Category: ಇತರೆ

ಇತರೆ

ಏಕೀ ಏಕತಾನತೆ

ಲಹರಿ ಏಕೀ ಏಕತಾನತೆ ಸ್ಮಿತಾ ಭಟ್ ಅಮ್ಮಾ ನಿಂಗೆ ಇತ್ತೀಚಿಗೆ ಫಲಾವ್ ಮಾಡೋಕೆ ಬರಲ್ಲ ಎಂದು ಊಟಕ್ಕೆ ಕುಳಿತವ ಅಸಾಧ್ಯವಾದ ಅಸಮಾಧಾನ ತೋರಿಸಿ ಎರಡು ತುತ್ತು ತಿಂದ ಶಾಸ್ತ್ರ ಮಾಡಿ ಗೊಣಗುತ್ತಾ ಎದ್ದು ಹೊರಟೇ ಹೋದ. ನನಗೋ ಅಳುವೇ ತುಟಿಗೆ ಬಂದ ಅನುಭವ. ಮಾತು ಮಾತಿಗೂ ಅಮ್ಮನ ಫಲಾವ್ ಅಂದ್ರೆ ಅದೆಷ್ಟು ರುಚಿ, ಯಾರಿಗೂ ಈತರ ಮಾಡೋಕೆ ಬರಲ್ಲ ಎಂದು ಯಾರದ್ದಾದರೂ ಮನೆಯಲ್ಲಿ, ಹೋಟೆಲ್‌ ಗಳಲ್ಲಿ , ತಿಂದು ಬಂದಾಗೆಲ್ಲ ಪಲಾವ್ ನ ಗುಣ ಸ್ವಭಾವ ದೂರುತ್ತ […]

ನಿತ್ಯ ಸಾವುಗಳ ಸಂತೆಯಲಿ ನಿಂತು

ಲೇಖನ ನಿತ್ಯ ಸಾವುಗಳ ಸಂತೆಯಲಿ ನಿಂತು ಬದುಕ ಪ್ರೀತಿ ಧೇನಿಸುತ್ತಾ… ಮಲ್ಲಿಕಾರ್ಜುನ ಕಡಕೋಳ ಕೊರೊನಾ ಎಂಬ ಸಾವುಗಳ ಶಕೆ ಆರಂಭವಾಗಿ ಆರೇಳು ತಿಂಗಳುಗಳೇ ಕಳೆಯುತ್ತಿವೆ. ತೀರಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಜಾಲಾಡುತ್ತಿದ್ದರೆ ಗುಡ್ಡೆ, ಗುಡ್ಡೆ ಸಾವುಗಳ ಗುಡ್ಡವೇ ಗೋಚರ. ಜತೆಯಲಿ ಕೆಲಸ ಮಾಡಿದ ಸಹೋದ್ಯೋಗಿಗಳು ಸೇರಿದಂತೆ ನಮ್ಮ ಸಾಂಸ್ಕೃತಿಕ ಬಳಗದ ಒಡನಾಟದಲ್ಲಿರುವ ಸಾಹಿತಿ, ಕಲಾವಿದರ ಸಾಲು ಸಾಲು ಸಾವುಗಳು. ಸಾಹಿತಿ, ಕಲಾವಿದರ ಸಾವಿಲ್ಲದ ದಿನಗಳೇ ಇಲ್ಲ ಎನ್ನುವಂತಾಗಿದೆ. ನಾಳೆ ಯಾರ ಸರದಿಯೋ..? ಸಾವಿನ ಸರದಿಯಲ್ಲಿ ಕಾಯುತ್ತಾ ನಿಂತಂತಹ […]

ಎಂಜಿನಿಯರ್ಸ್ ಆಗಿ ನಾವೇನು ಮಾಡಬಹುದು?

