Category: ಅನುವಾದ

ಅನುವಾದ

ಸೇಡಿನ ಫಲ

ಸೇಡಿನ ಫಲ ವಿಲಿಯಂ ಬ್ಲೇಕ್ ಕವನದ ಅನುವಾದ ನನ್ನ ಗೆಳೆಯನ ಮೇಲೆ ಬಂದ ಮುನಿಸಿಗೆ ನಾನುತಾಳ್ಮೆಯಿಂದಲೆ ಅಂದೆ, ‘ಸುಮ್ಮನಿರು’ ಎಂದುಮಾಯವಾಗಿಯೆ ಹೋಯ್ತು ಕೋಪವಂದು.ನನ್ನ ವೈರಿಯ ಮೇಲೆ ಬಂದ ಮುನಿಸಿಗೆ ನಾನುಕೋಪದಿಂದಲೆ ನುಡಿದೆ, ‘ಚೆಂಡಾಡು’ ಎಂದುಮನದೊಳಗೆ ಬೆಳೆಯಿತದು ನನಗರಿವಿಲ್ಲದೆಲೆ ಹಗೆತನದ ಬೀಜವದು ಮೊಳಕೆಯೊಡೆಯುತ್ತಸಸಿಯಾಗಿ ಬೆಳೆದು ಮರವಾಗಿ ನಿಂತಿತ್ತುಭಯವೆಂಬ ಕಣ್ಣೀರ, ನಗುವೆಂಬ ಎಳೆ ಬಿಸಿಲನೀಡುತ್ತ ಬೆಳೆಸಿದೆನು ಹಗಲು ರಾತ್ರಿಯೆನ್ನದೆಲೆವಂಚನೆಯ ತಂತ್ರಗಳ ನಡುನಡುವೆ ತುರುಕುತ್ತಮರವಾಗಿ ಬೆಳೆಸಿದೆನು ಸೇಡಿನಾ ಗಿಡವನ್ನು ಮರ ಬೆಳೆದು ಹೂವಾಯ್ತು, ಹೂವರಳಿ ಹಣ್ಣಾಯ್ತುನನ್ನ ಅರಿ ನೋಡಿದನು ಥಳಥಳಿಪ ಹಣ್ಣನ್ನುಕಿಂಚಿತ್ತು […]

ಕಾಡಿನಲ್ಲಿ ಕಾಡಿದ ಭೂತ

ಅನುವಾದಿತ ಕಥೆ ಕಾಡಿನಲ್ಲಿ ಕಾಡಿದ ಭೂತ ಇಂಗ್ಲೀಷ್ ಮೂಲ: ಆರ್.ಕೆ.ನಾರಾಯಣ್       ಬಹಳ ವರ್ಷಗಳ ಹಿಂದೆ ನಡೆದ ಘಟನೆ. ನೀವು ನಂಬುತ್ತೀರೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ಘಟನೆ ನಡೆದುದು ಮಾತ್ರ ಸತ್ಯ. ನಾನು ಆಗ ಕಾರಿನಲ್ಲಿ ಹೋಗುತ್ತಿದ್ದೆ. ಆಗ  ನನ್ನ ಕಾರಿನ ಚಾಲಕ ದಾಸಪ್ಪ ತುಂಬ ಸಭ್ಯವಾದ ವ್ಯಕ್ತಿ. ಆದರೆ ಆ ದಿನ ಅವನು ಯಾಕೆ ಹಾಗೆ ವರ್ತಿಸಿದನೋ ಗೊತ್ತಿಲ್ಲ. ಅವನು ತುಂಬಾ ಕುಡಿದಿದ್ದಿರಬಹುದು. ಏನೇ ಆಗಲಿ, ನಿಮ್ಮ ಕುತೂಹಲಕ್ಕಾಗಿ ಈ ಕಥೆಯನ್ನು […]

