ಚಿತ್ರಗಳು
ಕನ್ನಡ ಮೂಲ: – ಡಾ.ಕಾತ್ಯಾಯಿನಿ ಕುಂಜಿಬೆಟ್ಟು
ಇಂಗ್ಲೀಷಿಗೆ:ಪಂ. ರವಿಕಿರಣ್ ಮಣಿಪಾಲ
ಚಿತ್ರಗಳು
ನನ್ನ ಮನದಲ್ಲೆಷ್ಟೋ ಚಿತ್ರಗಳಿವೆ
ಬಿಡಿಸ ಹೋದರೆ ಅವು ಹಾಳೆಗಳಲ್ಲಿ
ನಿರ್ಜೀವ ಹೆಣಗಳಂತೆ ಬೋರಲು ಬೀಳುತ್ತವೆ
ಇನ್ನು ಕೆಲವು ಬೆನ್ನಡಿಯಾಗಿ ಬಿದ್ದ ಜಿರಳೆಗಳಂತೆ
ಅಸಹಾಯಕವಾಗಿಕೈಕಾಲಾಡಿಸುತ್ತ
ಕಪ್ಪು ಕಂಗಳಲ್ಲಿ ಚಂದ್ರನನ್ನೇ ನೋಡುತ್ತಿರುತ್ತವೆ.
ನನ್ನ ಮನದ ಚಿತ್ರಗಳು
ತಮ್ಮದಲ್ಲದ ಇನ್ನಾರದ್ದೋ ಬದುಕನ್ನು
ಬದುಕುತ್ತ
ಕೆಂಪು ಕೆಂಪಾದ ಹಸಿಗಾಯದ ಮೇಲೆ
ಯಾರ್ಯಾರೋ ಗೀರಿದಂತೆ
ನೆತ್ತರಲ್ಲಿತೊಯ್ದಿರುತ್ತವೆ.
ನನ್ನ ಮನದ ಚಿತ್ರಗಳು
ಬದುಕಿನತಿಪ್ಪೆಯಲ್ಲಿ ಅವನು ಬಿಸಾಕಿದ
ಎಂಜಲು ಅನ್ನಕ್ಕಾಗಿ ಕಚ್ಚಾಡುತ್ತಿರುತ್ತವೆ
ಹಸಿವಲ್ಲಿ ಲೋಕ ಕಾಣದೆ
ಇನ್ನಾರದ್ದೋ ಹಸಿದ ಮುಖವನ್ನೇ ಹಸಿ ರೊಟ್ಟಿಯೆಂದುಕೊಳ್ಳುತ್ತ
ಒಡಲ ಬೆಂಕಿಯಲಿ ಸುಟ್ಟುತಿನ್ನಲು ಕೈಚಾಚುತ್ತ
ಹೊಟ್ಟೆ ಬೆನ್ನಿಗೆ ಅಂಟಿ ರೊಟ್ಟಿಯೇ ಆಗಿ
ಇನ್ನಾರದ್ದೋ ತುತ್ತಾಗುತ್ತವೆ
ಇನ್ನು ಕೆಲವು ತಮ್ಮ ಮುಖಗಳನ್ನೇ
ರೊಟ್ಟಿಯೆಂದುಕೊಳ್ಳುತ್ತ ಹೊಟ್ಟೆಯೊಳಗೇ ಎಳೆದುಕೊಳ್ಳುತ್ತವೆ
ರಾಹು…ಚಂದ್ರನನ್ನೇರಾವುಹಿಡಿದಂತೆ ನುಂಗುತ್ತಿರುತ್ತದೆ
ಅವನು ಮಾತ್ರ ಹಳೆಮೊಳೆಗೆ ತೂಗು ಹಾಕಿದ ಹೊಸ ಕ್ಯಾಲೆಂಡರಿನಲ್ಲಿ ನಗುತ್ತಿರುತ್ತಾನೆ
ಕಪ್ಪು ಚಿತ್ರಗಳು ಕಪ್ಪು ಮಣ್ಣಲಿ ಹೂತು ಬಿಳಿಹತ್ತಿ ಬೆಳೆದು ಬತ್ತಿಯಾಗಿ ಭಕ್ತಿಯ
ಹಣತೆ ಹಚ್ಚುತ್ತವೆ
ಬಿಳಿಚಿತ್ರಗಳು ಬಿಳಿಗಂಗೆಯಲ್ಲಿ ಮುಳುಗಿ ಅಸ್ಥಿವಿಸರ್ಜಿಸಿ ಕಾಗೆಯಾಗಿ ಮಾಲಯದಲ್ಲಿ
ಪಿಂಡಕಾಯುತ್ತವೆ
ನನ್ನ ಮನದ ಚಿತ್ರಗಳು ಹಾಳೆಗೆ ಬಿದ್ದೊಡನೆ
ಹೃದಯದ ತೊಟ್ಟಲ್ಲೊಂದು ಆಸೆಯ ಮೊಗ್ಗನ್ನುಅಪ್ಪಿಕೊಂಡು
ಹುಳುಹಿಡಿದ ದಾಸವಾಳ ಗಿಡದಂತೆ ಮುರುಟಿ ಹೋಗುತ್ತವೆ
ಬಿಸಿಲಿನ ಝಳಕ್ಕೆ ಬಾಡಿಹೋದ ಕುಂಬಳದ ಬಳ್ಳಿಯಂತೆ
ಮತ್ತೆ ಮರವನ್ನಪ್ಪಿಕೊಳ್ಳಲು ವ್ಯರ್ಥ ಪ್ರಯತ್ನ ನಡೆಸುತ್ತ
ಬೇಡದ ಬಸಿರು ಹೊತ್ತು ತೆವಳುತ್ತವೆ
ಬೀದಿಯಲ್ಲಿ ಬಿಸುಟ ಕೂಸುಗಳು ಗಂಟಲಲ್ಲಿ ನಾಲಗೆ ಇಡದೆ
ಬೆಕ್ಕಿನಂತೆ ಅಳುತ್ತಿರುತ್ತವೆ
ಭಗ್ನಗೊಂಡ ನಗ್ನ ಶಿಲ್ಪಗಳು
ತಮ್ಮದೇ ದೇಹದ ತುಂಡುಗಳನ್ನು ತಮ್ಮೊಳಗೇ ಹುಡುಕುತ್ತ
ತಮ್ಮದಲ್ಲದ ಜಾತ್ರೆಯಲ್ಲಿ ತಮ್ಮದಲ್ಲದ ನಗುವನ್ನು ನಗುತ್ತವೆ
ಅವನು ಆ ದೇವರೆಂಬವನು ಚಿತ್ರಿಸಿದ ಈ ನನ್ನಂತೆಯೇ
ನನ್ನ ಮನದ ಚಿತ್ರಗಳು ಚೆಲ್ಲಾಪಿಲ್ಲಿ ಹಾಳೆಯ ಮೇಲೆ ಬಿದ್ದು
ಬಿದ್ದಲ್ಲಿಂದಲೇ ಎದ್ದು ತಮ್ಮದೇ ಭೂಮಿಯಿದು ಎಂದುಕೊಂಡು
