ಹೆಣ್ಣು ಸಾಹಿತ್ಯ,ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕ , ಅಡುಗೆ ಮನೆ ಸೌಟು ಹಿಡಿದಿರಬಹುದಾದ ಹೆಣ್ಣು ತಾಯಿಯಾಗಿ ,ಸೋದರಿಯಾಗಿ ಪತ್ನಿಯಾಗಿ ಸಂಸಾರದ ಕಣ್ಣಾಗಿದ್ದಾಳೆ ,ಸಮಾಜದ ಎಲ್ಲ ರಂಗಗಳಲ್ಲಿ ಸಕ್ರಿಯಳಾಗಿ ಸೈ ಎನಿಸಿಕೊಂಡಿರುವ ಆಕೆ ವೈದ್ಯಳಾಗಿ .ಯೋಧಳಾಗಿ .ಪ್ರಧಾನಿಯಾಗಿ,ರಾಷ್ಟ್ರಪತಿಯಾಗಿ ತನ್ನ ಸಾಮರ್ಥ್ಯ ಮೆರೆದಿದ್ದಾಳೆ . ಅಲ್ಲದೆ ಪುರುಷರಿಗೆ ಸಮನಾಗಿ ಎಲ್ಲ ಸ್ತರಗಳಲ್ಲಿ ಕಾರ್ಯವೆಸಗುವುದರಲ್ಲಿ ಯಶಸ್ವಿಯಾಗಿದ್ದಾಳೆ.
ಸಾಹಿತ್ಯಮತ್ತು ಸಂಸ್ಕಾರಕ್ಕೆ ಅವಳ ಕೊಡುಗೆ ಅಪಾರ, ಹೆಣ್ಣು ಸಮಾಜದ ಕಣ್ಣು .
ಆದರೆ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಏಕೊ ಏನೋ ಆಕೆಯನ್ನು ತನ್ನ ಅಧ್ಯಕ್ಷೆಯನ್ನಾಗಿ ಸ್ವೀಕರಿಸಿಲ್ಲ.ಈ ಸಂಸ್ಥೆಯಲ್ಲಿ ಪುರುಷರದ್ದೇ ಪಾರಮ್ಯ.ಈವರೆಗೆ ಕನ್ನಡ ಸಾಹಿತ್ಯ ಪರಿಷತ್ ಗದ್ದಿಗೆ ಹಿಡಿದು ಮುನ್ನಡೆಸಿರುವ ಎಲ್ಲರೂ ಪುರುಷರೇ.
1915 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ದೂರದೃಷ್ಟಿ ಹಾಗೂ ಕನ್ನಡ ಭಾಷೆಯ ಮೇಲಿದ್ದ ಪ್ರೀತಿ.ಅಭಿಮಾನದಿಂದಾಗಿ ಪ್ರಾರಂಭಗೊಂಡ ಈ ಸಂಸ್ಥೆ ,25 ಅಧ್ಯಕ್ಷರ ಆಡಳಿತದಲ್ಲಿ ಏಳು ಬೀಳುಗಳನ್ನು ಕಾಣುತ್ತಾ ಬಂದಿದೆ .ಕ.ಸಾಪ ಅಧ್ಯಕ್ಷರಾಗಿ ಸಾಹಿತಿಗಳೇ ಮೇಲುಗೈ ಸಾಧಿಸಿದ್ದರೂ ಇತ್ತೀಚೆಗೆ ಹೊಟೆಲ್ ಉದ್ಯಮಿ.ಬ್ಯಾಂಕ್ ಉದ್ಯಮಿ ,ಹಾಗೂ ಆಡಳಿತ ಅನುಭವಿಗಳೂ ಸಾರಥ್ಯವಹಿಸಿದ್ದಾರೆ .
