ಕವಿತೆಯೆಂಬ ಪುಳಕದ ಧ್ಯಾನ
ಮೊದಲ ಕವಿತೆಯ ರೋಮಾಂಚನ ಸ್ಮಿತಾ ಅಮೃತರಾಜ್ ನಿಜ ಹೇಳಬೇಕೆಂದರೆ ನಾನೊಬ್ಬಳು ಕವಯತ್ರಿ ಆಗುತ್ತೇನೆ ಅಂತ ಕನಸು ಮನಸಿನಲ್ಲೂ ಅಂದು ಕೊಂಡವಳಲ್ಲ. ಈಗಲೂ ಹಾಗನ್ನಿಸುತ್ತಿಲ್ಲ. ಆದರೆ ಕೆಲವೊಮ್ಮೆ ಹುಕಿ ಹುಟ್ಟಿ ಗೀಚಿದ ಎರಡು ಸಾಲು ಅಲ್ಲಿಲ್ಲಿ ಕಾಣಿಸಿಕೊಂಡು, ಕೇಳಿಸಿಕೊಂಡು, ಅದನ್ನೇ ಕವಿತೆ ಅಂತ ಭ್ರಮಿಸಿ ನನಗೆ ಕವಯತ್ರಿ ಅನ್ನುವ ಬಿರುದಾಂಕಿತವನ್ನ ಅವರಿವರು ಯಾವುದೇ ಕವಡೆ ಕಾಸಿಲ್ಲದೆ ಪುಕ್ಕಟೆ ಕೊಟ್ಟು ಗೌರವಾದರದಿಂದ ನೋಡುವಾಗ, ನಾನು ಅದನ್ನು ಸುಖಾ ಸುಮ್ಮಗೆ ಅಲ್ಲಗಳೆದರೆ ಅದು ಸಾಹಿತ್ಯ ಲೋಕಕ್ಕೇ ಮಾಡುವ ಅಪಚಾರವಲ್ಲವೇ? ಅಂತ ನನ್ನೊಳಗೆ […]
ನಾ ಬರೆದ ಮೊದಲ ಕವನ
ಮೊದಲ ಕವಿತೆಯ ರೋಮಾಂಚನ ಸಾಹಿತ್ಯದ ಕಡೆಗೆ ನನ್ನ ಒಲವು ಚಿಕ್ಕವಳಿರುವಾಗಿಂದಲೇ ಇದೆ. ಅಂದರೆ ಕಥೆ, ಕಾದಂಬರಿ ಓದುವುದು. ಕವನ ಬರೆಯುವುದಿರಲಿ ಓದುವದೂ ನನ್ನ ಅಳವಲ್ಲವೆಂದುಕೊಂಡವಳು ನಾನು. ಅಂತಹ ದರಲ್ಲಿ ಈಗ ನಾನು ಪ್ರಕಟಿಸಿದ ಎಂಟು ಕೃತಿಗಳಲ್ಲಿ, ಐದು ಕವನ ಸಂಕಲನಗಳು. ನನಗೇ ಆಶ್ಚರ್ಯವಾಗುತ್ತದೆ! ಗದ್ಯ ಓದುತ್ತಿರುವಾಗ ಸಾಮಾಜಿಕ, ಐತಿಹಾಸಿಕ,ಪತ್ತೇದಾರಿ ಕಾದಂಬರಿ, ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಭಂದ ಇತ್ಯಾದಿ ನನ್ನ ಓದಿನ ಪರಿಮಿತಿಯಲ್ಲಿ ಇರುತ್ತಿತ್ತು. ಸ್ನೇಹಿತರು ಕವನ ಓದಲು ಪುಸಲಾಯಿಸಿದರು. ಉಹುಂ, ಕಣ್ಣೆತ್ತಿ ನೋಡಿರಲಿಲ್ಲ. ಆದರೆ ನಿವೃತ್ತಿ ಹೊಂದಿದ ಮೇಲೆ […]
ಮೊದಲ ಕವಿತೆ
ಮೊದಲ ಕವಿತೆಯ ರೋಮಾಂಚನ ಶೀಲಾ ಭಂಡಾರ್ಕರ್ ನಾನು ಮೊದಲ ಕವಿತೆ ಬರೆದಾಗ ಅದು ಪದ್ಯವೋ ಗದ್ಯವೋ ನನಗೇ ತಿಳಿಯಲಿಲ್ಲ. ನಾನದನ್ನು ಕವಿತೆ ಅಂದುಕೊಂಡೆ ಅಷ್ಟೇ. ಬರೆಯಬೇಕೆಂದು ಬರೆದುದಲ್ಲ ಅದು ಕಾಳಿದಾಸನ ಬಾಯಿಯಿಂದ ಆಕಸ್ಮಿಕವಾಗಿ ನಿರರ್ಗಳವಾಗಿ ಶ್ಯಾಮಲಾ ದಂಡಕದ ಮಾಣಿಕ್ಯ ವೀಣಾ ಶ್ಲೋಕ ಹೊರಹೊಮ್ಮಿದಂತೆ ನನ್ನ ಮನಸ್ಸಿನೊಳಗೆ ಕೆಲವು ಸಾಲುಗಳು ಹಾಗೆ ಹಾಗೆಯೇ ಬರಲು ಶುರುವಾದವು. ಅಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೊಂದು ರಾತ್ರಿ. ಎಂದಿನಂತೆ ಅದೂ ಒಂದು ರಾತ್ರಿ. ಮಲಗಿದರೆ ನಿದ್ದೆ ಹತ್ತುತ್ತಿಲ್ಲ. ಏನೇನು ಮಾಡಿದರೂ ಪ್ರಯತ್ನ ಫಲಕಾರಿ […]
ಜ್ವಾಲೆಗಳ ನಡುವೆ…ಹುಟ್ಟಿದ ಕಾವ್ಯ
ಮೊದಲ ಕವಿತೆಯ ರೋಮಾಂಚನ ನಾಗರಾಜ ಹರಪನಹಳ್ಳಿ ನಾನು ಸಾಹಿತ್ಯದ ವಿದ್ಯಾರ್ಥಿ. ಉಪನ್ಯಾಸಕ ಆಗಬೇಕೆಂದು ಕೊಂಡಿದ್ದೆ. ಆಗಿದ್ದು ಪತ್ರಕರ್ತ. ಬಿಡುವಿನ ಮಧ್ಯೆ ಸಾಹಿತ್ಯದ ಓದು, ಬರಹ ಇದ್ದೇ ಇದೆ. ನನ್ನ ಮೊದಲ ಕವಿತೆ ಪ್ರಕಟವಾದದ್ದು ದಾವಣಗೆರೆಯ ಹೊಯ್ಸಳ ಪತ್ರಿಕೆಯಲ್ಲಿ. ೧೯೯೨ ರ ಸಮಯ. ಕವಿತೆಯ ಶೀರ್ಷಿಕೆ “ಕಲೆಗಳು” ಅಂತ ನೆನಪು. ಸಾಹಿತ್ಯ ಸಂಗಾತಿ ಆ ಕವಿತೆಯ ನೆನಪಿಸಿತು.ಹೊಯ್ಸಳದ ಪ್ರತಿ ಸಿಕ್ಕೀತೆಂದು ಹುಡುಕಾಡಿದೆ. ಸಿಗಲಿಲ್ಲ. ಕವಿತೆ ಬಂಧ ಗಟ್ಟಿಯಾಗಿರಲಿಲ್ಲ. ಬಂಡಾಯ ಶೈಲಿಯ ಕವಿತೆಯಾಗಿತ್ತು. ೧೯೯೧-೯೨ ಸಮಯದಲ್ಲಿ ಫ್ರೆಂಚ್ ಲೇಖಕರಾದ ಅಲ್ಬರ್ಟ […]
ಲೋಕಶಾಹಿರ ಅಣ್ಣಾಭಾವು ಸಾಠೆ
“ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ“ “ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ” ಹೀಗೆ ಹೇಳಿದ್ದು, ಯಾವ ವಿದೇಶಿ ವಿಚಾರವಂತನಲ್ಲ; ಮರಾಠಿ ಮೂಲ ಮಹಾನ್ ಸಾಹಿತಿ ಲೋಕಶಾಹಿರ ಅಣ್ಣಾಭಾವು ಸಾಠೆ. ದಮನಿತ, ಶೋಷಿತ, ಕಾರ್ಮಿಕ, ರೈತ ಈ ಎಲ್ಲ ವರ್ಗಗಳ ಧ್ವನಿಯಾಗಿ ಸಾಹಿತ್ಯ ರಚಿಸಿದ ಕ್ರಾಂತಿಪುತ್ರ. ಎರಡು ದಿನವೂ ಪೂರ್ಣ ಶಾಲೆಗೆ ಹೋಗದ ಇವರು ವಿಶ್ವಮಾನ್ಯ ಸಾಹಿತ್ಯವನ್ನು ಸ್ವ-ಅನುಭವದಿಂದಲೆ ರಚಿಸಿದರು. ಇವರ ಮಹಾನ್ ಸಾಹಿತ್ಯ ಇಂದು ಜಾಗತಿಕವಾಗಿ 27 ಭಾಷೆಗಳಲ್ಲಿ ಅನುವಾದಗೊಂಡಿದೆ. ಅಗಸ್ಟ 1 […]
