ತರಗೆಲೆ

ಅನುವಾದ

ತರಗೆಲೆ

Brown dry leaf on a white background. With shadow stock photography

ಕನ್ನಡ ಮೂಲ: ನಾಗರೇಖಾ ಗಾಂವಕರ್

ಇಂಗ್ಲೀಷಿಗೆ: ಸಮತಾ ಆರ್.

ತರಗೆಲೆ

ಮರದಡಿಯ ನೆರಳಲ್ಲಿ ಬೆಚ್ಚಗೆ ಇತ್ತು ತರಗೆಲೆ.
ಕಾಲಾಂತರದ ಕರಿಯಪ್ಪುಗೆಯಲ್ಲಿ ಮುಂದೊಂದು ದಿನ ಹಾಗೇ
ಕೊಳೆತು ಹೋಗುವುದಿತ್ತು
ಮರಳಿ ಮಣ್ಣಡಿ ಸೇರಿ.

ದಿಗ್ಗನೇ ಬೆಳಗಿದ ನಾಜೂಕು
ಬೆಳಕಿನ ಹೊಳಪು
ಅದೇಕೋ ಅರಿವ ಹೊಸೆವ ಅನಂತದ ನೆರಳಡಿ
ತಂದು ನಿಲ್ಲಿಸಿತು.
ತರಗೆಲೆಯ ಮಾಸಿದ ಬಣ್ಣಕ್ಕೆ ಹೊಂಬಣ್ಣದ ಹೊಳಪು.
ಮತ್ತೆ ಚಿಗುರಿದಂತೆ ಸಂಭ್ರಮ.
ನೆಲದ ನಿಯಮದ ಹಾಗೇ.
ಮಬ್ಬು ಸರಿಸಿ ‘ ಕಾಣ
ಬಯಸಿದ್ದ ಮನಗಾಣು’ ಎಂದು ಎದೆ ತೆರೆದು ಆಹ್ವಾನಿಸಿ
ಅಪ್ಪಿ ಮುದ್ದಿಸಿತು ಬೆಳಕು.

ಬೆಳಕಿನ ದಾರಿಯಲ್ಲಿ ಕಣ್ಢಿಗೆಣ್ಣೆ
ಬಿಟ್ಪು ಹಾಗೇ ನೋಡುತ್ತಲೇ
ಇತ್ತು ತರಗೆಲೆ

ತಪದಂತೆ ಸೈರಿಸಿ ಬೆಳಕ ಕಿರಣ
ಹೊಳಪುಂಡು ಶಕ್ತ ನಿಲುವಲಿ
ನಿರಾಳ ಉಸಿರಾಡುತ್ತ
ಕಾಯುತ್ತಲೇ ಇತ್ತು.

ಪ್ರತಿಮಿಸುವ ಪ್ರತಿ ಪದವೂ
ಒಳಗಣ್ಣ ತೆರೆಸಿ, ವಿಸ್ಮಯದ ಅಂಚು ಎಲೆಯ ಸುತ್ತುಗಟ್ಟಿ
ತಾರೀಪುಗಳ ಹೊತ್ತ ಎಲೆಯ ಭಿತ್ತಿಯ
ಮೇಲೆ ನೂರಾರು ಚಿತ್ರಗಳ ಚಲನೆ, ಚಿಂತನೆ,
ನಿಂದನೆಯ ಎಣ್ಣೆಯಲ್ಲಿ ಹುರಿದು,
ಕಮಟು ವಾಸನೆ ಬಡಿಸಿ, ಮತ್ತೆ ಮರುಗಳಿಗೆ ತುಪ್ಪ ಮೂಗಿಗೆ ಸವರಿ,
ಬೆಳಕು ಹದವರಿತು ತರಗೆಲೆಯ
ನುಡಿಸಿತ್ತು.

ಉರಿವ ಬೆಳಕಿಂದ
ಜಿಗಿಯಬಲ್ಲ ಬೆಂಕಿಯ ತಾಪದ
ಭಯ
ಕಾಡುತ್ತಲೇ ಇತ್ತು.

ಆದರೂ ತರಗೆಲೆಗೆ ತೀರದ
ವ್ಯಾಮೋಹ.
ಹಾರುವ ಪುಟ್ಟ ಗುಬ್ಬಿಯ ಬಾಯೇರಿ, ಅದಿಟ್ಟ ಮೊಟ್ಟೆಯ ಗೂಡಿಗೆ ಮಂದರಿಯಾಗಿ
ಪುಟಪುಟ ನೆಗೆತದ ಚೀಂವ್ ಚೀಂವ್ ಮರಿಗುಬ್ಬಿಗಳ
ಕಾಲಡಿಗೆ ರೋಮಾಂಚನಗೊಳ್ಳಬೇಕು
ಚಿಲಿಪಿಲಿಯೂದುವ ತೊದಲ ನುಡಿಗಳಿಗೆ ಕಿವಿಯಾಗಬೇಕು.

ಜೀವವಿಲ್ಲದ ಒಣ ಎಲೆಯೆಂದವರ ಕಡೆಗೊಮ್ಮೆ
ನಲ್ಮೆಯ ನೋಟವೆಸಗಬೇಕು.

———————
ನಾಗರೇಖಾ ಗಾಂವಕರ.

A dry leaf..

A dry leaf resting cosily,
Under the shadow of a tree,
Was about to get degraded
In the dark embrace of time
And get mixed up with the soil as usual.

Just then all of a sudden a soft tender light
Lit up everything with its gleam.

And without any reason
Brought under the shade of
Infinite enlightenment..

The faded leaf got a new shine
And beaming as if budding anew
Just as the laws of the earth.

Removing the darkness said the light
“Perceive whatever you wanted to see “
Inviting with open arms and cuddling.

With the eyes wide open
The leaf kept on seeing
The path of light.

Bearing the light just as a penance
Devouring the light
Stood strong and breathing.
And kept on waiting..

Every word casted ,
Opened the inner eye
A mesmerizing rim
Surrounded the leaf,
Hundreds of pictures and thoughts
Are moving all over the lamina
laden with the praises.

Fried with the oil of accusations
Made to smell rancid,but
Later buttering up to console,
The light has made the leaf to say
With the right temper.

But the leaf still fears
The heat of the fire
that may emerge
From the glowing light.

But still this leaf has
An unending yearning.
Wants to fly away held in
The beak of a little sparrow,
Wants to be a quilt for it’s eggs filled nest.
Wants to be thrilled under the tripping feet
Of the tweeting nestlings.
Wants to be all ears for their
Stammering chirpings.

And wants to stare with love,
All those,who called it
“A lifeless dry leaf,”

—————————————-

Translated by Samatha.R

6 thoughts on “ತರಗೆಲೆ

  1. ನಾಗರೇಖ, ಚೆಂದದ ಕವಿತೆ..ಎಂದಿನಂತೆ ಸಮತಾಳ ಅನುವಾದ ಕೂಡ..ಇಬ್ಬರಿಗೂ ಪ್ರೀತಿ…

  2. ಉತ್ತಮವಾಗಿದೆ
    ನಿಮ್ಮ ಅನುವಾದದ ಕಾರ್ಯ ಹೀಗೆ ಮುಂದುವರೆಯಲಿ
    ಶುಭಾಶಯಗಳು

Leave a Reply

Back To Top