ಮನೆ ಕಟ್ಟಿಕೊಳ್ಳುತ್ತವೆ
ತಮ್ಮದು ಎಂದುಕೊಳ್ಳಲೆಂದೇ ಮದುವೆಯಾಗಿ ಮಕ್ಕಳು
ಮರಿಗಳನ್ನು ಮಾಡುತ್ತ
ತಮ್ಮದೆಂದುಕೊಂಡೇ ತಮ್ಮದಲ್ಲದ ಇನ್ನಾರದ್ದೋ ಬದುಕನ್ನು
ಬದುಕುತ್ತಿರುತ್ತವೆ
ಕೊನೆಗೆ ತಮ್ಮದಲ್ಲದ ಭೂಮಿಯನ್ನು ಬಿಟ್ಟು ಹೋಗುತ್ತವೆ
ಹಾಳೆಯಲ್ಲಿ ಮುಷ್ಟಿಕಟ್ಟಿದ ಮನೆ ಬಣ್ಣ ಪೇಲವವಾಗಿ ಬಿಳಿಚಿ
ಹಲ್ಲಿಲ್ಲದ ಮುದುಕನಂತೆ ಬೊಚ್ಚುಬಾಯಿಯನ್ನು
ಆ ಎಂದುತೆರೆದುಕೊಂಡು ಆಗಸವನ್ನೇ ದಿಟ್ಟಿಸುತ್ತಿರುತ್ತದೆ
ಸರಳಿಲ್ಲದ ಒಟ್ಟೆ ಕಂಗಳಿಂದ…
ನೋಟದಲ್ಲಿ ಶೂನ್ಯ ತುಂಬಿಕೊಂಡು
ಇವೆಲ್ಲದರ ಗೋಜೇ ಇಲ್ಲದಂತೆ
ನನ್ನ ಮನದ ಮೂಲೆಯಲ್ಲೊಂದು ಮಗು
ತನ್ನೊಳಗೇ ಮಾತನಾಡುತ್ತ
ಹಾಳೆಯಲ್ಲಿ ಗೀಚುತ್ತ ಬಣ್ಣತುಂಬುತ್ತಿರುತ್ತದೆ
ನೇತು ಹಾಕಿದ ಲಾಂಟಾನಿನಲ್ಲಿ
ಅದರ ಕಪ್ಪು ದ್ರಾಕ್ಷಿ ಹಣ್ಣಿನಂತಹ ಕಂಗಳಿಂದ
ನಕ್ಷತ್ರಗಳು ಉದುರಿ ಹಾಳೆಯ ತುಂಬ ನಕ್ಕು
ಕತ್ತಲನ್ನು ತುಂಬಿಕೊಳ್ಳುತ್ತವೆ
ಅದರ ಪುಟ್ಟಚಿಗುರು ಬೆರಳುಗಳು ಎಳೆಯುವ ಚಿತ್ರಗಳಿಗೆ
ಎಲ್ಲೋ ಮೂಡುವ ಕಣ್ಣುಜೀವತುಂಬುತ್ತದೆ
ಗಿಡ ಮರ ಬಳ್ಳಿ ಹೂವುಗಳೆಲ್ಲ ಜೀವಂತವಾಗಿ
ಆಗಸವನ್ನೇ ನೋಡುತ್ತಿರುತ್ತವೆ
ಹಕ್ಕಿಯಂತೆರೆಕ್ಕೆ ಬಿಚ್ಚಿ.
ಅವು ದೇವರೊಡನೆ ಮಾತನಾಡುತ್ತವೆ.
***
The pictures
There are numourous
Pictures in my mind
If I try to sketch them
They fall upside down
On the sheets
A few like cocroaches
Fell on their back
Helplessly move their
Limbs and gaze the moon
With dark eyes
The pictures of my mind
Live lives that do not
Belong to them but
Somebody else
And are soaked with
Blood as if a fresh wound
Has been scraped by
Someone
My mind’s pictures
Squabble for left out
Food in the garbage
Of life
Desperate with hunger
Delude somebody’s face
As Roti
Extend their hands
To catch it and roast it
In the fire of the body
And to eat
A few delude their
Faces as Rotis
And pull them inside the
Stomach
Like the moon devoured
By Rahu
But he laughs in the
New calendar hanged
By a old nail
Black pictures
Are seeded in black earth