ಲೇಖನ ಎಂಜಿನಿಯರ್ಸ್ ಆಗಿ ನಾವೇನು ಮಾಡಬಹುದು? ಸುಶ್ಮಿತಾ ಐತಾಳ್        ಎಂಜಿನಿಯರ್ಸ್ ಡೇ ಆದ ಇಂದು ಎಲ್ಲೆಲ್ಲೂ ನಮಗೆ ಆದರ್ಶ ಪ್ರಾಯರಾಗಿರುವ ಮಹಾನ್ ವ್ಯಕ್ತಿ ವಿಶ್ವೇಶ್ವರಯ್ಯನವರ ಭಾವಚಿತ್ರಗಳು ರಾರಾಜಿಸುತ್ತಿರುವುದು ಕಾಣುತ್ತಿವೆ. ಅವರು ಎಷ್ಟು  ಬುದ್ಧಿವಂತರಾಗಿದ್ದರು, ಎಷ್ಟು ಪರಿಶ್ರಮಿಗಳೂ ಪ್ರಾಮಾಣಿಕ ಕೆಲಸಗಾರರೂ ಶಿಸ್ತಿನ ಸಿಪಾಯಿಯೂ ಆಗಿದ್ದರು ಮುಂತಾಗಿ ಅವರ ಗುಣ ಗಾನ ಮಾಡುವುದು ಕೇಳುತ್ತಿದೆ. ಆದರೆ ಇಷ್ಟು ಮಾಡಿದರೆ ಮುಗಿಯಿತೇ? ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನವನ್ನು ಎಂಜಿನಿಯರ್ಸ್ ಡೇ ಎಂದು ನಾವು ಯಾಕೆ ಆಚರಿಸುತ್ತೇವೆ? ಈ […]

ವಿಶ್ವ ಅಭಿಯಂತರರ ದಿನಾಚರಣೆ.

ಲೇಖನ ವಿಶ್ವ ಅಭಿಯಂತರರ ದಿನಾಚರಣೆ. ಜಯಶ್ರೀ.ಭ.ಭಂಡಾರಿ. ಮೋಕ್ಷಗುಂಡ ವಿಶ್ವೇಶರಯ್ಯನವರ ಜನ್ಮದಿನವನ್ನು ಇಂಜನೀಯರ್ಸ ಡೇಯಾಗಿ ಆಚರಿಸಲಾಗುತ್ತದೆ. ಇಂದು (ಸಪ್ಟಂಬರ 15) ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾದ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ನದಿನ. ಇದನ್ನು ಭಾರತದಲ್ಲಿ ಇಂಜನೀಯರ್ಸ ಡೇ ಯನ್ನಾಗಿ ಆಚರಿಸಲಾಗುತ್ತಿದೆ.ಇಂಜನೀಯರಿಂಗ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪಾರ ಸೇವೆಯ ನೆನಪಿಗಾಗಿ ಅವರ ಜನ್ಮ ದಿನವನ್ನು ‘ಇಂಜನೀಯರ ದಿನ’ವನ್ನಾಗಿ ಆಚರಿಸಲಾಗುತ್ತದೆ.ಭಾರತ ಜನನಿಯ ತನುಜಾತೆ ಕರ್ನಾಟಕಕ್ಕೆ ವಿಶ್ವೇಶ್ವರಯ್ಯನವರು ದೊಡ್ಡ ಕೊಡುಗೆ.ಸಪ್ಟಂಬರ 15 1860 ರಂದು ಜನಸಿದ ಇವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಮುಂಬೈ ರಾಜ್ಯದ […]

ಆಡು ಭಾಷೆಯ ವೈಶಿಷ್ಟ್ಯತೆ

ಪ್ರಬಂಧ ಆಡು ಭಾಷೆಯ ವೈಶಿಷ್ಟ್ಯತೆ ಬಾಲಾಜಿ ಕುಂಬಾರ ನಮ್ಮ ಉತ್ತರ ಕರ್ನಾಟಕದ ಭಾಷೆಗೂ ದಕ್ಷಿಣ ಕನ್ನಡದ ಮಾತುಗಾರಿಕೆಗೂ ತುಂಬಾ ವ್ಯತ್ಯಾಸ ಕಾಣುತ್ತೇವೆ. ಉತ್ತರ ಕರ್ನಾಟಕದ ಮಂದಿ ಹೇಳಿ ಕೇಳಿ ತುಂಬಾ ಸೀದಾ ಸಾದಾ, ಭಾಳ ಮುಗ್ದ ಸ್ವಭಾವದ ಗಟ್ಟಿ ಜನ, ಬಿಳಿ ಜೋಳ ರೊಟ್ಟಿ , ಫುಂಡೆ ಪಲ್ಯ ಜೊತೆಗೆ ಉಳಾಗಡ್ಡೆ ಖಾರಾ, ಹಸಿ ಖಾರಾ ತಿಂದರೂ ‘ಇನ್ನೂ ಸ್ವಲ್ಪ ಸಪ್ಪಗೆ ಆಗ್ಯಾದ್ ಪಲ್ಯ’ ಎನ್ನುವ ಜವಾರಿ ಜನ, ಎಲ್ಲಿ ಹೋದರೂ ಏನಾದರೂ ಹೊಸತನ ಕಾಣುವುದು, ಹೊಸ […]

ಕನ್ನಡ ಸಾಹಿತ್ಯ ಪರಿಷತ್ತು ನಡೆದ ಬಂದ ದಾರಿ..!

