ಜಗವನೇ ಗೆಲುವೆನು ನಿನ್ನೊಲವೊಂದಿದ್ದರೆ.

ಅನುವಾದ

ಜಗವನೇ ಗೆಲುವೆನು ನಿನ್ನೊಲವೊಂದಿದ್ದರೆ.

ಇಂಗ್ಲೀಷ್ ಮೂಲ: ವಿಲಿಯಂ ಶೇಕ್ಸ್ ಪಿಯರ್

ಕನ್ನಡಕ್ಕೆ: ವಿ.ಗಣೇಶ್

ಹುಟ್ಟಿನ ಮದದಲಿ ಬೀಗುವರು ಕೆಲರು ಬುದ್ಧಿಮದದಲಿ ಕೆಲರು

ಸಿರಿತನದ ಮದದಲಿ ಕೆಲರು, ರೂಪದ ಮದದಲಿ ಮತ್ತೆ ಕೆಲರು

ದೇಹದಾಡ್ಯದಲಿ ಕೆಲರು, ಕೆಲರು ಉಡುಗೆತೊಡುಗೆಯಲಿ ಮೆರೆವರು

ಗಿಡುಗ ಸಾಕುವ ಹುಚ್ಚು ಕೆಲರಿಗೆ, ಕುದುರೆ ಸಾಕುವ ಹುಚ್ಚು ಕೆಲರಿಗೆ

ಅವರವರ ಮನಸಿನಣತಿಗೆ ಅವರವರ ಹುಚ್ಚು ಮೆರೆವುದು ಅಂತೆಯೇ

ಈ ಕ್ಷಣಿಕ ಆಸೆ ಆಕಾಂಕ್ಷೆಗಳ ಹುಚ್ಚೊಂದೂ ನನ್ನ ಮನದೊಳಗಿನಿತಿಲ್ಲ

ಅದಕಿಂತ ಮಿಗಿಲಾದ ಹುಚ್ಚೊಂದು ಕಾಡುತಿದೆ ಈ ನನ್ನ ಮನವ

ಅದುವೆ ನಿನ್ನ ಮೇಲಿಟ್ಟ ಅಳಿಸಲಾಗದ ಆ ನಿಜ ಪ್ರೀತಿಯ ಹುಚ್ಚು

ಅದಕೆ ಮರುಳಾಗಿ ನಾ ಅಪ್ಪಿಕೊಂಡಿರುವೆ ನಿನ್ನ ಹೃದಯಮಂದಿರವ

ಜಗಜಗಿಪ ದನಕನಕಗಳು,ಗರಿಗರಿಯಾದ ಉಡುಗೆಗಳ ಜೊತೆಗೆ

ಗಿಡುಗ ಕುದುರೆಗಳೆಲ್ಲವೂ ತೃಣಸಮಾನವೆನಗೆ ಈ ಬದುಕಿನಲಿ

ನಿನ್ನ ಒಲವೊಂದಿದ್ದರೆ ಜಗವನೆದುರಿಸುವ ಬಲ ನನ್ನ ತುಂಬುವುದು

ನಿನ್ನ ನಾ ಪಡೆಯಲು ನನ್ನ ವಿಧಿಯದು ವಂಚಿಸಿದರೆ

ಈ ಬದುಕ ತೊರೆಯುತ್ತ ತೆರಳುವೆನು ನಾ ನರಕಕ್ಕೆ.

****************************

Leave a Reply

Back To Top