ತೊಟ್ಟಿಲ ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂಬ ಮಾತನ್ನು ನಾವೆಲ್ಲ ನೆನಪಿಸಿಕೊಳ್ಳಬೇಕು. ಸಾಹಿತ್ಯ, ಸಂಗೀತ ಕಲೆ ಇತ್ಯಾದಿಗಳು ಹೆಣ್ಣಿನ ಮನದಲ್ಲಿ ನೈಜವಾಗಿ ಹಾಸು ಹೊಕ್ಕಾಗಿರುತ್ತೆ. ಆದರೆ ಎಷ್ಷ್ಟೊ ಸಲ ಮಹಿಳೆ ತನ್ನ ಸಂಸಾರದ ಜವಾಬ್ದ್ದಾರಿ, ಇತರೆ ಕರ್ತವ್ಯಗಳಲ್ಲಿ ತನ್ನ ಪ್ರತಿಭೆಗೆ ಬೆನ್ನು ತೋರಿಸಿದ್ದೂ ಕಾಣುತ್ತೆವೆ. ಕಣ್ಣಿಗೆ ಕಾಣಿಸುವ ತನ್ಮ ಕೆಲಸ, ಮನೆಯವರನ್ನೆಲ್ಲ ತನ್ನ ಕರ್ತವ್ಯ ದಲ್ಲಿ ಚ್ಯುತಿ ಬರದಂತೆ, ಸಹನೆಯಿಂದ ದುಡಿಯುವದೊಂದೆ ತನ್ನ ಕಾಯಕ ಎಂದು ಕೊಂಡ ಮಹಿಳೆ ಈಗ ತನ್ನತನವನ್ನು ಅರಿತು ಕಪ್ಪೆಚಿಪ್ಪಿನಿಂದ ಹೊರಬಂದು ಸಾಧನೆ ಮಾಡಿರುವದನ್ನು ಕಾಣುತ್ತಾ ಜಗತ್ತಿನ ಬದಲಾವಣೆ ಗಮನಿಸುವಂತಾಗುದೆ.
ಸೂಕ್ತ ಆಸಕ್ತಿ ಇದ್ದ ಮಹಿಳೆಗೆ ಅಧ್ಯಕ್ಷ ಸ್ಥಾನ ದೊರೆತರೆ ಯಾವದೇ ರಾಜಕೀಯ ಹಿತಾಸಕ್ತಿ, ವೈಯಕ್ತಿಕ ವೈಭವ , ಇರದೇ ಕೆಲಸ ಮಾಡಬಹುದಾಗಿದೆ ಸಾಹಿತ್ಯ ದ ಒಲುಮೆ ಇರುವ ನಿಜವಾದ ಅಕ್ಷರಸ್ಥ ಮಹಿಳೆಯನ್ನು ಈ ಸಾಹಿತ್ತ ಪರಿಷತ್ತಿನ ಅಧ್ಯಕ್ಷರಾಗಿ ಆರಿಸಿದರೆ ಮಹಿಳೆ ಕೂಡ ತನ್ನಲ್ಲಿ ರಕ್ತಗತವಾದ ಕಲಾಭಿಮಾನಿಯಾಗಿ, ಇತರರನ್ನೂ ಕಲೆಗೆ ಸೇರ್ಪಡಿಸಿ ಸಾಹಿತ್ಯ ವನ್ನು ಉತ್ತುಂಗಕ್ಕೆ ಏರಿಸಬಲ್ಲಳ
**********************
ಡಾ.ವಿಜಯಲಕ್ಷ್ಮಿ
Very nice