Category: ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ವಿಮುಕ್ತೆ ಪುಸ್ತಕ: ವಿಮುಕ್ತೆ ಲೇಖಕರು: ಓಲ್ಗಾ ಅನುವಾದಕರು: ಅಜಯ್ ವರ್ಮ ಅಲ್ಲೂರಿ      ‘ವಿಮುಕ್ತ’ ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ ಓಲ್ಗಾ ಅವರ ಬಹುಚರ್ಚಿತ ಕೃತಿಗಳಲ್ಲಿ ಒಂದು. ಓಲ್ಗಾ ಎಂಬ ಹೆಸರಿನಿಂದಲೇ ದೇಶದಾದ್ಯಂತ ಗುರುತಿಸಿಕೊಂಡಿರುವ ಪೋಪೂರಿ ಲಲಿತ ಕುಮಾರಿಯವರು ಮೂಲತಃ ಆಂಧ್ರಪ್ರದೇಶದ ಗುಂಟೂರಿನವರು. ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ, ಚಿಂತಕಿ, ಅನುವಾದಕಿ, ಹಾಗೂ ಮಹಿಳಾ ಹಕ್ಕುಗಳ ಹೋರಾಟಗರ್ತಿಯಾಗಿರುವ ಇವರು ಪ್ರಸ್ತುತ ತೆಲುಂಗಾಣದ ಸಿಕಂದ್ರಾಬಾದಿನಲ್ಲಿ ನೆಲೆಸಿದ್ದಾರೆ. ಸ್ವೇಚ್ಛ, ನೀಲಿ ಮೇಘಾಲು, ರಾಜಕೀಯ ಕಥಲು, ಮಾಕು ಗೋಡಲು ಲೇವು, ಪ್ರಯೋಗಂ, […]

ಪುಸ್ತಕ ಸಂಗಾತಿ

ಕವಿ ಏಕತ್ವದ ಸಂಕೇತವಾದರೆ, ಕತೆಗಾರ/ಕತೆಗಾರ್ತಿ ಬಹುತ್ವದ ಪ್ರತಿನಿಧಿ ಇವತ್ತು ಕನ್ನಡದ ಕತೆಗಾರ್ತಿ ಡಾ.ವೀಣಾ ಶಾಂತೇಶ್ವರ ಅವರ ಸಮಗ್ರ ಕಥನ‌ ಸಾಹಿತ್ಯ ಓದಲು ತೆಗೆದುಕೊಂಡ ಪುಸ್ತಕ ‌.ಇದರಲ್ಲಿ‌ ನಾ ಓದೊದ ಮೊದಲ ಕತೆ‌ ಕವಲು ಸಂಕಲನದ‌ ” ಹನುಮಾಪುರದಲ್ಲಿ ಹನುಮಂತ ಜಯಂತಿ. ಹಾಗೂ ಹೋಟೆಲ್ ಬ್ಲೂ.ಹನುಮಾಪುರದಲ್ಲಿ ಹನುಮ‌‌ ಜಯಂತಿ …ಜಾತಿ ಸಂಘರ್ಷದ ಸಣ್ಣ ಝಲಕ್ ಹಿಡಿದಿಡುವ ಕತೆ.‌ ಒಂದು ಗ್ರಾಮದ ಚಲನೆ ಶಿಕ್ಷಣ ಕಲಿತು ಬಂದ ಯುವಕನಿಂದ ಹೇಗೆ ಸಾಧ್ಯವಾಗುತ್ತದೆ ಹಾಗೂ ಸಂಬಂಧಗಳು ಹೇಗಿರುತ್ತವೆ..ಜಾತೀಯ ವ್ಯವಸ್ಥೆ ಆಯಾಮವನ್ನು ಕತೆಗಾರ್ತಿ […]