ತರಗೆಲೆ

ಅನುವಾದ ತರಗೆಲೆ ಕನ್ನಡ ಮೂಲ: ನಾಗರೇಖಾ ಗಾಂವಕರ್ ಇಂಗ್ಲೀಷಿಗೆ: ಸಮತಾ ಆರ್. ತರಗೆಲೆ ಮರದಡಿಯ ನೆರಳಲ್ಲಿ ಬೆಚ್ಚಗೆ ಇತ್ತು ತರಗೆಲೆ.ಕಾಲಾಂತರದ ಕರಿಯಪ್ಪುಗೆಯಲ್ಲಿ ಮುಂದೊಂದು ದಿನ ಹಾಗೇಕೊಳೆತು ಹೋಗುವುದಿತ್ತುಮರಳಿ ಮಣ್ಣಡಿ ಸೇರಿ. ದಿಗ್ಗನೇ ಬೆಳಗಿದ ನಾಜೂಕುಬೆಳಕಿನ ಹೊಳಪುಅದೇಕೋ ಅರಿವ ಹೊಸೆವ ಅನಂತದ ನೆರಳಡಿತಂದು ನಿಲ್ಲಿಸಿತು.ತರಗೆಲೆಯ ಮಾಸಿದ ಬಣ್ಣಕ್ಕೆ ಹೊಂಬಣ್ಣದ ಹೊಳಪು.ಮತ್ತೆ ಚಿಗುರಿದಂತೆ ಸಂಭ್ರಮ.ನೆಲದ ನಿಯಮದ ಹಾಗೇ.ಮಬ್ಬು ಸರಿಸಿ ‘ ಕಾಣಬಯಸಿದ್ದ ಮನಗಾಣು’ ಎಂದು ಎದೆ ತೆರೆದು ಆಹ್ವಾನಿಸಿಅಪ್ಪಿ ಮುದ್ದಿಸಿತು ಬೆಳಕು. ಬೆಳಕಿನ ದಾರಿಯಲ್ಲಿ ಕಣ್ಢಿಗೆಣ್ಣೆಬಿಟ್ಪು ಹಾಗೇ ನೋಡುತ್ತಲೇಇತ್ತು ತರಗೆಲೆ […]

ಜಗವನೇ ಗೆಲುವೆನು ನಿನ್ನೊಲವೊಂದಿದ್ದರೆ.

ಅನುವಾದ ಜಗವನೇ ಗೆಲುವೆನು ನಿನ್ನೊಲವೊಂದಿದ್ದರೆ. ಇಂಗ್ಲೀಷ್ ಮೂಲ: ವಿಲಿಯಂ ಶೇಕ್ಸ್ ಪಿಯರ್ ಕನ್ನಡಕ್ಕೆ: ವಿ.ಗಣೇಶ್ ಹುಟ್ಟಿನ ಮದದಲಿ ಬೀಗುವರು ಕೆಲರು ಬುದ್ಧಿಮದದಲಿ ಕೆಲರು ಸಿರಿತನದ ಮದದಲಿ ಕೆಲರು, ರೂಪದ ಮದದಲಿ ಮತ್ತೆ ಕೆಲರು ದೇಹದಾಡ್ಯದಲಿ ಕೆಲರು, ಕೆಲರು ಉಡುಗೆತೊಡುಗೆಯಲಿ ಮೆರೆವರು ಗಿಡುಗ ಸಾಕುವ ಹುಚ್ಚು ಕೆಲರಿಗೆ, ಕುದುರೆ ಸಾಕುವ ಹುಚ್ಚು ಕೆಲರಿಗೆ ಅವರವರ ಮನಸಿನಣತಿಗೆ ಅವರವರ ಹುಚ್ಚು ಮೆರೆವುದು ಅಂತೆಯೇ ಈ ಕ್ಷಣಿಕ ಆಸೆ ಆಕಾಂಕ್ಷೆಗಳ ಹುಚ್ಚೊಂದೂ ನನ್ನ ಮನದೊಳಗಿನಿತಿಲ್ಲ ಅದಕಿಂತ ಮಿಗಿಲಾದ ಹುಚ್ಚೊಂದು ಕಾಡುತಿದೆ ಈ […]