ಚಂದ್ರ ಮತ್ತು ನಾನು…
ಮೊದಲ ಕವಿತೆಯ ರೋಮಾಂಚನ ಫಾಲ್ಗುಣ ಗೌಡ ಅಚವೆ. ಮನೆಯ ಅಂಗಳದಲ್ಲಿ ಅಪ್ಪನ ಆರಾಮ ಕುರ್ಚಿಯಲ್ಲಿ ನಕ್ಷತ್ರ ರಾಶಿಯನ್ನು ನೋಡುತ್ತ ಕೂತಿದ್ದೆ.ಹುಣ್ಣುಮೆಯ ಎರಡು ದಿನ ನಂತರದ ಚಂದ್ರ ನನಗೆ ವಿಶೇಷವಾಗಿ ಕಂಡ.ಅವನ ಕಾಂತಿಯಲ್ಲಿ ಬೆಳದಿಂಗಳು ಮೀಯುತ್ತಿತ್ತು.ನಕ್ಷತ್ರದಾಚೆಗಿನ ನೀಲಿ ಪರದೆಯ ಗುಂಟ ಹರಿವ ಅವಳ ಮುಗ್ಧ ಪ್ರೀತಿ ಮನಸೊಳಗೆ ಒಲವಿನ ಭಾಷ್ಯ ಬರೆಯುತ್ತಿತ್ತು.ತೆಂಗು ಗರಿಗಳ ನಡುವೆ ಆ ತುಂಬು ಚಂದಿರ ಬಂದು ನನ್ನೊಳಗೆ ಎಂಥದೋ ಮಿಂಚಿಸಿ ಹೋಗಿದ್ದ.ಆ ಮಿಂಚು ನನ್ನ ಮನಃಪಟಲದ ನರ ನಾಡಿಗಳಲ್ಲಿ ಸಂಚರಿಸಿ ಇಂಪಿನ ನಾದಗೈದು ನನ್ನನ್ನು […]
ಪುಟ್ಟಿ ಅನ್ನೊ ಮೊದಲ ಪದ್ಯ
ಮೊದಲ ಕವಿತೆಯ ರೋಮಾಂಚನ ಚೈತ್ರಾ ಶಿವಯೋಗಿಮಠ ಮೊದಲ ಸಾರಿ ಚೆಂದದ ಪದ್ಯ ಇದು ಅಂತ ಬರೆದದ್ದು ನನಗೆ ಅಷ್ಟು ನೆನಪಿಲ್ಲ. ಆದರೆ ಮೊದಲ ಸಲ ನಾನು ಪದ್ಯ ಬರೆದದ್ದು ಏಳನೇ ಕ್ಲಾಸಿನಲ್ಲಿ. ಆಗ ಪದ್ಯ ಅಂದರೆ ಏನು ಅಂತ ಸಹ ತಿಳಿದಿರಲಿಲ್ಲ. ಮನೆಗೆ ಪ್ರತಿ ವಾರ ತರಂಗ ವಾರಪತ್ರಿಕೆ ಖಾಯಂ ಬರುತ್ತಿತ್ತು. ಮತ್ತು ಮನೆಯ ಬಳಿಯ ನಗರ ಕೇಂದ್ರ ಗ್ರಂಥಾಲಯದ ಸದಸ್ಯತ್ವವೂ ಇತ್ತು. ಪ್ರತಿ ವಾರ ಪುಸ್ತಕಗಳನ್ನ ತಂದು ಓದೋದು ನನ್ನಿಷ್ಟದ ಕೆಲಸಗಳಲ್ಲೊಂದು. ತರಂಗದಲ್ಲಿ ಬರುವ ಮಕ್ಕಳ […]
ಮೊದಲ ಕವಿತೆಯ ಹುಟ್ಟು
ಮೊದಲ ಕವಿತೆಯ ರೋಮಾಂಚನ ಅರ್ಪಣಾ ಮೂರ್ತಿ ಸುಮಾರು ಮೂರು ವರ್ಷಗಳ ಹಿಂದಿರಬಹುದು, ಸ್ಮಾರ್ಟ್ ಫೋನ್ ಬಳಸಲು ಬಾರದ ದಿನಗಳಲ್ಲಿ ಅಚಾನಕ್ಕಾಗಿ ಉಡುಗೊರೆಯಾಗಿ ಸಿಕ್ಕಿದ ಸ್ಮಾರ್ಟ್ ಫೋನ್ ಮಂತ್ರದಂಡ ಕೈಗೆ ಸಿಕ್ಕಷ್ಟೇ ಖುಷಿ ತಂದಿತ್ತು. ಸಾಮಾಜಿಕ ಜಾಲತಾಣಗಳ ಬಳಕೆ ಅಭ್ಯಾಸವಿಲ್ಲದ ನನಗೆ ಎಫ್ಬಿಯ ಕುರಿತು ಒಂದು ಸಣ್ಣ ಕುತೂಹಲವನ್ನು ನನ್ನೊಳಗೆ ಮೂಡಿಸಿತ್ತು. ಪರಿಚಯದ ಗೆಳೆಯರ ಮಾತಿನಂತೆ ಕೆಲವೇ ಕೆಲವು ಬರಹಗಾರರ ಕವಿಗಳ ಸ್ನೇಹಪಟ್ಟಿಯಲ್ಲಿ ನಾನೂ ಸಹ ಸ್ಥಾನ ಗಿಟ್ಟಿಸಿದ್ದೆ. ಎಫ್ಬಿ ಲೋಕದಲ್ಲಿ ಗುರುತಿಸಿಕೊಂಡಿದ್ದ ಕವಿಗಳ ಸಾಲಿನಲ್ಲಿ ನಾ ಕಾಣದ […]