ಪುಸ್ತಕ ವಿಮರ್ಶೆ

ವಿರಹಿ ದಂಡೆ ವಿರಹಿ ದಂಡೆ ( ಕವನ ಸಂಕಲನ )ಲೇಖಕ: ನಾಗರಾಜ್ ಹರಪನಹಳ್ಳಿನೌಟಂಕಿ ಪ್ರಕಾಶನಬೆಲೆ – 80 ವಿರಹಿ ದಂಡೆಯ ವಿಹಾರವ ಹೊತ್ತು…. ಪ್ರಕೃತಿಯನ್ನು ತನ್ನೊಳಗೆ ಆವಾಹಿಸಿಕೊಂಡು ಆ ಆವಾಹನೆಯಲ್ಲಿ ವಿವಿಧ ತೆರನಾದ ತುಮುಲಗಳನ್ನು ಅನುಭವಿಸಿ ಕೊಳ್ಳುವುದು ಒಂದು ಅಪರೂಪದ ಪ್ರಕ್ರಿಯೆ. ಅದು ಜಗತ್ತಿನಲ್ಲಿ ವಿಜ್ಞಾನಿ ಗಳಿಗಿಂತ ಕವಿಗಳಿಗೆ ಸುಲಭವಾಗಿ ಸಾಧ್ಯವಾಗುವಂತದ್ದಾಗಿದೆ. ಪ್ರಕೃತಿ ತನ್ನೊಳಗೆ ಅಡಗಿಸಿಕೊಂಡಿರುವಂತಹ ಸರ್ವ ಪರಿಕರಗಳೂ ಕೂಡ ಕವಿಯ ಆಸ್ತಿಯಂತೆ. ತನ್ನ ಕಲ್ಪನೆಗೆ ಅನುಭವಕ್ಕೆ ಬೇಕಾದಾಗ ಪ್ರಕೃತಿಗೆ ಹಾಗೂ ಪ್ರಕೃತಿಯ ವಸ್ತುಗಳಿಗೆ ಬಣ್ಣ ಕೊಟ್ಟಿಕೊಳ್ಳುವ […]

ವಿಮರ್ಶೆ

ದೇವರದೇನು ದೊಡ್ಡಸ್ತಿಕೆ ಬಿಡು ನನ್ನ ಗಂಡನ‌ ಮುಂದ (ಆನಂದ ಕಂದರ ಪದ್ಯವೊಂದರ ಅನ್ವಯಿಕ ವಿಮರ್ಶೆ) ನಲ್ವಾಡುಗಳು ಆನಂದ ಕಂದರ(ಬೆಟಗೇರಿ ಕೃಷ್ಣಶರ್ಮರ) ಕವಿತಾ ಸಂಕಲನ. ಹೊಸಗನ್ನಡದ ಶ್ರೇಷ್ಠ ಸಂಕಲನಗಳಲ್ಲೊಂದು.ಇ ದರಲ್ಲಿ‌ ಇಪ್ಪತ್ತೊಂದು ಗೀತಗಳಿವೆ.ಇವುಗಳನ್ನು ಜನಪದ ಪ್ರೀತಿಗೀತಗಳು ಎಂದು ಅವರೇ ಕರೆದಿದ್ದಾರೆ.ಹೆಸರೇ ಹೇಳುವಂತೆ ಸಂಕಲನದ ತುಂಬ ಇರುವದು ಹಳ್ಳಿಗರ ಪ್ರೀತಿ‌ಲೋಕವೇ.ಜಾನಪದ ಮುಗ್ಧ ಗಂಡು ಹೆಣ್ಣುಗಳ ಸಹಜ ಪ್ರೀತಿ,ಅವರ ದಾಂಪತ್ಯ ಅಲ್ಲಿನ ಸಹಜ ಸುಂದರ ಲೋಕ ಈ ಕವಿತೆಗಳ ವಸ್ತು.ಗಂಡು ಹೆಣ್ಣು ಪರಸ್ಪರ ಆಕರ್ಷಣೆಗೊಳಗಾಗುವ ಚಿತ್ರದಿಂದ ಹಿಡಿದು ಅವರ ಮದುವೆ, ಸುಂದರ […]