ಅನುವಾದ ಸಂಗಾತಿ

ಕಿಟಕಿ — ಗೋಡೆ ಕನ್ನಡ ಮೂಲ:ವಸುಂಧರಾಕದಲೂರು ಇಂಗ್ಲೀಷಿಗೆ: ಸಮತಾ ಆರ್ ಕಿಟಕಿ — ಗೋಡೆ ನಾನೊಂದು ಕಿಟಕಿ; ಮುಚ್ಚಿಯೇಇದ್ದೇನೆ ಶತಮಾನಗಳಿಂದಗತಕಾಲದ ಗಾಳಿ ಒಳಗೆಸುಳಿದಾಡುತ್ತಾ ಕತ್ತಲ ಘಮಲಿನಅಮಲಲಿ ಉರುಳಾಡುತ್ತಾಎದ್ದೆದ್ದು ಕುಣಿಯುವಆತ್ಮಗಳೂ ಅಸ್ಥಿಪಂಜರಗಳೂನನ್ನೊಳಗಿವೆ. ವಿಶಾಲ ಬಿಳಲುಗಳ ಆಲದಮರವೊಂದು ಟಿಸಿಲೊಡೆದುತೊಗಟೆ ಕಳಚಿಕೊಳ್ಳದೆ ಬೇರೂರಿಮುಚ್ಚಿದ ಕಿಟಕಿಯಾಚೆಸ್ವಚ್ಛ ಗಾಳಿಗೆ ಚಿಗುರು ಚಿಗಿಸಿಹಕ್ಕಿ ಗೂಡಿಗೆ ಟೊಂಗೆ ಚಾಚಿದೆ.ಒಂದೊಂದು ಟೊಂಗೆಗೂಗೂಡು. ಗೂಡೊಳಗೆ ಕಾವುಕೂತ ಹಸಿ ಬಾಣಂತಿ ಹಕ್ಕಿಕಿಟಕಿ ಕುಟುಕಿದ ಸದ್ದು;ಚಾಚಿದ ಟೊಂಗೆಯೋಚೈತನ್ಯದ ಹಕ್ಕಿಯೋ ತಿಳಿಯದು.ಪ್ರತೀ ಶಬ್ದ ಮಾಡುವ ಹಕ್ಕಿಗೂಅದೇನು ರಾಗವೋಸುಮ್ಮಗೆ ಬೀಸುವ ಗಾಳಿಗೆತಲೆದೂಗುವ ಟೊಂಗೆಗಳಿಗೂಅದೇನು ಹೊಸ ರಂಗೋ […]

ಅನುವಾದ ಸಂಗಾತಿ

ಕವಿತೆ ಸಾವಿಗೊಂದು ಪತ್ರ ಸಾವೇ, ನೀನು ಹುಟ್ಟಿನಿಂದಜೊತೆಗೇ ಬಂದಿರುವೆತಿಳುವಳಿಕೆ ಬಂದಂತೆಭಯದಿಂದ ದೂರವಿರಿಸಿದೆನೆನಪಿಸದೆ, ವಿಳಾಸವೂ ಹುಡುಕದೆ. ವಿಳಾಸ ಬೇಕಿರಲಿಲ್ಲ ಬದುಕಿನುದ್ದಕ್ಕೂ….ನಿರುಮ್ಮಳ ಉಸಿರೆಳೆಯುವಾಗಸ್ವಚ್ಛಂದವಾಗಿ ಸಾಗುವಾಗಪ್ರತೀ ದಿನವು ನೆರಳಂತೆಹೊತ್ತು ಜೀವಿಸುವಾಗಅದಕೇ ನೆನೆಯಲಿಲ್ಲ ನಿನ್ನ. ದೇಹದ ಚಿತ್ರಣ ಬದಲಾಗಿದೆಮುಪ್ಪೆರಗಿ ಕುಂದಿದೆಉಸಿರಿಗೂ ಅಳುಕೇಆಹಾರಕೂ ನಳಿಕೆಶಸ್ತ್ರಕ್ರಿಯೆಗೆಂದು ಅರಿವಳಿಕೆಸಹಜಕ್ರಿಯೆಗಳೆಲ್ಲ ನಿಲ್ಲುತ್ತಿವೆನಿನ್ನನೇ ಬಲವೆಂದು ಕಾಯ್ದಿರುವೆ. ಪರಸೇವೆಗೆ ದೇಹ ಬೀಳದಂತೆನೋವಿಲ್ಲದಂತೆ ನಸುನಕ್ಕೇಫಕ್ಕನೆ ಆರುವ ದೀಪದಂತೆನನ್ನನ್ನೊಮ್ಮೆ ತಬ್ಬುವಿಯಂತೆಬಂದು ಬಿಡು ನೀ ಬಂಧುಸಹಜ ಸವಿನಿದ್ರೆಗೆ ಜಾರಿದಂತೆ..! ————ಕನ್ನಡ ಮೂಲ- ಅಜಿತ ಹೆಗಡೆ, ಹರೀಶಿ A letter to the death Death,you are […]