White cotton grows
And becomes a whip
That lightens the
Lamp of devotion
White pictures drown
In the white Ganges
Discard their corporeal
Remnants and become
Crows waiting for the
Pinda in Mahalaya
The pictures of my mind
As they fall on a sheet
Carry a bud of desire
In the foot stalk
Of the heart
Shrivel like a hibiscus
Plant eaten by worms
Like a pumpkin creeper
Withered in the hot son
Do fruitless efforts
To embrace the tree
And crawl carrying
Unwanted womb
The infants thrown to
Streets weep relentlessly
Like cats
Broken naked sculptures
Search their broken
Limbs within themselves
Smile somebody else’s
Smile at somebody else’s
Festival
Like me who has been
Painted by someone
Knows as god
My mind’s pictures also
Fall and
Scatter on sheets
And get up
Deluding the sheet
As their earth
Build castles
Give birth to
Children and
Grand children
And live life that
Is not theirs but
Someone else’s
And at the end
Leave the earth that is Not theirs
The tight fisted home
Drwan on the sheet
Gets faded and bleached
And gazes the sky
Like an old man
With teethless mouth
And with a sight
Of emptiness
Regardless of the above
A child at the corner
Of my mind
Is talking to itself
And scribbling the sheet
And filling colors
In the light of the lantern
Stars drop from its black Grape eyes
On the sheet and laugh
And embody the
Darkness
The pictures drawn by
Its tender fingers get an
Eye somewhere
That fills life to them
Plants, trees, creepers,
Flowers gaze the heaven
With life
Extend their wings like
A bird and
Converse with god
*************************
Nice poem