Category: ಇತರೆ

ಇತರೆ

ಲಹರಿ

ಒಂದು ಪತ್ರ ಜಯಶ್ರೀ ಜೆ.ಅಬ್ಬಿಗೇರಿ ಕಾಲೇಜಿನಂಗಳದಿ ಕಾಲಿಟ್ಟ ದಿನದಂದೇ ನೀ ಕಣ್ಣಿಗೆ ಬಿದ್ದೆ. ಸುರಿವ ಸೋನೆ ಮಳೆಗೆ ಹಾಡೊಂದ ಗುಣುಗುಣಿಸುತ ಕಣ್ಮುಂದೆ ನಿಂದೆ. ತುಸುವೇ ತುಸು ದೂರದ ರಸ್ತೆಯಂಚಿನಲ್ಲಿ ನಿಂತು ಹರಿವ ಸಿಹಿ ಝರಿಯಂತೆ ನನ್ನೆಡೆ ಕಣ್ಣೋಟ ಹರಿಸಿದೆ. ಬೀಸುವ ತಂಗಾಳಿಯ ಜತೆ ನಿನ್ನ ಮೈಯ ಸುಗಂಧ ತೇಲಿ ಬಂದು ನನ್ನ ಮೈಯ ಸವರಿದಂತೆನಿಸಿ ನಿಂತಲ್ಲೇ ಒಮ್ಮೆ ನಡುಗಿದೆ.ಒಮ್ಮಿಂದೊಮ್ಮೆಲೇ ಬೀಸಿದ ಜೋರಾದ ಗಾಳಿಗೆ ಬಲು ದೂರದ ತನಕ ಹಾರಿದ ನಿನ್ನೆದೆಯ ಅಂದದ ಆಕಾರ ಮುಚ್ಚಿದ್ದ ದುಪ್ಪಟ್ಟಾ ತಂದು […]

ಮಕ್ಕಳ ವಿಭಾಗ

ಮಕ್ಕಳ ಗೀತೆ ಮಂಜುಳಾ ಗೌಡ ಬನ್ನಿರಿ ಬನ್ನಿರಿ ಗೆಳೆಯರೆಶಾಲೆಗೆ ಹೊಗೋಣವಿದ್ಯೆಬುದ್ದಿ ಕಲಿತು ನಾವುಜಾಣರಾಗೋಣ. ಹೂವುಗಳಂತೆ ನಾವೆಲ್ಲನಗುತ ಅರಳೋಣಅರಳಿ ನಿಂತು ಕೀರ್ತಿಯಪರಿಮಳ ಹರಡೋಣ. ಪಾಠವ ಕಲಿಯೋಣನಾವು ಆಟವ ಆಡೋಣಪಾಠವ ಕಲಿತು ಆಟವ ಆಡಿನಕ್ಕು ನಲಿಯೋಣ. ಹಕ್ಕಿಯಂತೆ ಹಾರಾಡೋಣದುಂಬಿಯಂತೆ ಝೇಂಕರಿಸೋಣನವಿಲಿನಂತೆ ನರ್ತಿಸೋಣಕೋಗಿಲೆಯಂತೆ ಹಾಡೋಣ. ಕಥೆಗಳ ಹೆಳೋಣ ನಾವುನೀತಿಯ ತಿಳಿಯೋಣ.ರಂಗುರಂಗಿನ ಚಿತ್ರವ ಬಿಡಿಸುತಖುಷಿಯಾಗಿರೋಣ. ಪುಸ್ತಕ ಓದೋಣ ವಿಧವಿಧವಿಷಯವ ಅರಿಯೋಣ.ಜ್ಞಾನವಪಡೆದು ಸುಜ್ಞಾನಿಗಳಾಗಿದೇಶವ ಕಟ್ಟೋಣ. *******