ಅನುವಾದ ಸಂಗಾತಿ

ಕಲ್ಲೆದೆ ಬಿರಿದಾಗ ಮಿಥ್ಯಾಪವಾದಕ್ಕೆಸಂಶಯದ ಶನಿಗೆಸೋತು ಸತ್ತಿದೆ ಪ್ರೀತಿ || ಯಾವ ಕಿಟಕಿಗಳು ಕಣ್ತೆರೆಯಲಿಲ್ಲಬಾಗಿಲುಗಳು ಬಾಯ್ಬಿಡಲಿಲ್ಲಗೋಡೆಗಳು ಉಸಿರಲೇಯಿಲ್ಲ || ಹೆಪ್ಪುಗಟ್ಟಿದ ಮೇಲೆಕಾವು ಕೊಡದಿರು ಗೆಳೆಯಎಂದಿಗೂ ಸವಿಹಾಲಾಗದು || ಸುಳ್ಳಿನ ಮಹಲಿನ ಮೇಲೆಪ್ರೇಮ ಗೋಪುರವೇ ?ನಂಬಿಕೆಯೇ ಮರಗುವುದು || ಮನದ ಮಡುವಲ್ಲಿ ನಿಂತ ನೀರಾಗಿದೆಗೆಳೆತನ, ಹೊಸ ಸುಗಂಧಸಿಂಚನಕೆ ಯತ್ನ ಬೇಡವೇ ಬೇಡ || ನೆನ್ನೆಗಳ ಗಾಯಕ್ಕೆಇಂದು ಉಪಚಾರವೇ ?ನಾನಿತ್ತ ಉಸಿರು ಮರಳಿಸು || ಅಂದು ಕಟ್ಟಿದ ಕನಸುಗಳುಹೂಮನೆ ಸೊಗಸುಗಳುಕಮರಿ ಗೋರಿ ಏರಿವೆ || ಎದೆಯುಕ್ಕಿದರೆ ಕಡಲುಹೊತ್ತಿ ಉರಿದರೆ ಬೆಂಕಿಬತ್ತಿ ಬಿರಿದರದು […]

ಅನುವಾದ ಸಂಗಾತಿ

ಅವ್ವ ಕನ್ನಡ ಮೂಲ: ಎ.ಜಿ.ರತ್ನಾ ಕಾಳೇಗೌಡ ಇಂಗ್ಲೀಷಿಗೆ: ರತ್ನಾ ನಾಗರಾಜ್ ಏನೆಲ್ಲ ಅಡಗಿದೆಅವ್ವ ನಿನ್ನೆದೆಯೊಳಗೆನಿನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿ ರಾಗಿತಲೆಯೊಳಗೆ ಬೆರಳುಗಳಿಂದತಡಕಿ ತಡಕ ಹೇನು ಹೆಕ್ಕಿಸಾಹಿಸುತ್ತಿದ್ದೆಆಗ ಅದೇನೋ ಅಕ್ಷರ ವಲ್ಲದಸ್ವರ ನಿನ್ನ ಬಾಯಿಂದಎಷ್ಟೋ ಸಾರಿ ಅರ್ಥಕ್ಕಾಗಿಹುಡುಕಿ ಸೋತಿದ್ದೇನೆಸಿಗಲಿಲ್ಲ ನೀನು ಹೇಳುತ್ತಿದ್ದಸಂಗತಿಗಳೆಲ್ಲನೆನಪಿನಲ್ಲಿದ್ದಿದ್ದರೆಒಂದೊಂದು ಮಹಾಗ್ರಂಥವಾಗುತ್ತಿದ್ದವು ಇಂದು ವಾರಗಿತ್ತಿಯರ ಕಾಟಗಂಡನ ಕಾಟ ಸಾಲದು ಎಂದು ಅತ್ತೆ ಮಾವನ ಕಾಟಎಲ್ಲವನ್ನು ಹೇಗೆ ಸಹಿಸಿಕೊಂಡೆ ಅವ್ವನಿನ್ನ ಒಂದೊಂದು ಕಣ್ಣೀರಕಥೆಯನ್ನು ಹೇಳುವಾಗನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ ಸಾರಿಗೆ ಉಪ್ಪು ಜಾಸ್ತಿ ಆಗಿದೆಯಾಕೆಂದುಕೊಳ್ಳಿಯಿಂದಲೇಮುಂಗೈಗೆ ಬೇರೆ ಹಾಕಿದ್ದಳುಅತ್ತೆಸುಟ್ಟ […]