ಪರಮೂ ಪ್ರಪಂಚ

ಪರಮೂ ಪ್ರಪಂಚಕಥಾಸಂಕಲನಲೇಖಕರು- ಇಂದ್ರಕುಮಾರ್ ಎಚ್.ಬಿಇಂಪನಾ ಪುಸ್ತಕ ವೃತ್ತಿಯಿಂದ ಶಿಕ್ಷಕರಾಗಿರುವ ಇಂದ್ರಕುಮಾರ್ ಅವರು ನಾಡಿನ ಪ್ರಮುಖ ಕಥೆಗಾರರಲ್ಲಿ ಒಬ್ಬರು. ಮೊನ್ನೆಯಷ್ಟೇ ಅವರ ಕಥೆಯೊಂದು ‘ ಸೂಜಿದಾರ ‘ ಎಂಬ ಹೆಸರಿನಲ್ಲಿ ಸಿನೆಮಾ ಆಗಿದೆ. ‘ಆ ಮುಖ’, ‘ನನ್ನ ನಿನ್ನ ನೆಂಟತನ’, ‘ಪರಮೂ ಪ್ರಪಂಚ’ ಮತ್ತು ‘ಕಾಣದ ಕಡಲು’ ಅವರ ಕಥಾಸಂಕಲನಗಳು.‘ಮೃದುಲಾ’,’ ಹುಲಿಕಾನು ‘ ಅವರ ಪ್ರಕಟಿತ ಕಾದಂಬರಿಗಳು. ಈ ಕಥಾಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಗಿಫ್ಟ್ – ಇಪ್ಪತ್ತು ವರ್ಷಗಳ ನಂತರ ಸಂತೆಯಲ್ಲಿ ಸಿಕ್ಕ ಇಬ್ಬರು ಪ್ರೇಮಿಗಳ ಕಥಾನಕ. […]

ಆಖ್ಯಾನ

ಆಖ್ಯಾನ ಆಖ್ಯಾನಲೇಖಕರು- ಮೂರ್ತಿ ಅಂಕೋಲೆಕರಕಥಾಸಂಕಲನಪ್ರಕಾಶಕರು- ಕ್ರೈಸ್ಟ್ ವಿಶ್ವವಿದ್ಯಾಲಯ ಕನ್ನಡ ಸಂಘ ಜೀವ ವಿಮಾ ನಿಗಮದ ಅಧಿಕಾರಿಯಾಗಿ ಈಗ ನಿವೃತ್ತಿ ಜೀವನ ನಡೆಸುತ್ತಿರುವ ಮೂರ್ತಿ ಅವರು ತಮ್ಮ ಇಪ್ಪತ್ತರಿಂದ ಮೂವತ್ನಾಲ್ಕನೇ ವಯಸ್ಸಿನವರೆಗೆ ಬರೆದ ಕಥೆಗಳಲ್ಲಿ ಆಯ್ದ ಹತ್ತು ಕಥೆಗಳು ಇಲ್ಲಿವೆ. ಇದಕ್ಕೆ ಕೆ.ವಿ. ತಿರುಮಲೇಶ್ ಅವರು ಮುನ್ನುಡಿ ಬರೆದಿದ್ದಾರೆ.ನಾನಿಲ್ಲಿ ಉದ್ದೇಶಪೂರ್ವಕವಾಗಿ ಪ್ರತೀ ಕಥೆಯ ಬಗ್ಗೆ ಬರೆಯುವುದಿಲ್ಲ. ಏಕೆಂದರೆ ಇವು ಸಾಕಷ್ಟು ಸಂಕೀರ್ಣವಾಗಿ ಇದ್ದು ಒಂದೇ ಹಿಡಿತಕ್ಕೆ ಸಿಗುವಂಥವಲ್ಲ. ಇವೆಲ್ಲವೂ ಬಹಳ ಪ್ರಬುದ್ಧ ಕಥೆಗಳೆಂದು ಮಾತ್ರ ಹೇಳಬಹುದು. ಕತೆಯನ್ನು ಗಂಭೀರವಾಗಿ […]