ಲಹರಿ

ನೆನಪುಗಳೇ ಮಧುರ. ಶೀಲಾ ಭಂಡಾರ್ಕರ್ ನೆನಪುಗಳೇ ವಿಚಿತ್ರ. ಒಂದಕ್ಕೊಂದು ಸಂಬಂಧ ಕೂಡಿಸಿ ಎಲ್ಲಿಂದೆಲ್ಲಿಗೋ ಎಳಕೊಂಡು ಹೋಗುವ ಪರಿಯಂತೂ ಅದ್ಭುತ. ನಮ್ಮ ಚಿಕ್ಕಪ್ಪ ಮತ್ತು ಚಿಕ್ಕಮ್ಮ ವಾರಾಂತ್ಯದಲ್ಲಿ ನಮ್ಮನೆಗೆ ಬರುವುದಿತ್ತು. ನಾವು ಚಿಕ್ಕವರಿದ್ದಾಗ ಶನಿವಾರವನ್ನು ಬಹಳ ಕಾತರದಿಂದ ಕಾಯುತಿದ್ದೆವು.ಚಿಕ್ಕಮ್ಮ ಭಾನುವಾರದ ತಿಂಡಿ, ಇಡ್ಲಿ ಅಥವಾ ಖೊಟ್ಟೆಯ ಹಿಟ್ಟನ್ನು ರುಬ್ಬುವ ಕಲ್ಲಿನಲ್ಲಿ ರುಬ್ಬಿ ಕೊಡುತಿದ್ದರು. ಆ ಉದ್ದಿನ ಹಿಟ್ಟು ರುಬ್ಬುತ್ತಾ ಅವರು ನಮಗೆ ಚಂದ ಚಂದದ ರೋಮಾಂಚಕಾರಿ ಕಥೆಗಳನ್ನು ಸೃಷ್ಠಿ ಮಾಡಿ ಹೇಳುವುದಿತ್ತು. ನಮಗದುವೇ ದೊಡ್ಡ ಫ್ಯಾಂಟಸಿಯಾಗಿತ್ತು.ಈಗಲೂ ಚಿಕ್ಕಮ್ಮನ ನೆನಪಾದ […]

ಪ್ರಸ್ತುತ

ಜಪಾನಿನ ಕಾವ್ಯ ಪ್ರಕಾರ ತಂಕಾ, ಕನ್ನಡದ ಅಂಗಳದಲ್ಲಿ ಮನುಷ್ಯ ಭಾವನಾ ಜೀವಿ. ತನ್ನ ಭಾವನೆಗಳ ಅಭಿವ್ಯಕ್ತಿಗೆ ತನಗೆ ಅನುಕೂಲವಾದ ಭಾಷೆಯನ್ನು ಬಳಸಿಕೊಳ್ಳುತ್ತಾನೆ. ಅದುವೇ ಮುಂದೆ ಸಾಹಿತ್ಯದ ರೂಪ ಪಡೆಯಿತು. ಸಹೃದಯರಿಗೆ ಭಾಷೆಯ ಹಂಗು ಇರುವುದಿಲ್ಲ. ಅಂತೆಯೇ ಅವರು ತಮ್ಮ ಹೃದಯಕ್ಕೆ ಸ್ಪಂದಿಸುವ ಸಾಹಿತ್ಯದ ಕಡೆಗೆ ವಾಲುತ್ತಾರೆ. ಅದಕ್ಕೆ ಭಾಷಾಂತರವೂ ಒಂದು ವರವಾಗಿದೆ. ಆ ಕಾರಣಕ್ಕಾಗಿಯೇ ಎಲ್ಲಿಯೊ ಇರುವ ಜಪಾನಿನ ಹಲವು ಸಾಹಿತ್ಯ ಪ್ರಕಾರಗಳು ಕನ್ನಡಿಗರ ಮನಗೆದ್ದು, ಸ್ವತಂತ್ರವಾಗಿ ಕನ್ನಡದಲ್ಲಿಯೆ ಕೃಷಿ ಆರಂಭಿಸಿವೆ. ಅವುಗಳಲ್ಲಿ ಹೈಕು, ತಂಕಾ… ಮುಂಚೂಣಿಯಲ್ಲಿವೆ. […]

ಜೀವನ

ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “ ಪ್ರೊ ಸುಧಾ ಹುಚ್ಚಣ್ಣವರ “ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “             “ದೃಷ್ಟಿಯಂತೆ ಸೃಷ್ಟಿ “ಎನ್ನುವ ಹಾಗೆ ನಮ್ಮಲ್ಲಿರುವ ವಿಶಾಲ ದೃಷ್ಟಿಕೋನಗಳೇ ನಮ್ಮ ಸುಂದರ ಬದುಕಿಗೆ ಆಧಾರವಾಗುತ್ತದೆ.ಸೃಷ್ಟಿಯಲ್ಲಿ ಇತರ ಜೀವಿಗಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತೀರ್ಮಾನ ಮಾಡುವ ವಿವೇಕ ಇರುವುದಿಲ್ಲ ಆದರೆ ಮನುಷ್ಯನಲ್ಲಿ ಈ ವಿವೇಕವೂ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿದೆ.ಸೃಷ್ಟಿಯ ಆದಿಯಿಂದಲೂ ಮನುಷ್ಯ ತನ್ನ ವಿವೇಕವನ್ನು ಹಲವಾರು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತ ಬಂದಿದ್ದಾನೆ.ನಮ್ಮ ಸುತ್ತಲಿರುವ […]