ಅನುವಾದ ಸಂಗಾತಿ

ಹೆಚ್ಚೆಂದರೇನು ಮಾಡಿಯೇನು? ಕನ್ನಡ ಮೂಲ:ಶೋಭಾ ನಾಯ್ಕ‌ .ಹಿರೇಕೈ ಕಂಡ್ರಾಜಿ.‌ ಇಂಗ್ಲೀಷಿಗೆ:ಸಮತಾ ಆರ್. ಹೆಚ್ಚೆಂದರೇನು ಮಾಡಿಯೇನು? ಅವರಂತೆ ತಣ್ಣೀರಲ್ಲಿ ಮಿಂದುನಲವತ್ತೆಂಟನೆಯ ದಿನದ‌ವ್ರತ ಮುಗಿಸಿ,ಆ ಕೋಟೆ ಕೊತ್ತಲಗಳ ದಾಟಿಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿನಿನ್ನ ಬಳಿ ನಡೆದೇ….ಬಂದೆನೆಂದು ಇಟ್ಟುಕೋಹೆಚ್ಚೆಂದರೆ ನಾನಲ್ಲಿಏನು ಮಾಡಿಯೇನು? ‘ಬಾಲಕನಾಗಿಹೆ ಅಯ್ಯಪ್ಪ’ ಈಹಾಡು ಹಾಡು ಕೇಳಿ ಕೇಳಿಇತ್ತೀಚೆಗೆ ನಿನ್ನ ಹಳೆಯದೊಂದುಪಟ ನೋಡಿದ ಮೇಲೆನನ್ನ ಮಗನಿಗೂ..ನಿನಗೂ..ಯಾವ ಪರಕ್ಕೂ ..ಉಳಿದಿಲ್ಲ ನೋಡು ಎಷ್ಟೋ ವರ್ಷ ನಿಂತೇ ಇರುವೆಬಾ ಮಲಗಿಕೋ ಎಂದುಮಡಿಲ ಚೆಲ್ಲಿನನ್ನ ಮುಟ್ಟಿನ ಕಥೆಯನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯನಿನಗೆ ಹೇಳಿಯೇನು ಹುಲಿ […]

ಅನುವಾದ ಸಂಗಾತಿ

ಚಿತ್ರಗಳು ಕನ್ನಡ ಮೂಲ: – ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಇಂಗ್ಲೀಷಿಗೆ:ಪಂ. ರವಿಕಿರಣ್ ಮಣಿಪಾಲ ಚಿತ್ರಗಳು ನನ್ನ  ಮನದಲ್ಲೆಷ್ಟೋ ಚಿತ್ರಗಳಿವೆ ಬಿಡಿಸ ಹೋದರೆ ಅವು ಹಾಳೆಗಳಲ್ಲಿ ನಿರ್ಜೀವ ಹೆಣಗಳಂತೆ ಬೋರಲು ಬೀಳುತ್ತವೆ ಇನ್ನು ಕೆಲವು ಬೆನ್ನಡಿಯಾಗಿ ಬಿದ್ದ ಜಿರಳೆಗಳಂತೆ ಅಸಹಾಯಕವಾಗಿಕೈಕಾಲಾಡಿಸುತ್ತ ಕಪ್ಪು ಕಂಗಳಲ್ಲಿ ಚಂದ್ರನನ್ನೇ ನೋಡುತ್ತಿರುತ್ತವೆ. ನನ್ನ ಮನದ ಚಿತ್ರಗಳು ತಮ್ಮದಲ್ಲದ ಇನ್ನಾರದ್ದೋ ಬದುಕನ್ನು ಬದುಕುತ್ತ  ಕೆಂಪು ಕೆಂಪಾದ ಹಸಿಗಾಯದ ಮೇಲೆ ಯಾರ್ಯಾರೋ ಗೀರಿದಂತೆ ನೆತ್ತರಲ್ಲಿತೊಯ್ದಿರುತ್ತವೆ. ನನ್ನ ಮನದ ಚಿತ್ರಗಳು ಬದುಕಿನತಿಪ್ಪೆಯಲ್ಲಿ ಅವನು ಬಿಸಾಕಿದ ಎಂಜಲು ಅನ್ನಕ್ಕಾಗಿ ಕಚ್ಚಾಡುತ್ತಿರುತ್ತವೆ ಹಸಿವಲ್ಲಿ […]

Back To Top