ಘಾಚರ್ ಘೋಚರ್

ಘಾಚರ್ ಘೋಚರ್ಕಥಾಸಂಕಲನಲೇಖಕ: ವಿವೇಕ ಶಾನಭಾಗ ಏಕತ್ವ ಮನಸ್ಸಿನ ಗುಣ. ಆದರೆ, ಪ್ರತೀ ಉನ್ಮೇಷ, ನಿಮೇಷದಲ್ಲಿಯೂ ಮಗದೊಂದು ವಿಷಯ ಚಿಂತನೆಗೆ ಜಾರಬಲ್ಲ ಮನಸ್ಸು ಒಂದು ಕ್ರಮಬದ್ಧತೆಗೆ ಒಳಪಡಲು ಅಭ್ಯಾಸ ಬೇಕು. ಬದುಕು ಅದೇ ಮನೋಭ್ಯಾಸದ ಪಡಿಯಚ್ಚು‌. ಅದರ ಈ ಅಣಿಮ, ಗರಿಮಾದಿ ಗುಣಗಳ ಬಿಚ್ಚಿಡುವ ಈ ಕಥಾಸಂಕಲನ ಈ ವಿಶಿಷ್ಟ ನಿರೂಪಣೆಯಿಂದಾಗಿ ಹೃದಯವನ್ನು ಗೆಲ್ಲುತ್ತದೆ. ಒಂದು ನೀಳ್ಗತೆ, ಐದು ಕಥೆಗಳ ಸಂಗ್ರಹವಿದು. ಘಾಚರ್ ಘೋಚರ್ ನೀಳ್ಗತೆಯ ಮುಂದುವರೆದ ಭಾವವೇ ಉಳಿದ ಕಥೆಗಳು ಎಂಬ ಸುಳಿವು ಕೊನೆಯವರೆಗೂ ಓದುವಾಗ ಅನಿಸುತ್ತದೆ. […]

ಪರಿಧಾವಿ

ಪುಸ್ತಕ ವಿಮರ್ಶೆ ಪರಿಧಾವಿ ಡಾ. ಅಜಿತ ಹೆಗಡೆಯವರ – ಪರಿಧಾವಿ-ಆಧುನಿಕ ಬದುಕಿನ ಕನ್ನಡಿ. ಎದುರಾದ ಅಡೆತಡೆಗಳಿಗೆ ಮುಖ ಕೊಟ್ಟು ಬದುಕುವ  ಆ ಸಂಘರ್ಷವನ್ನೆ ಬದುಕೆಂದು ಸ್ವೀಕರಿಸುವ ಜನರು ಜನಸಾಮಾನ್ಯರು. ಅವರ ಬದುಕಿನಲ್ಲಿ ಸಂಭವಿಸದ ಘರ್ಷಣೆಗಳಿಲ್ಲ, ಉಂಟಾಗದ ವಿಕೋಪಗಳಿಲ್ಲ. ನಡೆಯದ ಕಥೆಗಳಿಲ್ಲ. ಹಾಗಾಗಿ ಹಿಂದಿನ ಕಥೆಗಳಿಗೂ ಇಂದಿನ ಕಥೆಗಳಿಗೂ ಅಂತಹ ವ್ಯತ್ಯಾಸಗಳೇನೂ ಇರುವುದಿಲ್ಲ. ಮಾನವ ಸ್ವಭಾವಗಳು ಎಲ್ಲ ಜನಾಂಗಕ್ಕೂ, ಎಲ್ಲ ಕಾಲಕ್ಕೂ ಒಂದೇ ರೀತಿ ಇದ್ದರೂ ಕಾಲಧರ್ಮಕ್ಕೆ ತಕ್ಕಂತೆ ಈ ಜನಸಾಮಾನ್ಯರ ಜೀವನ ಸಂಘರ್ಷವೂ ಭಿನ್ನ ಪಾತಳಿಯಲ್ಲಿ ಮೈತಾಳಿಬರುವುದು. […]