ಪ್ರಾರಂಭದಿಂದ 2008 ರವರೆಗೆ ಸರ್ಕಾರದ ಅನುದಾನವಿಲ್ಲದೆ ನೌಕರರಿಗೆ ಸಂಬಳಕೊಡಲೂ ಸಾಧ್ಯವಾಗದ ಕ.ಸಾ.ಪ ಸಮ್ಮೇಳನಗಳನ್ನು ಸಾರ್ವಜನಿಕರ ವಂತಿಗೆಯಿಂದ ನಡೆಸಬೇಕಾದ ಪರಿಸ್ಥಿತಿ ಇದ್ದಿತು .ಆದರೆ 2008 ರಿಂದ 2012 ರವರೆಗೆ ಕಾರ್ಯನಿರ್ವಹಿದ ಸಮಿತಿ ಆಗ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ,ಎಸ್ ಯಡಿಯೂರಪ್ಪನವರನ್ನುಸಂಪರ್ಕಿಸಿ ಬೇಡಿಕೆ ಇಟ್ಟಾಗ ಬಡ್ಜೆಟ್ ತಯಾರಿಸುವಂತೆ ತಿಳಿಸಿದರಲ್ಲದೆ ಕನ್ನಡ ಕಟ್ಟುವುದು ನನ್ನ ಆದ್ಯ ಕರ್ತವ್ಯವೆಂದು ಅನುದಾನ ಬಿಡುಗಡೆ ಮಾಡಿದರಲ್ಲದೆ ಕ.ಸಾ.ಪದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ನೌಕರರನ್ನೂ ಖಾಯಂಗೊಳಿಸಿ ಸರ್ಕಾರಿ ನೌಕರರನ್ನಾಗಿಸಿದರು ,ಇದರಿಂದಾಗಿ ಸಮಿತಿಯ ತೀರ್ಮಾನದಂತೆ ತಾಲ್ಲೂಕು ಸಮ್ಮೇಳನಕ್ಕೆ ಒಂದು ಲಕ್ಷ .,ಎರಡು ದಿನದ ಜಿಲ್ಲಾ ಸಮ್ಮೇಳನಕ್ಕೆ ಐದು ಲಕ್ಷ ಮತ್ತು ಮೂರು ದಿವಸಗಳ ರಾಜ್ಯ ಸಮ್ಮೇಳನಕ್ಕೆ ಒಂದು ಕೋಟಿ ರೂ ಎಂದು ಅನುದಾನ ಪಡೆಯಲಾಯಿತು ಆ ಅವಧಿಯಲ್ಲಿ ನಾಲ್ಕು ರಾಜ್ಯ ಸಮ್ಮೇಳನಳು ,ಹಲವಾರು ಜಿಲ್ಲಾ ,ತಾಲ್ಲೂಕು ಸಮ್ಮೇಳನಗಳು ನಡೆದವು .ಆ ನಂತರ ಆಡಳಿತ ಗದ್ದುಗೆಗೇರಿದ ಬ್ಯಾಂಕ್ ಉದ್ಯಮಿ ಸರ್ಕಾರದ ಮನವೊಲಿಸಿ ಪ್ರತಿ ಸಮ್ಮೇಳನಕ್ಕೆ ಐದು ಕೋಟಿಗೂ ಹೆಚ್ಚು ಅನುದಾನದಿಂದ ಸಮ್ಮೇಳನ ನಡೆಸಿದರು .ನಂತರ ಆಯ್ಕೆಯಾಗಿ ಬಂದ ನಿವೃತ್ತ ಐ.ಎಎಸ್ ಅಧಿಕಾರಿ ಪ್ರತೀ ಸಮ್ಮೇಳನಕ್ಕೆ 10ಕೋಟಿಗೂ ಹೆಚ್ಚು ಹಣವನ್ನು ಪಡೆದು ಸಮ್ಮೇಳನ ನಡೆಸಿದುದು ನಮ್ಮ ಕಣ್ಣೆದುರು ಇದೆ .ಸರ್ಕಾರದ ಅನುದಾನವಲ್ಲದೆ ಸ್ಥಳೀಯ ದಾನಿಗಳು,ಸಂಘ ಸಂಸ್ಥೆಗಳು ಸರ್ಕಾರಿ ನೌಕಲರ ದೇಣಿಗೆ ಅಲ್ಲದೆ ಸ್ವಯಂಸೇವಕರ ಉಚಿತ ಸೇವೆ ಪಡೆದು ಸಮ್ಮೇಳನಗಳನ್ನು ನಡೆಸಲಾಗಿದೆ.ಕೇವಲ ಮೂರು ದಿವಸಗಳ ಸಮ್ಮೇಳನಕ್ಕೆ 15- 20 ಕೋಟಿಗಳ ದುಂದು ವೆಚ್ಚಮಾಡಲಾಗುತ್ತಿದೆ .ಈ ಬಗೆಗೆ ಪ್ರತಿಯೊಬ್ಬ ಕನ್ನಡಿಗನೂ ಯೋಚಿಸಬೇಕಾಗಿದೆ ,
ಅಧಿಕಾರ ಲಾಲಸೆ ಹಾಗೂ ಆಂತರಿಕ ಆಕಾಂಕ್ಷೆಗಳಿಂದಾಗಿ ದೀರ್ಘ ಕಾಲದಿಂದ ಬದಲಾಯಿಸದೆ ಉಳಿಸಿಕೊಂಡು ಬಂದಿದ್ದ ಮೂರು ವರ್ಷಗಳ ಅವದಿಯನ್ನು ಐದು ವರ್ಷಗಳ ಅವದಿಗೆ ವಿಸ್ತರಿಸಲಾಗಿದೆ .ಮುಂದಿನ ಚುನಾವಣೆಯ ನಂತರ ಈ ಅವಧಿ ಕಡಿಮೆ ಆಗುವ ಸಾಧ್ಯತೆ ಇದೆ.
