜನವಾದರೆ ಮತ್ತೊಂದೆಡೆ ಸಮೃದ್ಧ ಅರಣ್ಯ , ಕಾಡು ಮೃಗಗಳಿಗೆ ಆಹಾರ ವಾಗುವ ಬಡಜನ. ಅಂದಿನ ಭಾರತದ ಮಹಿಳೆಯ ಸ್ಥಿತಿ -ಗತಿಗಳು ,ಪ್ರಾದೇಶಿಕ ವಿವರ ಎಲ್ಲದರ ಬಗ್ಗೆ ಕೃತಿ ಮಾಹಿತಿ ನೀಡುತ್ತದೆ .

ಪುಣ್ವನ ತಾಯಿ ಇಂದಿಗೊ ಹಲವು ರೂಪಕಗಳಲ್ಲಿ ಕಾಣುವಂತೆ ಚಿತ್ರತವಾಗಿದೆ,ಮಕ್ಕಳಿಗಾಗಿ ಪರಿತಪಿಸುವ ಎಳೆಯ ಕುಂತಿ ದಂಪತಿಗಳು .ತಪ್ಪಸಿಕೊಂಡು

ಕಾಡಿನಲ್ಲಿ ಇದ್ದ  ಎಳೆಯ ಮಕ್ಕಳನ್ನು ಮುಟ್ಟದ  ಕಾಡು ಮೃಗಗಳು ! .ಈ ಕುರಿತು ಜಿಮ್ ಅವರ ಅಪರೂಪ ವಿವರಣೆ ಇದೆ .

  ನ್ಯುಮೋನಿಯಾ ಕ್ಕೆ ತುತ್ತಾಗಿ ಪ್ರಾಣ ಬಿಟ್ಟ ಎಳೆಯ ಜಿಮ್ ಕಾರ್ಬೆಟ್ ಸ್ನೇಹಿತ ಅತನ ಅಸಮಾನ್ಯ ಪ್ರತಿಭೆಗೆ ಜಿಮ್ ಅವರು ಸೋತು ಹೋಗಿರುತ್ತಾರೆ .

ಸ್ಥಳೀಯ ಜನರಲ್ಲಿ ಅವರಿಗೆ ಇದ್ದ  ಅದಮ್ಯಯ ಕಾಳಜಿ‌, ಅವರ ಮುಗ್ದತೆಯ ಬಗ್ಗೆ ಇದ್ದ ಸಹಾನುಭೂತಿ ಎಲ್ಲವನ್ನು ಪುಸ್ತಕ ಚಿತ್ರಸಿದೆ .

     ಕೃತಿಯಲ್ಲಿನ ಕಾಡಿನ ವಿದ್ಯಮಾನಗಳಿಗೆ ಜಿಮ್  ಅವರ

ವಿವರಣೆ ಇದೆ ಕಾಡಿನ ಮೊರೆತದ ಆಲಿಸುವಿಕೆ ಇದೆ

ಕಾಡು ಎಂದರೆ ಬರಿ ಮರ ಅಲ್ಲ , ಮೃಗಗಳು ಅಲ್ಲ ಅದು ಮಮತೆ ನೆಲೆ.

ಪುಸ್ತಕ ಹಲವರು ಮಾನವೀಯ ವೈವಿಧ್ಯಮಯ ಭಾರತವನ್ನು ಭಾವನಾತ್ಮಕ ಹಾಗೂ ಬೌದ್ಧಿಕ ನೆಲೆಯಲ್ಲಿ ದರ್ಶಿಸುತ್ತದೆ  ಓದುಗರನ್ನು .

                      *****************************

ರೇಶ್ಮಾಗುಳೇದಗುಡ್ಡಾಕರ್

ಗಾಂಧಿಯೇ ಮೊದಲ ಕವಿತೆ

Leave a Reply

Back To Top