ಕನ್ನಡ ಸಾಹಿತ್ಯ ಪರಿಷತ್ತು ನಡೆದ ಬಂದ ದಾರಿ..! ಈಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಬೇಕಿದೆ. ಪ್ರಸ್ತವಾಗಿ ಮ.ನು.ಬಳೆಗಾರರ ಅವಧಿ ಮುಗಿದಿದೆ. ಅದಕ್ಕಾಗಿ ಈಗಾಗಲೇ ತಯ್ಯಾರಿಯೂ ನಡೆದಿದೆ. ಹಾಗಾದರೆ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ಅವಲೇಕಿಸೋಣ..! ಬ್ರಿಟಿಷ್‌ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದ್ದ ಮದ್ರಾಸ್‌, ಮುಂಬೈ ಪ್ರಾಂತ್ಯಗಳಲ್ಲಿ ದ್ವೀಪಗಳಂತೆ ಸೊಂಡೂರು, ಸವಣೂರು, ರಾಮದುರ್ಗ ಮುಂತಾದ ಹಿರಿಯ, ಕಿರಿಯ ಸಂಸ್ಥಾನಗಳು ಇದ್ದವು. ಕನ್ನಡ ಜನ ಭಿನ್ನ ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರೂ ಅವರು ಆಡುತ್ತಿದ್ದ […]

ಶ್ವಾನೋಪಾಖ್ಯಾನ

ಹಾಸ್ಯ ಲೇಖನ ಶ್ವಾನೋಪಾಖ್ಯಾನ ಚಂದಕಚರ್ಲ ರಮೇಶ ಬಾಬು ನಮಗೆಲ್ಲಾ ಗೊತ್ತಿರುವ ಹಾಗೆ ನಾಯಿಗಳು ಅಥವಾ ಮರ್ಯಾದೆಪೂರ್ವಕವಾಗಿ ಕರೆಯುವುದಾದರೇ ಶುನಕಗಳು ಅಥವಾ ಶ್ವಾನಗಳು, ನಮ್ಮ ಸಮಾಜದ ಗಣ್ಯ ಜೀವಿಗಳಾಗಿವೆ.  ನಾನು ಮುಂಚಿನಿಂದಾ ಮನೆಯಲ್ಲಿ ನಾಯಿ ಸಾಕಾಣಿಕೆಯ ವ್ಯತಿರೇಕಿ.   ಬಹುಶ ನನ್ನ ಬಾಲ್ಯದಲ್ಲಿ ನನ್ನನ್ನಟ್ಟಿಸಿಕೊಂಡು ಬಂದ ನಾಯಿ ಅದಕ್ಕೆ ಕಾರಣವಿರಬಹುದು. ಅದು ಹಿಂದೆ ಬೀಳಲು ಕಾರಣ ನಾನು ಅದರ ಬಾಲ ತುಳಿದದ್ದು ಅಂತ ಹೇಳಿದ್ರೇ ಈ ನನ್ನ ನಿಲುವು ಸ್ವಲ್ಪ ಸಡಿಲವಾಗುತ್ತದೆ ಅಂತ ಮುಂಚೆನೇ ಹೇಳಲಿಲ್ಲ ಅಂತಿಟ್ಕೊಳ್ಳಿ. ಅದು ಬೇರೇ […]

ಅಳುವನ್ನು ಅನುಸರಿಸಿ ಹೋಗುವವನೇ ಕವಿ

ಪ್ರಬಂಧ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಸರಿತಾಮಧು ಹಕ್ಕಿಯಂಥ ಸಣ್ಣ ಜೀವಿಯೊಂದರ ಅಳುವಿಗೂ ಕಿವಿಯಾಗಬಲ್ಲವನೇ ಕವಿ ಎಂಬ ಮಾತು ಅಕ್ಷರಶಃ ಸತ್ಯ. “ರುದಿತಾನುಸಾರಿ ಕವಿಃ ” ಎಂಬುದಾಗಿ ಮಹರ್ಷಿ ವಾಲ್ಮೀಕಿಯನ್ನು ಕಾಳಿದಾಸ ಕವಿ ಹೆಸರಿಸಿ, ಹಕ್ಕಿಯ ಶೋಕ ಹಾಗೂ ಸೀತೆಯ ಪ್ರಲಾಪ ಎರಡನ್ನೂ ಹೃದ್ಯವಾಗಿಸಿಕೊಂಡ ಮಹಾನ್ ಕವಿ , ಅಂದರೆ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಎಂದರ್ಥ. ನವರಸಗಳಲ್ಲಿ ಕರುಣ ರಸವೊಂದೇ ಇರುವುದು ಎಂಬ ಮೀಮಾಂಸೆಗೂ ಪಾತ್ರನಾದ ಕವಿ ವಾಲ್ಮೀಕಿ.      ಸ್ವತಃ ಬೇಡ ನಾಗಿದ್ದು ರತ್ನಾಕರ […]