ಬಾಯಿಬಡುಕ ಸಾಮಾಜಿಕ ಮಾಧ್ಯಮಗಳು
ಲೇಖನ ನೂತನ ದೋಶೆಟ್ಟಿ ಭಾರತದಲ್ಲಿ ಅಸಹನೆ ಹೆಚ್ಚುತ್ತಿದೆ ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕೇಳಿಬರುತ್ತಿರುವುದಷ್ಟೇ ಅಲ್ಲ ;ಅದನ್ನು ಪುಷ್ಟೀಕರಿಸುವ ಅನೇಕ ಸಂಗತಿಗಳು ಮೇಲಿಂದ ಮೇಲೆ ನಡೆಯುತ್ತಿವೆ. ಮೊದ ಮೊದಲು ಇಂತಹ ಘಟನೆಗಳು ನಡೆದಾಗ ಆಘಾತವಾಗುತ್ತಿತ್ತು , ವೇದನೆಯಾಗುತ್ತಿತ್ತು . ಕೆಲ ಸಮಯದ ನಂತರ ಅದರಲ್ಲಿ ಕ್ರೂರತೆಯ ಛಾಯೆ ಇಣುಕಿದಾಗ ಕಳವಳವಾಗುತ್ತಿತ್ತು ;ಆಶ್ಚರ್ಯವೂ ಆಗುತ್ತಿತ್ತು. ಈಗ ಗೊಂದಲವಾಗುತ್ತಿದೆ ;ಯಾವುದು, ಯಾರಿಗೆ, ಯಾಕಾಗಿ ಅಸಹನೆಯಾಗುತ್ತದೆ ಎನ್ನುವುದನ್ನು ತಿಳಿಯಲಾಗದೆ ! ಅಭಿಪ್ರಾಯ ಬೇಧಗಳ ಹಿನ್ನೆಲೆಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಲ್ಲಿ […]
‘ಎಳೆ ಹಸಿರು ನೆನಪು ..’
ಲಹರಿ ವಸುಂಧರಾ ಕದಲೂರು ಆಗೆಲ್ಲಾ ಮೂರ್ನಾಲ್ಕು ವರ್ಷಗಳಿಗೊಮ್ಮೆ ಮನೆಯ ಸಾಮಾಗ್ರಿಗಳನ್ನು ಗಂಟುಮೂಟೆ ಕಟ್ಟಿಕೊಂಡು ನಮ್ಮ ಕುಟುಂಬ ಊರಿಂದೂರಿಗೆ ಪ್ರಯಾಣಿಸುತ್ತಿತ್ತು. ನಾನು ಸಣ್ಣವಳಿದ್ದಾಗಿನ ವಿಷಯವಿದು. ಈ ಸಂಚಾರದ ನಿರಂತರತೆಗೆ ನಮ್ಮಪ್ಪ ಸರಕಾರಿ ನೌಕರರಾಗಿದ್ದು ಹಾಗೂ ವರ್ಗಾವಣೆಯನ್ನು ಅವರು ಸಹಜವಾಗಿ ಸ್ವೀಕರಿಸುತ್ತಿದ್ದದ್ದು ಪ್ರಮುಖವಾಗಿತ್ತು ಎನ್ನುವುದು ನನಗೀಗ ಅರ್ಥವಾಗುತ್ತಿದೆ. ಹೀಗೆ ಪದೇ ಪದೇ ವರ್ಗವಾಗುತ್ತಿದ್ದರಿಂದ ನನ್ನ ಶಾಲಾ ಶಿಕ್ಷಣ ಮೈಸೂರು, ಹಾಸನ ಜಿಲ್ಲೆಗಳ ಹಲವು ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ನಡೆಯಿತು. ಮತ್ತೆ ಮತ್ತೆ ಹೊಸ […]