ವರ್ತಮಾನ

ಕವಡೆ ಲೋಬಾನದ ಪರಿಮಳಕ್ಕೆ ಬಿತ್ತು ಕರಾಳ ಕೊರೊನಾ ಪೆಟ್ಟು ಪ್ರತೀ ವರುಷವೂ ಸಂಕ್ರಮಣದಿಂದ ನಾಗರಪಂಚಮಿವರೆಗೆ ಹಳ್ಳಿ ಹಳ್ಳಿಗಳು ಸೇರಿದಂತೆ ನಗರ ಪಟ್ಟಣಗಳ ತುಂಬೆಲ್ಲಾ ವೃತ್ತಿರಂಗಭೂಮಿ ನಾಟಕಗಳ ಸುಗ್ಗಿ. ಬಹುಪಾಲು ಜಾತ್ರೆಗಳು ಜರುಗುವುದು ಇದೇ ಅವಧಿಯಲ್ಲೇ. ಒಕ್ಕಲುಮಕ್ಕಳು ಬೆಳೆವ ಬೆಳೆಗಳ ಫಸಲಿನಸುಗ್ಗಿ ಮುಗಿದು ಹಬ್ಬ, ಹುಣ್ಣಿಮೆ, ಜಾತ್ರೆಗಳ ಸಡಗರ ಸಂಭ್ರಮ. ವರ್ಷವೆಲ್ಲ ದುಡಿದ ಜೀವಗಳಿಗೆ ಆಡಿ ನಲಿದು, ಹಾಡಿ, ಕುಣಿವ ಹಂಗಾಮ. ಸಹಜವಾಗಿ ವೃತ್ತಿರಂಗ ನಾಟಕಗಳೆಂದರೆ ಜನ ಸಾಮಾನ್ಯರ ಮನರಂಜನೆಯ ಘಮಲು. ಕವಡೆ ಲೋಬಾನದ ಪರಿಮಳ. ಝಗಮಗಿಸುವ ಬಣ್ಣಬಣ್ಣದ […]

ಹಾಸ್ಯ

ಮನೆಯೇ ಮಂತ್ರಾಲಯ? ಜ್ಯೋತಿ ಡಿ .ಬೊಮ್ಮಾ ಮತ್ತದೆ ಸಂಜೆ ಅದೇ ಬೇಸರದಲ್ಲಿ ಎಕಾಂಗಿಯಾಗಿ ಕುಳಿತಿದ್ದಾಗ ಬಾಜು ಮನಿ ಅಕ್ಕೋರು ಬಂದರು ,ಬರ್ರಿ ಬರ್ರಿ ಎಂದು ಸ್ವಾಗತಿಸಿ ಪಕ್ದಲ್ಲೆ ಇದ್ದ ಖುರ್ಚಿ ಕಡೆಗೆ ಕೈ ತೊರಿಸಿದೆ ಕುಳಿತುಕೊಳ್ಳಲು.ಕುರ್ಚಿ ಸರಕ್ಕನೆ ನನ್ನಿಂದ ನಾಲ್ಕು ಮಾರು ದೂರ ಎಳೆದುಕೊಂಡು ಕುಳಿತರು .ಮುಖಕ್ಕೆ ಮಾಸ್ಕ ಹಾಕಿಕೊಂಡೆ ಮಾತಾಡತೊಡಗಿದರು.ನಿಮಗ ಗೊತ್ತದ ಇಲ್ಲ ,ಇಲ್ಲೆ ಬಾಜು ಕಾಲೊನಿದಾಗ ಯಾರಿಗೋ ಕರೊನಾ ಬಂದದಂತರ್ರಿ ,ಅವರ ಮನ್ಯಾಗಿನವರಿಗೆಲ್ಲ ಎಳಕೊಂಡು ಹೊಗ್ಯಾರಂತ ,ಮುಖಕ್ಕೆ ಹಾಕಿದ ಮಾಸ್ಕ ತೆಗೆದು ಅಲ್ಲೆ ಪಕ್ಕದಲ್ಲಿ […]