ಗುರುವಿನ ಗರಿಮೆ

ಲೇಖನ ಗುರುವಿನ ಗರಿಮೆ ನೂತನ ದೋಶೆಟ್ಟಿ ಬಾಲ್ಯದಲ್ಲಿ ಶಿಕ್ಷಣವೆಂದರೆ ಶಿಕ್ಷೆ  ಯೌವನದಲ್ಲಿ ಶಿಕ್ಷಣವೆಂದರೆ ಪರೀಕ್ಷೆಗಳು ಹಾಗೂ ಮೋಜು, ಆನಂತರದಲ್ಲಿ ಅದೇ ಶಿಕ್ಷಣ ವೃತ್ತಿಗೆ ರಹದಾರಿ.ಈ ರೀತಿಯಾಗಿ ಶಿಕ್ಷಣವನ್ನು ಸರಳೀಕರಿಸಬಹುದಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಎರಡು ಸರಳ ಸೂತ್ರಗಳನ್ನು ನಿಮ್ಮ ಮುಂದೆ ಇಡಬಯಸುತ್ತೇನೆ.  ಶಿಕ್ಷಣ= ಶಿಕ್ಷಣ ಸಂಸ್ಥೆ+ ವಿದ್ಯಾರ್ಥಿ ಉದ್ಯೋಗ= ಮಾರ್ಕ್ಸ+ ವಶೀಲಿ ಈ ಎರಡು ಸೂತ್ರಗಳನ್ನು ಇಟ್ಟುಕೊಂಡು ಇಂದಿನ ಶಿಕ್ಷಣದ ಬಗ್ಗೆ ನೋಡೋಣ. ಮೊದಲ ಸೂತ್ರದಲ್ಲಿ ಶಿಕ್ಷಣ ಸಂಸ್ಥೆಗಳು ಬಹು ಮುಖ್ಯವಾಗುತ್ತವೆ. ಉನ್ನತ ಶಿಕ್ಷಣದಲ್ಲಿ ಈ […]

ಶಿಶುತನದ ಹದನದೊಳು ಬದುಕಲೆಳಸಿ…

ಪ್ರಬಂಧ ಶಿಶುತನದ ಹದನದೊಳು ಬದುಕಲೆಳಸಿ… ಲಕ್ಷ್ಮಿ ನಾರಾಯಣಭಟ್ ಈ ಸುಂದರ ಮುಂಜಾನೆ ನನಗೆ ತುಂಬಾ ಪ್ರಿಯವಾದ ಹಾಡೊಂದರ ಸಾಲುಗಳು ನನ್ನ ಮನ:ಪಟಲದಲ್ಲಿ ಭಾವ ತರಂಗಗಳನ್ನು ಎಬ್ಬಿಸುತ್ತಿವೆ. ನಾನು ಹಾಡುಗಾರನಲ್ಲದಿದ್ದರೂ, ಈ ಸಾಲುಗಳಿಗೆ ದಯವಿಟ್ಟು ಕಿವಿಗೊಡಿ. ನೆನಪಿದೆಯೇ ನಿನಗೆ? ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ್ದು ನಿನಗೆ ನೆನಪಿದೆಯೇ ನಿನಗೆ? ಬಾ ಗೆಳೆಯ ಬಾರಯ್ಯಾ, ಆಟವಾಡೋಣ ಬಾಲ್ಯದ ನೆನಪನು ಮರಳಿ ಕಟ್ಟೋಣ. ನೆನಪಿದೆಯೇ ನಿನಗೆ? ನನಗೆ ಬೇಜಾರಾದಾಗಲೆಲ್ಲಾ ಈ ಸಾಲುಗಳನ್ನು ಗುಣುಗುಣಿಸುತ್ತೇನೆ. ಆಗ […]

Back To Top