ಅನುವಾದ ಸಂಗಾತಿ

ಕವಿತೆ

a person drowns underwater

ಸಾವಿಗೊಂದು ಪತ್ರ

ಸಾವೇ, ನೀನು ಹುಟ್ಟಿನಿಂದ
ಜೊತೆಗೇ ಬಂದಿರುವೆ
ತಿಳುವಳಿಕೆ ಬಂದಂತೆ
ಭಯದಿಂದ ದೂರವಿರಿಸಿದೆ
ನೆನಪಿಸದೆ, ವಿಳಾಸವೂ ಹುಡುಕದೆ.

ವಿಳಾಸ ಬೇಕಿರಲಿಲ್ಲ ಬದುಕಿನುದ್ದಕ್ಕೂ….
ನಿರುಮ್ಮಳ ಉಸಿರೆಳೆಯುವಾಗ
ಸ್ವಚ್ಛಂದವಾಗಿ ಸಾಗುವಾಗ
ಪ್ರತೀ ದಿನವು ನೆರಳಂತೆ
ಹೊತ್ತು ಜೀವಿಸುವಾಗ
ಅದಕೇ ನೆನೆಯಲಿಲ್ಲ ನಿನ್ನ.

ದೇಹದ ಚಿತ್ರಣ ಬದಲಾಗಿದೆ
ಮುಪ್ಪೆರಗಿ ಕುಂದಿದೆ
ಉಸಿರಿಗೂ ಅಳುಕೇ
ಆಹಾರಕೂ ನಳಿಕೆ
ಶಸ್ತ್ರಕ್ರಿಯೆಗೆಂದು ಅರಿವಳಿಕೆ
ಸಹಜಕ್ರಿಯೆಗಳೆಲ್ಲ ನಿಲ್ಲುತ್ತಿವೆ
ನಿನ್ನನೇ ಬಲವೆಂದು ಕಾಯ್ದಿರುವೆ.

ಪರಸೇವೆಗೆ ದೇಹ ಬೀಳದಂತೆ
ನೋವಿಲ್ಲದಂತೆ ನಸುನಕ್ಕೇ
ಫಕ್ಕನೆ ಆರುವ ದೀಪದಂತೆ
ನನ್ನನ್ನೊಮ್ಮೆ ತಬ್ಬುವಿಯಂತೆ
ಬಂದು ಬಿಡು ನೀ ಬಂಧು
ಸಹಜ ಸವಿನಿದ್ರೆಗೆ ಜಾರಿದಂತೆ..!

————
ಕನ್ನಡ ಮೂಲ- ಅಜಿತ ಹೆಗಡೆ, ಹರೀಶಿ


A letter to the death

Death,
you are with me
Since i took birth.
As being matured,
fear kept you away
neither recalled nor tried to search for your address.

No address needed, throughout the life,
While breathing relief,
Moving with carefree walk,
Everyday like a shadow
Carrying with life,
I didn’t recall you.

Now the body changed,
deformed with the old age
even hesitant to breath
tube to take food
Anesthesia for surgery
Common functions
being stopped.
having the belief
that you are. the strength and waiting .

As to be served by none
Smile like not having pain,
like a light turns off in sudden.
You embrace me but once,
my dear, come to me,
as I am sleeping sweet.


Translated into english by-
Nagarekha Gaonkar

2 thoughts on “ಅನುವಾದ ಸಂಗಾತಿ

Leave a Reply

Back To Top