ಅನುವಾದ ಸಂಗಾತಿ

ಕಲ್ಲೆದೆ ಬಿರಿದಾಗ

ಮಿಥ್ಯಾಪವಾದಕ್ಕೆ
ಸಂಶಯದ ಶನಿಗೆ
ಸೋತು ಸತ್ತಿದೆ ಪ್ರೀತಿ ||

ಯಾವ ಕಿಟಕಿಗಳು ಕಣ್ತೆರೆಯಲಿಲ್ಲ
ಬಾಗಿಲುಗಳು ಬಾಯ್ಬಿಡಲಿಲ್ಲ
ಗೋಡೆಗಳು ಉಸಿರಲೇಯಿಲ್ಲ ||

ಹೆಪ್ಪುಗಟ್ಟಿದ ಮೇಲೆ
ಕಾವು ಕೊಡದಿರು ಗೆಳೆಯ
ಎಂದಿಗೂ ಸವಿಹಾಲಾಗದು ||

ಸುಳ್ಳಿನ ಮಹಲಿನ ಮೇಲೆ
ಪ್ರೇಮ ಗೋಪುರವೇ ?
ನಂಬಿಕೆಯೇ ಮರಗುವುದು ||

ಮನದ ಮಡುವಲ್ಲಿ ನಿಂತ ನೀರಾಗಿದೆ
ಗೆಳೆತನ, ಹೊಸ ಸುಗಂಧ
ಸಿಂಚನಕೆ ಯತ್ನ ಬೇಡವೇ ಬೇಡ ||

ನೆನ್ನೆಗಳ ಗಾಯಕ್ಕೆ
ಇಂದು ಉಪಚಾರವೇ ?
ನಾನಿತ್ತ ಉಸಿರು ಮರಳಿಸು ||

ಅಂದು ಕಟ್ಟಿದ ಕನಸುಗಳು
ಹೂಮನೆ ಸೊಗಸುಗಳು
ಕಮರಿ ಗೋರಿ ಏರಿವೆ ||

ಎದೆಯುಕ್ಕಿದರೆ ಕಡಲು
ಹೊತ್ತಿ ಉರಿದರೆ ಬೆಂಕಿ
ಬತ್ತಿ ಬಿರಿದರದು ಬರಡಾದೀತು ||

ಕತ್ತಲೆಯ ಜೀವಭಿಕ್ಷೆಗೆ
ಬಸವಳಿದು ಬಂದ ಬೆಳಕಿಗೆ
ಸತ್ತು ಬದುಕಿದ ಜೀವಂತೆ ನಾನು ||


ವಿಭಾ ಪುರೋಹಿತ್

When the iron heart broken

To the denigration
to the skeptical tone
love defeated and died away.

No windows opened their eyes
no doors raised their voice
no walls uttered any words.

Don’t heat up, my dear
when it is already curdled. It never be a sweetest milk.

Could it be possible a castle of love upon the palace of lies?
The trust regret itself.

Friendship turned like a stored water in a pond of mind.
Don’t try to sprinkle new perfume.

Is it a treatment for yesterday’s wound.. return that breath
I have lent.

The dreams of yesterday’s
The beauties of flowering houses
all withered and reached up to the tomb.

If the heart blossomed, it’s an ocean,
Whereas it burnt, it’s a fire,
If it dried up, will become barren.

To the life owe of the darkness
And the exhausted light
I’m the dead in alive.


Nagarekha Gaonkar

One thought on “ಅನುವಾದ ಸಂಗಾತಿ

  1. ನಗುವಿನ ಬೀಜ ಮೊಳೆಯಲು ಸಾಂತ್ವನದ ಮಳೆ ಗರೆಯಬೇಕಾಗಿದೆ.

Leave a Reply

Back To Top