ಪ್ರಸ್ತುತ

ಶಾಲೆಗಳ ಪುನರಾರಂಭ ಶಾಲೆಗಳನ್ನು ಪುನರಾರಂಭಿಸುವ ಕುರಿತು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿ ಪಾಲಕರ, ಶಿಕ್ಷಕರ , ಆಡಳಿತ ಮಂಡಳಿಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ.ಜುಲೈ 1 ರಿಂದ 4 ರಿಂದ 7 ನೇ ತರಗತಿ, ಜುಲೈ 15 ರಿಂದ 1 ರಿಂದ 3 ಮತ್ತು 8 ರಿಂದ 10 ನೇ ತರಗತಿ, ಜುಲೈ 20 ರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರ ಜನರ ಮುಂದಿಟ್ಟಿದೆ. ಮೊದಲನೇ ಮಾದರಿ ಮತ್ತು ತಾರೀಖುಗಳೆರಡೂ ಸಮಂಜಸವಾಗಿವೆಯೆಂಬುದು ನನ್ನ ಅಭಿಪ್ರಾಯ.ತರಗತಿಗಳನ್ನು ನಡೆಸಲು ಮೂರು […]

ಲಹರಿ

ಮಾವಿನ ಪುರಾಣ ಮಾವಿನ ಪುರಾಣ ಹಣ್ಣುಗಳಲ್ಲಿ ಮಾವು ಕೊಡುವ ಖುಷಿ, ಯಾವ ಹಣ್ಣು ಕೂಡ ಕೊಡದು ಎಂದರೆ ತಪ್ಪಾಗಲಾರದು.ಹಣ್ಣುಗಳಲ್ಲಿ ಮಾವಿಗೆ ವಿಶೇಷ ಸ್ಥಾನಮಾನ,ರಾಜಮರ್ಯಾದೆ.ಮಾವಿನ ಹಣ್ಣು, ಹಣ್ಣುಗಳ ರಾಜ. ಬೇಸಿಗೆ ಶುರುವಾದೊಡನೆ ಮಾವು ಶುರುವಾಗುತ್ತದೆ.ನಮ್ಮಲ್ಲಿ ಮೊದಲು ಗಿಣಿಮೂತಿ ಮಾವಿನಕಾಯಿ ಜೊತೆ ಈ ಸೀಸನ್ ಶುರುವಾಗುತ್ತದೆ.ಎರೆಡು ಮಳೆ ಆಗುವ ತನಕ ಮಾವು ತಿನ್ನುವುದಿಲ್ಲ.ಒಂದು ದೃಷ್ಟಿ , ಬಂದ ಈ ಗಿಣಿಮೂತಿ ಕಾಯಿಯ ಮೇಲೆ ಇಟ್ಟುಕೊಂಡು ನೋಡದ ಹಾಗೆ ಮಾರುಕಟ್ಟೆಯಲ್ಲಿ ಓಡಾಡುತ್ತೇವೆ.ಮಳೆ ಸ್ವಲ್ಪ ಲೇಟಾದರೆ ಚಡಪಡಿಕೆ ಶುರು.ನಾಲ್ಕೋ,ಐದೋ ಗಿಣಿ ಮಾವಿನಕಾಯಿ ಖರೀದಿಸಿ […]

ಪರಿಸರ

ಮರಗಳ ಕಡಿದರೆ ಖಚಿತ ನಮ್ಮದೇ ಮಾರಣ ಹೋಮ!! ಜಯಶ್ರೀ ಜೆ.ಅಬ್ಬಿಗೇರಿ                                                    ಇದು  ಕೇವಲ ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಮಾತು ಪ್ರತಿ ಗ್ರಾಮದಲ್ಲೂ ಚಾವಡಿ ಕಟ್ಟೆಗೆ ಹೊಂದಿಕೊಂಡಂತೆ ಮತ್ತು  ಊರ ಹೊರಗಿನ ಗ್ರಾಮ ದೇವತೆಯ ದೇವಸ್ಥಾನದ ಸನಿಹ ಗಿಡ ಮರಗಳ ಸೊಂಪಾದ ನೆರಳು ಇದ್ದೇ ಇರುತ್ತಿತ್ತು.  ದುಡಿದು ದಣಿದು ಬಂದ ರೈತಾಪಿ ವರ್ಗ,  ಹಿರಿಯರು, ಹೈದರು ಮಕ್ಕಳಿಗೆಲ್ಲ ಮನದ ಭಾವನೆಗಳನ್ನು ಹಂಚಿಕೊಳ್ಳುವ ಅಡ್ಡಾದಂತೆ ಕೆಲಸ ನಿರ್ವಹಿಸುತ್ತಿತ್ತು.  ಪ್ರತಿಯೊಬ್ಬರ ಮನೆಯ ಹಿಂದೆ ಹಿತ್ತಲಿನಲ್ಲಿ ತರಹೇವಾರಿ ತರಕಾರಿಯೊಂದಿಗೆ […]

Back To Top