ಬಿತ್ತಿದ ಬೆಂಕಿ

ಬಿತ್ತಿದ ಬೆಂಕಿ ಇಲ್ಲಿ ಬಿತ್ತಿದ ಬೆಂಕಿ ಸುಡುವುದಿಲ್ಲ, ಪರಿವರ್ತಿಸಿ ಬೆಳೆಸುತ್ತದೆ. ಇತ್ತೀಚೆಗೆ ಕಾದಂಬರಿಕಾರರು ಮತ್ತು ಹಿರಿಯ ಲೇಖಕರು, ಕವಿತೆಗಳನ್ನು ರಚಿಸುವುದರಲ್ಲಿ ತೊಡಗಿರುವುದು ಆಸಕ್ತಿಕರ ಸಂಗತಿ. ನಾನು ಗಮನಿಸಿದಂತೆ ಅವರಲ್ಲಿ ಎಸ್. ದಿವಾಕರ, ಇಂದ್ರಕುಮಾರ್ ಎಚ್.ಬಿ ಜೊತೆಗೆ ಶ್ರೀಧರ ಬನವಾಸಿ ಅವರು ಪ್ರಮುಖರು. ಏಕೆ ಹೀಗೆ ಎಂಬುದು ಕೂಡಾ ಚರ್ಚಾರ್ಹ ಸಂಗತಿಯೇ! ಫಕೀರ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಶ್ರೀಧರ ಬನವಾಸಿ ಅವರು ಬೇರು (2017) ಕಾದಂಬರಿಯ ಮೂಲಕ ಮನೆಮಾತಾದವರು. ಬೇರು ಒಟ್ಟು ಒಂಬತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅವರು […]

ಪುಸ್ತಕ ಸಂಗಾತಿ

ಅಲೆಮಾರಿಯ ದಿನದ ಮಾತುಗಳು ಅನುದಿನದ ಅನುಭಾದ ನುಡಿಗಳು(ಗಂಗಾಧರ ಅವಟೇರ ಅವರ “ಅಲೆಮಾರಿಯ ದಿನದ ಮಾತುಗಳು”) ಪ್ರೊ.ಗಂಗಾಧರ ಆವಟೇರ ಬಹುಕಾಲದ ಗೆಳೆಯ.ಬೊಗಸೆ ತುಂಬ ಪ್ರೀತಿ ತುಂಬಿಕೊಂಡೇ ಮಾತನಾಡುವಾತ. ಮನದಲ್ಲಿ, ಮಾತಲ್ಲಿ ಎರಡಿಲ್ಲದ ನೇರ ನುಡಿಯ ತುಂಬ ಹೋರಾಟದ ಬದುಕನ್ನು ಬದುಕುತ್ತ ಬಂದಾತ.ಅದಕ್ಕೆ ಹಿನ್ನೆಲೆಯಾಗಿಯೇ ಬದುಕಿದಾತಸದ್ಯಕ್ಕೆ ಇತಿಹಾಸ ಪ್ರಸಿದ್ಧ ಕುಕನೂರ ತಾಲೂಕಿನ‌ ಮಹಾದೇವ ದೇವಾಲಯ ನೆಲೆಸಿರುವ ಇಟಗಿಯ ಶ್ರೀ ಮಹೇಶ್ವರ ಪಿ.ಯು.ಕಾಲೆಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮಹಾಲಿಂಗಪೂರದಲ್ಲಿ ಉಪನ್ಯಾಸಕನಾಗಿದ್ದಾಗಿನಿಂದಲೂ ಅವರ ಆತ್ಮೀಯ ಸ್ನೇಹದ ಸವಿ ನನಗೆ ದೊರಕಿದುದುಂಟು.ಅದನ್ನೆಲ್ಲ ಬರೆಯಲು ಇದು […]

Back To Top