ಕ,ಸಾ.ಪ,ಇಂದು ಒಂದೂವರೆ ಲಕ್ಷಕ್ಕೂ ಹೆಚ್ಚು ಆಜೀವ ಸದಸ್ಯರನ್ನು ಒಳಗೊಂಡಿದೆ ..ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಎಲ್ಲ ಸದಸ್ಯರನ್ನು ಖುದ್ದಾಗಿ ಭೇಟಿಯಾಗಿ ಮತ ಯಾಚನೆ ಮಾಡಲು ಸಾಧ್ಯವಾಗಲಾರದು,ಆದರೆ ಮನವಿಯನ್ನಾದರೂ ಮಾಡಿಕೊಳ್ಳಲೇ ಬೇಕು .ಮನವಿಪತ್ರ ಮುದ್ರಣ,ಅಂಚೆ ವೆಚ್ಚ ಇತ್ಯಾಧಿಗಳಿಗಾಗಿ ಕನಿಷ್ಟ ಒಂದು ಕೋಟಿ ರೂ.ಬೇಕಾಗಬಹುದು ಅಲ್ಲದೆ ಪ್ರತಿ ಜಿಲ್ಲಾ ಕೇಂದ್ರಕ್ಕಾದರೂ ಭೇಟಿ ನೀಡಿ ಮನವಿ ಮಾಡಿಕೊಳ್ಳಬೇಕು.ಹತ್ತಾರು ಕಾರುಗಳನ್ನು ಬಾಡಿಗೆ ಹಿಡಿದು ರಾಜಕಾರಿಣಿಗಳಂತೆ ಮತಯಾಚನೆಗೆ ಕಳುಹಿಸಬೇಕು.ಜಿಲ್ಲಾಧ್ಯಕ್ಷರ ಚುನಾವಣೆ ಸಹ ಏಕ ಕಾಲದಲ್ಲಿ ನಡೆಯುವುದರಿಂದ ಅವರ ಸಹಕಾರ ಅಗತ್ಯ.ಕ.ಸಾಪ ಬೈಲಾ ಪ್ರಕಾರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವನು ಪ್ಲತಿಯೊಬ್ಬ ಸದಸ್ಯನ ಓಟನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುವುದರಿಂದ ಚುನಾವಣಾ ವೆಚ್ಚ ಹೆಚ್ಚಾಗುತ್ತದೆ .
ವಿಧಾನ ಸಭೆ.ಮತ್ತು ಸಂಸತ್ ಚುನಾವಣೆಗಳಂತೆಯೇ ಬಿರುಸಿನಿಂದ ನಡೆಯುವ ಚುನಾವಣೆಯಲ್ಲಿ ಸ್ತ್ರೀಯರು ಭಾಗವಹಿಸಲು ಹಿಂಜರಿಯುತ್ತಿದ್ದಾರೆ.ವಹಿಳೆಯರು ನಾಲ್ಕು ಬಾರಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ .ಆದರೆ ಕ.ಸಾ.ಪ.ಅಧ್ಯಕ್ಷರಾಗಲು ಮುಂದೆ ಬರಲು ಸಾಧ್ಯವಾಗದಿರುವುದಕ್ಕೆ ಇವುಗಳು ಕಾರಣಗಳಾಗಿವೆ .ವಾಸ್ತವವಾಗಿ ಮಹಿಳೆಯರು ಅದ್ಯಕ್ಷರಾದರೆ ಸಾಹಿತ್ಯ ಪರಿಷತ್ತು ಮತ್ತಷ್ಟು ಸದೃಢವಾಗಬಹುದು ,ಆದರೆ ಅವರೊಟ್ಟಿಗೆ ಪ್ರಾಮಾಣಿಕವಾಗಿ ದುಡಿಯುವ ಸಾಹಿತ್ಯ ,ಸಂಸ್ಕೃತಿಯ ಅರಿವಿರುವ ಪುರುಷರ ಪ್ರವೇಶ ಅಗತ್ಯವಾಗಬಹುದು .ಇಂತಹ ಸಹಕಾರಿ ಸಂಸ್ಥೆಗಳಲ್ಲಿ ಪ್ರಾಮಾಣಿಕತೆ .ಧೈರ್ಯ.ಸ್ಥೈರ್ಯಗಳೊಂದಿಗೆ ಗುರಿಯೂ ಇರಬೇಕಾಗುತ್ತದೆ .
ಬದಲಾವಣೆಯನ್ನು ಬಯಸುವ ಸಾವಿರಾರು ಸಾಹಿತ್ಯಾಸಕ್ತರು ಸಾಹಿತ್ತಾಭಿಮಾನಿಗಳೂ ಆಜೀವ ಸದಸ್ಯರಿರುವುದರಿಂದ ಮಹಿಳೆಯರು ಸಂಘಟಿತರಾಗಿ ಆಸಕ್ತಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಬೇಕಾಗಿದೆ .
***************************
ಹೆಚ್,ಚಂದ್ರಪ್ಪ
ನಿಮ್ಮ ಸಲಹೆ ಗಳು ತುಂಬಾ ಯೋಗ್ಯವಾಗಿವೆ ಸರ್
ವಾಸ್ತವಕ್ಕೆ ಕನ್ನಡಿ ಹಿಡಿದಂತೆ ಇದೆ ತಮ್ಮ ಅನಿಸಿಕೆ ಹಾಗು ಅಭಿಪ್ರಾಯ ಸರ್